Upanyasa - VNU946

ಶ್ರೀರಾಮನನ್ನು ಒಪ್ಪಿಸಿದ ಸೀತೆ

ಶ್ರೀಮದ್ ರಾಮಾಯಣಮ್ — 64

ಸೀತೆಗೆ ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಕಾಡಿಗೆ ಕರೆದೊಯ್ಯಬಾರದು ಎಂದು ರಾಮದೇವರು ಕಾಡಿನ ಕಷ್ಟಗಳನ್ನು ಭಯವಾಗುವಂತೆ ವರ್ಣಿಸಿದರೆ ಅದ್ಭುತ ಉತ್ತರಗಳನ್ನು ನೀಡಿ ಸೀತೆ ಗಂಡನನ್ನು ಒಪ್ಪಿಸುವ ಪ್ರಸಂಗದ ಚಿತ್ರಣವನ್ನಿಲ್ಲಿ ಕೇಳುತ್ತೇವೆ. 

ಶ್ರೀರಾಮನಿಗೂ ಸೀತೆಯನ್ನು ಬಿಟ್ಟಿರಲು ಸಾಧ್ಯವಿಲ್ಲ, ಕರೆದೊಯ್ಯಬೇಕೆಂಬ ಅಪೇಕ್ಷೆ ಇದೆ, ಕಾಡಿನ ಎಲ್ಲ ಕಷ್ಟಗಳಿಂದ ಪತ್ನಿಯನ್ನು ಪಾರು ಮಾಡುವ ಶಕ್ತಿಯೂ ಇದೆ. ಆದರೂ ಕರೆದುಕೊಂಡು ಹೋಗುವದಿಲ್ಲ ಎಂದು ಹೇಳಿ ಅಳಿಸಿದ್ದೇಕೆ ಎಂಬ ಪ್ರಶ್ನೆಗೆ ಅದ್ಭುತ ಉತ್ತರ ಇಲ್ಲಿದೆ. 

ಎಷ್ಟು ಕೇಳಿದರೂ ರಾಮದೇವರು ಸೀತೆಯನ್ನು ಕರೆದೊಯ್ಯಲು ಒಪ್ಪದೇ ಇದ್ದಾಗ ರಾಮನ ಮೇಲೆ ಸಿಟ್ಟಿಗೆ ಬಂದು ಮಾತನಾಡುತ್ತಾರೆ. ಈ ಸಿಟ್ಟಿನಲ್ಲಿ ತಿರಸ್ಕಾರವಿರಲಿಲ್ಲ, ಆ ಆಕ್ಷೇಪದಲ್ಲಿ ಗಂಡನ ಬಗ್ಗೆ ಅವಜ್ಞೆ ಇರಲಿಲ್ಲ, ಕಿಂತು, “ಪ್ರಣಯಾಚ್ಚಾಭಿಮಾನಾಚ್ಚ ಪರಿಚಿಕ್ಷೇಪ ರಾಘವಮ್” ಪ್ರೀತಿ ಅಭಿಮಾನ ಪುರಸ್ಸರವಾಗಿ ಸಿಟ್ಟಿಗೆ ಬಂದರು ಎಂಬ ಮಾತನ್ನು ಕೇಳುತ್ತೇವೆ. ಹೆಂಡತಿಗೆ ಗಂಡನ ಬಳಿ ಯಾವ ರೀತಿಯ ಸಲಿಗೆ ಇರಬೇಕು ಎಂಬ ಪಾಠದೊಂದಿಗೆ. 

