Upanyasa - VNU925

ರಾಮ-ಪರಶುರಾಮ ನಿರ್ಣಯ

ಶ್ರೀಮದ್ ರಾಮಾಯಣಮ್ — 43 

ರಾಮ ಪರಶುರಾಮರಿಬ್ಬರೂ ವಿಷ್ಣುವಿನ ಅವತಾರವಾದರೆ ಯುದ್ಧ ಹೇಗಾಗಲು ಸಾಧ್ಯ, ಒಬ್ಬರು ಸೋತು ಒಬ್ಬರು ಗೆಲ್ಲಲು ಹೇಗೆ ಸಾಧ್ಯ, ಪರಶುರಾಮರ ಲೋಕಗಳನ್ನು ರಾಮದೇವರು ಸುಟ್ಟು ಹಾಕಿದರು ಎಂದರೆ ಏನರ್ಥ, ಪರಶುರಾಮರು ದೈನ್ಯಕ್ಕೊಳಗಾಗಿದ್ದು ಸತ್ಯವಲ್ಲವೇ ಎಂಬೆಲ್ಲ ಪ್ರಶ್ನೆಗಳ ಭಗವತ್ಪಾದರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ. 

ಪರಶುರಾಮರ ಧ್ವನಿಯಲ್ಲಿ ದೈನ್ಯವಿತ್ತು ಎಂದು ರಾಮಾಯಣ ಹೇಳುತ್ತದೆ, ಅವರ ಧ್ವನಿ ಮೇಘಗಂಭೀರವಾಗಿತ್ತು ಎಂದು ಆಚಾರ್ಯರು ನಿರ್ಣಯಿಸುತ್ತಾರೆ. ಈ ವಿರೋಧದ ಪರಿಹಾರ ಇಲ್ಲಿದೆ. 

ಅತುಲ ಎಂಬ ಹೆಸರಿನ ವಿಚಿತ್ರ ಅಸುರನ ಕಥೆ. 

ಅತುಲನಿಗೆ ಪರಶುರಾಮರ ಹೊಟ್ಟೆಯಲ್ಲಿ ಇರುವ ವರವನ್ನು ರುದ್ರದೇವರಿಗೆ ನೀಡುತ್ತಾರೆ. ದೇವರ ಹೊಟ್ಟೆಯಲ್ಲಿ ಪ್ರವೇಶ ಮಾಡಿಸುವ ಶಕ್ತಿ ರುದ್ರದೇವರಿಗೆ ಹೇಗೆ ಇರಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮನ್ನಾರಾಯಣ ಪಂಡಿತಾಚಾರ್ಯರು ನೀಡಿದ ಉತ್ತರದ ವಿವರ ಇಲ್ಲಿದೆ. 

ನಾಳೆಯ ಉಪನ್ಯಾಸಕ್ಕೆ ಬಾಲಕಾಂಡ ಸಮಾಪ್ತವಾಗುತ್ತದೆ. ಸಾಧ್ಯವಾದರೆ ಮನೆಯಲ್ಲಿ ಬ್ರಾಹ್ಮಣ ದಂಪತಿಗಳಿಗೆ ಭೋಜನ ಮಾಡಿಸಿ. ಇಲ್ಲವಾದಲ್ಲಿ ಬ್ರಾಹ್ಮಣ ದಂಪತಿಗಳಿಗೆ ಸ್ವಯಂಪಾಕವನ್ನಾದರೂ ನೀಡಿ. ಶ್ರೀಮದ್ ರಾಮಾಯಣ ನಿರ್ವಿಘ್ನವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ. 

Play Time: 39:46

Size: 1.37 MB


Download Upanyasa Share to facebook View Comments
3051 Views

Comments

(You can only view comments here. If you want to write a comment please download the app.)
 • Santosh Patil,Gulbarga

  9:20 PM , 01/05/2021

  💐🙏💐
 • Sandhya L,Bengaluru

  7:32 PM , 13/05/2020

  ಗುರುಗಳಿಗೆ ನಮಸ್ಕಾರಗಳು, ಪ್ರತಿಯೊಂದು ಘಟನೆಯು ಏತಕ್ಕಾಗಿ ನಡೆದಿದೆ ಎಂಬುದನ್ನು ಶ್ರೀಮದಾಚಾರ್ಯರು ನಿರ್ಣಯಿಸಿರುವುದನ್ನು ನಮಗೆ ವಿಸ್ತಾರವಾಗಿ ತಿಳಿಸಿ ನಮ್ಮನ್ನು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಡ, ಭಗವಂತನ ಅನುಗ್ರಹಕ್ಕೆ ಪಾತ್ರರಾಗುವಂತೆ ಮಾಡುತ್ತಿರುವ ತಮಗೆ ಅನಂತ ಅನಂತ ನಮಸ್ಕಾರಗಳು,
 • Sandeep katti,Yalahanka, bengalooru

