Upanyasa - VNU930

ಸಭೆಯ ನಿರ್ಣಯ

ಶ್ರೀಮದ್ ರಾಮಾಯಣಮ್ — 48

ಸಮಗ್ರ ಸಭೆ, ರಾಮಚಂದ್ರ ಯುವರಾಜನಾಗಲಿ ಎಂದು ಅನುಮೋದಿಸಿದರೆ, ಸ್ವಯಂ ದಶರಥ ಮಹಾರಾಜರು ಅವರೆಲ್ಲರಿಗೆ ಪ್ರಶ್ನೆ ಕೇಳುತ್ತಾರೆ — ನಾನು ಧರ್ಮದಿಂದ ಪಾಲನೆ ಮಾಡುತ್ತಿರುವಾಗ ಯುವರಾಜನ ಆವಶ್ಯಕತೆ ಏನಿದೆ. ಎಂದು ಆಗ ಸಭೆಯಲ್ಲಿದ್ದ ಸಾಮಂತ ರಾಜರಿಂದಾರಂಭಿಸಿ ನಗರ-ಗ್ರಾಮಮುಖ್ಯಸ್ಥರವೆರೆಗೆ ಜನರು ನೀಡುವ ಅದ್ಭುತ ಉತ್ತರಗಳ ಸಂಕಲನ ಇಲ್ಲಿದೆ. 

ಶ್ರೀರಾಮಚಂದ್ರ ರಾಜನಾಗಬೇಕು ಎಂದು ಸ್ತ್ರೀಯರು ಮಕ್ಕಳು ದೇವರ ಸೇವೆಯನ್ನು ಮಾಡುತ್ತಿದ್ದ ವಿವರ ಇಲ್ಲಿದೆ. ರಾಮದೇವರ ಕಾಲದಲ್ಲಿ ಹುಟ್ಟಿ ಬಂದಿದ್ದ ಆ ಎಲ್ಲ ಜನರ ತಪಸ್ಸು ಅದೆಷ್ಟು ಎತ್ತರದ್ದು ಎನ್ನುವ ವಿವರದೊಂದಿಗೆ. 

ರಾಮನಲ್ಲಿ ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯಗಳಿಲ್ಲ ಎಂದು ಆ ಪ್ರಜೆಗಳು ಅದ್ಭುತವಾಗಿ ಪ್ರತಿಪಾದಿಸುತ್ತಾರೆ, ಆ ಅರಿಷಡ್ವರ್ಗಗಳ ಕುರಿತ ಮಹತ್ತ್ವದ ವಿವರಣೆಗಳು ಇಲ್ಲಿವೆ. 

Play Time: 51:00

Size: 1.37 MB


Download Upanyasa Share to facebook View Comments
2748 Views

Comments

(You can only view comments here. If you want to write a comment please download the app.)
 • Padmini Acharya,Mysuru

  12:15 PM, 29/04/2022

  🙏🙏ಶ್ರೀ ಗುರುಭ್ಯೋ ನಮಃ🙏🙏
  
  ರಾಮಚಂದ್ರನನ್ನು ಯವರಾಜನಾಗಿ ಕಾಣಲು ಇಡೀ ಅಯೋಧ್ಯಾ ನಗರದ ಪ್ರಜೆಗಳು ಎಷ್ಟು ಕಾತರದಿಂದ ಕಾಯುತ್ತಿದ್ದರು ಮತ್ತು ,
  
  ರಾಮಚಂದ್ರ ದಶರಥ ಮಹಾರಾಜರ ಹಿರಿಯ ಮಗ ಅನ್ನುವ ಕಾರಣಕ್ಕೆ ಯುವರಾಜನಾಗಿದ್ದಲ್ಲ ಅವನ ಗುಣಗಳಿಂದ ರಾಮಚಂದ್ರ ಅ ಪದವಿಗೆ ಅರ್ಹ ಅನ್ನುವುದರ ವಿವರಣೆ ಸುಂದರ🙏🙏🙏🙏
 • DESHPANDE P N,BANGALORE

