Upanyasa - VNU935

ಮಂಥರೆಯ ದುರ್ಮಂತ್ರಣ

ಶ್ರೀಮದ್ ರಾಮಾಯಣಮ್ — 53

ಕೈಕಯಿ ರಾಮಚಂದ್ರನನ್ನು ಅಪಾರವಾಗಿ ಪ್ರೀತಿಸುತ್ತಿದ್ದವಳು, ರಾಮನ ರಾಜಾ್ಯಭಿಷೇಕದ ಸುದ್ದಿ ಕೇಳಿ ಸಂತಸ ಪಟ್ಟವಳು. ಭರತನನ್ನು ರಾಮ ರಾಜ್ಯದಿಂದ ಹೊರಹಾಕುತ್ತಾನೆ, ಕೊಲ್ಲುತ್ತಾನೆ ಎಂದೆಲ್ಲ ಹೇಳಿದರೂ ಒಪ್ಪದ ಕೈಕಯಿಯನ್ನು ಮಂಥರೆ ಹಿಂದೆ ಕೈಕಯಿ ಮಾಡಿದ ಒಂದು ತಪ್ಪನ್ನು ನೆನಪು ಮಾಡಿಕೊಟ್ಟು ಅವಳ ಮನಸ್ಸನ್ನು ಬದಲಾಯಿಸುತ್ತಾಳೆ. ಆಚಾರ್ಯರು ಈ ಪ್ರಸಂಗವನ್ನು ಅತ್ಯಂತ ಕೌಶಲದಿಂದ ನಿರ್ಣಯಿಸಿರುವ ಕ್ರಮದ ವಿವರಣೆಯೊಂದಿಗೆ. 

ಮಂಥರೆಯ ಅರ್ಥಹೀನ ಪ್ರಲಾಪಗಳನ್ನು ಮಾಡಿದರೆ ಕೈಕಯಿ ರಾಮಚಂದ್ರನ ಗುಣಗಾನ ಮಾಡಿ, “ದೊಡ್ಡ ಮಗ ರಾಮನಿಗೇ ರಾಜ್ಯ ಸಲ್ಲಬೇಕಾದ್ದು” ಎಂದು ಪ್ರತಿಪಾದಿಸುತ್ತಾಳೆ. 

ಹೊರಗೆ ಮಂಥರೆಯಿಂದ, ಒಳಗೆ ನಿಕೃತಿಯಿಂದ ಪ್ರಭಾವಿತಳಾದ ಕೈಕಯಿ ಯಾವ ರೀತಿ ರಾಮನಿಗೆ ರಾಜ್ಯವನ್ನು ತಪ್ಪಿಸುವದು ಎಂದು ಕೇಳುತ್ತಾಳೆ. ಹಿಂದೆ ದಶರಥಮಹಾರಾಜರು ಕೈಕಯಿಗೆ ಕೊಟ್ಟ ವರವನ್ನು ನೆನಪಿಸಿ, ಕೆಟ್ಟ ಬಟ್ಟೆಯನ್ನು ಹಾಕಿಕೊಂಡು, ನೆಲದ ಮೇಲೆ ಮಲಗಿ, ದಶರಥರಿಂದ ಹೇಗೆ ವಚನ ತೆಗೆದುಕೊಳ್ಳಬೇಕು ಎಂಬೆಲ್ಲ ಕೆಟ್ಟ ಬುದ್ಧಿಯನ್ನು ಹೇಳಿಕೊಡುತ್ತಾಳೆ. 

ಭ್ರಾಂತಿಗೊಳಗಾದ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದಕ್ಕೆ ದೃಷ್ಟಾಂತವಾಗಿ, ಮಂಥರೆಯ ವಶಕ್ಕೆ ಬಂದ ಕೈಕಯಿ ಆ ಮಂಥರೆಯ ಅತಿಕೆಟ್ಟ ಶರೀರವನ್ನು ಹೊಗಳುವ, ಅವಳ ಪೃಷ್ಠಕ್ಕೆ ಬಂಗಾರದ ಕವಚ ಮಾಡಿಸಿಕೊಡುವ ಮಾತನ್ನಿಲ್ಲಿ ಕೇಳುತ್ತೇವೆ.

