Upanyasa - VNU941

ರಾಮ ಕೈಕೇಯೀ ಸಂವಾದ

ಶ್ರೀಮದ್ ರಾಮಾಯಣಮ್ — 59

ದಶರಥನನ್ನು ಕಂಡು ರಾಮ ದುಃಖ ಪಟ್ಟ ರೀತಿ, ಕೈಕಯಿಯಿಗೆ ದಿಟ್ಟ ರೀತಿಯಲ್ಲಿ ಉತ್ತರ ಕೊಟ್ಟದ್ದು, ಕೈಕಯಿಯ ಅಹಂಕಾರ, ಉನ್ಮಾದ, ರಾಮಚಂದ್ರನ ಒಂದು ಮಾತು ಆ ದುಷ್ಟ ಕೈಕಯಿಯನ್ನೂ ನಡುಗುವಂತೆ ಮಾಡಿದ್ದು ಮುಂತಾದ ವಿಷಯಗಳು ಇಲ್ಲಿವೆ. 

ಹಿರಿಯರು ನಮಗೆ ಅವಮಾನ ಮಾಡಿದರೂ, ನಮ್ಮತನವನ್ನು ಕಳೆದುಕೊಳ್ಳದೇ, ಆದರೆ ಧ್ವನಿಯನ್ನೂ ಎತ್ತರಿಸದೆ ಯಾವ ರೀತಿ ಮಾತನಾಡಬೇಕು ಎಂಬ ಪಾಠವಿದೆ ಇಲ್ಲಿ. 

“ರಾಮೋ ದ್ವಿರ್ನಾಭಿಭಾಷತೇ” ರಾಮ ಎರಡೆರಡು ಮಾತಾಡುವದಿಲ್ಲ, ಹಿಂದೆ ಮಾತನಾಡಿದ್ದಕ್ಕೆ ವಿರುದ್ಧವಾಗಿ ಮುಂದೆ ಮಾತನಾಡುವದಿಲ್ಲ ಎಂಬ ಪ್ರಸಿದ್ದವಾದ ವಾಕ್ಯ ಇದೇ ಸಂದರ್ಭದಲ್ಲಿ ಬರುವದು. 

ನಾವು ಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳಬಾರದು ಎನ್ನುವ ಅದ್ಭುತ ಪಾಠವನ್ನಿಲ್ಲಿ ಕೇಳುತ್ತೇವೆ. ರಾಜ್ಯ ಬಿಟ್ಟು ವನಕ್ಕೆ ಹೋಗು ಎಂದಾಗ ರಾಮನಲ್ಲಿ ಲೇಶ ವ್ಯಥೆ ಸಹಿತ ಉಂಟಾಗುವದಿಲ್ಲ, ಆದರೆ, ತಾಯಿ ಕೌಸಲ್ಯೆಗೆ ಪರಮದುಃಖದ ವಿಷಯವನ್ನು ಹೇಳಬೇಕು ಎಂದು ನೆನೆಸಿಕೊಂಡು ರಾಮ ದುಃಖ ಪಡುವ ವಿಡಂಬನೆ ನಮಗೆ ಜೀವನದ ಅದ್ಭುತ ಪಾಠವನ್ನು ಕಲಿಸುತ್ತದೆ. 

Play Time: 61:03

Size: 1.37 MB


Download Upanyasa Share to facebook View Comments
4311 Views

Comments

(You can only view comments here. If you want to write a comment please download the app.)
 • Nalini Premkumar,Mysore

  10:34 PM, 11/06/2022

  ಹರೆ ಶ್ರೀನಿವಾಸ ಗುರುಗಳೇ ಅಧ್ಭುತ ವಾದ ಪ್ರವಚನ ದಶರಥ ರ ದುಃಖ ದ ಸಂಕಟದ ಮಾತುಗಳನ್ನು ಕೇಳುತ್ತಿದ್ದರೆ ಯಾರಿಗೂ ದುಃಖ ತಪ್ಪಿದಲ್ಲ ಎಂತಹ ಸಂಕಷ್ಟ ದ ಪರಿಸ್ಥಿತಿ ಎಂದು ಮನಸ್ಸು ಮುಗಿತು🙏🙏🙏
 • Sowmya,Bangalore