  2:09 PM , 20/05/2020

  S.Namaskargalu. extraordinary. Anugrahvirali
 • Niranjan Kamath,Koteshwar

  12:00 PM, 20/05/2020

  ಧನ್ಯೋಸ್ಮಿ ಗುರುಗಳೇ 🙏🚩
 • Niranjan Kamath,Koteshwar

  11:01 AM, 20/05/2020

  ಗುರುಗಳ ಚರಣಗಳಿಗೆ ನಮೋ ನಮಃ. ಗುರುಗಳೇ ದಶರಥ ಮಹಾರಾಜರು ಶ್ರೀ ರಾಮನನ್ನು ಯುವರಾಜನಾಗಿ ಉಧಘೋಷಿಸಿದ ವಾರ್ತೆಯನ್ನು ಕೌಸಲ್ಯಾ ದೇವಿಗೆ ಸಖಿಯರು ಬಂದು ತಿಳಿಸುತ್ತಾರೆ , ಆ ವಿಷಯ ಕೇಳಿ ಕೌಸಲ್ಯಾ ದೇವಿಯರು ಆನಂದ ಪಡುತ್ತಾರೆ . ಹಾಗಾದರೆ ಈ ವಿಶಯವನ್ನು ದಶರಥ ಮಹಾರಾಜರು ತನ್ನ ಪತ್ನಿ ಶ್ರೀ ರಾಮನ ತಾಯಿಯಾದ ಕೌಸಲ್ಯೆಯಲ್ಲಿ ವಿಚಾರಿಸಿರಲಿಲ್ಲವೇ ? ಅಥವಾ ಅದನ್ನು ತಿಳಿಸಿದ್ದು , ಕೌಸಲ್ಯೆ ಕೇವಲ ತಿಳಿಯದವರಂತೆ ಮಾಡುತ್ತಿದ್ದರೆ ? ತಪ್ಪಾಗಿದ್ದರೆ ಕ್ಷಮಿಸಿ.

  Vishnudasa Nagendracharya

  ಪ್ರಶ್ನೆಯಲ್ಲಿ ಖಂಡಿತ ತಪ್ಪಿಲ್ಲ. 
  
  ಯುವರಾಜಪಟ್ಟದ ನಿರ್ಣಯದ ಘಟನಾವಳಿಗಳು ಈ ರೀತಿಯಾಗಿ ನಡೆಯುತ್ತವೆ — 
  
  1. ದಶರಥ ಮಹಾರಾಜರು ಅನೇಕ ಪ್ರಕಾರಗಳಲ್ಲಿ ರಾಜ್ಯದ ಪ್ರತಿಯೊಬ್ಬರ ಮನಸ್ಸಿನ ಅಭಿಪ್ರಾಯವನ್ನು ಸಂಗ್ರಹ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೌಸಲ್ಯಾದಿ ತಮ್ಮ ಎಲ್ಲ ಪತ್ನಿಯರ ಜೊತೆಯಲ್ಲಿಯೂ ಸಂಭಾಷಣೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುತ್ತಾರೆ. ರಾಮನನ್ನು ರಾಜನನ್ನಾಗಿ ಮಾಡುತ್ತಾರೆ ಎಂದಷ್ಟೇ ಈ ಸಂದರ್ಭದಲ್ಲಿ ಕೌಸಲ್ಯೆಗೆ ತಿಳಿದಿರುವದು ಕಾರಣ ಇನ್ನೂ ಅಧಿಕೃತವಾಗಿ ನಿರ್ಣಯವಾಗಿಲ್ಲ. 
  
