Upanyasa - VNU926

ಶ್ರೀರಾಮ ಸೀತೆಯರ ದಾಂಪತ್ಯ

ಪರಮ ಸಂಭ್ರಮದಿಂದ ರಾಜ-ರಾಜಪತ್ನಿಯರು ತಮ್ಮ ಸೊಸೆಯಂದರನ್ನು ಮನೆ ತುಂಬಿಸಿಕೊಂಡದ್ದು, ಶ್ರೀರಾಮಚಂದ್ರ ರಾಜ್ಯದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿ, ಸಾಟಿಯಿಲ್ಲದ ಸೀತಾ ರಾಮರ ಪ್ರೇಮದ ಕುರಿತು ನಾವಿಲ್ಲ ಕೇಳುತ್ತೇವೆ. ಶ್ರೀಮದಾಚಾರ್ಯರು ರಾಮಕಥೆಯ ಕುರಿತು ಹೇಳಿದ ಪರಮಾದ್ಭುತ ತತ್ವಗಳ ಚಿಂತನೆಯೊಂದಿಗೆ. 

ಇಲ್ಲಿಗೆ ಬಾಲಕಾಂಡ ಸಮಾಪ್ತವಾಗುತ್ತದೆ. ಮುಂದಿನ ಉಪನ್ಯಾಸದಿಂದ ಅಯೋಧ್ಯಾಕಾಂಡ ಆರಂಭ. 

ಶ್ರೀಮದ್ ರಾಮಾಯಣವನ್ನು ಶ್ರದ್ಧೆಯಿಂದ ಆಲಿಸುತ್ತಿರುವ ನಿಮ್ಮ ಮೇಲೆ
ಶ್ರೀಹರಿ ವಾಯು ದೇವತಾ ಗುರುಗಳು ಪೂರ್ಣಾನುಗ್ರಹ ಮಾಡಲಿ
ಪರಿಶುದ್ಧ ಭಕ್ತಿ ಜ್ಞಾನ ವೈರಾಗ್ಯಗಳನ್ನು ಅನುಗ್ರಹಿಸಲಿ
ಸಕಲವಿಧ ಸಾತ್ವಿಕ ಸಂಪತನ್ನು ಕರುಣಿಸಿ 
ಶ್ರೇಷ್ಠ ಸಾಧನೆಯನ್ನು ಮಾಡಿಸಲಿ
ಎಂದು ಹನುಮತ್-ಸೇವಿತ
ಸೀತಾಪತಿ ಶ್ರೀ ಪಟ್ಟಾಭಿರಾಮದೇವರಲ್ಲಿ ಪ್ರಾರ್ಥಿಸುತ್ತೇನೆ. 

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 61:07

Size: 1.37 MB


Download Upanyasa Share to facebook View Comments
4077 Views

Comments

(You can only view comments here. If you want to write a comment please download the app.)
 • Jyothi Gayathri,Harihar

  8:23 PM , 24/04/2021

  🙏🙏🙏🙏🙏
 • Achala,Bengaluru

  9:37 PM , 08/08/2020

  ಆಚರ್ಯ ರೆ, ಪರಶುರಾಮ ದೇವರು ಸಮಗ್ರ ಭೂಮಿಯನ್ನ ೨೧ ಬಾರಿ ಸುತ್ತಿ ಕ್ಷತ್ರಿಯರನ್ನು ಸಂಹಾರ ಮಾಡಿದಾಗ ಅವರು ಲಂಕಾ ಪಟ್ಟಣಕ್ಕೆ ಯಾಕೆ ಹೋಗಲಿಲ್ಲ?
 • Achala,Bengaluru

  9:37 PM , 08/08/2020

  ಆಚರ್ಯ ರೆ, ಪರಶುರಾಮ ದೇವರು ಸಮಗ್ರ ಭೂಮಿಯನ್ನ ೨೧ ಬಾರಿ ಸುತ್ತಿ ಕ್ಷತ್ರಿಯರನ್ನು ಸಂಹಾರ ಮಾಡಿದಾಗ ಅವರು ಲಂಕಾ ಪಟ್ಟಣಕ್ಕೆ ಯಾಕೆ ಹೋಗಲಿಲ್ಲ?
 • Achala,Bengaluru

