Upanyasa - VNU938

ದಶರಥರ ವಿಲಾಪ

ಶ್ರೀಮದ್ ರಾಮಾಯಣಮ್ — 56

ಕೌಸಲ್ಯಾ, ಸುಮಿತ್ರಾ, ಕೈಕಯಿ, ಭರತ ಮುಂತಾದವರ ಬಗ್ಗೆ ದಶರಥರಿಗೆ ಏನೆಲ್ಲ ಭಾವನೆಗಳಿದ್ದವು, ಹಾಗೂ ಕೈಕಯಿಯ ವರದಿಂದ ಏನೆಲ್ಲ ಅನರ್ಥಗಳಾಗುತ್ತವೆ ಇತ್ಯಾದಿ ಅನೇಕ ವಿಷಯಗಳನ್ನು ಈ ಪ್ರಸಂಗದಲ್ಲಿ ಕೇಳುತ್ತೇವೆ. 

ಸಮಗ್ರ ಭೂಮಂಡಲದ ಒಡೆಯರಾದರೂ, ತಮ್ಮ ತಂದೆಯ ಕಾಲದವರ ಬಗ್ಗೆ ಹಿರಿಯರ ಬಗ್ಗೆ ದಶರಥರಿಗೆ ಎಷ್ಟು ಗೌರವ ಭಯಗಳಿದ್ದವು ಎನ್ನುವದನ್ನು ನಾವು ಕಾಣುತ್ತೇವೆ. 

ದಶರಥರು ಭರತನ ಗುಣಗಾನವನ್ನು ಮಾಡುತ್ತ. ರಾಮನಿಗಿಂತ ಹೆಚ್ಚು ಭರತನೇ ಧರ್ಮನಿಷ್ಠ ಎನ್ನುತ್ತಾರೆ. ಈ ಮಾತಿನ ಹಿಂದಿರುವ ಆಂತರ್ಯದ ವಿವರಣೆ ಇಲ್ಲಿದೆ. 

Play Time: 35:24

Size: 1.37 MB


Download Upanyasa Share to facebook View Comments
3332 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  1:36 PM , 29/04/2022

  ಧನ್ಯೋಸ್ಮಿ .ದಶರಥರ ಮನಃತಾಪವನ್ನು , , ,ಹೃದಯ ಭೇದನ ಮಾಡುವ ಶ್ರೇವಾಲ್ಮೇಕಿಗಳ ಶ್ಲೊಕರೂಪದ ಮಾತುಗಳನ್ನು...ಪ್ರಸ್ತೂತಪಡಿಸುವ ನಿಮ್ಮ ಶೈಲಿಗೆ ...ಆನಂತಾನಂತ ನಮನಗಳು
 • C Guru Raja Rao,Hyderabad

  1:35 PM , 29/04/2022

  ಧನ್ಯೋಸ್ಮಿ .ದಶರಥರ ಮನಃತಾಪವನ್ನು , , ,ಹೃದಯ ಭೇದನ ಮಾಡುವ ಶ್ರೇವಾಲ್ಮೇಕಿಗಳ ಶ್ಲೊಕರೂಪದ ಮಾತುಗಳನ್ನು...ಪ್ರಸ್ತೂತಪಡಿಸುವ ನಿಮ್ಮ ಶೈಲಿಗೆ ...ಆನಂತಾನಂತ ನಮನಗಳು
 • Sowmya,Bangalore

  11:01 PM, 07/12/2020

  🙏🙏
 • Abhi,Banglore

  11:17 AM, 29/05/2020

  ಭಗವಂತನ ಕಥೆ ಹೇಳುವಾಗ ಅಳಬಾರ್ದು ಅಂತ ಹೇಳಿದ್ದು ಕೇಳಿದ್ದೇನೆ ...... ನಿಜವೇ ಅಚಾರ್ಯರೇ ? ?