Play Time: 60:00

Size: 1.37 MB


Download Upanyasa Share to facebook View Comments
3474 Views

Comments

(You can only view comments here. If you want to write a comment please download the app.)
 • Jyothi Gayathri,Harihar

  12:48 PM, 06/05/2021

  🙏🙏🙏🙏🙏
 • Santosh Patil,Gulbarga

  9:28 PM , 01/05/2021

  🙏💐🙏
 • Sowmya,Bangalore

  4:43 PM , 01/02/2021

  🙏🙏🙏
 • DESHPANDE P N,BANGALORE

  2:05 PM , 10/06/2020

  S.Namaskargalu.Anugrahvirli
 • Vasudha,Kurnool

  1:23 PM , 10/06/2020

  ಅದ್ಭುತ ಗುರುಗಳೆ. 🙏
  
  ಕಣ್ಣು ಮುಚ್ಚಿ ಕೇಳುತ್ತಿದ್ದರೆ ಕಣ್ಣಿಗೆ 
  
  ಕಟ್ಟುವಂತೆ ಕಥೆ ಸನ್ನಿವೇಶ 
  
  ವರ್ಣನೆಗಳಿಗೆ ತಕ್ಕಂತೆ ಭಾಷಣೆ
  
  ಪಾತ್ರಗಳ ಸ್ವಭಾವ ಆವಿಷ್ಕಾರ 
  
  ಗೊಳ್ಳುತ್ತಾ ನಾವು ತಾದ್ಯಾತ್ಮ 
  
  ಹೊಂದುವ ಹಾಗೆ ಮಾಡುವ ನಿಮ್ಮ ಪ್ರವಚನ
 • Jayashree Karunakar,Bangalore

  2:49 PM , 09/06/2020

  ಗುರುಗಳೆ ಎಂದಿನಂತೆ ಕಣ್ಣು ಮುಚ್ಚಿ ರಾಮಾಯಣವನ್ನು ಆಸ್ವಾದನೆ ಮಾಡುತ್ತಾ ಕುಳಿತರೆ.....!!!
  
  ಮಧ್ಯೆದಲ್ಲೊಮ್ಮೆ ನಾವು
   ದಂಡಕಾರಣ್ಯದಲ್ಲಿ ಕುಳಿತಿಲ್ಲ ಅನ್ನುವದನ್ನು ಕಣ್ತೆರೆದು ಧೃಡ ಪಡಿಸಿಕೊಳ್ಳಬೇಕಾಯಿತು😱😱....
  ನರಸಿಂಹನಾಗಿಯೂ ಆ ಲಕ್ಷ್ಮೀದೇವಿಯನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡವನು,  ಈಗ ರಾಮಚಂದ್ರನಾಗಿ ಬಂದಾಗ ಸೀತೆಯನ್ನು ಬಿಟ್ಟು ಹೋಗುವನೆ ? 
  
  ಇನ್ನು ಜಗದೊಡೆಯ ಜೊತೆಗಿರಲು ನಾಡೇನು ? ಕಾಡೇನು?
  ಆದರೂ ಪರಮಾತ್ಮನ ವಿಡಂಬನೆಯೇ ಅದ್ಭುತ
  ಅದನ್ನು ಗುರುಗಳಿಂದ ಪಾನ ಮಾಡುವದೆ ಕಿವಿಗಳಿಗೆ ರಸದೌತಣ...
  
  ದಣಿವಾರಿಸಿಕೊಳ್ಳಲೆಂದು ಮರದಡಿಯಲ್ಲಿ ನಿದ್ರೆಗೆ ಜಾರಿದಾಗ...ತಣ್ಣನೆಯ ಸ್ಪಶ೯ಕ್ಕೆ ಕಣ್ತೆರೆದು ನೋಡಿದರೆ.....
  ನಿಧಾನವಾಗಿ ಮೈಮೇಲೆಯೇ ಹರಿದುಸಾಗುತ್ತಿರುವ ಕಾಳಿಂಗ ಸಪ೯.....!!!
  ಭಯವನ್ನು ತಡೆಹಿಡಿದು ಅದು ಹೋಗುವಂತೆ ನೋಡಿಕೊಳ್ಳಬೇಕು....
  