  9:37 PM , 08/08/2020

  ಆಚರ್ಯ ರೆ, ಪರಶುರಾಮ ದೇವರು ಸಮಗ್ರ ಭೂಮಿಯನ್ನ ೨೧ ಬಾರಿ ಸುತ್ತಿ ಕ್ಷತ್ರಿಯರನ್ನು ಸಂಹಾರ ಮಾಡಿದಾಗ ಅವರು ಲಂಕಾ ಪಟ್ಟಣಕ್ಕೆ ಯಾಕೆ ಹೋಗಲಿಲ್ಲ?
 • Padmini Acharya,Mysuru

  1:42 PM , 14/05/2020

  🙏ಶ್ರೀ ಗುರುಭ್ಯೋ ನಮಃ🙏
  
  ನಾಲ್ಕು ಜನ ರಾಜಕುಮಾರರು ತಮ್ಮ ಪತ್ನಿಯರೊಡಗೂಡಿ ಬಂದಾಗ ಸಮಗ್ರ ಅಯೋಧ್ಯೆ ಜನರ ಸಂಭ್ರಮ.
  
  ಆ ರಾಮ ಸೀತೆಯರ ದಾಂಪತ್ಯ, ಗಂಡನ ಮನಸ್ಸನ್ನು ಹೆಂಡತಿ ಹೆಂಡತಿಯ ಮನಸ್ಸನ್ನು ಗಂಡ ಅರಿತು ಬಾಳುತಿದ್ದ ಪರಿ ಪರಮ ಸುಂದರ.....
  
  ನಿಮ್ಮ ಉಪನ್ಯಾಸ ಕೇಳಿದರೆ ಆಚಾರ್ಯರ ಬಗ್ಗೆ ನಮ್ಮಲ್ಲಿರುವ ಭಕ್ತಿ ಕಣ್ಣೀರಾಗಿ ಹರಿಯುತ್ತದೆ🙏🙏 
  
  ಎಷ್ಟೋ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಶ್ರೀಮದಾಚಾರ್ಯರ ಗ್ರಂಥಗಳ ಅರ್ಥವನ್ನು ನಿಮ್ಮ ಉಪನ್ಯಾಸದ ಮುಖಾಂತರ ಕೇಳುತ್ತಿದ್ದೇವೆ. 
  
  ಈ ಪ್ರವಚನದ ಸಮರ್ಪಣೆಯ ಭಾಗದಲ್ಲಿ ರಾಮಾಯಣದ ಕಥೆಯ ಕುರಿತಾದ ಶ್ರೀಮದಾಚಾರ್ಯರ ವಾಕ್ಯದ ವಿವರಣೆಯನ್ನು ಕೇಳುತ್ತಿದ್ದರೆ ಕಣ್ಣಲ್ಲಿ ತಾನಾಗಿ ನೀರು ಹರಿಯುತ್ತಿತ್ತು. ಆ ಭಾಗವನ್ನು ಎಷ್ಟು ಬಾರಿ ಕೇಳಿದರೂ ತೃಪ್ತಿಯಾಗುತ್ತಿಲ್ಲ. ಅದ್ಭುತ ಪ್ರವಚನವಿದು.🙏🙏
  
  ಜೀವನ ಸಾರ್ಥಕ ಮಾಡುತ್ತಿರುವ ನಿಮಗೆ 🙏🙏🙏🙏
 • Vikram Shenoy,Doha

  2:23 PM , 13/05/2020

  ಆಚಾರ್ಯರೇ ನಿಮ್ಮ ಕರುಣೆ ಇರಲಿ. ಅತೀ ಉತ್ತಮ ಜ್ಞಾನ ಭಕ್ತಿ ಗಳ ಸಮಾಗಮ. 🙏🙏🙏
 • Vikram Shenoy,Doha

  2:23 PM , 13/05/2020

  ಆಚಾರ್ಯರೇ ನಿಮ್ಮ ಕರುಣೆ ಇರಲಿ. ಅತೀ ಉತ್ತಮ ಜ್ಞಾನ ಭಕ್ತಿ ಗಳ ಸಮಾಗಮ. 🙏🙏🙏
 • Vikram Shenoy,Doha

