Upanyasa - VNU947

ಲಕ್ಷ್ಮಣರ ಭಕ್ತಿ ಊರ್ಮಿಳೆಯ ಧರ್ಮ

ಶ್ರೀಮದ್ ರಾಮಾಯಣಮ್ — 65 

ಕೌಸಲ್ಯೆ ವನಕ್ಕೆ ಬರುತ್ತೇನೆ ಎಂದಾಗ “ಗಂಡನ ಸೇವೆ ಮಾಡುವದೇ ಧರ್ಮ, ಬರತಕ್ಕದ್ದಲ್ಲ,” ಎಂದು ರಾಮದೇವರು ತಡೆಯುತ್ತಾರೆ. “ಗಂಡ ಇದ್ದೆಡೆಯೇ ಹೆಂಡತಿ ಇರಬೇಕು” ಎಂಬ ಸೀತಾದೇವಿಯ ಮಾತಿಗೆ ಒಪ್ಪಿ ಸೀತೆಯನ್ನು ಕರೆದುಕೊಂಡು ಹೋಗುತ್ತಾರೆ. ಹಾಗಾದರೆ ಊರ್ಮಿಳೆಯನ್ನು ಲಕ್ಷ್ಮಣರು ಏಕೆ ಕರೆದುಕೊಂಡು ಹೋಗುವದಿಲ್ಲ? ಊರ್ಮಿಳಾದೇವಿಯರು ಬರುತ್ತೇನೆ ಎಂದು ಹೇಳಲೇ ಇಲ್ಲವೇ? ಅಥವಾ ಲಕ್ಷ್ಮಣರೇ ನಿಷೇಧಿಸಿದರೇ? ಇತ್ಯಾದಿ ಅನೇಕ ಪ್ರಶ್ನೆಗಳ ಕುರಿತ ಚರ್ಚೆ ಇಲ್ಲಿದೆ. ಮಹಾಭಾರತದ ವನಪರ್ವದಲ್ಲಿ ಬರುವ ದ್ರೌಪದೀದೇವಿಯ ವಚನದ ಅರ್ಥಾನುಸಂಧಾನದೊಂದಿಗೆ. 


Play Time: 40:43

Size: 1.37 MB


Download Upanyasa Share to facebook View Comments
3903 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  8:22 PM , 08/06/2022

  ಆಚಾರ್ಯರೇ
  ಊರ್ಮಿಳೆಯರ ವಿಷಯದಲ್ಲಿ..
  14 ವರ್ಷಗಳವರೆಗೂ, ಅವರು ನಿದ್ರೆಯನ್ನು ಮಾಡಿದರೆನ್ನುವ ಪ್ರಸಂಗದ ವಾಸ್ತವಿಕತೆ????
 • C Guru Raja Rao,Hyderabad

  7:41 PM , 08/06/2022

  ಆಚಾರ್ಯರೇ..
  ಶ್ರೀರಾಮ, ಲಕ್ಷ್ಮಣನನ್ನ ತನ್ನ ಜತೆಯಲ್ಲಿ ವನಕ್ಕೆ ಬರುವದು ಬೇಡಾ ಅಂತ ಹೇಳಿ,
  ತನ್ನ ತಂದೆ ಮತ್ತು ಭರತರ ವಿಷಯದಲ್ಲಿ ಸಂದೇಹಾಸ್ಪದ, ಅನುಮಾನಾಸ್ಪದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಏಕೆ?
  ದಶರಥರ ಮತ್ತು ಭರತನ ವ್ಯಕ್ತಿತ್ವ ಸಂಪೂರ್ಣವಾಗಿ ತಿಳಿದಿದ್ದ ಶ್ರೀರಾಮ....
  ಹಿಂದೆ, ಒಂದು ಪ್ರಸಂಗದಲ್ಲಿ, ಲಕ್ಷ್ಮಣ, ಅವರಿಬ್ಬರಬಗ್ಗೆ ಆವೇಶದಿಂದ ಕಠಿಣವಾಗಿ ಮಾತನಾಡಿದಾಗ, ಸ್ವಾಂತನಪೂರಿತ ಮಾತನಾಡಿದಾಗ ಶ್ರೀರಾಮ....
  ಈಗ....ಹೀಗೇಕೆ ಮಾತನಾಡಿದ??

  Vishnudasa Nagendracharya

  ದಶರಥಮಹಾರಾಜರು ಸದ್ಗುಣಶಾಲಿಗಳೇ ಆಗಿದ್ದರೂ ಸಹ, ಮಗನ ಮೇಲೆ ಅತ್ಯಧಿಕ ಪ್ರೇಮವನ್ನು ಮಾಡುತ್ತಿದ್ದರೂ ಸಹ "ಧರ್ಮಬಂಧಕ್ಕೆ" ಒಳಗಾಗಿ ಮಗನನ್ನು ವನವಾಸಕ್ಕೆ ಕಳುಹಿಸಲೇ ಬೇಕಾಯಿತು. 
  
