Upanyasa - VNU949

ಯಾವ ಜಾತಿಗೆ ಯಾವ ವೃತ್ತಿ

ಶ್ರೀಮದ್ ರಾಮಾಯಣಮ್ — 67

ಸರ್ವಸ್ವದಾನ ಮಾಡುತ್ತಿದ್ದ ಶ್ರೀರಾಮನ ಮನೆಬಾಗಿಲಿಗೆ ಗರ್ಗ ಗೋತ್ರದ ತ್ರಿಜಟ ಎಂಬ ಬ್ರಾಹ್ಮಣನೊಬ್ಬ ಬರುತ್ತಾನೆ. ವ್ಯವಸಾಯ ಮಾಡಲು ಹೋಗಿ ಕಡು ಬಡತನಕ್ಕೀಡಾಗಿದ್ದ ಬ್ರಾಹ್ಮಣ. ದಾರಿ ತಪ್ಪಿದ್ದ ಬ್ರಾಹ್ಮಣನನ್ನು ರಾಮದೇವರು ಹೇಗೆ ದಾರಿಗೆ ತಂದರು ಎಂದು ಇಲ್ಲಿ ಕೇಳುತ್ತೇವೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜಾತಿಯವರು ಯಾವ ವೃತ್ತಿಯನ್ನು ಮಾಡಬೇಕು ಎಂಬ ಚರ್ಚೆಯೊಂದಿಗೆ. 

Play Time: 60:00

Size: 1.37 MB


Download Upanyasa Share to facebook View Comments
6104 Views

Comments

(You can only view comments here. If you want to write a comment please download the app.)
 • Joshi pavan kumar,Hyderabad

  1:40 PM , 05/08/2022

  Addicted Swamy Sri Rama kathakki
 • Jyothi Gayathri,Harihar

  7:29 PM , 16/05/2021

  ಹರೇ ಶ್ರೀನಿವಾಸ
  ಆರ್ಚಾರಿಗೆ ನಮಸ್ಕಾರಗಳು
  ವೈಶ್ಯ ವರ್ಣದ ಧರ್ಮಗಳನ್ನು ತಿಳಿಸಿ ಕೊಡಿ.
  ಸಂಧ್ಯಾವಂದನೆಯ ನಂತರ ಅಗ್ನಿಕಾರ್ಯ, ಬ್ರಹ್ಮಯಜ್ಞ, ವೈಶ್ವದೇವ, ಬಲಿಹರಣ ಮುಂತಾದ ಕಾರ್ಯಗಳನ್ನು ವೈಶ್ಯರು ಮಾಡಬೇಕೇ?

  Vishnudasa Nagendracharya

  ವೈಶ್ವದೇವ ಬಲಿಹರಣ ಇತ್ಯಾದಿಗಳು ಕೇವಲ ಬ್ರಾಹ್ಮಣರು ಮಾಡಬೇಕಾದ ಕಾರ್ಯಗಳು. 
  
  ಬ್ರಾಹ್ಮಣರಿಗೆ ಮಾತ್ರ ಕ್ರಿಯೆಗಳು ಹೆಚ್ಚು. ಕ್ಷತ್ರಿಯ ವೈಶ್ಯರಿಗೆ ಕಡಿಮೆ. 
  
  ಸಮಯ ದೊರೆತ ತಕ್ಷಣ ವೈಶ್ಯಧರ್ಮಗಳ ಕುರಿತು ಬರೆಯುತ್ತೇನೆ. 
 • Sowmya,Bangalore

  4:24 PM , 16/02/2021

  🙏🙏🙏
 • M. Ullas Hegde,Mangalore

  5:45 PM , 13/06/2020

  I am born in a Brahmin Family and after Upanayana i regularly do Pratha Sandhyavandan and Deva puja daily without fail but in a very small way. 
  Evening sandhyavandan i skip if at all i reach home late from office. 
  
  After graduating i joined an existing Business (Vaishya). This business is an agency (Shudra) there is a principal company who directs us what to do and we get the work done. 
  