  2:23 PM , 13/05/2020

  ಆಚಾರ್ಯರೇ ನಿಮ್ಮ ಕರುಣೆ ಇರಲಿ. ಅತೀ ಉತ್ತಮ ಜ್ಞಾನ ಭಕ್ತಿ ಗಳ ಸಮಾಗಮ. 🙏🙏🙏
 • DESHPANDE P N,BANGALORE

  2:03 PM , 13/05/2020

  S.Namaskargalu. exception one. Anugrahvirali
 • Jayashree Karunakar,Bangalore

  10:13 PM, 12/05/2020

  ನಾಲ್ಕು ಬಂಗಾರದ ರಥಗಳಲ್ಲಿ ನವ ವಧೂವರರು ಮಂಗಲಮಯವಾದ ವಸ್ತುಗಳೊಂದಿಗೆ ಅಯೋಧ್ಯಾಪುರಿಗೆ ಬರುತ್ತಿರುವ ದೃಶ್ಯವನ್ನು ನೀವು ವಿವರಣೆ ಮಾಡುತಿದ್ದರೆ, ಕಣ್ಣಗಳು ಸಾಕ್ಷಾತ್ತಾಗಿ ನೋಡುವದಕ್ಕೆ ಹಂಬಲಿಸುತ್ತಿತ್ತು...
  ನಮಗೆಲ್ಲಿಯ ಯೋಗ್ಯತೆ...?
  
  ಆದರೆ ಮಂಗಲವಾದ ಶಬ್ದಗಳ ಶ್ರವಣ...ಮನಸ್ಸಿಗೆ ಮುದ, ಹೃದಯಕ್ಕೆ ಹಿತ...
  ಭಗವದಾನಂದದಲ್ಲಿ ಮುಳುಗಿಸಿತು...
  
  ಗಿಡ ಮರ ಪ್ರಾಣಿ ಪಕ್ಷಿಗಳೂ ಅನುಭವಿಸಿದ ಸುಖಕ್ಕೇನು ಹೇಳೊದು...?
  
  ಮನಸ್ಸಿಂದಲೇ ಸಂಭಾಷಣೆಗಳು...ಆಹಾ!! ಅದೆಂತಹ ಭಾಂಧವ್ಯ...
  ಇಂತಹ ಉಪನ್ಯಾಸದ ಶ್ರವಣ ಮಾಡುತ್ತಾ ಕುಳಿತರೆ ಲೌಕಿಕದ ಮಾತೇ ಮರೆತು ಹೋಗಿಬಿಡುತ್ತದೆ... ರಾಮಾಯಣದ ರಸಾಸ್ವಾದ ವಿಶೇಷವಾದ ರೀತಿಯಲ್ಲಾಗುತಿದೆ...🙏
 • Parimala B Joshi,Dharwad

  9:01 PM , 12/05/2020

  ಹರೇ ಶ್ರೀನಿವಾಸ 🙏🙏🙏🙏
  
  ನಮಸ್ಕಾರಗಳು ಗುರುಗಳೇ 🙏🙏🙏🙏
  
  ಪರಮಾದ್ಭುತ ತತ್ವಗಳ ಚಿಂತನೆಗಳನ್ನು ನೀವು ನಮಗೆ ಆ ಮಹಿಮೆಯನ್ನು ಪರಮಾದ್ಭುತವಾಗಿ ನಮಗೆ ತಿಳಿಸಿ ಕೊಟ್ಟಿದ್ದೀರಿ. ನಮ್ಮ ಕಣ್ಣ ಮುಂದೆ ಆ ಚಿತ್ರಣ ಕಾಣುತ್ತಿದ್ದೇವೆ ಅನ್ನುವಷ್ಟು ವಿವರವಾಗಿ ಬಿಡಿ ಬಿಡಿ ಯಾಗಿ ನಮಗೆ ತಿಳಿಸಿ ಹೇಳುತ್ತೀರಿ. ಗುರುಗಳೇ ನಿಮ್ಮ ಸಾಧನೆ ತಪಶ್ಯಕ್ತಿ ದೊಡ್ಡದು. 
  