ಮಂಥರೆಯ ಮಾತಿನಂತೆ ಕೈಕಯಿ ಕ್ರೋಧಾಗರಕ್ಕೆ (ಸಿಟ್ಟು ಬಂದಾಗ ಇರುವ ಮನೆ) ಹೋಗಿ ಕುಳಿತುಕೊಳ್ಳುತ್ತಾಳೆ. ಇದೇನು, ಸಿಟ್ಟು ಬಂದಾಗ ಇರಲೂ ಮನೆ ಕಟ್ಟಿಸಿಕೊಳ್ಳುತ್ತಿದ್ದರೆ ಹಿಂದಿನವರು, ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

Play Time: 54:10

Size: 1.37 MB


Download Upanyasa Share to facebook View Comments
3166 Views

Comments

(You can only view comments here. If you want to write a comment please download the app.)
 • Prahllada A M,Belupalli

  1:09 PM , 10/06/2022

  Sri gurubhyo namaha. Nammalli baruva ketta aalochanegalige naavu maaduva paapave karana antha prove maduva sanniveshavannu thilisi kottadikke dhanyavadagalu 🙏
 • Prahllada A M,Belupalli

  1:09 PM , 10/06/2022

  Sri gurubhyo namaha. Nammalli baruva ketta aalochanegalige naavu maaduva paapave karana antha prove maduva sanniveshavannu thilisi kottadikke dhanyavadagalu 🙏
 • Prahllada A M,Belupalli

  1:09 PM , 10/06/2022

  Sri gurubhyo namaha. Nammalli baruva ketta aalochanegalige naavu maaduva paapave karana antha prove maduva sanniveshavannu thilisi kottadikke dhanyavadagalu 🙏
 • Vikram Shenoy,Doha

  2:56 PM , 07/06/2020

  ಕೈಕೈಯ ರಾಮ ದೇವರ ಗುಣಗಳ ಅಧ್ಬುತ ವಿಸ್ತರಣೆ. ಆದರೆ ಮಂತರೆಯ ವರ್ತನೆ ಆಧುನಿಕ ಕಲಿಯುಗದ ಕೋಮುವಾದಿ ಜನರ ಸಮಾನ. ಜೋರಾಗಿ ಅಸತ್ಯವನ್ನು ಹೇಳಿ ಸತ್ಯ ಎಂದು ತೋರಿಸುವ ದುರ್ಗುಣ..
  
  ಆಚಾರ್ಯರಿಗೆ ಕೋಟಿ ಕೋಟಿ ನಮನಗಳು....ನಿಮ್ಮ ಕೃಪೆ ಇರಲಿ...🙏🙏🙏
 • Sandeep katti,Yalahanka, bengalooru

  6:40 PM , 25/05/2020

  ಸಾಷ್ಟಾಂಗ ಪ್ರಣಾಮಗಳು ಪೂಜ್ಯ ಗುರುಗಳೇ.
  ನಾವು ಇಲ್ಲಿ ಕೇಳಿದ ಕೈಕೇಯಿ ಯುದ್ಧದಲ್ಲಿ ಮಾಡಿದ ಸಹಾಯ ಕಥೆಗೂ ಮತ್ತೆ ಕೆಲವೊಬ್ಬರು ಹೇಳುವ ಕಥೆಗೂ ವ್ಯತ್ಯಾಸ ಇರುವುದು. ದೇವಾಸುರ ಸಂಗ್ರಾಮದಲ್ಲಿ ದಶರಥನ ರಥದ ಚಕ್ರದ ಕೊಂಡಿಯು ಕಳಚಿಕೊಂಡು ಹೋದಾಗ, ಕೈಕೆಯಿಯು ತನ್ನ ವಜ್ರಸದೃಶ ಬೆರಳನ್ನು ರಥಚಕ್ರಕ್ಕೆ ಕೊಂಡಿಯಾಗಿ ಇಟ್ಟು ಸಹಾಯ ಮಾಡಿದಳು ಎಂದೂ ಕಥೆಯಿದೆ. ಇದರ ಬಗ್ಗೆ ತಿಳಿಸಿಕೊಡುವಿರಾ ಗುರುಗಳೇ..