  4:44 PM , 24/12/2020

  🙏🙏🙏 jai srirama
 • DESHPANDE P N,BANGALORE

  2:18 PM , 05/06/2020

  S.Namaskargalu. The exception gift. All are obliged
 • M V Lakshminarayana,Bengaluru

  5:35 PM , 03/06/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಶ್ರೀ ರಾಮಚಂದ್ರ ನಿರೂಪಿಸಿದ ಸ್ತ್ರೀ ಧರ್ಮ ಇಂದಿನ ಸ್ತ್ರೀಯರು ಅವಶ್ಯವಾಗಿ ಅನುಸರಿಸುತ್ತಿದ್ದು. ಇತರ ರಾಜ್ಯಗಳಲ್ಲಿ ವಿದೇಶದಲ್ಲಿ, ಗಂಡ ಕೆಲಸ ಮಾಡುತ್ತಿದ್ದರೆ, ಹೆಂಡತಿ ಮಕ್ಕಳು ಸ್ವಂತ ಊರಿನಲ್ಲಿರುತ್ತಾರೆ. ಮಕ್ಕಳು ದೊಡ್ಡವರಾಗಿ ದುಡಿಯುತ್ತಿದ್ದರೂ ಸಹ, ಗಂಡನ ಜೊತೆ ಇರುವ ಬದಲು, ಮಕ್ಕಳ ಜೊತೆ ಇರುತ್ತಾರೆ. ಕೌಟುಂಬಿಕ ವ್ಯವಸ್ಥೆ ಹಾಳಾಗುವದಕ್ಕೆ ಇದೂ ಒಂದು ಕಾರಣವಾಗಿದೆ.
  ಇಂತಿ ನಮಸ್ಕಾರಗಳು
 • S N Rao,Bangalore

  9:14 PM , 02/06/2020

  Namaskara Acharyare, considering all that is happening in the world - the virus, economy, natural disasters and those unimaginable riots and looting in the US, listening to your Ramayana pravachana is like diving into an ocean of peace 🙏🏻 
  
  I wish we could get transported to simpler times like the Treta yuga where our Bhagavanta walked and ruled the world. 
  
  We need no more inspiration than seeing what is happening in the world today to do our sadhane as quickly and as much as possible and not ever have to come back to kaliyuga 🙏🏻🙏🏻🙏🏻🙏🏻🙏🏻
  
  Thanks for transporting us to that yuga through your pravachanas 🙏
 • Uma Krishnamurthy,Bangalore

  8:44 PM , 02/06/2020

  Each day’s Ramayana upanyasa is so much more interesting and amazingly rendered by our Guru. 🙏🏽 Saturdays and Sundays are most difficult as we miss our favourite Ramayana. However this Monday and Tuesday, that is, yesterday and today have been extra rewarding after the wait. Me and a group of like minded people listen to it on a WhatsApp group and what I have said here reflects the sentiments of each one of us in the group enjoying Ramayana.
  
  I am personally reminded of my samskruta classes in Vijaya High School, where Sri Seetharama Shastry and Sri KV Bhat taught us Samskruta from basics and took us through Sharmistha and Devayanai, Nala Damayanti and many other lessons. I am reliving these as my rusted little knowledge of Samskruta is getting brushed as I hear Achar’s rendering, almost word by word with Samskruta shloka along with Kannada translation and explanation 🙏🏽. He truly brings Ramayana to life in our minds eye 🙏🏽. I should also mention my Samskruta Professor Shikaripura Krishnamurthy 🙏🏽 from college days in Mangalore. Such good teachers we were blessed with. Each day as I listen and enjoy Ramanayana immensely and look forward to the next in the series, my alpa- swalpa knowledge of Samskruta is also getting better and it is a pleasure to understand the conversational parts of Ramayana in the language it’s written in. Without Achar’s effort of bringing Vishwanandini to us, none of this would be possible 🙏🏽 Sree Gurubhyon Namaha 🙏🏽
  Eagerly looking forward to tomorrow morning and Rama and Sita Devi’s conversation 🙏🏽
  - Uma Krishnamurthy
 • M V Lakshminarayana,Bengaluru

