Upanyasa - VNU933

ಅಯೋಧ್ಯೆಯ ಸಂಭ್ರಮ

ಶ್ರೀಮದ್ ರಾಮಾಯಣಮ್ — 51 

ಶ್ರೀರಾಮರಿಗೆ ದೀಕ್ಷೆ ನೀಡಿಸುವದಕ್ಕಾಗಿ ವಸಿಷ್ಠರು ರಾಮರ ಅರಮನೆಗೆ ಬಂದಿರುತ್ತಾರೆ. ಆದರೆ ಎಷ್ಟು ವೇಗದಿಂದ ಅಲ್ಲಿಗೆ ಬಂದಿದ್ದರೋ ಅಷ್ಟೇ ವೇಗದಲ್ಲಿ ಹಿಂತಿರುಗಲು ಸಾಧ್ಯವಾಗುವದಿಲ್ಲ, ಕಾರಣ ಸಮಗ್ರ ಅಯೋಧ್ಯೆಯ ಜನರು ಗುಂಪುಗುಂಪಾಗಿ ಸೇರಿ ಸಂಭ್ರಮಪಡುತ್ತಿರುತ್ತಾರೆ. ಆ ನಾಗರೀಕರ ಸಂತೋಷವನ್ನು ಆಸ್ವಾದಿಸುತ್ತ ವಸಿಷ್ಠರು ಮುನ್ನಡೆಯುತ್ತಾರೆ. 

ರಾಮದೇವರು ಬೆಳಗಿನ ಜಾವದಲ್ಲಿಯೇ ಎದ್ದು ಮನೆಯನ್ನು ಸಿಂಗಾರಗೊಳಿಸಲು ಆದೇಶ ಮಾಡಿ, ಸ್ವಯಂ ತಾವು ಸಂಧ್ಯಾಕಾರ್ಯವನ್ನು ಮುಗಿಸಿ ದೇವರ ಪೂಜೆಯನ್ನು ಮಾಡಿ ಬ್ರಾಹ್ಮಣರಿಂದ ಪುಣ್ಯಾಹವನ್ನು ಮಾಡಿದ ಮಂಗಳ ಘಟನೆಯ ಚಿತ್ರಣ ಇಲ್ಲಿದೆ. 

ಮನುಷ್ಯ ದೇವರ ಆರಾಧನೆಯನ್ನೇಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರದೊಂದಿಗೆ. 

Play Time: 43:18

Size: 1.37 MB


Download Upanyasa Share to facebook View Comments
2986 Views

Comments

(You can only view comments here. If you want to write a comment please download the app.)
 • Vikram Shenoy,Doha

  2:50 PM , 02/06/2020

  ಅಚ್ಚರ್ಯರೇ ನಿಮ್ಮ ಈ ರಾಮಾಯಣದ ಪ್ರವಚನ ಕೇಳುವ ಭಾಗ್ಯ, ಪೂರ್ವ ಜನ್ಮಗಳ ಪುಣ್ಯ ...🙏🙏🙏
 • DESHPANDE P N,BANGALORE

  2:15 PM , 22/05/2020

  S.Namaskargalu. no words to describe. Anugrahvirali
 • Vishwnath MJoshi,Bengaluru

  1:40 PM , 21/05/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ
  ವಸಿಷ್ಠರು ಸಪ್ತ ಋಷಿಗಳು ಅವರಿಗೆ ಶ್ರೀ ರಾಮನ ಪಟ್ಟಾಭಿಷೇಕ ನಿಲ್ಲುವುದು ,ಮಂತ್ರೆಯ ಷಡ್ಯಂತ್ರ ಗೊತ್ತಾಗಲಿಲ್ಲವೆ?. ದಶರಥ ಮಹಾರಾಜರಿಗೆ ಸುಚನೆ ಕೊಡಬಹುದಿತ್ತು ಅಲ್ಲವೆ

  Vishnudasa Nagendracharya

  1. ನಡೆಯಲೇ ಬೇಕಾದ್ದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. 
  
  2. ಋಷಿಗಳಾದ ಮಾತ್ರಕ್ಕೆ “ಎಲ್ಲವೂ” ತಿಳಿದರಬೇಕು ಎಂಬ ನಿಯಮವಿಲ್ಲ 
  
  3. ವಸಿಷ್ಠರಿಗೆ ತಿಳಿದಿದ್ದರೂ ರಾಜ್ಯಾಭಿಷೇಕಕ್ಕಿಂತ ದೊಡ್ಡ ಕಾರ್ಯ, ರಾವಣನ ವಧೆ. ಅದಾಗಬೇಕಾಗಿದೆ. 
  