  Vishnudasa Nagendracharya

  ಭಗವಂತನ ಕಥೆಯನ್ನು ಸ್ವಯಂ ಆಸ್ವಾದಿಸುತ್ತ, ಮತ್ತೊಬ್ಬರೂ ಆಸ್ವಾದನೆ ಮಾಡುವಂತೆ, ಅವರಲ್ಲಿ ಭಕ್ತಿ ಮೂಡುವಂತೆ ಹೇಳಬೇಕು ಎನ್ನುವದು ಟೀಕಾಕೃತ್ಪಾದರ ಆದೇಶ — आदरमुत्पादयन् व्याख्याति।. 
  
  ಯಾವ ಭಾವನೆಗಳಿಲ್ಲದೇ ಹರಿಯ ಕಥೆಯನ್ನು ಹೇಳಲು ಸಾಧ್ಯವಿಲ್ಲ. 
  
  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಮಾಹಾತ್ಮ್ಯವನ್ನು ಹೇಳುವಾಗ ಮಹಾಜ್ಞಾನಿಗಳಿಗೂ ಕಂಠ ಗದ್ಗದಿತವಾಗಿ, ಕಣ್ಣಾಲಿಗಳಲ್ಲಿ ನೀರು ತುಂಬುತ್ತಿದ್ದವು ಎಂದು ಆಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಮ್ಮ ತತ್ವಪ್ರದೀಪದಲ್ಲಿ ದಾಖಲಿಸುತ್ತಾರೆ — प्राज्ञाः प्रोद्यत्प्रमोदप्रचुरभरनमत्साश्रुकण्ठा भवन्ति ।
  
  ಭಗವಂತನ ಗುಣಗಳನ್ನು ಹೇಳುವಾಗ ಕೇಳುವಾಗ ಕಣ್ಣಾಲಿಗಳು ತುಂಬಿ, ಕಂಠ ಗದ್ಗದಿತವಾದರೆ ಜೀವನದ ಸಾರ್ಥಕ್ಯ ಎನ್ನುತ್ತಾರೆ ಶ್ರೀಜಗನ್ನಾಥದಾಸಾರ್ಯರು — 
  
  
  ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ ನಗೆಮೊಗದಿಂ ರೋಮಗಳೊಗೆದು
  ಮಿಗೆ ಸಂತೋಷದಿ ನೆಗೆದಾಡುತ ನಾಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವದೆ |
  
  ಪ್ರಹ್ಲಾದರಾಜರು ನರಸಿಂಹದೇವರ ಮಾಹಾತ್ಮ್ಯಚಿಂತನಪೂರ್ವಕ ಸ್ತೋತ್ರ ಮಾಡುವ ಸಂದರ್ಭದಲ್ಲಿ ಭಕ್ತಿಯಿಂದ ಅವರ ಮಾತು ಗದ್ಗದಿತವಾಗಿತ್ತು ಎಂದು ಭಾಗವತ ತಿಳಿಸುತ್ತದೆ 
  
  अस्तौषीद्धरिमेकाग्रमनसा सुसमाहितः
  प्रेममगद्गदया वाचा तन्न्यस्तहृदयेक्षणः
  
  
  ಬ್ರಹ್ಮದೇವರಿಂದ ಆರಂಭಿಸಿ ಸಕಲ ಭಗವದ್ಭಕ್ತರೂ ಕಣ್ಣಾಲಿಗಳನ್ನು ತುಂಬಿಕೊಂಡು ಗದ್ಗದಿತರಾಗಿ ದೇವರ ಮಾಹಾತ್ಮ್ಯ ಹೇಳುತ್ತಿದ್ದರು ಎಂಬ ಇತಿಹಾಸವನ್ನು ಶ್ರೀಮದ್ ಭಾಗವತಾದಿಗಳಲ್ಲಿ ಕೇಳುತ್ತೇವೆ. 
  
