Upanyasa - VNU954

ನಾರು ವಸ್ತ್ರದ ಧಾರಣೆ

ಶ್ರೀಮದ್ ರಾಮಾಯಣಮ್ — 72

ಕೈಕೇಯಿ ನೀಡಿದ ನಾರುವಸ್ತ್ರವನ್ನು ಹೇಗೆ ಧರಿಸಬೇಕೆಂದು ಸೀತಾದೇವಿಯರು ತಿಳಿಯದೇ ನಿಲ್ಲುತ್ತಾರೆ. ನಮ್ಮ ಸ್ವಾಮಿ ಈ ಪ್ರಸಂಗದಲ್ಲಿ ಸಮಸ್ತ ಗೃಹಸ್ಥರಿಗೆ ಅದ್ಭುತವಾದ ಪಾಠವನ್ನು ಕಲಿಸುತ್ತಾನೆ. 

ರಜಸ್ವಲೆಯಾದ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು, ಹೆಂಡತಿಯಿಂದ ಹೇಗೆ ಧರ್ಮಾಚರಣೆ ಮಾಡಿಸಬೇಕು ಎಂಬ ವಿಷಯದ ಕುರಿತ ನಿರೂಪಣೆ ಇಲ್ಲಿದೆ. 

ಹೆಂಡತಿಗೆ ಧರ್ಮಾಚರಣೆ ಮಾಡಲು ಅನುಕೂಲ ಮಾಡಿಕೊಡುವ ಗಂಡನಿಗೆ ಮಾತ್ರ ಅವಳಿಗೆ ಧರ್ಮ ಮಾಡು ಎಂದು ಹೇಳುವ ಅಧಿಕಾರವಿರುತ್ತದೆ ಎಂಬ ತತ್ವದ ನಿರೂಪಣೆ ಇಲ್ಲಿದೆ. 

ಹಿಂದಿನ ಕಾಲದ ವಸ್ತ್ರದ ಕುರಿತ ವಿವರ ಇಲ್ಲಿದೆ. 

Play Time: 28:59

Size: 1.37 MB


Download Upanyasa Share to facebook View Comments
5298 Views

Comments

(You can only view comments here. If you want to write a comment please download the app.)
 • Sowmya,Bangalore

  4:27 PM , 04/03/2021

  🙏🙏🙏
 • Chandu,Kaiwara

  11:01 PM, 19/06/2020

  ಪೂಜ್ಯ ಗುರುಗಳ ಪಾದಕಮಲಗಳಿಗೆ ನಮಸ್ಕಾರಗಳು. ಗುರುಗಳೆ ಇಂದಿನ ಪ್ರವಚನ ತುಂಬಾ ತುಂಬಾ ಮಹತ್ವವಾದದ್ದು ಅಂತ ನನ್ ಅಭಿಪ್ರಾಯ ಗುರುಗಳೆ. ಒಂದು ಹೆಣ್ಣಿಗೆ ತಿಂಗಳಿನಲ್ಲಿ ಉಂಟಾಗುವ ಮಾನಸಿಕ ಹಾಗು ಶಾರೀರಿಕ ಯಾತನೆಗೆ ಆ ತಾಯಿ(ಹೆಣ್ಣಿನ) ಕುಟುಂಬದವರು ಹೇಗೆಲ್ಲಾ ಅನುಕೂಲ ಮಾಡಿಕೊಡಬೇಕು ಅಂತ ಸೂಕ್ಷ್ಮವಾಗಿ ತಿಳಿಸಿಕೊಟ್ಟಿರಿ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಇಂತಹ ಕಾರಣಗಳನ್ನು ಹೇಳಿ ರಜಸ್ವಲಾ ಧರ್ಮವನ್ನು ಬಿಟ್ಟಿದ್ದಿವಿ ಅಂತ ಹೇಳುತ್ತಾರೆ. ಈಗಲೂ ಎಚ್ಚೆತ್ತುಕೊಂಡು ವ್ಯವಸ್ಥೆ ಮಾಡಿದರೆ ನಮ್ಮ ಧರ್ಮ ನಮ್ಮ ಆಚಾರವಿಚಾರಗಳನ್ನು ಉಳಿಸಬಹುದು ಅಂತ ಅನಿಸುತ್ತದೆ ಗುರುಗಳೆ. ಇನ್ನೂ ನಾರು ಮಡಿ ನಮ್ಮ ಸೀತಾ ಮಾತೆ ಉಡಲು ತೋರಿದ ವಿಡಂಬನೆ ರಾಮ ದೇವರು ತೋರಿದ ಧರ್ಮ ಆ ದಶರಥನ ಮಡದಿಯರು ರಾಮ ದೇವರಿಗೆ ಹೇಳಿದ ಮಾತುಗಳು ಕಣ್ಣಿರು ಹಾಕುವಂತೆ ಆಯ್ತು ಗುರುಗಳೆ ತುಂಬಾ ಧನ್ಯವಾದಗಳು.
 • B Narayana Rao,Bengaluru