  2. ಆ ನಂತರ ಅಧಿಕೃತವಾಗಿ ಸಾಮಂತರಿಂದ ಆರಂಭಿಸಿ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆಯುತ್ತಾರೆ. ಆ ಸಭೆಯಲ್ಲಿ ವಿಷಯವನ್ನು ಮಂಡಿಸಿ, ನಿಮ್ಮ ಒಪ್ಪಿಗೆ ಇದ್ದರೆ ಮಾತ್ರ ರಾಮನನ್ನು ಯುವರಾಜನನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಾರೆ. 
  
  3. ಸಭೆ ಒಮ್ಮತದಿಂದ ಒಪ್ಪಿಗೆ ನೀಡುತ್ತದೆ. ದಶರಥ ಮಹಾರಾಜರು ನಿರ್ಣಯಿಸುತ್ತಾರೆ. ರಾಜಮನೆತನದ ಪ್ರತಿಯೊಬ್ಬರಿಗೂ ತಲುಪುತ್ತದೆ. ಕೌಸಲ್ಯಾದೇವಿಯರಿಗೂ ಸಹ. 
  
  4. ಸಭೆ ಮುಗಿದ ನಂತರ ತಮ್ಮ ಪತ್ನಿಯರ ಮನೆಗೆ ತೆರಳಿ ನೇರವಾಗಿ ವಿಷಯ ತಿಳಿಸಲಿಕ್ಕೆ ಅವರ ಮನ ಕಾತರಿಸುತ್ತಿರುತ್ತದೆ. ಕಾರಣ, ತಂದೆ ತಾಯಿಗಳಾಗಿ ಅವರ ಜೀವನದ ಅತೀ ದೊಡ್ಡ ವಿಷಯವಿದು. ಹೀಗಾಗಿ ದಶರಥರಿಗೆ ನೇರವಾಗಿ ತಿಳಿಸುವ ಬಯಕೆ. ಮೊದಲಿಗೆ ಮೋಹದ ಪತ್ನಿ ಕೈಕಯಿಯ ಮನೆಗೆ ಹೋಗುತ್ತಾರೆ, ಆ ನಂತರ ಘಟನೆ ಬೇರೆಯೇ ರೂಪ ತೆಗೆದುಕೊಂಡು ಬಿಡುತ್ತದೆ. ಕೌಸಲ್ಯೆಯ ಮನೆಯನ್ನು ಮುಟ್ಟುವಾಗ ಬೇರೆಯ ಪ್ರಸಕ್ತಿಯೇ ಬಂದುಬಿಡುತ್ತದೆ. 
  
  ಹೀಗಾಗಿ, ನಿರ್ಣಯ ಕೈಗೊಂಡ ನಂತರ ವೈಯಕ್ತಿಕವಾಗಿ ದಶರಥರಿಗೆ ಹೇಳಲು ಸಾಧ್ಯವಾಗಲಿಲ್ಲ. ಇನ್ನು ನಿರ್ಣಯವನ್ನು ಅವರೊಬ್ಬರೇ ತೆಗೆದುಕೊಳ್ಳುವಂತಿಲ್ಲ, ಸಭೆಯೇ ತೆಗೆದುಕೊಳ್ಳಬೇಕು ಆದ್ದರಿಂದ, ನಾನು ಈ ದಿವಸ ನಿರ್ಣಯ ತೆಗೆದುಕೊಳ್ಳುತ್ತೇನೆ, ರಾಮನನ್ನು ರಾಜನನ್ನಾಗಿ ಮಾಡುತ್ತೇನೆ ಎಂದು ಕೌಸಲ್ಯಾದೇವಿಗೆ ಹೇಳಲು ಸಾಧ್ಯವಾಗಿರುವದಿಲ್ಲ. ಈ ವಿಷಯದ ಕುರಿತ ಚರ್ಚೆಯಿದೆ ಎಂದಷ್ಟೇ ಅವರು ಹೇಳಲಿಕ್ಕೆ ಸಾಧ್ಯವಾಗುವದು. ಕಾರಣ, ನಿರ್ಣಯ ಕೇವಲ ಮಹಾರಾಜರದಲ್ಲ, ಸಭೆಯದು. 
  
