24/05/2020
ಶ್ರೀಮದ್ ರಾಮಾಯಣಮ್ — 54 ಕೈಕಯಿ ತನ್ನ ಆಭರಣಗಳನ್ನೆಲ್ಲಿ ಕಿತ್ತೊಗೆದಾಗ ರತ್ನ, ಮುತ್ತು, ಬಂಗಾರಗಳು ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದಾಗ “ಮೋಡವಿಲ್ಲದ ಆಕಾಶವನ್ನು ನಕ್ಷತ್ರಗಳು ಬೆಳಗುವಂತೆ” ಬಿದ್ದಿದ್ದವು ಎಂದು ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. ಈ ಮಾತಿನ ಆಂತರ್ಯದ ವಿವರಣೆ ಇಲ್ಲಿದೆ. “ರಾಹು ಹೊಂಚು ಹಾಕಿ ಕುಳಿತ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರೋದಯವಾಗುವಂತೆ” ದಶರಥರು ಕೈಕಯಿಯ ಮನೆಯನ್ನು ಪ್ರವೇಶಿಸದರು ಎನ್ನುತ್ತಾರೆ ವಾಲ್ಮೀಕಿ ಮಹರ್ಷಿಗಳು. ಆ ಮಹಾನುಭಾವರು ನೀಡುವ ದೃಷ್ಟಾಂತಗಳ ಕುರಿತು ತಿಳಿಯಬೇಕಾದ ಮಹತ್ತ್ವದ ವಿಷಯಗಳ ನಿರೂಪಣೆ ಇಲ್ಲಿದೆ. ನೆಲದ ಮೇಲೆ ಕೋಪದಿಂದ ಅಳುತ್ತ ಬಿದ್ದಿರುವ ಕೈಕಯಿಯನ್ನು ಸಾಂತ್ವನಗೊಳಿಸುತ್ತ ದಶರಥಮಹಾರಾಜರು “ಯಾರನ್ನ ಕೊಲ್ಲಬೇಕು, ಹೇಳು, ಯಾರ ಹಣವನ್ನು ಕಸಿಯಬೇಕು ಹೇಳು, ಅದನ್ನು ಮಾಡುತ್ತೇನೆ” ಎನ್ನುತ್ತಾರೆ. ದಶರಥರು ಸರ್ವಥಾ ಅಧರ್ಮದ ಹಾದಿಯಲ್ಲಿ ನಡೆಯುತ್ತಿರಲಿಲ್ಲ. ಹಾಗಾದರೆ ಈ ಮಾತಿನ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಮಹಾಭಾರತ ನೀಡಿದ ಉತ್ತರದ ವಿವರಣೆ ಇಲ್ಲಿದೆ.
Play Time: 32:15
Size: 1.37 MB