  7:51 AM , 12/05/2020

  ಸಾಷ್ಟಾಂಗ ಪ್ರಣಾಮಗಳು ಪೂಜ್ಯ ಗುರುಗಳೇ.
  ಶ್ರೀ ಪರಶುರಾಮ ಭಗವಾನ್ ಶ್ರೀ ರಾಮನಿಗೆ ವೈಷ್ಣವ ಧನುಷ್ಯ ನೀಡಿದ್ದಾರೆ. ಅಂದರೆ ಶ್ರೀ ರಾಮನ ಕೊದಂಡಪಾಣಿ ಇದೇ ಶ್ರೇಷ್ಠ ವೈಷ್ಣವ ಧನುಷ್ಯವ? ಅರ್ಜುನನ ಗಾಂಡೀವದ ಥರಾ? ಇದೇ ಸರ್ವ ಶ್ರೇಷ್ಠ ವೈಷ್ಣವ ಧನುಷ್ಯದಿಂದಲೇ ಶ್ರೀ ರಾಮ ಸಕಲ ಕೋಟಿಗಟ್ಟಲೆ ರಾಕ್ಷಸರನ್ನು ಸಂಹಾರ ಮಾಡಿದ್ದನ? 
  ಹಾಗಿದ್ದಲ್ಲಿ, ಈ ವೈಷ್ಣವ ಧನುಷ್ಯಕ್ಕೂ ಮುನ್ನ ಶ್ರೀ ರಾಮನ ಬಳಿ ಇದ್ದದ್ದು ಯಾವ ಧನುಷ್ಯ?

  Vishnudasa Nagendracharya

  ಶ್ರೀರಾಮದೇವರು ರಾವಣಾದಿಗಳನ್ನು ಸಂಹಾರ ಮಾಡಿದ್ದು ಶಾಂರ್ಗ ಧನುಷ್ಯದಿಂದ. ಭಗವಂತನ ಮೂಲರೂಪದ ಕೈಯಲ್ಲಿರುವ ಧನುಷ್ಯವದು. ಅದನ್ನು ರಾಮದೇವರು ವನವಾಸಕಾಲದಲ್ಲಿ ಅಗಸ್ತ್ಯರಿಂದ ಪಡೆಯುತ್ತಾರೆ. ಆ ಕಥೆ ಮುಂದೆ ಬರುತ್ತದೆ. 
  
  ಪರಶುರಾಮರಿಂದ ಪಡೆದ ಧನುಷ್ಯವನ್ನು ರಾಮದೇವರು ಆಗಲೇ ವರುಣರಿಗೆ ನೀಡಿಬಿಡುತ್ತಾರೆ. ಇದನ್ನು ಈ ಉಪನ್ಯಾಸದಲ್ಲಿಯೇ ತಿಳಿಸಿದ್ದೇನೆ. 
  
  ಶಾರ್ಞ್ಗ ಧನುಷ್ಯವನ್ನೇ ಮುಖ್ಯವಾಗಿ ಕೋದಂಡ ಎಂದು ಕರೆಯುವದು. 
 • Vikram Shenoy,Doha

  3:18 PM , 12/05/2020

  ಆಚಾರ್ಯರೇ ಕೋಟಿ ನಮನಗಳು. ಅಧಮ ಶಬ್ದಕ್ಕೆ ಸರಿಯಾದ ಅರ್ಥ ಏನು ? ದಯವಿಟ್ಟು ತಿಳಿಸಿ. ಅಧಮವೆಂದರೆ ಕನಿಷ್ಠವೆ ಯ ಅಧರ್ಮ ಪಾಲಿಸುವವ ಜನರೇ?

