Upanyasa - VNU927

ರಾಜಪದವಿಯ ಅರ್ಹತೆ

ಶ್ರೀಮದ್ ರಾಮಾಯಣಮ್ — 45

ದಶರಥ ಮಹಾರಾಜರು ತಮ್ಮ ಮಗ, ಹಿರಿಯ ಮಗ ಎನ್ನುವ ಕಾರಣಕ್ಕೆ ರಾಮನನ್ನು ಯುವರಾಜ ಮಾಡಲು ನಿರ್ಣಯಿಸಿದ್ದಲ್ಲ, ರಾಮನಲ್ಲಿ ಯುವರಾಜನಾಗುವ ಅರ್ಹತೆಯಿದೆಯೇ ಎಂದು ಪರೀಕ್ಷೆ ಮಾಡಿ ನಿರ್ಣಯಿಸುತ್ತಾರೆ. ಅವರು ಮಾಡಿದ ಪರೀಕ್ಷೆಗಳ ಚಿತ್ರಣ ಇಲ್ಲಿದೆ. 

ದಶರಥ ಮಹಾರಾಜರು ತಮ್ಮ ನಾಲ್ಕೂ ಜನ ಮಕ್ಕಳ ಮೇಲೆ ಮಾಡುತ್ತಿದ್ದ ಪ್ರೇಮ ಸಮಾನವಾಗಿತ್ತೆ, ವಿಷಮವಾಗಿತ್ತೆ?

ಒಬ್ಬ ಮನುಷ್ಯನ ಚಾರಿತ್ರ್ಯವನ್ನು ನಿರ್ಣಯಿಸುವ ಮಹತ್ತ್ವದ ಮಾನದಂಡವೇನು?

ತಾಯಂದಿರು ಮಕ್ಕಳನ್ನು ಯಾವ ರೀತಿ ಗಮನಿಸಬೇಕು?

ತಪ್ಪು ಮಾಡಿದವರ ತಪ್ಪನ್ನು ರಾಮ ಕ್ಷಮಿಸುತ್ತಿದ್ದ ಎನ್ನುತ್ತಾರೆ, ರಾವಣನ ತಪ್ಪನ್ನೇ ಏಕೆ ಕ್ಷಮಿಸಲಿಲ್ಲ?

ಸತ್ಯ ಮಾತನಾಡಿ ನರಕ ಪಡೆದ ಕೌಶಿಕ ಬ್ರಾಹ್ಮಣನ ಕಥೆಯ ಮರ್ಮವೇನು?

ಅಭ್ಯಾಸಗಳ ಮಧ್ಯದಲ್ಲಿ ರಾಮಚಂದ್ರ ಹೇಗೆ ಕಾಲ ಕಳೆಯುತ್ತಿದ್ದ?

ಮಹಾಪರಾಕ್ರಮಿಯಾದ ರಾಮಚಂದ್ರ ಸಾಮಾನ್ಯ ಬಲದ ತನ್ನ ಶಿಕ್ಷಕರನ್ನು ಹೇಗೆ ಕಾಣುತ್ತಿದ್ದ?

ಶೀಲವೃದ್ಧರು, ಜ್ಞಾನವೃದ್ಧರು, ವಯೋವೃದ್ಧರು, ಉಪಾಧ್ಯಾಯರು, ಶಿಕ್ಷಕರು, ಗೆಳೆಯರು, ನಾಗರೀಕರು ನಮ್ಮ ಶ್ರೀರಾಮನನ್ನು ಹೇಗೆ ಕಾಣುತ್ತಿದ್ದರು ಎಂಬ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. 

Play Time: 42:43

Size: 1.37 MB


Download Upanyasa Share to facebook View Comments
3212 Views

Comments

(You can only view comments here. If you want to write a comment please download the app.)
 • Jyothi Gayathri,Harihar

  8:17 PM , 25/04/2021

  🙏🙏🙏🙏🙏
 • DESHPANDE P N,BANGALORE

  2:10 PM , 14/05/2020

  S.Namaskargalu. SriRamchandra deavar yeatkinchita gunagalu barali eandu anugrahisabeaku
 • M V Lakshminarayana,Bengaluru