  ಅಷ್ಟೇ ಅಲ್ಲ, ದೇವರ ಕಥೆ ಹೇಳುವ ಸಂದರ್ಭದಲ್ಲಿ ಉಂಟಾಗುವ, ರೋಮಹರ್ಷಣ, ಮನಸ್ಸು ಕರಗುವಿಕೆ, ಕಣ್ಗಳ ನೀರು, ಗದ್ಗದಿತವಾದ ಕಂಠ ಇವೆಲ್ಲಕ್ಕೆ ಮೂಲವಾದ ಭಕ್ತಿ ಇವೇ ನಮ್ಮಲ್ಲಿನ ಪಾಪಗಳನ್ನು ಕಳೆಯುವಂತದ್ದು ಎಂದು ಶ್ರೀಮದ್ ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿದೆ — 
  
  कथं विना रोमहर्षं द्रवता चेतसा विना।
  विनानन्दाश्रुकलया शुध्येद्भक्त्या विनाशयः।
  वाग्गद्गदा द्रवते यस्य चित्तं रुदत्यभीक्ष्णं हसति क्वचिच्च।
  विलज्ज उद्गायति नृत्यते च मद्भक्तियुक्तो भुवनं पुनाति।
  
  ಆದರೆ, ಭಕ್ತಿಯಿಲ್ಲದ ಇವೆಲ್ಲವೂ ಕೇವಲ ದಾಂಭಿಕತೆಯಾಗಿಬಿಡುತ್ತದೆ. ಹೀಗಾಗಿ, ಮೊದಲಿಗೆ ಅವನ್ನು ಆದಷ್ಟು ನಿಗ್ರಹಿಸಬೇಕು ಎಂಬ ಮಾತಿದೆ. ಭಕ್ತಿ ಉತ್ಕಂಠಿತವಾದಾಗ ಅವನ್ನು ನಿಗ್ರಹಿಸಲು ಸಾಧ್ಯವೇ ಇಲ್ಲ. ನಮಗೆ ನಿಮಗಲ್ಲ, ಬ್ರಹ್ಮದೇವರಿಗೂ ಸಾಧ್ಯವಿಲ್ಲ ಎನ್ನುತ್ತದೆ ಭಾಗವತ — 
  
  तद्दर्शनाह्लादपरिप्लुतान्तरो हृष्यत्तनुः प्रेमभराश्रुलोचनः ।
ननाम पादाम्बुजमस्य विश्वसृग्यत्पारमहंस्येन पथाधिगम्यते
  
  ದೇವರಲ್ಲಿ ಭಕ್ತಿ ಇಲ್ಲದ, ವ್ಯಾಪಾರೀ ಬುದ್ಧಿಯಿಂದ ದೇವರು ಬೇಕು ಎನ್ನುವ ಜನರ ಮುಂದೆ, ದಾಂಭಿಕರ ಮುಂದೆ ಈ ರೀತಿಯಾಗಿ ಕಣ್ಣೀರು, ಗದ್ಗದತೆ ಮುಂತಾದವನ್ನು ಪ್ರಕಟಮಾಡಬಾರದು ಎಂದು ಶ್ರೀಮದಾಚಾರ್ಯರು ತಿಳಿಸುತ್ತಾರೆ. ಹೊರತು, ಅವರಿಲೇಬಾರದು ಎಂದಲ್ಲ. 
 • DESHPANDE P N,BANGALORE

  2:23 PM , 29/05/2020

  S.Namsskargalu. Anugrahvirali
 • Padmini Acharya,Mysuru

  3:39 PM , 28/05/2020

  🙏ಶ್ರೀ ಗುರುಭ್ಯೋ ನಮಃ🙏
  
  ದುಷ್ಟ ಜನರ ಸಹವಾಸ ಯಾವತ್ತಿಗೂ ಅನರ್ಥವೇ ಎನ್ನುವುದನ್ನು ಈ ಉಪನ್ಯಾಸ ನಮಗೆ ಅರ್ಥ ಮಾಡಿಸುತ್ತದೆ.
  
  ಸಾಕ್ಷಾತ್ ಭಗವಂತನನ್ನು ದೇವತೆಗಳನ್ನು ಮಕ್ಕಳನ್ನಾಗಿ ಪಡೆದ, ಸಪ್ತ ದ್ವೀಪ ವತಿಯಾದ ಭೂಮಿಗೆ ಒಡೆಯರಾದ ದಶರಥ ಮಹಾರಾಜರು ಅಂಥವರಿಗೇ ಎಂಥಹಾ ಆಸಹಾಯಕ ಪರಿಸ್ಥಿತಿ....
  