  Vishnudasa Nagendracharya

  ಅಧಿಕೃತವಾದ ಯಾವ ರಾಮಾಯಣಗಳಲ್ಲಿಯೂ ಈ ಕಥೆ ದೊರಯುವದಿಲ್ಲ. ಮೂಲ ಎಲ್ಲಿದೆ ಎನ್ನುವದನ್ನು ಹುಡುಕಬೇಕು. 
 • Jayashree Karunakar,Bangalore

  2:04 PM , 26/05/2020

  ರಾಮಾಯಣದಲ್ಲಿ ಬರುವ ಪ್ರತಿಯೊಂದು ಸನ್ನಿವೇಶ, ಸಂಧಭ೯ದಲ್ಲಿಯೂ ನಾವು ಅವರಂತೆ ಭಾಗವಹಿಸುತಿದ್ದೇವೆಯೇನೊ ಅನ್ನುವ ಭಾವ ಬಂದು ಬಿಡುತ್ತದೆ ಮನದಲ್ಲಿ...
  
  ವಾಲ್ಮೀಕಿ ಋುಷಿಗಳು ರಾಮಾಯಣವನ್ನು ಬರೆಯಲು ಉದ್ಯುಕ್ತರಾಗಿದ್ದು...ಪಕ್ಷಿಗಳು ಸಾವನ್ನಪ್ಪುವ ಪರಿ...ದಶರಥರು ಮಾಡುವ ಯಜ್ಞ...ರಾಮಚಂದ್ರನು ಮಗುವಾಗಿ ಹುಟ್ಟಿ ವಿಡಂಬನೆ ತೋರಿದ್ದು...ವಿಶ್ವಾಮಿತ್ರರ ಜೊತೆಗೆ ಕಾಡಿನತ್ತ ಸಾಗಿದ್ದು ..ಅಲ್ಲಿರುವ ಸಣ್ಣದಾದ ಕ್ರಿಮಿ ಕೀಟಗಳ ಧ್ವನಿಯನ್ನೂ ಸಹ ನಮ್ಮ ಕಿವಿಗೂ ಮುಟ್ಟುವಂತೆ ವಣ೯ನೆ ಮಾಡಿದ್ದು...ಆ ಕಾಡಿನುದ್ದಕ್ಕೂ ರಾಮಾ ರಾಮಾ ಅಂತ ನಾಮಸ್ಮರಣೆ ಮಾಡುತ್ತಾ ಅವರ ಹಿಂದೆಯೇ ಸಾಗುತಿದ್ದೇವೆಯೊ ಎನೂ...ಅನ್ನುವಂತಹ ನಮ್ಮ ಮನಸ್ಸನ್ನು ಕದ್ದ ಆಕ್ಷಣಗಳು...ರಾಕ್ಷಸರ ನಿಗ್ರಹ...ಅಗ್ನಿಕುಂಡದಿಂದ ಅಗ್ನಿದೇವತೆ ಸೂಚನೆ ನೀಡಿದ್ದು...ಸೀತಾರಾಮರ ಕಲ್ಯಾಣ...ಕೆಲವರಿಗೆ ಭಗವಂತನೆಂಬ ಅರಿವಿನೊಂದಿಗೆ ಮಾತನಾಡಿದ್ದು...ಕೊಡಲಿ ರಾಮನ ಅಬ್ಬರದ ಸನ್ನಿವೇಶಗಳು....ಅಯೋಧ್ಯೆಯ ಜನರೊಂದಿಗೆ ಒಂದಾಗಿ ನಾವೂ ಕೂಡ ಯುವರಾಜನ ಪಟ್ಟಾಭಿಷೇಕಕ್ಕೆ ಸಂಭ್ರಮ ಪಟ್ಟದ್ದು...
  ಇದೀಗ ಮಂಥರೆಯ ಮನೋಧಮ೯ಕೆಲಸ ಮಾಡಿದ್ದನ್ನು ಸಹಿಸಲಾಗದೇ ಮನಸ್ಸಿಗಾಗುತ್ತಿರುವ ಅಸಹನೆ... ಎಲ್ಲವನ್ನೂ ಶ್ರವಣಮಾಡುತಿದ್ದಂತೆಯೇ....ಮನಸ್ಸಿನಲ್ಲಿಯೂ ವೀಕ್ಷಿಸಿ ಆನಂದ ಪಟ್ಟಂತಹ ಭಾವನೆಗಳು....ನಮ್ಮನ್ನು ಶ್ರೀರಾಮಚಂದ್ರನ ಕಥೆಯ ಶ್ರವಣ ಮನನ ಧ್ಯಾನ ವಂದನ...ಮುಂತಾದ ನವವಿಧ ಭಕ್ತಿಯನ್ನು ಎಕಕಾಲಕ್ಕೆ ನಮ್ಮಿಂದ ಮಾಡಿಸುವಂತಹ ಶ್ರೇಷ್ಟವಾದ ರಾಮಾಯಣವನ್ನು ಪಡೆಯುತ್ತಿದ್ದೇವೆ ನಿಮ್ಮಿಂದ..
  ನಿಮಗೆ ಭಕ್ತಿಯ ಹೆಮ್ಮೆಯ ವಿನಯಪೂವ೯ಕವಾದ ನಮಸ್ಕಾರಗಳು ಗುರುಗಳೆ🙏
 • Parimala B Joshi,Dharwad

