Upanyasa - VNU932

ದಶರಥರ ಅಂತರಂಗ, ರಾಮನ ದೀಕ್ಷೆ

ಶ್ರೀಮದ್ ರಾಮಾಯಣಮ್ — 50

ಮಹಾಸಭೆಯನ್ನು ವಿಸರ್ಜಿಸಿದ ದಶರಥ ಮಹಾರಾಜರು ಮತ್ತೆ ರಾಮನ ಜೊತೆ ಮಾತನಾಡಲು ಹೇಳಿ ಕಳುಹಿಸುತ್ತಾರೆ. ಯಾರ ಮುಂದೆಯೂ ಹೇಳಿಕೊಳ್ಳದ, ತಮಗಾಗುತ್ತಿರುವ ಸಾವಿನ ಸೂಚನೆಯ ವಿಷಯವನ್ನು ರಾಮನಿಗೆ ತಿಳಿಸುತ್ತಾರೆ. ಭರತ ಶತ್ರುಘ್ನರು ಕೈಕಯ ದೇಶದಲ್ಲಿದ್ದಾರೆ, ಅವರನ್ನು ಕರೆಸುವಷ್ಟು ಸಮಯವಿಲ್ಲ, ಹೀಗಾಗಿ ನಾಳೆಯೇ ಅಭಿಷೇಕವಾಗಬೇಕು, ನಾನಿನ್ನು ಬಹಳ ದಿವಸ ಬದುಕಿರುವದಿಲ್ಲ ಎನ್ನುವದನ್ನು ಸ್ಪಷ್ಟವಾಗಿ ತಿಳಿಸುವ ಭಾಗದ ವಿವರಣೆ. 

ಭರತ ಶತ್ರುಘ್ನರು ಕೈಕಯ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೊರಟ ಹದಿಮೂರು ವರ್ಷಗಳ ನಂತರ ದಶರಥ ಮಹಾರಾಜರು ರಾಮನಿಗೆ ರಾಜ್ಯಾಭಿಷೇಕದ ಆಲೋಚನೆಯನ್ನು ಮಾಡಿದ್ದು. ಭರತ ಬರುವ ಸಮಯಕ್ಕೆ ತಾವು ಬದುಕಿರುವದಿಲ್ಲ ಎಂದು ದಶರಥ ಮಹಾರಾಜರಿಗೆ ತಿಳಿದಿರುತ್ತದೆ. 

ಭರತರ ಕುರಿತು ದಶರಥರಿಗೆ ಎಷ್ಟು ಪ್ರೇಮವಿತ್ತು, ಎಷ್ಟು ವಿಶ್ವಾಸವಿತ್ತು ಎನ್ನುವದನ್ನು ನಾವಿಲ್ಲಿ ಕೇಳುತ್ತೇವೆ. 

ಕೌಸಲ್ಯೆ ಮಾಡುವ ಅದ್ಭುತ ಆಶೀರ್ವಾದ, ರಾಮ-ಲಕ್ಷ್ಮಣ-ಭರತ-ಶತ್ರುಘ್ನರ ಅದ್ಭುತ ಬಾಂಧವ್ಯ

ವಸಿಷ್ಠರ ರಥ, ಅವರು ರಾಮನ ಮನೆಗೆ ಬಂದ ಕ್ರಮ, ರಾಮ ಅವರನ್ನು ಎದುರುಗೊಂಡ ಕ್ರಮ, ಮುಂದಿನ ಕ್ರಮಗಳ ಕುರಿತ ವಸಿಷ್ಠರ ಆದೇಶ.

ರಾಮಸೀತೆಯರು ಸಂಕಲ್ಪಪೂರ್ವಕವಾಗಿ ದೀಕ್ಷೆಯನ್ನು ಸ್ವೀಕರಿಸಿ ಹವಿಸ್ಸಿನ ತುಪ್ಪವನ್ನು ತಲೆಯ ಮೇಲೆ ಹೊತ್ತು ಭಕ್ತಿಯಿಂದ ತರುತ್ತಾರೆ. ದೇವತಾರಾಧನೆಯ ಮಹತ್ತ್ವವನ್ನು ಮನಗಾಣಿಸುವ ಭಾಗ. 