  ಆ ಕೌಸಲ್ಯದೇವಿಯರನ್ನ ,ರಾಮ ದೇವರನ್ನ, ಸೀತಾದೇವಿಯನ್ನ,ನೆನೆದು ದಶರಥ ಮಹಾರಾಜರು ಕೈಕಯಿ ಬಳಿ ಮಾತನಾಡುವ ಸಂದರ್ಭದಲ್ಲಿ ನಿಮ್ಮ ಗಂಟಲು ಗದ್ಗದಿತವಾಗಿದ್ದನ್ನು ಕೇಳಿ ಕಣ್ಣಲ್ಲಿ ನೀರು ಇನ್ನೂ ಹೆಚ್ಚಾಗಿ ಬಿಡುತ್ತದೆ.
 • Y V GOPALA KRISHNA,Mysore

  3:21 PM , 28/05/2020

  Very nice explanation no words to expressgratitude...
 • Niranjan Kamath,Koteshwar

  9:08 AM , 28/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. 
  
  ಗುರುಗಳ ಚರಣಗಳಿಗೆ ನಮೋ ನಮಃ. ಓಹೋ....ಇನ್ನು ಹೇಗೆ ನಾಳೆಯವರೆಗೆ ಕಾಯುವುದು...ಖಂಡಿತ ಕಷ್ಟ. ಯಾವ ರೀತಿಯಲ್ಲಿ ನಮ್ಮನ್ನು ಆ ಸಂಧರ್ಭಕ್ಕೆ ಕರೆದುಕೊಂಡು ಹೋಗುತ್ತೀರಿ ಗುರುಗಳೇ… ಧನ್ಯೋಸ್ಮಿ। ಅದರಲ್ಲೇ ಮುಳುಗಿ ಹೋಗಿರುವಾಗ , ಮುಂದಿನ ಭಾಗದಲ್ಲಿ ಕೇಳೋಣ ಅನ್ನುವಗಲೇ ತಿಳಿದಿತ್ತು ನಾವು ಯಾರೆಂದು !!...
  
  ಶ್ರೀ ವಾಲ್ಮೀಕಿ ಮಹರ್ಷಿಗಳ ಮಹಾನ್ ಕೃತಿಗಳನ್ನು ಈ ಕಲಿಯುಗದಲ್ಲಿ ನಮಗೆ ನಿಮ್ಮ ಅತ್ಯುನ್ನತ ವಾಕ್ ಸಾಮರ್ಥ್ಯ, ಜ್ಞಾನ, ಪಾಂಡಿತ್ಯ, ಭಕ್ತಿಯುತವಾಗಿ ಆ ಪಾತ್ರದಲ್ಲಿ ತೊಡಗಿಸಿ ನಮ್ಮನ್ನು ಸೀದಾ ಆ ಶ್ರೀ ರಾಮಚಂದ್ರನ ಯುಗಕ್ಕೆ ಕರೆದುಕೊಂಡು ಸಧ್ಯದ ಈ ಪ್ರಸಂಗದ ದಶರಥ ಕೈಕೇಯೀ ಭವನದಲ್ಲೇ ಇದ್ದ ಹಾಗೆ ಮಾಡಿಸಿದ್ದೀರಿ....
  
  ಆ ದೇವರು , ನಿಮ್ಮ ಗುರುಗಳು ನಿಮ್ಮನ್ನು , ಹಾಗೂ ನಿಮ್ಮ ಜೊತೆ ನಮ್ಮನ್ನು ಹರಸಲಿ ಎಂದು ದೀನನಾಗಿ ಪ್ರಾರ್ಥಿಸುತ್ತೇನೆ. ಧನ್ಯೋಸ್ಮಿ.🚩🙏
  
 • deashmukhseshagirirao,Banglore

  4:04 AM , 28/05/2020

  🙏🏻🙏🏻🙏🏻🙏🏻🙏🏻🙏🏻🙏🏻