Upanyasa - VNU931

ಶ್ರೀರಾಮನಿಗೆ ಉಪದೇಶ

ಶ್ರೀಮದ್ ರಾಮಾಯಣಮ್ — 49 

ಯುವರಾಜ ಪದವಿಯ ಪಟ್ಟಾಭಿಷೇಕಕ್ಕೆ ಏನೆಲ್ಲ ಪದಾರ್ಥಗಳು ಬೇಕು ಎಂದು ವಸಿಷ್ಠರು ಮಾಡುವ ಆದೇಶ. 

ದಶರಥರು ಸಪ್ತದ್ವೀಪವತಿಯಾದ ಭೂಮಿಗೆ ಒಡೆಯ ಎಂದು ಕೇಳುತ್ತೇವೆ, ರಾವಣನೂ ಸಾಮಂತನಾಗಿದ್ದನೇ? ಜನಕಾದಿಗಳ ಜೊತೆಯಲ್ಲಿ ಹೇಗೆ ಸಂಬಂದವಿತ್ತು?

ರಾಮನ ಪರಮಾದ್ಭುತ ದೇಹ, ಅವನ ನಡಿಗೆಯ ವರ್ಣನೆ ಇತ್ಯಾದಿ ಅಪೂರ್ವವಿಷಯಗಳ ವಿವರ ಇಲ್ಲಿದೆ. 

Play Time: 46:45

Size: 1.37 MB


Download Upanyasa Share to facebook View Comments
2920 Views

Comments

(You can only view comments here. If you want to write a comment please download the app.)
 • Vikram Shenoy,Doha

  1:51 PM , 02/06/2020

  ಆಚಾರ್ಯರಿಗೆ ಕೋಟಿ ಕೋಟಿ ನಮನಗಳು. ಮಧ್ಯಪಾನ, ಮಾಂಸಹಾರ ದಂತಹ ತಾಮಸಿಕ ಆಹಾರ ಕ್ಷತ್ರಿಯರಿಗೆ ಹೇಗೆ ನಿಷಿದವಲ್ಲ??. ಸ್ವಾಭಾವಿಕವಾಗಿ ಕಾಮಾದಿ ದೋಷಗಳನ್ನು ಕೊಡುವ ಈ ಆಹಾರಗಳನ್ನು, ಕಾಮ ರಹಿತವಾಗಿ ಹೇಗೆ ಕ್ಷತ್ರಿಯರು ತೆಗೆದುಕೊಳ್ಳಬಹುದು??? ನಿಮ್ಮ ರಾಮಾಯಣದ ಈ ಪ್ರವಚನ ಅತೀ ಉತ್ತಮ. ಧನ್ಯವಾದಗಳು..

  Vishnudasa Nagendracharya

  ಈ ಪ್ರಶ್ನೆಗೆ ಶ್ರೀಮದಾಚಾರ್ಯರು ಭಾಗವತತಾತ್ಪರ್ಯದಲ್ಲಿ ಉತ್ತರಿಸಿದ್ದಾರೆ. 
  
  ಹಿತ್ತಾಳೆಯ ಪಾತ್ರೆಗೆ ನಾವು ಕಲಾಯಿ (ಸೀಸ) ಹಾಕಿಸುತ್ತೇವೆ. ಬೆಳ್ಳಿ ಬಂಗಾರಕ್ಕೆ ಹಾಕಿಸುತ್ತೇವೆಯೋ, ಇಲ್ಲ. 
  
  ಸೀಸ ಹಿತ್ತಾಳೆಗೆ ಹಿತಕಾರಿ. ದೋಷಕಾರಿಯಲ್ಲ. ಸೀಸ ಬಂಗಾರಕ್ಕೆ ಬೆಳ್ಳಿಗೆ ದೋಷಕಾರಿ. 
  
  ಹಾಗೆ, ಮದ್ಯಪಾನ, ಮಾಂಸ ಎನ್ನುವದು ಬ್ರಾಹ್ಮಣನಿಗೆ ನಿಷಿದ್ಧ. ಕ್ಷತ್ರಿಯಾದಿಗಳಿಗೆ ನಿಷಿದ್ಧವಲ್ಲ. 
  
  ಹಾಗಂತ ಅವರೂ ತಮ್ಮಿಚ್ಛೆಯಂತೆ ಮದ್ಯ ಮಾಂಸಗಳನ್ನು ಸ್ವೀಕರಿಸುವಂತಿಲ್ಲ. ಅವಕ್ಕೂ ಶಾಸ್ತ್ರನಿಯಮಗಳಿವೆ. ಅದಕ್ಕನುಸಾರಿಯಾಗಿಯೇ ಸ್ವೀಕರಿಸಬೇಕು. 
 • Niranjan Kamath,Koteshwar

  7:34 AM , 19/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ವಾಲ್ಮೀಕಿ ಮಹರ್ಷಿಗಳ ಕರುಣೆಯೇ ಅಪಾರ. ಆಹಾ!! ಅವರು ಶ್ರೀ ವಶಿಷ್ಟರಿಗೆ ಸಂಬೋಧಿಸಿ ವಶಿಷ್ಟಮ್ ಮುನಿ ಶಾರ್ಧುಲಂ ಎಂದಿದ್ದು ಅತೀ ಹೆಮ್ಮೆ ಎನಿಸುತ್ತದೆ. ದಶರಥ ಮಹಾರಾಜರ ಕರ್ತವ್ಯ ಪರಿಪಾಲನೆ ಅತೀ ವಿನಯವಾದದ್ದು. ಶ್ರೀ ರಾಮಚಂದ್ರ ಸಭೆಗೆ ಬರುವಾಗ ಅವರ ವರ್ಣನೆ ಮನಮೋಹಕವಾಗಿತ್ತು. ಧನ್ಯೋಸ್ಮಿ.
 • deashmukhseshagirirao,Banglore

  4:18 AM , 19/05/2020

  🙏🏻🙏🏻🙏🏻🙏🏻🙏🏻