  ಸ್ನಾನಕ್ಕಾಗಿ ನದಿಯಲ್ಲಿ ಮುಳುಗು ಹಾಕಿ ಮೇಲೆದ್ದರೆ...ಸಿಂಹವೊಂದು ಸಮೀಪದಲ್ಲಿಯೇ ನೀರು ಕುಡಿಯುತ್ತಿದೆ....
  ಮತ್ತೆ ಹಾಗೆಯೇ ಮುಳಬೇಕೊ ..? ಸಿಂಹಕ್ಕೆ ಆಹಾರವಾಗಬೇಕೊ ?...
  
  ಕುಳಿತಲ್ಲಿಯೇ ಭಯಪಡಿಸಿ ಬಿಟ್ಟಿದ್ದೀರಿ ಗುರುಗಳೆ....
  
  "ಮದವೇರಿದ ಆನೆಯು ನಿಮ್ಮ ಮುಂದೆ ಘೀಳಿಡದೆ ಬಂದು ಶಾಂತವಾಗಿ ನಿಲ್ಲುವದನ್ನು ನಾನು ನೋಡಿ ಆನಂದಿಸಬೇಕು" ಅನ್ನುವ ಸೀತಾಮಾತೆಯ ಮಾತು ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ....
  ತಾನೇಕೆ ಶ್ರೀರಾಮನೊಡನೆ ವನಕ್ಕೆ ತೆರಳಬೇಕು ಅನ್ನುವ ಸೀತಾಮಾತೆಯ ಯುಕ್ತಿಯ ಮಾತುಗಳನ್ನು ಮತ್ತಷ್ಟು ಕೇಳಬೇಕೆನಿಸಿತು....
  
  ಕಡಲೊಡೆಯ ನಿನ್ನಡಿಯ ಘಳಿಗೆ ಬಿಟ್ಟು ಬದುಕಲಾಗದೊ ಅನ್ನುವ ದಾಸಸಾಹಿತ್ಯದ ಮಾತನ್ನು ಸೀತಾದೇವಿಯರ ಕಥೆಯ ಮೂಲಕ ಪರಮಾಧ್ಬುತವಾಗಿ ಅಥ೯ ಮಾಡಿಸಿದ್ದಷ್ಟೇ ಅಲ್ಲದ ರಸಾಸ್ವಾದವನ್ನೂ ನೀಡಿದ ಗುರುಗಳ ಚರಣಕ್ಕೆ ಶರಣು🙏
 • Sampada,Belgavi

  2:03 PM , 09/06/2020

  ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ಪರಮಾದ್ಭುತ ವಾಗಿ ರಚನೆಮಾಡಿ ನೀಡಿದ್ದಾರೆ..ಭಯ ಹುಟ್ಟಿಸುವ ಕಾಡುಪ್ರಾಣಿಗಳ ವಿವರವಂತೂ ಕಣ್ಣು ಮುಂದೆ ಚಿತ್ರಿಸಿದಂತಾಯಿತು.... ಅತುಲ ಪರಾಕ್ರಮಿಯಾದ ಶ್ರೀರಾಮಚಂದ್ರನ ಮೇಲೆ ಸೀತಾದೇವಿಯರ ವಿಶ್ವಾಸ... ಸೀತಾ ದೇವಿಯರು ರಾಮಚಂದ್ರನನ್ನು ಒಲಿಸಿಕೊಂಡ ಬಗೆ .... ಧರ್ಮಾಚರಣೆ ಮಾಡುವ ಪ್ರಸಕ್ತಿ ಬಂದಾಗ ಪೂರ್ಣ ಸಂತೋಷದಿಂದ ಮಾಡಬೇಕೆಂದು... ಜಗತ್ತಿನ ತಂದೆ-ತಾಯಿ ನಮಗೆ ತಿಳಿಸಿದ್ದು... ಎಲ್ಲವೂ ಪರಮಾದ್ಭುತ...🙏🙏🙏🙏🙏
 • Naveen ulli,Ilkal