  8:07 PM , 13/05/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಇಂದಿನ ರಾಜಕಾರಣಿಗಳು ಅವಶ್ಯವಾಗಿ ಕೇಳಬೇಕಾದ ಪ್ರವಚನ. ಅರ್ಹತೆಯ ವಿಷಯವಿರಲಿ, ಅಧಿಕಾರಕ್ಕಾಗಿ ಅಪರಾಧಗಳನ್ನು ಮುಚ್ಚಿಟ್ಟು, ಜಾಮೀನು ಪಡೆದು ಬಂದು ಅಧಿಕಾರ ವಹಿಸಿಕೊಂಡ ಅನೇಕ ನಿದರ್ಶನಗಳಿವೆ. ಅಂತಹವರು ದೇಶದ ಅಭಿವೃದ್ಧಿ ಬಗ್ಗೆ ಹೇಗೆ ಚಿಂತಿಸಿಯಾರು? ದಶರಥ ಮಹಾರಾಜರು ಅರ್ಹತೆಯ ಆಧಾರದ ಮೇಲೆ ಅಧಿಕಾರ ಕೊಟ್ಟಿದ್ದಕ್ಕಾಗಿ ಅದು ರಾಮರಾಜ್ಯವಾಯಿತು. 
  ಇಂತಿ ನಮಸ್ಕಾರಗಳು
 • Sampada,Belgavi

  3:00 PM , 13/05/2020

  ದೇವರ ಮುಂದೆ ಹೋಗಿ ಶ್ರೀರಾಮಚಂದ್ರನ ಪಾದಗಳಿಗೆ ಒಂದು ಹೂವನ್ನು ಇಟ್ಟು ಭಕ್ತಿಯಿಂದ ಅವನನ್ನು ನೋಡಿದಾಗ.... ಇಷ್ಟು ದಿನ ಕೇಳಿದ ರಾಮಾಯಣ ಕಣ್ಣು ಮುಂದೆ ಬರುತ್ತದೆ.... ಇದೊಂದು ಹೊಸ ಅನುಭವ... ಈ ಅನುಭವ ಹಿಂದೆಂದೂ ಆಗಲಿಲ್ಲ... ಈ ಅನುಭವದ ಸಂತೋಷಕ್ಕೆ ಕೊನೆಯೂ ಇಲ್ಲ.. ಬೇರೆಯವರ ಉಪನ್ಯಾಸಗಳನ್ನೂ ಕೇಳುತ್ತೇನೆ ಆದರೆ ಈ ಅನುಭವ ಎಂದೂ ಆಗಲಿಲ್ಲ... 🙏🙏 ಚೋರರ ಭಯವಿಲ್ಲವೊ... ಹರಿ ನಾಮಕ್ಕೆ ಯಾರ ಅಂಜಿಕೆ ಇಲ್ಲವೊ..🙏🙏🙏🙏🙏
 • Niranjan Kamath,Koteshwar

  8:40 AM , 13/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ವಾಲ್ಮೀಕಿ ಮಹರ್ಷಿಗಳು ನಮ್ಮನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿ ನಮ್ಮನ್ನು ನೆಡೆದ ಘಟನೆ ನಮ್ಮ ಮುಂದೆ ಇಡುತ್ತಿದ್ದರೆ ಎಂದು ಹೇಳಿದಿರಿ. ಸಹಜವಾಗಿ ಒಪ್ಪುವಂತದ್ದೇ . ಆದರೆ ನಾವೂ ಕೂಡ ಸಹಜವಾಗಿ ಹೇಳುತ್ತೇವೆ...ಯಾವುದೇ ಅತಿಶಯೋಕ್ತಿ ಇಲ್ಲದೆ ಹೇಳುತ್ತೇವೆ. ಸಧ್ಯ ನಮಗೆ ನೀವೇ ಶ್ರೀ ರಾಮಾಯಣ, ನೀವೇ ವಾಲ್ಮೀಕಿ ಮಹರ್ಷಿಗಳು. ನೀವೇ ನಮ್ಮ ಸರ್ವಸ್ವ. ಎಲ್ಲವನ್ನು ನಮ್ಮ ಕಣ್ಮುಂದೆ ಕಟ್ಟಿದಂತೆ ನಮಗೆ ಸಮಸ್ತ ಶ್ರೀ ರಾಮಾಯಣ, ಶ್ರೀಮದ್ ಭಾಗವತ, ಸಮಸ್ತ ದೇವರ ಆರಾಧನೆಗಳನ್ನು ಹೇಗೆ ಮಾಡಬೇಕು ಇತ್ಯಾದಿಯನ್ನು ಮಾಡಿಸುತ್ತಿದದ್ದೀರಿ. ಧನ್ಯೋಸ್ಮಿ.🙏🚩
 • deashmukhseshagirirao,Banglore

  5:49 AM , 13/05/2020

  🙏🏻🙏🏻🙏🏻🙏🏻🙏🏻🙏🏻