13/05/2020
ಶ್ರೀಮದ್ ರಾಮಾಯಣಮ್ — 47 ದಶರಥರು ತಮ್ಮ ಮರಣಸೂಚಕವಾದ ಅಪಶಕುನಗಳನ್ನು ಕಂಡು ಸಿಂಹಾಸನದಲ್ಲಿ ಯವರಾಜನನ್ನು ಕೂಡಿಸಲು ಮುಂದಾಗುತ್ತಾರೆ. ಸಕಲ ದೃಷ್ಟಿಕೋಣಗಳಿಂದಲೂ ಶ್ರೀರಾಮ ಪಟ್ಟಾಭಿಷೇಕಕ್ಕೆ ಅರ್ಹ ಎಂದು ತಾವು ಪರೀಕ್ಷೆ ಮಾಡಿ ನಿರ್ಣಯ ಮಾಡಿದ್ದರೂ ಸಹಿತ ತಮ್ಮ ಮಂತ್ರಿಗಳು ಸಾಮಂತ ರಾಜರಿಂದ ಆರಂಭಸಿ ಗ್ರಾಮಮುಖ್ಯಸ್ಥರ ವರೆಗೆ ಎಲ್ಲರ ಅಭಿಪ್ರಾಯವನ್ನು ಕೇಳಲು ಸಭೆ ಕರೆಯುತ್ತಾರೆ. ಅವರ ಅದ್ಭುತವಾದ ಸಭೆ, ಅವರ ಕುರಿತು ಎಲ್ಲರಿಗಿದ್ದ ಗೌರವ, ದಶರಥರ ಧರ್ಮನಿಷ್ಠೆಗಳ ಕುರಿತು ಇಲ್ಲಿ ಕೇಳುತ್ತೇವೆ. ನಮ್ಮ ಮನೆಯಲ್ಲಿ ಒಂದು ನಿರ್ಣಯ ಕೈಗೊಳ್ಳಬೇಕಾದರೆ ಬೀಗರ (ನಮ್ಮ ವಿವಾಹಸಂಬಂಧಿಗಳ) ಎಷ್ಟು ಪಾತ್ರವಿರಬೇಕು, ಎಷ್ಟಿರಬಾರದು ಎನ್ನುವದರ ಪಾಠ ಇಲ್ಲಿದೆ.
Play Time: 33:28
Size: 1.37 MB