Upanyasa - VNU942

ಶ್ರೀರಾಮ ತಿಳಿಸಿದ ಸ್ತ್ರೀಧರ್ಮ

ಶ್ರೀಮದ್ ರಾಮಾಯಣಮ್ — 60 

ರಾಮ ಕೌಸಲ್ಯಾ ಸಂವಾದ

ಕಾಡಿಗೆ ಹೊರಟ ನಿನ್ನೊಂದಿಗೆ ನಾನು ಬರುತ್ತೇನೆ ಎಂಬ ಕೌಸಲ್ಯೆದೇವಿಯರ ಮಾತಿಗೆ ಅವರೇಕೆ ಅಯೋಧ್ಯೆಯಲ್ಲಿಯೇ ಇರಬೇಕು ಎನ್ನುವದಕ್ಕೆ ರಾಮ ನೀಡುವ ಮೂರು ಶ್ರೇಷ್ಠ ಕಾರಣಗಳನ್ನಿಲ್ಲಿ ಕೇಳುತ್ತೇವೆ. ಶ್ರೀರಾಮನಿಗಿದ್ದ ಧರ್ಮನಿಷ್ಠೆ, ದಶರಥರ ಬಗ್ಗೆ ಇದ್ದ ಅಪಾರ ಗೌರವ, ಭರತನ ಮೇಲೆ ರಾಮನಿಗಿದ್ದ ವಿಶ್ವಾಸಗಳ ಚಿತ್ರಣದೊಂದಿಗೆ ಮನಕಲಕುವ ತಾಯಿ-ಮಗನ ಸಂಭಾಷಣೆಯಿನಿಲ್ಲಿದೆ. 

ತಂದೆಯ ಮಾತನ್ನು ನಡೆಸುವದಾದರೆ, ತಾಯಿಯಾದ ನನ್ನ ಮಾತನ್ನೂ ನಡೆಸು, ನನ್ನನ್ನು ನಿನ್ನೊಟ್ಟಿಗೆ ಕರೆದುಕೊಂಡು ಹೋಗು ಎಂದರೆ ಆ ಮಾತಿಗೆ ರಾಮ ನೀಡುವ ಅದ್ಭುತ ಉತ್ತರದ — ದಿವ್ಯ ಸ್ತ್ರೀಧರ್ಮದ — ಉದಾಹರಣೆ ಇಲ್ಲಿದೆ. 

ಪ್ರತಿಯೊಂದು ವಿಷಯದಲ್ಲಿ ಶ್ರೀರಾಮನಿಗಿರುವ ದಾರ್ಢ್ಯವನ್ನು ಕಂಡು ಕೌಸಲ್ಯಾದೇವಿಯರು ಮನಗಾಣುತ್ತಾರೆ. 

ಧರ್ಮವನ್ನು ಎಂದಿಗೂ ಬಿಡದ ರಾಜ ನಮ್ಮಪ್ಪ, ಎಂದು ದಶರಥರನ್ನು “ಧರ್ಮರಾಜ” ಎಂದು ಶ್ರೀರಾಮರು ಗೌರವದಿಂದ ಕರೆಯುವ ಅಪೂರ್ವ ಪ್ರಸಂಗ ಇಲ್ಲಿದೆ. 

ನಮಗೆ ಅತ್ಯಂತ ಪ್ರಿಯರಾದವರು ನಮ್ಮಿಂದ ಅನಿವಾರ್ಯವಾಗಿ ದೂರವಾದಾಗ ಅವರ ಕ್ಷೇಮಕ್ಕಾಗಿ ನಾವೇನು ಮಾಡಬೇಕು ಎಂದು ಸ್ವಯಂ ಜಗದೊಡೆಯ ತಿಳಿಸಿದ ಮಾರ್ಗದ ವಿವರಣೆ. 


Play Time: 61:02

Size: 1.37 MB


Download Upanyasa Share to facebook View Comments
4724 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  1:38 PM , 01/05/2022

  ಆಚಾರ್ಯಾ🙏..
  
