24/05/2020
ಶ್ರೀಮದ್ ರಾಮಾಯಣಮ್ — 58 ಬೆಳಗಿನ ಜಾವದಲ್ಲಿ ವಸಿಷ್ಠರು ಬಂದು ಅಭಿಷೇಕಕ್ಕೆ ಯಾವ ರೀತಿ ಸಿದ್ಧತೆಯಾಗಿದೆ ಎಂದು ಸುಮಂತ್ರರಿಗೆ ಹೇಳುತ್ತಾರೆ. ಬಾಗಿಲ ಹೊರಗೆ ನಿಂತು ಸುಮಂತ್ರ ಸ್ತೋತ್ರ ಮಾಡಿದರೆ ದಶರಥರು ಮರ್ಮಾಘಾತವಾದ ಮಾತುಗಳನ್ನೇಕೆ ಆಡುತ್ತಿದ್ದಿ ಎನ್ನುತ್ತಾರೆ. ದಶರಥರಿಗೆ ಸಂತೋಷದಿಂದ ನಿದ್ರೆ ಬಂದಿಲ್ಲ, ಹೋಗಿ ರಾಮನನ್ನು ಕರೆತನ್ನಿ ಎಂದು ಕೈಕಯಿ ಸುಮಂತ್ರರಿಗೆ ಆದೇಶ ಮಾಡಿದರೆ, ಹೊರಟ ಸುಮಂತ್ರ, ಏನೋ ಅವಘಡವಾಗಿದೆ ಎಂದು ಆಲೋಚಿಸಿ, ದಶರಥರು ಆಜ್ಞೆ ಮಾಡದೆ ತಾನು ಕಾರ್ಯ ಮಾಡುವದಿಲ್ಲ ಎನ್ನುತ್ತಾರೆ. ಆಗ “ಸಾಯುವದರೊಳಗೆ ರಾಮನನ್ನು ನೋಡಬೇಕಾಗಿದೆ, ಕರೆ ತಾ” ಎಂದು ದಶರಥರು ಆಜ್ಞೆ ಮಾಡುತ್ತಾರೆ. ಈ ಇಡಿಯ ಪ್ರಸಂಗ ನಮ್ಮ ಮನಸ್ಸಿನಲ್ಲಿಯೂ ಭಾವನೆಗಳ ತರಂಗಗಳನ್ನೇ ಸೃಷ್ಟಿಸಿಬಿಡುತ್ತದೆ. ಸೀತಾದೇವಿಯೇ ರಾಮರಿಗೆ ಛಾಮರ ಸೇವೆ ಮಾಡುತ್ತಿದ್ದ ವಿವರ, ಮನೆಯಿಂದ ಹೊರಡಬೇಕಾದರೆ ರಾಮ ಸೀತೆಯ ಮೇಲೆ ತೋರಿದ ಪ್ರೇಮ, ಸೀತೆ ರಾಮನನ್ನು ಬೀಳ್ಕೊಟ್ಟ ರೀತಿ, ವಾಲ್ಮೀಕಿಗಳು ಅದನ್ನು ವಿವರಿಸುವ ಕ್ರಮ, ಹೀಗೆ ನಮ್ಮ ಬದುಕನ್ನು ಬಂಗಾರಗೊಳಿಸುವ ಪಾಠಗಳು. ಲಕ್ಷ್ಣಣ ರಾಮದೇವರನ್ನು ಸೇವಿಸುತ್ತಿದ್ದ ಪರಿ, ಜನತೆ ರಾಮನನ್ನು ಆರಾಧಿಸುತ್ತಿದ್ದ ಪರಿ, ಅವರ ಪ್ರೀತಿಯುಕ್ತವಾದ ಮಾತುಗಳು ಮುಂತಾದ ವಿವರಗಳು ಇಲ್ಲಿವೆ.
Play Time: 54:08
Size: 1.37 MB