  ನಾವು ಲೌಕಿಕ ಪ್ರಪಂಚ ಮರೆತು ನೀವು ಹೇಳಿದ ಉಪನ್ಯಾಸ ಕೇಳಿ ನಮ್ಮನ್ನು ನಾವೇ ಮರೆತು ಬಿಟ್ಟಿರುತ್ತೇ.ವೆ ನಾವು ಹೀಗೆ ಇರಬೇಕು ಲೌಕಿಕ ದಲ್ಲಿ ಆಸಕ್ತರಾಗಿ ಕೂಡುವದಲ್ಲ ಇದು ಸಾಧನೆಯ ಶರೀರ ಇಲ್ಲಿ ಸಾಧನೆಗಾಗಿ ಹುಟ್ಟಿ ಬಂದಿದ್ದೇವೆ. ಆ ಸ್ವಾಮಿ ನಿಮ್ಮಂಥ ಗುರುಗಳನ್ನು ನಮಗಾಗಿ ಕರುಣಿಸಿದ್ದಾನೆ ಅವನ ಕಾರುಣ್ಯ ಅಪಾರ. 
  
  ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ ನಿಮ್ಮಂಥ ಗುರುಗಳ ಪಡೆದ ನಾವೇ ಭಾಗ್ಯ ಶಾಲಿಗಳು.
  
   ಇದು ಭಾಗ್ಯ ಇದು ಭಾಗ್ಯ.... 
  🙏🙏🙏🙏
 • Parimala B Joshi,Dharwad

  5:57 PM , 12/05/2020

  ಹರೇ ಶ್ರೀನಿವಾಸ 🙏🙏🙏🙏
 • Sampada,Belgavi

  1:26 PM , 12/05/2020

  ಬಂಗಾರದ ರಥದಲ್ಲಿ ಜಯಕಾರದೊಂದಿಗೆ ಅಯೋಧ್ಯೆಗೆ ಶ್ರೀರಾಮಚಂದ್ರನ ಆಗಮನ... ಮನೆ ಮನೆಗಳಿಗೆ ಸುಣ್ಣ ರಂಗೋಲಿ ಬಾಗಿಲಿಗೆ ತೋರಣ.. ತೆಂಗಿನ ಗರಿಗಳ ಚಪ್ಪರ ಹೂಗಳಿಂದ ಅಲಂಕಾರ... ಎಲ್ಲಿ ನೋಡಿದರೂ  ಧ್ವಜಗಳ ಹಾರಾಟ... ಎಲ್ಲಕಡೆ ಮಂಗಳವಾದ್ಯಗಳು ಮೊಳಗುವ ಸುಂದರವಾದ ವರ್ಣನೆ ...🙏🙏.... ಅಲಂಕಾರ ಮಾಡಿಕೊಂಡು ಅಯೋಧ್ಯೆಪುರದ ಜನ.. ಬ್ರಾಹ್ಮಣರಿಂದ ಸ್ವಸ್ತಿವಾಚನ... ರಾಮಚಂದ್ರನ ಪ್ರಸನ್ನವಾದ ಮುಖ .. ಮಂದಹಾಸದಿಂದ ಅನುರಾಗದಿಂದ ಕೂಡಿದ ಕಂಗಳು... ಅಲ್ಲಿ ನೆರೆದಿದ್ದ ಪ್ರತಿಯೊಬ್ಬರನ್ನುತನ್ನ ಕಣ್ಣುಗಳಿಂದಲೇ ಮಾತನಾಡಿಸುತ.. ರಾಮಚಂದ್ರನ ಈ ವರ್ಣನೆ ಕಣ್ಣುಮುಂದೆ ಕಟ್ಟಿದಂತಾಗಿದೆ...🙏🙏... ಆ ಸ್ವಾಮಿಯ ಸಾಮಿಪ್ಯವನ್ನೇನೊ ಬಯಸುತ್ತೆ ಈ ಜೀವ... ಆದರೆ ನಮ್ಮಂಥವರಿಗೇನು ದೊರಕಿಯಾನು.. ಕಡೆಗಣ್ಣಿಂದಲೂ ನೋಡಲಿಕ್ಕಿಲ್ಲ ನಮ್ಮನ್ನು.. ಉಪನ್ಯಾಸ ಕೇಳಿ ಆನಂದಿಸಿದ ಕ್ಷಣಗಳು ಜನ್ಮ ಸಾರ್ಥಕತೆಯ ಭಾವ ಮೂಡಿಸುತ್ತಿವೆ ...🙏🙏 ಧನ್ಯವಾದಗಳು..