  ಮಂತ್ರಮುಗ್ಧರನ್ನ ಮಾಡುವ ನಿಮ್ಮ ಪ್ರವಚನ ವೈಖರಿಗೆ🙏🙏🙏
  
  ಕೌಸಲ್ಯಾದೇವಿಯರಿಗೆ, ಸಪತ್ನಿಯರಿಂದ ಆಗ್ತಾಯಿದ್ದ ಅವಮಾನ ಮೊದಲಾದ ವಿಷಯಗಳ ಬಗ್ಗೆ, "ಇದು ಏನು, ಹೇಗೆ" ಅಂತ ಆಶ್ಚರ್ಯಪಡ್ತಾ ಇದ್ದೆ.....
  
  ಅಂತ್ಯದಲ್ಲಿ "ವಿವರಣೆ", ಮುಂದಿದೆ ಅಂತ ತಿಳಿದು.....🙏🙏🙏🙏🤗🤗
 • Sowmya,Bangalore

  5:12 PM , 16/01/2021

  🙏🙏🙏
 • Roopa,Bengaluru

  6:31 PM , 10/06/2020

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಅನೇಕ ಪತ್ನಿಯರು ಇದ್ದರೆ ಹೆಂಡತಿಯರ ಮಧ್ಯೆ ಸವತಿ ಮಾತ್ಸರ್ಯ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. 
  ಮತ್ತು ಯಾರ ಮಗ ಯುವರಾಜನಾಗಬೇಕು ಎನ್ನುವ ವಿಷಯಕ್ಕೆ ವಿವಾದವಾಗುವುದು ಸಹಜ. 
  
  ಹೀಗಿರುವಾಗ ಪುರುಷರು ಅನೇಕ ಪತ್ನಿಯರನ್ನು ಮದುವೆಯಾಗುವುದು ಯಾಕೆ ಶಸ್ತ್ರ ಸಮ್ಮತ? 
  ಇದನ್ನೇಕೆ ಮಾಡುತ್ತಾರೆ ? 
  
  ಪತ್ನಿಯರ ಮಧ್ಯೆ ಜಗಳವಾದರೆ ಗಂಡ ಅದನ್ನು ನಿಭಾಯಿಸುವುದೂ ಕಷ್ಟ ಅಲ್ವಾ ? 
  
  ಪ್ರಶ್ನೆ ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ. 🙏

  Vishnudasa Nagendracharya

  ತುಂಬ ಗಂಭೀರವಾದ ವಿಷಯ. ಪ್ರತ್ಯೇಕ ಸಂದರ್ಭದಲ್ಲಿ ಚರ್ಚಿಸುತ್ತೇನೆ. 
 • DESHPANDE P N,BANGALORE

  2:12 PM , 06/06/2020

  S.Namaskargalu. Anadave ananda Anugrahvirali
 • Chandu,Kaiwara

  10:00 PM, 04/06/2020

  ರಾಮಾಯಣ ಕಾಲದಲ್ಲಿ ನಾವು ಇದ್ದು ಕಣ್ಣಾರೆ ಕಂಡ ಹಾಗೆ ಅದ್ಭುತವಾಗಿ ವಿವರಣೆ ಹೇಳಿ ನಮ್ಮ ಬದುಕು ಪಾವನಗೊಳ್ಳಿಸಿದ್ದಿರ ಅಂತ ಪೂರ್ಣ ಭಾವನೆ ಮೂಡುವಂತೆ ಆಗ್ತಿದೆ ಗುರುಗಳೆ 🙏
 • Poornima Sowda,Bangalore