  Vishnudasa Nagendracharya

  ಅಧಮ ಎಂದರೆ ಕುತ್ಸಿತ, ನೀಚ ಎಂದರ್ಥ. 
 • DESHPANDE P N,BANGALORE

  2:13 PM , 12/05/2020

  S.Namaskargalu.Anugrahvirli
 • Jayashree Karunakar,Bangalore

  10:11 PM, 11/05/2020

  ಅವರವರ ಯೋಗ್ಯತೆಯಂತೆ ಅನಂತ ಪ್ರಭೆಯ ಭಗವಂತ ಧ್ಯೆನ್ಯತೆಯನ್ನು ಪ್ರಕಟಮಾಡಿದ ಅನ್ನುವ ತತ್ವವನ್ನು ಚಚೆ೯ಯಲ್ಲಿ ತಿಳಿಸಿದ ರೀತಿ ಮನಮುಟ್ಟುವಂತಿತ್ತು..
  "ಸಿಂಹದ ಗಜ೯ನೆಯ ಧ್ವನಿ ಮತ್ತು ಕಷ್ಟಕ್ಕೆ ಸಿಲುಕಿದಾಗ ಅದರ ಧ್ಯನ್ಯತೆಯಲ್ಲಿರುವ ಧ್ವನಿಯಲ್ಲಿ ವೆತ್ಯಾಸವಿದ್ದರೂ, ಇತರ ಪ್ರಾಣಿಗಳಿಗೆ ಭಯಂಕರವೇ" ಅಂತ ಸಮೀಕರಿಸಿದ ರೀತಿ ಚೆನ್ನಾಗಿತ್ತು...
  ಪರಶುರಾಮ ದೇವರು ಪ್ರತೀಬಾರಿ ಗೆದ್ದಾಗಲೂ , ಒಳಗಿದ್ದ ಅತುಲ ಸಂಭ್ರಮಿಸುತಿದ್ದ ರೀತಿಯನ್ನು ನೆನೆದು ನಗು ಬಂತು😁...ನಮ್ಮಲ್ಲಿರುವ ಮಾನವ ಸಹಜವಾದ ಅಹಂಕಾರಕ್ಕೆ ಪಾಠದಂತಿತ್ತು...
  
  ೧೪ ಲೋಕಗಳನ್ನೂ ಕ್ಷಣಮಾತ್ರದಲ್ಲಿ ಭಸ್ಮಮಾಡುವ ಮಹಾಸಾಮಥ್ಯ೯ದ ರುದ್ರ ದೇವರಿಗೇ ಒಳಗೆ ನಿಂತ ಅಂತಯಾ೯ಮಿಯು ಶಕ್ತಿ ಬಲಗಳನ್ನು ನೀಡಿದರೆ ಉಂಟು ಅಂತ ಶಿವ ನಾರಾಯಣರ ಕ್ರೀಡಾಯುದ್ಧದಲ್ಲಿ ಕೇಳಿದೆವು...ಹೀಗಿರುವಾಗ ಈ ರಾಕ್ಷಸ ಯಾವ ಲೆಕ್ಕ ಪರಮಾತ್ಮನಿಗೆ....!!!
  
  ಇಂದು ತಿಳಿದ ತತ್ವಗಳು ನಮ್ಮ ಬುದ್ಧಿಯನ್ನು ಚುರುಕುಗೊಳಿಸುವಂತಿತ್ತು.
  ಘಹನವಾದ ವಿಷಯವನ್ನು ಸರಳವಾಗಿ ಮನಸ್ಸಿಗೆ ಒಪ್ಪಿಗೆಯಾಗುವಂತೆ ಅಥ೯ಮಾಡಿಸಿದ ನಿಮ್ಮವಾಕ್ಚಾತುಯ೯ಕ್ಕೆ ನಮನಗಳು
 • Y V GOPALA KRISHNA,Mysore

  3:43 PM , 11/05/2020

  No words to express our gratitude except submitting Sastanga Namaskaragalu...
 • P N SATYA PRASAD,NIDADAVOLE

  6:49 AM , 11/05/2020

  🙏
 • deashmukhseshagirirao,Banglore

  6:47 AM , 11/05/2020

  🙏🏻🙏🏻🙏🏻🙏🏻🙏🏻
 • Vishwnath MJoshi,Bengaluru

  5:37 AM , 11/05/2020

  श्रीगुरुभ्यो नमः। अथ गुरुपादौ नमस्करोमि
  ಈ ಉಪನ್ಯಾಸದ ಸ್ವಾರಸ್ಯ ಮತ್ತು ಎಲ್ಲರು 
  ತಿಳಿದಿರುವ ಕಥೆಗಿಂತ ಸರಿಯಾದ ವಂದು