  10:27 PM, 25/05/2020

  ಹರೇ ಶ್ರೀನಿವಾಸ 🙏🙏🙏🙏
  
  ನಮಸ್ಕಾರಗಳು ಗುರುಗಳೇ 🙏🙏🙏🙏
  
  ಉತ್ತಮರನ್ನು ಜ್ಞಾನಮಾರ್ಗಕ್ಕೆ ತರಲು ವೇದ ಸೂತ್ರಗಳ ಮೂಲಕ, ಹಾಗೆ ಮಧ್ಯಮರಿಗೆ ಮಹಾಭಾರತ ರಾಮಾಯಣ ಭಾಗವತಗಳ ಬಗ್ಗೆ ಹೇಳಿ, ಅಧಮರಿಗೆ ತಮ್ಮ ಮಹಾಮಹಿಮೆ ತೋರಿಸಿ ಸಾಧನೆಯ ಜ್ಞಾನ ಮಾರ್ಗಕ್ಕೆ ತರಲು ಮಹಾನ್ ದೊಡ್ಡ ಕಾರ್ಯವನ್ನು ಶ್ರೀಮದಾಚಾರ್ಯರು ಮಾಡುತ್ತಿದ್ದರು. 🙏🙏. 
  
  ಹಾಗೆ ನಮ್ಮಂತವರ ಉದ್ದಾರಕ್ಕಾಗಿ ಈ ಗುರುಗಳು ನಮಗಾಗಿ ನಮಗೆ ತಿಳಿಯುವ ರೀತಿಯಲ್ಲಿ ಉಪನ್ಯಾಸದ ಮೂಲಕ ನಮ್ಮನ್ನು ಉದ್ದಾರ ಮಾಡಲು ಬಂದಿದ್ದಾರೆ 
  
  ಉಪನ್ಯಾಸ ಕೇಳತಾ ಕುಳಿತರೆ ಏನು ಬೇಡಾ ಜೀವನದಲ್ಲಿ ಅನ್ನಿಸುತ್ತದೆ... 
  
  ಸದಾ ಶ್ರವಣ ಮನನ ಮಾಡುವ ಭಾಗ್ಯ ಕೊಟ್ಟು ಕಾಪಾಡು ಸ್ವಾಮಿ.. 🙏🙏
  
  ಹರೇ ಶ್ರೀನಿವಾಸ 🙏🙏
 • DESHPANDE P N,BANGALORE

  2:40 PM , 25/05/2020

  S.Namaskargalu. Manthareya prakranwanuu yathawattaagi varanisiddiri dhanyywaadgalu. Anugrahvirali