  11:04 AM, 09/06/2020

  ಇಂದು ರಾಮಾಯಣದಲ್ಲಿ ಕಾಡಿನಲ್ಲಿ ಇರುವಂತಹ ಭಯ, ಕಷ್ಟದ ಬಗ್ಗೆ ವಿವರ ಕೇಳುವಾಗ ನಾವು ಕೂಡ ಕಾಡಿನಲ್ಲಿ ಹೋಗಿ ಅಲ್ಲಿನ ಭಯ ಕಂಡು ಬಂದ ಹಾಗೆ ಆಯ್ತು. ಕೊನೆಗೆ ರಾಮನನ್ನು ಒಪ್ಪಿಸಿದ ಸೀತಾ ಮಾತೆಯ ಭಾವವನ್ನು ವಿವರ ಮಾಡ್ತಾ, ದಾಸರ "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ಪದ್ಯ ಕೇಳುವಾಗ ಅದರ ಭಾವ ಅನುಭವಿಸುವಾಗ ನಮಗೂ ಭಕ್ತಿ ಮನಃ ತುಂಬಿ ಬಂತು. ಪ್ರತಿ ದಿನ ಈ ಪದ್ಯವನ್ನ ಹಾಡುವಾಗ ಯಾವ ಭಕ್ತಿ ಭಾವ ಇರುತ್ತಿತ್ತೋ ಈಗ ಆ ಭಕ್ತಿ ಭಾವ ಇನ್ನು ಹೆಚ್ಚಾಗಿದೆ. ನಿಮ್ಮನ್ನು ಪಡೆದ ವಿಶ್ವನಂದಿನಿಯ ಬಳಗವೇ ಧನ್ಯ.🙏 😍
 • Niranjan Kamath,Koteshwar

  8:51 AM , 09/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ವಾಲ್ಮೀಕಿ ಮುನಿಗಳ ಪಾಂಡಿತ್ಯ ಮಹಾ ಮಹಾ ಪರಮಾದ್ಭುತ !! ಆಹಾ!! ಏನೊಂದು ಅದ್ಭುತವಾದ ಕಾಡಿನ ಚಿತ್ರಣವನ್ನು ಕೊಟ್ಟಿದ್ದಾರೆ. ಅದನ್ನು ನೀವು ಹೇಳಿದ ಪರಿ ...ಆಹಾ!!! ಶ್ರೀ ರಾಮ , ಸೀತಾಮಾತೆಗೆ ಕಾಡಿನ ಚಿತ್ರಣ ಕೊಟ್ಟ ವಿಚಾರ, ಸೀತಾಮಾತೆ , ಶ್ರೀ ರಾಮನನ್ನು ಒಲಿಸುವ ರೀತಿ, ನಂತರ ದೃಢವಾಗಿ , ಪ್ರೇಮಪೂರ್ವಕ ತನ್ನ ಅಭಿಪ್ರಾಯ, ವಿಶ್ವಾಸ, ಹಾಗೂ ನಿರ್ಧಾರ ತೆಗೆದುಕೊಂಡ ರೀತಿ. ಶ್ರೀ ರಾಮ ಸೀತೆಯರು ತಮ್ಮದು ಎಂಬ ಎಲ್ಲವನ್ನು ದಾನ ಮಾಡಿ ಹೊರಟಿದ್ದು, ಕೊನೆಯಲ್ಲಿ ದಾಸಸಾಹಿತ್ಯದ ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ಎನ್ನುವ ವಿಚಾರ...ಪರಮ ಮಂಗಲ. ಧನ್ಯೋಸ್ಮಿ.🙏🚩🚩🚩
 • deashmukhseshagirirao,Banglore

  4:35 AM , 09/06/2020

  🙏🏻🙏🏻🙏🏻🙏🏻🙏🏻🙏🏻🙏🏻