  Vishnudasa Nagendracharya

  “ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ” ವನು ನಮ್ಮ ಸ್ವಾಮಿ. ಯಾವ ಭಕ್ತನನ್ನೂ ಕಡೆಗಣಿಸುವದಿಲ್ಲ. ಪಶು, ಪಕ್ಷಿ, ಪ್ರಾಣಿಗಳ ಮೇಲೂ ಕಾರುಣ್ಯ ತೋರುವ ಮರ, ಗಿಡ, ಹುಲ್ಲುಕಡ್ಡಿಗಳಿಗೂ ಮುಕ್ತಿ ನೀಡುವ ಒಡೆಯ ಅವನು. ಭಕ್ತಿ ಮಾಡುವ ಪ್ರತಿಯೊಬ್ಬ ಭಕ್ತರನ್ನೂ ಉದ್ಧರಿಸುವ ಭಕ್ತವತ್ಸಲ. 
 • M V Lakshminarayana,Bengaluru

  2:38 PM , 12/05/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಸೀತಾರಾಮರ ದಾಂಪತ್ಯ ನಭೂತೋನಭವಿಷ್ಯತಿ. ಸರ್ವಕಾಲಕ್ಕೂ ಆದರ್ಶಪ್ರಾಯ.
  ಮನೋಜ್ಞವಾಗಿ ವರ್ಣಿಸಿದ್ದಕ್ಕೆ ಅನಂತಾನಂತ ನಮಸ್ಕಾರಗಳು.
 • M V Lakshminarayana,Bengaluru

  2:25 PM , 12/05/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
   ಶ್ರೀ ರಾಮಚಂದ್ರನ ಗುಣಗಾನ ಕೇಳಿ ಜನ್ಮ ಸಾರ್ಥಕವಾಯಿತು.
  ಧನ್ಯವಾದಗಳು
 • Niranjan Kamath,Koteshwar

  8:24 AM , 12/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಮೂಕವಿಸ್ಮಿತನಾಗಿದ್ದೇನೆ. ಮಾತೇ ಹೊರಡುತ್ತಿಲ್ಲ. ಯಾವ ಶಬ್ದವು ತಿಳಿಯುತ್ತಿಲ್ಲ...ಶ್ರೀ ರಾಮಚಂದ್ರ ದೇವರು ಬರುವಾಗ ಅಯೋಧ್ಯೆ ನಿವಾಸಿಗಳು ಅವರ ವಿಷಯ ಗುಣಗಾನ ಮಾಡಿದ್ದು ನಿಮ್ಮ ಈ ಉದ್ಘೋಷ ದಲ್ಲೇ ಅನುಭವಿಸುತ್ತಿದ್ದೇವೆ. ಏನೊಂದು ಸಂತಸ ಸಂಭ್ರಮದಿಂದ ವಿವರಿಸಿದ್ದೀರಿ. ಆಹಾ...!! ನಿಮ್ಮ ಕಂಠ, ನಿಮ್ಮ ಮನಸ್ಸು, ನೀವು ಅನುಭವಿಸಿ ವಿವರಿಸಿದ ರೀತಿ...ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ
 • Sampada,Belgavi

  7:04 AM , 12/05/2020

  🙏🙏🙏🙏🙏
 • deashmukhseshagirirao,Banglore

  4:30 AM , 12/05/2020

  🙏🏻🙏🏻🙏🏻🙏🏻🙏🏻🙏🏻🙏🏻
 • deashmukhseshagirirao,Banglore

  4:30 AM , 12/05/2020

  🙏🏻🙏🏻🙏🏻🙏🏻🙏🏻🙏🏻🙏🏻