24/05/2020
ಶ್ರೀಮದ್ ರಾಮಾಯಣಮ್ — 57 ಶ್ರೀರಾಮಚಂದ್ರ ರಾಜನಾದರೆ, ಸಮಗ್ರ ರಾಷ್ಟ್ರಕ್ಕೆ, ಇಕ್ಷ್ವಾಕುಕುಲಕ್ಕೆ, ಸ್ವಯಂ ಕೈಕಯಿಗೂ ಹಿತವಾಗುತ್ತದೆ. ಸಜ್ಜನರಿಗೆ ಯಾವುದು ಹಿತವೋ ಅದೇ ಸತ್ಯ, ಸಜ್ಜನರನ್ನು ಯಾವುದು ಧಾರಣೆ ಮಾಡುತ್ತದೆಯೋ ಅದೇ ಧರ್ಮ. ಹೀಗಾಗಿ, ಅಧರ್ಮದ ಮಾರ್ಗದಲ್ಲಿ ನಡೆಸುತ್ತಿರುವ ಕೈಕಯಿಯನ್ನು ನಿಗ್ರಹಿಸಬೇಕಿತ್ತಲ್ಲವೇ ದಶರಥ ಮಹಾರಾಜರು. ಏಕೆ ನಿಗ್ರಹಿಸಲಿಲ್ಲ? ಇನ್ನು ರಾವಣನ ವಧೆಗಾಗಿ ರಾಮ ವನಕ್ಕೇ ಹೋಗಬೇಕಾಗಿತ್ತು ಎನ್ನುಂತಿಲ್ಲ. ಲವಣ, ಶಂಭೂಕ ಮುಂತಾದ ದುಷ್ಟರನ್ನು ರಾಜನಾಗಿಯೇ ರಾಮ ನಿಗ್ರಹಿಸಿದಂತೆ, ಸಿಂಹಾಸನದ ಮೇಲೆ ಕುಳಿತೇ ರಾಮ ರಾವಣನನ್ನು ಕೊಲ್ಲಬಹುದಾಗಿತ್ತು. ಹೀಗಾಗಿ ರಾಮ ವನಕ್ಕೆ ಹೋಗಲೇಬೇಕಾಗಿತ್ತು ಎನ್ನುವ ಕಾರಣಕ್ಕೆ ಇದು ನಡೆಯಿತು ಎನ್ನಲು ಸಾಧ್ಯವಿಲ್ಲ. ಯಾರಾದರೂ ಹೆದರಿಸಿ ಹಣ ತೆಗೆದುಕೊಂಡು ಹೋದರೆ ಮತ್ತು ದ್ಯೂತದಲ್ಲಿ ಕಳೆದುಕೊಂಡ ಹಣವನ್ನು ಅಧಿಕಾರಿಗಳು ಅವಶ್ಯವಾಗಿ ಹಿಂಪಡೆದು ಕಳೆದುಕೊಂಡವನಿಗೆ ನೀಡಬಹುದು. ವೇಶ್ಯೆಯರಿಗೂ ಅತೀ ಹೆಚ್ಚಿನ ಸಂಪತ್ತನ್ನು ನೀಡಿದ್ದಲ್ಲಿ ಹಿಂತಿರುಗಿ ತರಬಹುದು ಎಂದು ಶಾಸ್ತ್ರ ಹೇಳುವ ನಿರ್ಣಯವನ್ನಿಲ್ಲಿ ಕೇಳುತ್ತೇವೆ. ರಾವಣ, ದುರ್ಯೋಧನರ ವೈಭವೀಕರಣಕ್ಕೆ ಇಲ್ಲಿ ಉತ್ತರವಿದೆ.
Play Time: 39:41
Size: 1.37 MB