Upanyasa - VNU923

ಪರಶುರಾಮರ ಆಗಮನ

ಶ್ರೀಮದ್ ರಾಮಾಯಣಮ್ — 41

ಮಕ್ಕಳು ಸೊಸೆಯರು ಸೈನ್ಯದ ಸಮೇತವಾಗಿ ಮಿಥಿಲೆಯಿಂದ ಹೊರಟ ದಶರಥ ಮಹಾರಾಜರಿಗೆ ದಾರಿಯಲ್ಲಿ ಶುಭಶಕುನ, ಅಪಶಕುನ ಎರಡೂ ಉಂಟಾಗುತ್ತವೆ. ಅವರು ಗಾಭರಿಯಿಂದ ವಸಿಷ್ಠರನ್ನು ಪ್ರಶ್ನೆ ಮಾಡಿದಾಗ ವಸಿಷ್ಠರು ನಮಗೆಲ್ಲ ಅದ್ಭುತ ಪಾಠವೊಂದನ್ನು ಕಲಿಸುತ್ತ ಉತ್ತರ ನೀಡುತ್ತಾರೆ. 

ಅದೇ ಸಮಯಕ್ಕೆ ಚಂಡಮಾರುತ ನಿರ್ಮಾಣವಾಗುತ್ತದೆ, ಎಲ್ಲೆಡೆ ಧೂಳು ತುಂಬಿ ದಿಕ್ಕುಗಳೂ ಸಹ ಕಾಣದಾದಾಗ ಸಮಗ್ರ ಕ್ಷತ್ರಕುಲವಿನಾಶಕರಾದ ಮಹಾತೇಜಸ್ಸಿನ ಅತುಲಬಲದ ಪರಶುರಾಮದೇವರು ಆಗಮಿಸುತ್ತಾರೆ, ದಶರಥರ ಜಂಘಾಬಲ ಉಡುಗಿಹೋಗುತ್ತದೆ. ಆ ಕೊಡಲಿ ರಾಮನ ಕಾಲಿಗೆ ಬಿದ್ದ ಈ ಚಕ್ರವರ್ತಿ ಪುತ್ರಭಿಕ್ಷೆಯನ್ನು ಬೇಡುವ ಪ್ರಸಂಗದ ವಿವರದೊಂದಿಗೆ ಶ್ರೀರಾಮದೇವರ ದಿವ್ಯಪರಾಕ್ರಮದ ಚಿತ್ರಣವನ್ನಿಲ್ಲಿ ಕೇಳುತ್ತೇವೆ. 

Play Time: 30:49

Size: 1.37 MB


Download Upanyasa Share to facebook View Comments
3047 Views

Comments

(You can only view comments here. If you want to write a comment please download the app.)
 • Prahllada A M,Belupalli

  8:16 PM , 30/05/2022

  Maha adbutha🙏🙏🙏
 • Padmini Acharya,Mysuru

  1:32 PM , 15/04/2022

  🙏🙏ಶ್ರೀ ಗುರುಭ್ಯೋ ನಮಃ🙏🙏
  
  ದಶರಥರಾಮ ಹಾಗೂ ಭಾರ್ಗವರಾಮರ ಸಮಾಗಮ ಆಹಾ....
  
  ಸುಂದರ ವರ್ಣನೆ
 • Santosh Patil,Gulbarga

  9:19 PM , 01/05/2021

  🙏💐🙏
 • Shilpa,London

  12:34 PM, 15/05/2020

  ಆಚಾರ್ಯರಿಗೆ ಆದರ ಪೂರ್ವಕ ನಮಸ್ಕಾರಗಳು 🙏🙏
  ಪ್ರವಚನ ತುಂಬಾ ಚೆನ್ನಾಗಿ ಮೂಡಿ ಬರುತ್ತಾ ಇದೆ. ನಮ್ಮ ಅಂನತ ಜನ್ಮದ ಸೌಭಾಗ್ಯ. 
  ದಶರಥ ಮಹಾರಾಜರಿಗೆ ಪರಶುರಾಮ ಹಾಗೂ ರಾಮ ಇಬ್ಬರೂ ನಾರಾಯಣ ಅಂಥ ತಿಳಿದಿರುವುದಿಲ್ವಾ ಅಥವಾ ಅವರು ಲೋಕ ವಿಡಂಬನೆ ಮಾಡುತ್ತಿದ್ದರು?? ದಯವಿಟ್ಟು ತಿಳಿಸಿ ಆಚಾರ್ಯರೆ 🙏🙏
 • Vidhya,Gobichettipalayam