  5:16 PM , 02/06/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಪ್ರೀತಿ ವಾತ್ಸಲ್ಯಕ್ಕೂ, ಮೋಹಕ್ಕೂ ಇರುವ ವ್ಯತ್ಯಾಸವನ್ನು ಮನೋಜ್ಞವಾಗಿ ವರ್ಣಿಸಿದ್ದೀರಿ. ಮೋಹದಿಂದಲೇ ಅಧರ್ಮಾಚರಣೆಯಾಗುವದೆಂದು ಪರಿಸ್ಪಷ್ಟವಾಗಿ ತಿಳಿಸಿದ್ದಕ್ಕೆ ಅನಂತಾನಂತ ನಮಸ್ಕಾರಗಳು
 • Vishwnath MJoshi,Bengaluru

  9:48 AM , 02/06/2020

  ಗುರುಗಳಿಗೆ ನಮಸ್ಕಾರ. ಈ ರಾಮಾಯಣದ ಪ್ರವಚನ ೫-೬  ವರ್ಷದ ಹಿಂದೆ ದೊರೆತಿದ್ದರೆ ನಾವು ಎಷ್ಟೋ ಪಾಪ ಮಾಡುವುದರಿಂದ ತಪ್ಪುತ್ತಿತ್ತು ಅನಿಸುತಿದೆ.
 • Jayashree Karunakar,Bangalore

  2:33 PM , 02/06/2020

  ಗುರುಗಳೆ 
  
  ನಾವು ಕಲಿಯುಗದಲ್ಲಿದ್ದೇವೆ...
  
  ಆದರೆ ರಾಮಾಯಣವನ್ನು ಆಸ್ವಾದನೆ ಮಾಡಿಸುತ್ತಾ ನಮ್ಮನ್ನು ರಾಮನ ಕಾಲಕ್ಕೆ ಕರೆದೊಯ್ಯುತ್ತಿದ್ದೀರಿ....
  
  ಶುದ್ಧ ಜ್ಞಾನ ಭಕ್ತಿ ಗಳನ್ನು ನೀಡುತ್ತಿದ್ದೀರಿ...
  
  ಭಾಗ್ಯವಂತರು ನಾವು..
  
  ನಿಮಗೆ ಹೃದಯಪೂವ೯ಕ ನಮನಗಳು🙏🙏
  
  ಅನುಭವಿಸಿಯೇ ತಿಳಿಯಬೇಕು ಶ್ರವಣದಲ್ಲಿ ಸಿಗುವ ಆನಂದ🙏
 • Sampada,Belgavi

  1:30 PM , 02/06/2020

  ಎಷ್ಟು ಸುಂದರವಾಗಿ ರಾಮಾಯಣದ ರಚನೆಮಾಡಿ ನೀಡಿದ್ದಾರೆ ವಾಲ್ಮೀಕಿ ಮಹರ್ಷಿಗಳು.... 🙏🙏ಚಲನಚಿತ್ರಗಳಲ್ಲಿಯ ತಪ್ಪು ತಪ್ಪಾದರಾಮಾಯಣವೆಲ್ಲಿ... ನಮ್ಮವಾಲ್ಮೀಕಿ ಮಹರ್ಷಿಗಳ ರಾಮಾಯಣವೆಲ್ಲಿ.... ಅಜಗಜಾಂತರ ವ್ಯತ್ಯಾಸವಿದೆ... ಎಷ್ಟು ಜನ್ಮದ ಪುಣ್ಯದ ಫಲ ನಿಮ್ಮ ಉಪನ್ಯಾಸ ಕೇಳಲು ದೊರೆತಿದೆಯೋ ನಾನರಿಯೆ🙏🙏.... ರಾಮಾಯಣದ ಪ್ರತಿಯೊಂದು ಪಾತ್ರಗಳು ನಮ್ಮಬದುಕಿಗೆ ಪಾಠಗಳು... ಮರಳಿ ಈ ಪರಿ ಜನುಮ ಬರುವ ಭರವಸೆ ಅಂತು ಇಲ್ಲ...ಧನ್ಯವಾಯಿತು ಈ ಜನುಮ... ಸಜ್ಜನರ ಸುಖಕ್ಕಾಗಿ... ಉದ್ಧಾರಕ್ಕಾಗಿ ಶ್ರಮಿಸುವ ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು....🙏🙏🙏🙏🙏
 • Abhi,Banglore