Play Time: 39:50

Size: 1.37 MB


Download Upanyasa Share to facebook View Comments
2641 Views

Comments

(You can only view comments here. If you want to write a comment please download the app.)
 • Vikram Shenoy,Doha

  2:36 PM , 02/06/2020

  ಆಚಾರ್ಯರಿಗೆ ಅನಂತ ಕೋಟಿ ನಮನೆಗಳು. ಶ್ರಿ ರಾಮಚಂದ್ರನ ದರ್ಶನ ಹೃದಯದಲ್ಲಿ ಆದಂತಾಯಿತು. 🙏🙏🙏
 • Prasanna Kumar N S,Bangalore

  8:04 PM , 23/05/2020

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು,
  ಸಂಕಲ್ಪ ಮಾಡುವಾಗ ನಮ್ಮ ಬಲಭಾಗದಲ್ಲಿ ನಮ್ಮ ಮಡದಿಯನ್ನು ಕೂಡಿಸುತ್ತಾರೆ.
  ಮನುಷ್ಯ ವಿಡಂಬನೆ ಮಾಡುತ್ತಿರುವ ಶ್ರೀರಾಮಚಂದ್ರನ ಎಡಗಡೆ ಸೀತಾದೇ ವಿಯರನ್ನ ಕೂಡಿಸುತ್ತಾರೆ. ಇದನ್ನು ಸ್ವಲ್ಪ ವಿವರಿಸಬಹುದೆ.
 • Naveen ulli,Ilkal

  8:54 AM , 21/05/2020

  ಶ್ರೀ ಗುರುಭ್ಯೋ ನಮಃ 
  
  ಗುರುಗಳೇ, ನಾವು ಬಹಳ ದಿನಗಳಿಂದ ಕೇಳ್ತಾ ಬರ್ತಾ ಇದೀವಿ, ದಶರಥ ಮಹಾರಾಜರು ಕೆಟ್ಟ ಶಕುನಗಳನ್ನ ಮತ್ತು ಶುಭ ಶಕುನಗಳನ್ನು ಕಾಣ್ತಾಇದ್ದರು ಅಂತ. 
  
  ಈ ಶಕುನಗಳು ಇರೋದು ನಿಜಾನಾ? ಎಲ್ಲಾ ಶಕುನಗಳು ಸೂಚಿಸೋದು ಮುಂದೆ ಹೀಗೆ ಆಗುತ್ತೆ ಅಂತಾನಾ? ಅಥವಾ ಹೀಗೆ ಆಗಬಹುದು ಎಚ್ಚರದಿಂದ ಇರು ಅಂತಾನಾ?

  Vishnudasa Nagendracharya

  ಶಕುನಗಳು ಅತ್ಯಂತ ಸತ್ಯ. 
  
  ಭಗವಂತ ನಮಗೆ ನೀಡುವ ಸೂಚನೆಗಳು ಅವು. ಶುಭಶಕುನಗಳು ತೋರಿದಾಗ ದೇವರ ಸ್ಮರಣೆ ಪ್ರಾರ್ಥನೆ ಮಾಡಿದಾಗ ಆ ಶುಭಫಲವನ್ನು ಪಡೆಯುತ್ತೇವೆ. ಅಶುಭಶಕುನಗಳು ತೋರಿದಾಗ ದೇವರ ಸ್ಮರಣೆ ಮಾಡಿದಾಗ ಆ ಅಶುಭವನ್ನು ಪರಿಹಾರ ಮಾಡಿಕೊಳ್ಳುತ್ತೇವೆ. 
  
  ಕೆಲವು ಅನಿವಾರ್ಯವಾದ ಶಕುನಗಳನ್ನು ಮೀರಲು ಸಾಧ್ಯವಾಗುವದಿಲ್ಲ. ಅವು ಪರಿಣಾಮ ಮಾಡಿಯೇ ಮಾಡುತ್ತವೆ. 
  
  
 • Niranjan Kamath,Koteshwar

  7:33 AM , 20/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ದಶರಥ ಮಹಾರಾಜರ ಸಮಯ ಪ್ರಜ್ಞೆ, ಶ್ರೀ ರಾಮಚಂದ್ರ ದೇವರ ಕರುಣಾಪೂರ್ಣ ನಡೆ, ಭರತನ ಆಗಮನದ ಮುಂಚೆ ಯಾಕೆ ಪಟ್ಟ ಆಗಬೇಕೆಂಬ ಮೂಲ ವಿಚಾರ ಬಹಳ ಹೃದಯ ತುಂಬಿ ಬರುವಂತೆ ಹೇಳಿದ್ದೀರಿ. ಧನ್ಯೋಸ್ಮಿ.🚩🙏