  Now should i consider myself a Brahmana i.e. by birth or
  A Vaishya going by the Business I do
  Or a Shudra by the nature of Activity I do?

  Vishnudasa Nagendracharya

  “ಇತರ ವರ್ಣದ ವೃತ್ತಿಯನ್ನು ಮಾಡುತ್ತಿರುವ ಬಾ್ರಹ್ಮಣರು” ಎಂಬ ವಿಭಾಗದಲ್ಲಿ ಬರುವವರು ನೀವು. ಬ್ರಾಹ್ಮಣ ತಂದೆ ತಾಯಿಗಳಿಗೆ ಜನಿಸಿದವರು ಬ್ರಾಹ್ಮಣರೇ. ಸಂಶಯವಿಲ್ಲ., 
  
  ವೃತ್ತಿಯ ಆಧಾರದಿಂದ ಜಾತಿ ನಿರ್ಣಯ, ಜಾತಿ ಬೇರೆ, ವರ್ಣ ಬೇರೆ ಎನ್ನುವದು ಬನ್ನಂಜೆ ಗೋವಿಂದಾಚಾರ್ಯರ ವಾದ. ಶ್ರೀಕೃ್ಣ ತಿಳಿಸಿದ ತತ್ವವಲ್ಲ. 
  
  ಶ್ರೀಕೃಷ್ಣ ತಿಳಿಸಿದ್ದು— ಜಾತಿಯ ಆಧಾರದಿಂದ ವೃತ್ತಿ ನಿರ್ಣಯ ಮತ್ತು ಜಾತಿ-ವರ್ಣಗಳು ಎರಡೂ ಒಂದೇ, ದೇಹಕ್ಕೆ ಆಯಾಯ ಜನ್ಮಕ್ಕೆ ತಕ್ಕಂತೆ ಜಾತಿ, ಸ್ವರೂಪಕ್ಕೆ ಶಾಶ್ವತವಾದ ಜಾತಿ ಎಂದು. 
  
  ಮುಂದೆ ಸಮಯ ಸಿಕ್ಕಾಗ ಇದನ್ನು ಪೂರ್ಣ ವಿವರಿಸುತ್ತೇನೆ. 
 • Roopa,Bangalore

  1:49 PM , 19/06/2020

  Adbutavada pravachana .. Ramachandra devara Katheye hege kelodastu kelonavenisuttide ... Kadeyalli helida maatugalu Keli kannili Neeru tumbi Bantu nam tandeyavara bagge kelodaga inta tande tayiyannu padeda nave dhanyaru ....achare
 • Sampada,Belgavi

  9:58 PM , 16/06/2020

  ಬೆಳಗಾಗುವ ಹೊತ್ತಿಗೆ ರಾಮಾಯಣದ ಉಪನ್ಯಾಸ ಮೊಬೈಲ್ ನಲ್ಲಿ ನೋಡಿ.... ಬೆಳಗು ಝಾವದಿ ಬಾರೋ ಹರಿಯೇ ... ಎಂದು ಹೇಳುತ್ತಾ... ಆರಂಭವಾಗುವ ಈ ದಿನಗಳು .. ಜೀವನದ ಅತ್ಯಂತ ಬೆಲೆಬಾಳುವ ಆನಂದದ ದಿನಗಳು... ಹೊಸ ಹೊಸ ವಿಷಯಗಳನ್ನು ಕೇಳಿ ತಿಳಿದು ... ಅದನ್ನು ಇನ್ನೊಬ್ಬರಿಗೆ ಹೇಳಿದಾಗ ಆ ಸಂತೋಷದ ಅನುಭವಕ್ಕೆ ನಾನು ಗುರುಗಳಿಗೆ ಚಿರಋಣಿ.. 🙏🙏ಮುಂದಿನ ಭಾಗದ ಉಪನ್ಯಾಸಕ್ಕಾಗಿ ಆತುರದಿಂದ ಕಾದು ಕುಳಿತಿರುತ್ತೇನೆ... ನಿರಂತರ ಹರಿ ಕಥಾ ಶ್ರವಣ ಭಗವಂತ ನಮಗೆ ದಯಪಾಲಿಸಲಿ...🙏🙏
 • DESHPANDE P N,BANGALORE