  4:29 PM , 07/05/2020

  ಪರಶುರಾಮರ ಆಗಮನ ಪರಮ ಸುಂದರವಾಗಿ ವರ್ಣಿತವಾಗಿದೆ. ಅದ್ಭುತ . ,👌👌
 • Jayashree Karunakar,Bangalore

  3:44 PM , 07/05/2020

  ಸೌಮ್ಯರೂಪದ ಪರಮಾತ್ಮನ ವಿರುದ್ಧ ದಿಕ್ಕಿನಲ್ಲಿ 
  ಕೊಡಲಿ ರಾಮನ ಅಬ್ಬರದ ಆಗಮನ....!! ವಾಹ್ 
  ರಾಮಚಂದ್ರನನ್ನು ಹೊರತುಪಡಿಸಿ ಮಿಕ್ಕವರೆಲ್ಲ ಭಯಭೀತರಾಗುತ್ತಾ ಎದುರಿಸಿದ ರೀತಿ....
  
  ಎರಡು ವಿರುದ್ಧ ರೂಪಗಳನ್ನು ನೆನೆದು ಕುಳಿತಲ್ಲಿಯೇ ನಮಗೆಲ್ಲ ರೋಮಾಂಚನ.....
  ಆ ಸನ್ನಿವೇಶದ ಪ್ರತಿಯೊಂದು ಕ್ಷಣವನ್ನೂ ವೀಕ್ಷಿಸಿದಂತಹ ಭಾವನೆ ನೀಡಿದ ವಿವರಣೆ....ಅಲ್ಲಿ ಎದ್ದಿರುವ ಸಣ್ಣ ಸಣ್ಣ ಧೂಳಿನ ಕಣವೂ ಸಹಿತ ಕಣ್ಣೆದುರಿಗೆ ಬಂದಿತೇನೊ....!!!
  ಅಸ್ಪಷ್ಟವಾಗಿ ಬೆಳಕಿನ ಪುಂಜದ ಮಧ್ಯದಲ್ಲಿಯೇ ಕಾಣುವ ಆ ಭಯಂಕರವಾಗಿಯೇ ಕಾಣುವ ಆ ಕೊಡಲಿ....ಅಬ್ಬಾ!! ಅದೆಂತಹ ಅಬ್ಬರ... ಸನ್ನಿವೇಶವನ್ನು ನಿಮ್ಮ ಧ್ವನಿಯಲ್ಲಿ ಕೇಳುವದರ ಜೊತೆಗೆ ಕಾಣುತ್ತಿದ್ದೇವೆ....🙏🙏
  ಧೈನ್ಯರಾಗಿ ಪರಾಕ್ರಮದ ದಶರಥಮಹಾರಾಜರು ಪರಶುರಾಮನನ್ನು ಗಂಟಲಿನ ಪಸೆಯೆಲ್ಲ ಆರಿಹೋಗುವ ರೀತಿಯಲ್ಲಿ ಬೇಡುವ ಪರಿ....ಅದೆಷ್ಟು ಚೆನ್ನಾಗಿದೆ....ಹೇಳಲು ಮಾತಿಲ್ಲ.....ನಾವೇ ಧನ್ಯರು..ನಾವೇ ಭಾಗ್ಯವಂತರು...
  
  ಮುಂದೇನಾಯಿತು ? ದಯವಿಟ್ಟು ಬೇಗ ಹೇಳಿ ಗುರುಗಳೆ...ನಾಳೆಯ ತನಕ ಕಾಯುವಷ್ಟು ಕಿವಿಗಳಿಗೆ ತಾಳ್ಮೆಯಿಲ್ಲ...🙏🙏
 • Niranjan Kamath,Koteshwar

  8:53 AM , 07/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚಾರಣಗಳಿಗೆ ನಮೋ ನಮಃ. ಅತ್ಯಂತ ಮನಮೋಹಕವಾಗಿ ಮೂಡಿಬರುತ್ತಲಿದೆ. ಯಾವಾಗ ಬೆಳಿಗ್ಗೆಯಾಗುತ್ತದೆ, ಯಾವಾಗ ಮುಂದಿನದನ್ನು ಕೇಳುವುದೋ!! ಒಂದೇ ತವಕ. ಪರಶುರಾಮರ ಪ್ರಸಂಗ ಕೇಳುವಾಗ ಮೈ ನಡುಗುತ್ತದೆ. ಧನ್ಯೋಸ್ಮಿ.
 • deashmukhseshagirirao,Banglore

  5:46 AM , 07/05/2020

  🙏🏻🙏🏻🙏🏻🙏🏻🙏🏻