  ವನವಾಸ ದುಃಖದ ವಿಷಯವಾಗಿರಬಹುದು. ಆದರೆ ಅದರಿಂದ ಉಂಟಾದ ಪ್ರಯೋಜನಗಳು ಮಾತ್ರ ಊಹೆಗೆ ನಿಲುಕದಷ್ಟು ಮಹತ್ತರವಾದದ್ದು. ಉಪನ್ಯಾಸಗಳನ್ನು ಕೇಳುತ್ತ ಹೋಗಿ. ಅರ್ಥವಾಗುತ್ತದೆ. 
  
 • Vishwnath MJoshi,Bengaluru

  2:41 PM , 21/05/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ
   ಶ್ರೀರಾಮ ಚಂದ್ರನು ಸಂಧ್ಯಾ ವಂದನೆ ಮಾಡುತ್ತಿದ್ದನು ಎಂದು ವಲ್ಮಕಿ ರಾಮಾಯಣದಲ್ಲಿ ಮತ್ತು ನಿಮ್ಮ ಪ್ರವಚನದಲ್ಲಿ ಹೇಳಿದ್ದಿರಿ. ಸಮಸ್ತ ವೇದಗಳ ಪ್ರತಿಪದ್ಯನಾದ ಶ್ರೀ ನಾರಾಯಣ ರೂಪಿ ಭಗವಂತನು, ಮಾನವ ರೂಪದಲ್ಲಿ ಯಾವ ವೇದದ ಸಂಧ್ಯಾ ವಂದನೆ ಮಾಡುತ್ತೀದ್ದನು. ನಾವು ರಿಗ್ವೇದ ಮತ್ತು ಯಜುರ್ವೇದ ಎಂದು ಸಂಧ್ಯಾ ವಂದನೆ ಮಾಡುತ್ತೆವೆ
   ಕ್ರಮಿಸಿ ನನ್ನ ಪ್ರಶ್ನೇ ತಪ್ಪಿದ್ದರೆ.
   ಹಾಗು ಸಾಮವೇದ ಮತ್ತು ಅಥರ್ವಣ ವೇದದ ಸಂಧ್ಯಾ ವಂದನೆ ಎಕೆಇಲ್ಲ . ರಿಗ್ವೇದ ಮಂತ್ರ ಪೂರಸ್ತ್ರಹೇಗೊ ಸಾಮವೇದ ಮತ್ತು ಅಥರ್ವಣ ಏನು ಪ್ರತಿಪಾದಿಸುತ್ತವೆ

  Vishnudasa Nagendracharya

  ಬ್ರಾಹ್ಮಣ ಕ್ಷತ್ರಿಯ ವೈಶ್ಯ ಮೂರೂ ಜನರಿಗೂ ಸಂಧ್ಯಾವಂದನೆ ಇರುತ್ತದೆ. 
  
  ಮೂರು ವರ್ಣಗಳಲ್ಲಿ ನಾಲ್ಕು ವೇದಗಳಿಗೆ ಸೇರಿದವರೂ ಇರುತ್ತಾರೆ. 
  
  ರಾಮದೇವರದು ಯಜುರ್ವೇದವಾಗಿತ್ತು ಎಂದು ಅನಿಸುತ್ತದೆ. (ಸ್ಪಷ್ಟ ಪ್ರಮಾಣಗಳಿಲ್ಲ. ಇರುವ ಒಂದೆರಡು ಪ್ರಮಾಣಗಳಿಂದ ಹಾಗೆ ತೋರುತ್ತದೆ..) ಮುಂದೆ ಸ್ಪಷ್ಟ ಪ್ರಮಾಣ ದೊರೆತರೆ ತಿಳಿಸುತ್ತೇನೆ. 
 • Padmini Acharya,Mysuru

  12:34 PM, 21/05/2020

  🙏ಶ್ರೀ ಗುರುಭ್ಯೋ ನಮಃ🙏
  
  ಮನುಷ್ಯ ಯಾವ ರೀತಿಯಾಗಿ ಬದುಕಬೇಕು ಎಂಬುದನ್ನು ಹೆಜ್ಜೆ ಹೆಜ್ಜೆಗೆ ಆಚರಿಸಿ ತೋರಿಸುವ ಆ ಸ್ವಾಮಿಗೆ 🙏🙏🙏🙏
  
  ಆ ಅಯೋಧ್ಯೆಯ ಜನರ ಸಂಭ್ರಮ ಮಕ್ಕಳು ಆ ಪಟ್ಟಾಭಿಷೇಕ ಮಹೋತ್ಸವವನ್ನು ಅನುಕರಣೆ ಮಾಡುವ ಪರಿ ಆಹಾ......
  