  2:22 PM , 13/06/2020

  S.Namaskargalu.Anugrahavirli
 • Anirudhha r,Bangalore

  9:30 AM , 13/06/2020

  Poojya acharyarege namaskaragalu🙏🙏
  
   rayaru venktanathaacharyaragiddaga. Yachane mudutiralilla Anta keliddevu, matte
  Purandaradasara " bedidare enn odyana beduve".ennuva matina tatparya dayamdi tilise🙏🙏🙏
 • Jayashree Karunakar,Bangalore

  3:40 PM , 12/06/2020

  ಗುರುಗಳೆ ನಿತ್ಯವೂ ಬರುವ ಹೊಸ ಹೊಸ ವಿಷಯಗಳಿಂದಾಗಿ ರಾಮಾಯಣದಲ್ಲಿ ಭಕ್ತಿಯ ಜೊತೆಗೆ ಕುತೂಹಲ ಹುಟ್ಟಿಸುತ್ತಿದೆ...
  
  ತ್ರಿಜಟರ ಕಥೆ ಸ್ವಾರಸ್ಯಕರವಾಗಿತ್ತು...
  ದಂಡ ಎಲ್ಲಾ ಸ್ಥಳಗಳನ್ನೂ ದಾಟಿಕೊಂಡು ದಾಟಿಕೊಂಡು ಹೋಗುವ ಪರಿಯೇ ತುಂಬ ಸ್ವಾರಸ್ಯಕರವಾಗಿತ್ತು....
  
  ಧಮಾ೯ಚರಣೆಯ, ಸಾಧನೆಯ ಕುರಿತ ಮಾತು ಬಂದಾಗ ನಿಮ್ಮ ಆತ್ಮವಿಶ್ವಾಸದ ಮಾತುಗಳು, ಧೃಡ ನಿಣ೯ಯದ ಮಾತುಗಳು ನಮ್ಮಲ್ಲಿ ತುಂಬಾ ಪರಿಣಾಮವಾಗುತ್ತಿದೆ, ನಾವೂ ಕೂಡ ಸಾಧನಾ ಮಾಗ೯ದಲ್ಲಿ ಸಾಗಲು ಪ್ರೇರಣೆಯಾಗುತ್ತಿದೆ...
  ಇಂತಹ ಸಂಭ್ರಮದ ರಾಮಾಯಣದ ಶ್ರವಣ ಸಿಕ್ಕಿರುವದು ನಮ್ಮ ಸೌಭಾಗ್ಯ....ನಿಮಗೆ ಕೃತಜ್ಞತೆಗಳು....
 • subramanya v bhat,mandya

  8:10 PM , 12/06/2020

  ತ್ರಿಜಟ ಬ್ರಾಹ್ಮಣ ಗೋವುಗಳನ್ನು ಗೆದ್ದ ಬಗ್ಗೆ ಆ ಬ್ರಾಹ್ಮಣನನ್ನು ಸ್ವಾಮಿ ಆಲಿಂಗನ ಮಾಡಿಕೊಂಡ ಬಗ್ಗೆ ಕೇಳಿ ಕಣ್ಣಲ್ಲಿ ನೀರು ಬಂತು ಗುರುಗಳೇ .ನಮ್ಮನ್ನು ಸ್ವಾಮಿ ಯಾವಾಗ ಆಲಿಂಗನ ಮಾಡಿಕೊಳ್ಳುವುದು ಗುರುಗಳೇ
 • Narayanaswamy,Mysore