  12:07 PM, 02/06/2020

  ಅದ್ಬುತ ಅದ್ಬುತ ಗುರುಗಳೇ , 
  ದಶರಥ ಮಹಾರಾಜರು ಮಗನನ್ನ ಹೆಚ್ಚಾಗಿ ಹಚ್ಚಿಕೊಂಡಿದ್ರ (ಮೋಹ) ? ತಿಳಿಸಿ

  Vishnudasa Nagendracharya

  ದಶರಥ ಮಹಾರಾಜರಿಗೆ ರಾಮನ ಮೇಲೆ ಮೋಹವಿರಲಿಲ್ಲ. ವಾತ್ಸಲ್ಯ, ಪ್ರೇಮ, ಭಕ್ತಿಗಳಿದ್ದವು. 
  
  ಮೋಹವಿದ್ದಾಗ ಮನುಷ್ಯ ಅಧರ್ಮ ಮಾಡುತ್ತಾನೆ. ಕೈಕಯಿಯ ಮೇಲೆ ಮೋಹವಿದ್ದದ್ದಕ್ಕಾಗಿ ಕೈಕಯಿಗೆ ವರ ಕೊಡುವ ಸಂದರ್ಭದಲ್ಲಿ ಅಧರ್ಮ ಮಾಡಿದರು ದಶರಥ ಮಹಾರಾಜರು. ಪ್ರಾಣ ಉಳಿಸಿದ್ದಕ್ಕಾಗಿ ಅದಕ್ಕೆ ಯೋಗ್ಯವಾದ ಮಹತ್ತರ ಪ್ರತ್ಯುಪಕಾರ ಮಾಡಬಹುದಿತ್ತು. ಕೇಳಿದ್ದು ಕೊಡ್ತೇನೆ ಎಂದು ವರ ಕೊಟ್ಟದ್ದು ತಪ್ಪು. ಅದು ಮೋಹದಿಂದ. 
  
  ರಾಮನ ವಿಷಯದಲ್ಲಿ ಮೋಹವಿರಲಿಲ್ಲ ಆದ್ದರಿಂದ ಆ ಸಂದರ್ಭದಲ್ಲಿ ಅಧರ್ಮ ನಡೆಯಲಿಲ್ಲ. 
  
  ರಾಮನ ಬಗ್ಗೆ ಮೋಹವಿದ್ದಿದದ್ದರೆ ಕೈಕಯಿಗೆ ಕೊಟ್ಟ ವಚನವನ್ನು ನಡೆಸದೇ ವಚನಭ್ರಷ್ಟರಾಗುತ್ತಿದ್ದರು ದಶರಥ ಮಹಾರಾಜರು. 
 • Sampada,Belgavi

  6:54 AM , 02/06/2020

  🙏🙏🙏🙏🙏
 • deashmukhseshagirirao,Banglore

  5:52 AM , 02/06/2020

  🙏🏻🙏🏻🙏🏻🙏🏻🙏🏻🙏🏻
 • deashmukhseshagirirao,Banglore

  5:51 AM , 02/06/2020

  🙏🏻🙏🏻🙏🏻🙏🏻🙏🏻🙏🏻