20/05/2020
ಶ್ರೀಮದ್ ರಾಮಾಯಣಮ್ — 52 ರೂಢಿಸಿಕೊಳ್ಳಬೇಕಾದ ಸದ್ಗುಣಗಳು ಯಾವುವು ಎಂದು ತಿಳಿಯಲು ಭಗವಂತನ ಭಾಗವತೋತ್ತಮರ ಕಥೆ ಕೇಳಬೇಕು, ಬಿಡಬೇಕಾದ ದುರ್ಗುಣಗಳು ಯಾವುವು ಎಂದು ತಿಳಿಯಲು ದುರ್ಜನರ ಕುರಿತು ಕೇಳಬೇಕು. ಮಂಥರೆ ನಮ್ಮೊಳಗೇ ಇರುತ್ತಾಳೆ. ಅವಳನ್ನು ಹುಡುಕುವದು ಹೇಗೆ, ತೊರೆಯುವದು ಹೇಗೆ ಎನ್ನುವದನ್ನು ಈ ಘಟನೆಗಳಿಂದ ತಿಳಿಯುತ್ತೇವೆ. ಹಾಲಾಹಲವಿಷಕ್ಕೆ ಅಭಿಮಾನಿಯಾಗಿ ಕಲಿ ಹುಟ್ಟಿದಾಗ ಅವನ ಅರ್ಧಾಂಗಿನಿಯಾಗಿ ಹುಟ್ಟಿದವಳು ಅಲಕ್ಷ್ಮಿ. ಕುರೂಪದ ಅವಳು ಮಹಾಪ್ರಯತ್ನ ಪಟ್ಟು ಅಪ್ಸರೆಯರ ಮಧ್ಯದಲ್ಲಿ ದುಂದುಭಿ ಎಂಬ ಹೆಸರಿನಿಂದ ಹುಟ್ಟಿ ಬಂದ ನಂತರ ಮಂಥರೆಯಾಗಿ ಹೇಗೆ ಹುಟ್ಟಿ ಬಂದಳು ಎನ್ನುವದರ ವಿವರಣೆ ಇಲ್ಲಿದೆ. ಮಂಥರಾ ಎಂಬ ಹೆಸರಿನ ಅರ್ಥದೊಂದಿಗೆ. ಸಂಜೆಯ ವೇಳೆ ಮಲಗಿದರೆ ಮನೆಯಲ್ಲಿ ಅಮಂಗಳವುಂಟಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಸಂಜೆಯ ಹೊತ್ತು ಮಲಗಿದ್ದ ಕೈಕಯಿಯಿಂದ ಇಡಿಯ ರಾಷ್ಟ್ರಕ್ಕೆ, ಸ್ವಯಂ ಅವಳಿಗೂ ಅಮಂಗಳವುಂಟಾಯಿತು ಎಂದು ರಾಮಾಯಣದಲ್ಲಿ ದೃಷ್ಟಾಂತವನ್ನು ಕೇಳುತ್ತೇವೆ. ರಾಮನ ಪಟ್ಟಾಭಿಷೇಕದ ಕುರಿತು ಕೇಳಿದಾಗ ಕೈಕಯಿ ಪ್ರಾಮಾಣಿಕವಾಗಿ ಸಂತೋಷ ಪಡುವ ಘಟನೆಯ ಚಿತ್ರಣದೊಂದಿಗೆ.
Play Time: 49:12
Size: 1.37 MB