  10:41 AM, 03/06/2020

  ಗುರುಗಳಿಗೆ ಭಕ್ತಿಪೂರ್ವಕವಾದ ನಮಸ್ಕಾರಗಳು... ವಾಲ್ಮೀಕಿಯವರ ನಿರೂಪಣೆ ಹಾಗೂ ನಿಮ್ಮ ವರ್ಣನೆ ಅದ್ಭುತ. 
  ಗುರುಗಳೇ... ಕೌಶಲ್ಯ ದೇವಿಯರು, ಪೂಜೆಯ ಸಮಯದಲ್ಲಿ ಶುಭ್ರವಾದ ಬೆಳ್ಳಗೆ ಇರುವ ಬಣ್ಣದ ಸೀರೆ ಉಡಲು ಕಾರಣವೇನು? ಸಾಮಾನ್ಯವಾಗಿ ಮಹಿಳೆಯರು ಪೂಜೆ ಹೊತ್ತಿನಲ್ಲಿ bright colour ಸೀರೆ ಉಟ್ಟುಕೊಳ್ಳುತ್ತಾರೆ ಅಲ್ವಾ?
  ನಿಮಗೆ ಅನಂತಾನಂತ ಧನ್ಯವಾದಗಳು ಗುರುಗಳೆ 🙏
 • Vishwnath MJoshi,Bengaluru

  10:10 AM, 03/06/2020

  श्रीगुरुभ्यो नमः। अथ गुरुपादौ नमस्करोम
  ಗುರುಗಳಿಗೆ ನಮಸ್ಕಾರ
   ಕೌಸ್ಲ್ಯದೇವಿಯರು ಶ್ರೀ ರಾಮನ ವಿಯೇಗ ತೆಗೆದು ಕೊಳ್ಳದಿರುವುದು ಶ್ರೀರಾಮ ಭಗವಂತನೆಂದು ಕಾರಣಕ್ಕೆ ಅಥವ ಮಗನ ವ್ಯಾಮೋಹದಿಂದ ಯಾವುದು ಗುರುಗಳೆ
  
  ಎರಡನೆಯ ಪ್ರಶ್ನೇ 
  ಕೌಸ್ಲ್ಯದೇವಿಯರ ಮತ್ತು ಕೈಕೈ ಇವರಿಬ್ಬರ ಸಂಬಂಧ ಶ್ರೀ ರಾಮನ ಕಾಡಿಗೆ ಹೋದಮೇಲೆ ಯಾವರೀತಿ ಇತ್ತು.
  
  ಮೂರನೆ ಪ್ರಶ್ನೇ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಗೆ ನಿಯಮಗಳು ಅಧಿಕ ವೆನಿಸುತ್ತದ್ದ. ದಯವಿಟ್ಟು ತಿಳಿಸಿ ಕೊಡಿ ಗುರುಗಳೆ
 • Niranjan Kamath,Koteshwar

  8:57 AM , 03/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಾಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಆಹಾ!!!! ಆಹಾ!!! ಪರಮ ಕರುಣಾಪೂರ್ಣ ಸಂಧರ್ಭ. ಯಾವ ವಿಚಾರವನ್ನು ಇಲ್ಲಿ ಬರೆಯಲಿ ಗುರುಗಳೇ !!? ಇಡಿಯ ಈ ಉಪನ್ಯಾಸದ ಅಕ್ಷರ ಅಕ್ಷರಗಳನ್ನು , ವಿಷಯ ವಿಷಯಗಳನ್ನು, ಧರ್ಮ ಪ್ರಜ್ಞೆ, ಸ್ತ್ರೀ ಧರ್ಮ, ಸ್ಥಿತ ಪ್ರಜ್ಞೆ, ಎಲ್ಲವೂ ಭಕ್ತಿಪೂರ್ವಕ ತಿಳಿಸಿದ
   ಶ್ರೀ ವಾಲ್ಮೀಕಿ ಮಹರ್ಷಿಗಳಿಗೂ, ನಿಮಗೂ ನತ ಮಸ್ತಕರಾಗಿದ್ದೇವೆ. ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ.
 • deashmukhseshagirirao,Banglore

  4:03 AM , 03/06/2020

  🙏🏻🙏🏻🙏🏻🙏🏻🙏🏻🙏🏻🙏🏻