  ಶ್ರೀ ನಾರಾಯಣಪಂಡಿತಾಚಾರ್ಯರು ಈ ಮಾತನ್ನು ಸ್ಪಷ್ಟವಾಗಿ ತಿಳಿಸುತ್ತಾರೆ — 
  
  उवाच वाचं नरदेवनाथो निगृह्य वेगं स्वमनोरथस्य।
  सुतं युवानं युवराजमेनं कुर्मो मतं चेद् भवतां तदेवम्	॥6॥
  
  ಭವತಾಂ ಮತಂ ಚೇದ್ ಸುತಂ ಯುವರಾಜಂ ಕುರ್ಮಃ, ನಿಮ್ಮೆಲ್ಲರಿಗೆ ಒಪ್ಪಿಗೆಯಿದ್ದರೆ ಮಾತ್ರ ರಾಮನನ್ನು ಮಗನನ್ನಾಗಿ ಮಾಡುತ್ತೇವೆ. 
 • Sampada,Belgavi

  5:31 PM , 18/05/2020

  ಶ್ರೀರಾಮಚಂದ್ರನ ಗುಣಗಾನ ಕೇಳಿ ಆನಂದಿಸಿದ ಮನಸು ನಲಿಯಿತು... ಶ್ರೀಮದಾಚಾರ್ಯರ ನಿರ್ಣಯಗಳೊಂದಿಗೆ ಕೇಳುವ ರಾಮಾಯಣ ಒಂದು ಅದ್ಭುತವಾದ ಮುದವನ್ನು ಮನಸ್ಸಿಗೆ ನೀಡುತ್ತದೆ.... .... ಅಂಥ ಸ್ವಾಮಿಯ ಗುಣಗಾನ ಕೇಳಿ ಆನಂದಿಸಿದ ಈ ಕ್ಷಣಗಳು ಜನ್ಮ ಸಾರ್ಥಕತೆಯ ಭಾವ ಮೂಡಿಸುತ್ತಿವೆ... ಕಲಿಯುಗದೊಳು ಹರಿ ನಾಮವ ನೆನೆದರೆ ಕುಲಕೋಟಿಗಳುಧ್ಧರಿಸುವವು.... ಅಂತ ತಿಳಿದಿದ್ದರೂ ಉಪನ್ಯಾಸ ಕೇಳದಿದ್ದರೆ ಹೇಗೆ ಅಂತ ಮನಸು ನಿತ್ಯ ಹಂಬಲಿಸುತಲಿದೆ... ಕಲಿಯುಗದ ಜನ ಕೇಳಲೇಬೇಕಾದ ಉಪನ್ಯಾಸ ವಿದು.... ಕೇಳಿ ನಮ್ಮನ್ನು ನಾವು ಬದಲಾಯಿಸಿಕೊಂಡರೆ ... ಹೇಗಿರಬಹುದು ಮುಂದಿನ ದಿನಗಳು.. ನೆನೆದು ಆನಂದವಾಯಿತು...🙏🙏🙏🙏🙏
 • Niranjan Kamath,Koteshwar

  7:21 AM , 18/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಏನೊಂದು ಧನ್ಯ , ಪುನೀತ ಜನರು. ಆ ಕಾಲದಲ್ಲಿ ಹುಟ್ಟಿ ಬಂದದ್ದೇ ಸೌಭಾಗ್ಯ. ಬಹಳ ಸೊಗಸಾಗಿ ಶ್ರೀ ದಶರಥರ ರಾಜಧರ್ಮ, ಹಾಗೂ ಶ್ರೀ ರಾಮಚಂದ್ರ ದೇವರ ಪರಾಕೃಮ, ಸಾಮರ್ಥ್ಯ, ಸೌಮ್ಯತೆ ಎಲ್ಲವನ್ನು ತಿಳಿಸಿದ್ದೀರಿ. ಧನ್ಯೋಸ್ಮಿ.🚩🙏