  ಹೀಗೆ, ವ್ಯಕ್ತಿಗಳು ಸಜ್ಜನರಾಗಿದ್ದರೂ, ಪ್ರಸಂಗದ ಅನಿವಾರ್ಯತೆಯಿಂದ ಕೆಲವು ಬಾರಿ ಕಠಿಣವಾಗಿ ವರ್ತಿಸಲೇಬೇಕಾಗುತ್ತದೆ. 
  
  ಅಂತಹ ಪ್ರಸಂಗದಲ್ಲಿ ಹೇಗಿರಬೇಕು ಎಂದು ಶ್ರೀರಾಮದೇವರು ಇಲ್ಲಿ ತಿಳಿಸುತ್ತಿದ್ದಾರೆ. 
  
  ಭರತರು, ದಶರಥಮಹಾರಾಜರು ಅಸಜ್ಜನರು ಎಂದು ತಾತ್ಪರ್ಯವಲ್ಲ, ಅವರಿಂದ ಅನಿವಾರ್ಯವಾದ ರೀತಿಯಲ್ಲಿ ತೊಂದರೆ ಉಂಟಾದರೆ ಹೇಗಿರಬೇಕು ಎನ್ನುವದನ್ನು ಶ್ರೀರಾಮರು ತಿಳಿಸುತ್ತಿದ್ದಾರೆ. 
 • Santosh Patil,Gulbarga

  9:29 PM , 01/05/2021

  💐🙏💐
 • Sowmya,Bangalore

  4:33 PM , 04/02/2021

  🙏🙏🙏
 • DESHPANDE P N,BANGALORE

  2:32 PM , 11/06/2020

  S.Namaskargalu. Anugrahvirali
 • M V Lakshminarayana,Bengaluru

  5:22 PM , 10/06/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಊರ್ಮಿಳಾ ಲಕ್ಷ್ಮಣರ ಪ್ರಸಂಗವನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದೀರಿ. ಲಕ್ಷ್ಮಣನ ಸೇವೆ ಪರಮಾದ್ಭುತ
   ಅದನ್ನು ಕಲ್ಪಿಸಿಕೊಳ್ಳುವ ಶಕ್ತಿಯೂ ನಮ್ಮಲ್ಲಿಲ್ಲ. ಆದರೂ ಮಕ್ಕಳಿಗೆ ಉನ್ನತಾದರ್ಶ ವ್ಯಕ್ತಿಗಳ ಉದಾಹರಣೆ ಕೊಡಲು ಇದು ಸಹಾಯ ಮಾಡುತ್ತದೆ.
  ಇಂತಿ ನಮಸ್ಕಾರಗಳು
 • Niranjan Kamath,Koteshwar

  8:33 AM , 10/06/2020

  ಗುರುಗಳೇ 🙏, ಊರ್ಮಿಳಾ ದೇವಿಯರು ಈ 14 ವರ್ಷಗಳ ಕಾಲ ನಿದ್ರೆಯನ್ನು ಮಾಡಿದ್ದರು ಎನ್ನುವುದು ಕೇಳಿದ್ದೆವು. ಇದು ಸರಿಯೇ ? ಲಕ್ಷ್ಮಣ ದೇವರು ಅಹೋ ರಾತ್ರಿ ನಿದ್ರೆ ಬಿಟ್ಟಿದ್ದರು, ಅದನ್ನು ಊರ್ಮಿಳಾ ದೇವಿಯ ಕಾರಣ ಎಂದು ಕೇಳಿದ್ದೇವೆ. ಸರಿಯೇ.?

  Vishnudasa Nagendracharya

  ಆ ರೀತಿಯ ಉಲ್ಲೇಖ ಯಾವ ಅಧಿಕೃತ ರಾಮಾಯಣದಲ್ಲಿಯೂ ಇಲ್ಲ.
 • Niranjan Kamath,Koteshwar

  8:30 AM , 10/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಆಯಾಯ ಸಂಧರ್ಭಗಳಲ್ಲಿ ಯಾವ ಯಾವ ರೀತಿಯ ಧರ್ಮಾಚರಣೆ ಮಾಡಬೇಕು ಎನ್ನುವುದನ್ನು ಪರಿಸ್ಪಷ್ಟವಾಗಿ ತಿಳಿಸಿದ್ದಾರೆ. ಲಕ್ಷ್ಮಣ ದೇವರ ಕಠಿಣ , ಹಾಗೂ ದೃಢ ನಿರ್ಧಾರ ಬಹಳ ಭಕ್ತಿಪೂರ್ಣ. ಧನ್ಯೋಸ್ಮಿ.
 • deashmukhseshagirirao,Banglore

  4:05 AM , 10/06/2020

  🙏🏻🙏🏻🙏🏻🙏🏻🙏🏻🙏🏻