  ಇಷ್ಟೆಲ್ಲಾ ಸಂಭ್ರಮ "ಆದರೆ" ಎನ್ನುವ ಶಬ್ದ ಕೇಳುತ್ತಿದ್ದ ಹಾಗೆ ಸಮಗ್ರ ಚಿತ್ರಣವೇ ಬದಲಾಗಿ ಬಿಡುತ್ತದೆ ಕಣ್ಣಲ್ಲಿ ಅಪ್ರಯತ್ನವಾಗಿ ನೀರು ತುಂಬಿಕೊಂಡು ಬಿಡುತ್ತದೆ.
 • Niranjan Kamath,Koteshwar

  8:52 AM , 21/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ರಾಮನನ್ನು ಭೇಟಿ ಮಾಡಿ ಪುನಃ ದಶರಥನ ಬಳಿಗೆ ಬಂದ ಕೂಡಲೇ ವಶಿಷ್ಟರು "ಕೃತಮ್ " ಎಂದು ಹೇಳಿ ಒಮ್ಮೆಲೇ ದಶರಥರ ತವಕವನ್ನು ಶಾಂತಗೊಳಿಸಿದ ರೀತಿ ಅತೀ ಆನಂದ. ವಿಷಯವೆಲ್ಲವನ್ನು ವಿವರಿಸುವ ಮೊದಲು ಕೊಟ್ಟ ಕೆಲಸ ಆದ ಬಗ್ಗೆ ಮೊದಲು ಹೇಳಿ ಪ್ರಸನ್ನಗೊಳಿಸಿದ್ದು ಪರಮ ಮಂಗಲ. ಆ ವಶಿಷ್ಟರು, ಅದನ್ನು ವರ್ಣಿಸಿದ ಶ್ರೀ ವಾಲ್ಮೀಕಿ ಮಹರ್ಷಿಗಳು, ಅದನ್ನೆಲ್ಲ ನಮ್ಮಂತಹ ಪಾಮರರು ಕೇಳುವಂತೆ ನಮಗೆ ಸ್ಪಷ್ಟವಾಗಿ ತಿಳಿ ಹೇಳುವ ನೀವು ಪ್ರಾತಃಸ್ಮರಣೀಯರು. ಅಯೋಧ್ಯೆಯ ಜನರ ಉತ್ಸಾಹ, ನಂತರ ದಶರಥರ ಸಂಭ್ರಮ ಹೋಗಳುವ ನಿಮ್ಮ ಸಂತಸ ಸಂಭ್ರಮ , ನಿಮ್ಮ ಹೇಳುವ ಧ್ವನಿಯಲ್ಲೇ ತಿಳಿಯಬಹುದು...ಕೊನೆಯಲ್ಲಿ ಅದೇ ಧಾಟಿಯಿಂದ "ಆದರೆ " ಎಂದು ಮಂಥರೆಯ ವಿಷಯ ಹೇಳುವಾಗ ನಿಮ್ಮ ಧ್ವನಿಯಲ್ಲಿ ಥಟ್ಟನೆ ಆದ ನೀರವತೆ, ದುಃಖ ಸ್ಪಷ್ಟವಾಗಿ ಗೊತ್ತಾಗುತ್ತದೆ. ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ. ನಿಮ್ಮ ಈ ಜ್ಞಾನ ಯಜ್ಞಕ್ಕೆ ನಮ್ಮನ್ನು ಸೇರಿಸಿಕೊಂಡ ಆ ದೇವರಿಗೂ, ನಿಮಗೂ ಅನಂತಾನಂತ ಧನ್ಯವಾದಗಳು.
 • deashmukhseshagirirao,Banglore

  5:20 AM , 21/05/2020

  🙏🏻🙏🏻🙏🏻🙏🏻🙏🏻