  11:12 AM, 19/06/2020

  🙏🙏🙏🙏
 • Jayashree Karunakar,Bangalore

  10:55 AM, 19/06/2020

  ಇಂತಹ ಉಪನ್ಯಾಸಗಳನ್ನು ಆಲಿಸುತ್ತಾ ಆಲಿಸುತ್ತಾ....
  ನಮಗೆ ದಾಸ ಸಾಹಿತ್ಯದ ಸಾಲುಗಳನ್ನು ಅಥ೯ಮಾಡಿಸುತ್ತಿದೆ....
  ಮೇಲಿಂದ ಮೇಲೆ ಗುನುಗುವಂತೆ ಮಾಡುತ್ತಿದೆ...
  ಶಾಸ್ತ್ರದ ಶ್ರವಣವನ್ನು ಮನಸ್ಸು ಇನ್ನಷ್ಟು ಬೇಡುತ್ತಿದೆ...
  ರಾಮಚಂದ್ರ ಮಾಡುವ ಪ್ರತೀಕಾಯ೯ವೂ ಕೇವಲ ವಿಡಂಬನೆಗಾಗಿ ಮಾತ್ರ ಅನ್ನುವ ನಿಮ್ಮ ಎಚ್ಚರಿಕೆಯ ಮಾತುಗಳು, ಮನಸ್ಸಿಗೆ ಮುದ...
  ಚಳಿಕಾಯಿಸಲು ಹೊತ್ತಿಸಿದ ಬೆಂಕಿಯು ಶಾಖದ ಜೊತೆಗೆ ಬೆಳಕನ್ನೂ ನೀಡುವಂತೆ...
  ಜ್ಞಾನದ ಜೊತೆಗೆ, ಶ್ರವಣದ ಮೂಲಕ ಪುಣ್ಯ ಸಂಪಾದನೆಯ ಮಾಗ೯ವನ್ನೂ ನೀಡುತ್ತಿದ್ದೀರಿ....ನಿಮಗೆ ಮತ್ತೆ ಮತ್ತೆ ನಮಸ್ಕಾರಗಳು ಗುರುಗಳೆ🙏🙏
 • Niranjan Kamath,Koteshwar

  7:27 AM , 19/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಜಗದೀಶನಾಡುವ ಜಗವೇ ನಾಟಕ ರಂಗ, ಬೊಂಬೆಯಾಟವಯ್ಯ ಆ ದೇವನಾಡುವ , ಈ ಎರಡೂ ಪದ್ಯಗಳ ಅರ್ಥ ಮಾಡಿಸುತ್ತದೆ ಎಲ್ಲ ಪ್ರಸಂಗಗಳು. ಈ ಹಿಂದೆ ತಿಳಿಸಿದಂತೆ ಹೇಗೆ ಒಂದು ನಾಟಕ ಅಥವಾ ಸಿನೆಮಾದಲ್ಲಿ ಒಂದೊಂದು ಪಾತ್ರಕ್ಕೆ ಒಬ್ಬೊಬ್ಬರನ್ನು ಆರಿಸಿ ನಟಿಸುತ್ತಾರೆಯೋ, ಹಾಗೆ ಆ ಭಗವಂತ ಆ ಕೈಕಯಿ, ಹಾಗೂ ಇನ್ನಿತರರ ಮೂಲಕ ಏನೆಲ್ಲ ಮಾಡಿಸುತ್ತಾನೆಯೊ ಅವನೇ ಬಲ್ಲ . ಪ್ರತೀ ಪ್ರಸಂಗದಲ್ಲಿ ದೇವರು ಆಡುವ ವಿಡಂಬನೆ ಬಗ್ಗೆ ನಮ್ಮಲ್ಲಿ ಆಗಾಗ ಜಾಗ್ರತೆ ಮೂಡಿಸುವ ನಿಮ್ಮ ಸ್ಪಷ್ಟ ಎಚ್ಚರಿಕೆಗೆ ನತ ಮಸ್ತಕರಾಗಿದ್ದೇವೆ. ನರು ಮಾಡಿಯ ವಿಚಾರ, ಶ್ರೀ ರಾಮನ ಧರ್ಮ ಪರಿಪಾಲನ ಜಾಗ್ರತೆ., ಸ್ತ್ರೀ ಧರ್ಮದಲ್ಲಿ ಬರುವ ರಾಜಸ್ವಲಾ ಧರ್ಮ, ಗಂಡಸರು ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲವೂ ಪರಮ ಪರಮ ಮಂಗಲವಾಗಿ ತಿಳಿಸಿದ್ದೀರಿ. ಧನ್ಯೋಸ್ಮಿ..🙏🚩🚩
 • deashmukhseshagirirao,Banglore

  4:37 AM , 19/06/2020

  🙏🏻🙏🏻🙏🏻🙏🏻🙏🏻🙏🏻