  7:43 PM , 12/06/2020

  ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು 🙏🙏
  ತ್ರಿಜಟ ಬ್ರಾಹ್ಮಣ ರ ವೃತಾಂತ ಕೇಳಿ ಮೈ ಮನ ಪುಳಕಗೊಂಡಿತು ಹಾಗೆ ಭಗವಂತ ತ್ರಿ ಜಟ ಬ್ರಾಹ್ಮಣರನ್ನು ಆಲಿಂಗನ ಮಾಡಿಕೊಂಡಾಗ ಆ ಬ್ರಾಹ್ಮಣರಿಗೆ ಆದ ಆನಂದ ಎಷ್ಟಿರಕಿಲ್ಲ ಮನಸ್ಸನ್ನು ಪುಳಕಗೊಳಿಸಿತು.
 • M V Lakshminarayana,Bengaluru

  5:34 PM , 12/06/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಪಾಶ್ಚಿಮಾತ್ಯರ ಪ್ರಭಾವದಿಂದ ವರ್ಣಾಶ್ರಮ ಧರ್ಮದ ವೃತ್ತಿ ಬಿಟ್ಟು ಎಲ್ಲರೂ ಸಂಬಳದ ಉದ್ಯೋಗ ಹಿಡಿಯುತ್ತಿದ್ದಾರೆ; ವಿದೇಶಗಳಿಗೂ ಹೋಗುತ್ತಿದ್ದಾರೆ.
  ಈಗ ಶ್ರೀ ರಾಮಚಂದ್ರನ ಮಾತು ಕೇಳುವವರಾರು? ಮತ್ತೆ ಕೃತಯುಗ ಪ್ರವೃತ್ತ ವಾಗಬೇಕು.
  ಇಂತಿ ನಮಸ್ಕಾರಗಳು
 • Abhi,Banglore

  12:50 PM, 12/06/2020

  ಆದಷ್ಟು ಸಂಶಯ ದೊರೆಯದಂತೆ ತಿಳಿಸುವ ಪ್ರಯತ್ನ ನಿಮ್ಮ ಉಪನ್ಯಾಸದಲ್ಲಿ ಮಾತ್ರ ದೊರೆಯಬಹುದು ಅನಿಸುತ್ತೆ ಆಚಾರ್ಯರೇ , 
  ಆಚಾರ್ಯರಿಗೆ 🙏🙏🙏
 • Naveen ulli,Ilkal

  10:06 AM, 12/06/2020

  ಶ್ರೀ ಗುರುಭ್ಯೋ ನಮಃ 
  ಇಂದು ನಮ್ಮ ವೃತ್ತಿ ಯಾವ ರೀತಿ ಇರಬೇಕು ಅಂತ ರಾಮಚಂದ್ರನಿಂದ ಕೇಳಿ ನನಗೆ ನಿಶ್ಚಯವಾಯಿತು, ನಾನು ನನ್ನ ವೃತ್ತಿ ಯಾವದನ್ನು ಆರಿಸಿಕೊಳ್ಳಬೇಕು ಅಂತ.
  ಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀಪಾದರು ನಿಮ್ಮ ಕುಟುಂಬದ ಮೇಲೆ ತೋರಿದ ಕರುಣೆ ಬಗ್ಗೆ ಕೇಳಿ ನಮ್ಮ ಮನದಲ್ಲಿ ಅವರ ಬಗ್ಗೆ ಭಕ್ತಿ ಇನ್ನು ಹೆಚ್ಚಾಯಿತು. ಅವರು ನಮ್ಮ ಮೇಲು ಕರುಣೆ ತೋರಲಿ ಅಂತ ಪ್ರಾರ್ಥಿಸುತ್ತೇನೆ.
 • Niranjan Kamath,Koteshwar

  8:41 AM , 12/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಅತ್ಯಂತ ಪವಿತ್ರ ವೃತ್ತಿ ಧರ್ಮದ ವಿಚಾರಗಳು. ಧನ್ಯೋಸ್ಮಿ. ನಿಮ್ಮ ತಂದೆ ತಾಯಿಯವರ ವಿಚಾರ ಬಹಳ ಕಾರುಣ್ಯಭರಿತವಾಗಿತ್ತು. ಧನ್ಯೋಸ್ಮಿ.
 • deashmukhseshagirirao,Banglore

  5:56 AM , 12/06/2020

  🙏🏻🙏🏻🙏🏻🙏🏻🙏🏻