Upanyasa - VNU955

ಶೀಲ ಎಂದರೇನು?

ಶ್ರೀಮದ್ ರಾಮಾಯಣಮ್ — 73

ಸೀತೆ ನಾರುಮಡಿಯನ್ನು ಕೈಕಯಿ ನೀಡಿದಾಗ ವಸಿಷ್ಠರು ಕೈಕಯಿಯನ್ನು ನಿಂದಿಸಿ, ರಾಮ ವನಕ್ಕೆ ಹೋದರೆ ನಾವು ಸೀತೆಯನ್ನೇ ಸಿಂಹಾಸನದಲ್ಲಿ ಕೂಡಿಸುತ್ತೇವೆ ಎಂದು ಹೇಳುವ, ಆದರೆ ಸೀತಾದೇವಿಯರು ಅದನ್ನು ವಿನಯದಿಂದ ನಿರಾಕರಿಸುವ ಘಟನೆಯನ್ನಿಲ್ಲಿ ಕೇಳುತ್ತೇವೆ. 

ಕೈಕೆಯಿಯನ್ನು ವಸಿಷ್ಠರು ಶೀಲವರ್ಜಿತೆ ಎಂದು ಕರೆಯುತ್ತಾರೆ. ಕೈಕಯಿ ಪರಪುರುಷಸಂಪರ್ಕವನ್ನು ಮಾಡಿದವಳಲ್ಲ. ಹಾಗಾದರೆ ಕೈಕಯಿಯನ್ನು ವಸಿಷ್ಠರು ಹೀಗೇಕೆ ಕರೆದರು ಎಂಬ ಪ್ರಶ್ನೆಗೆ ಹಾರೀತರು ಶೀಲ ಎನ್ನುವ ಶಬ್ದಕ್ಕೆ ತಿಳಿಸಿರುವ ಅರ್ಥದ ವಿಸ್ತಾರ ಇಲ್ಲಿದೆ. 

ಶ್ರೀರಾಮ ವನಕ್ಕೆ ಹೋದರೆ, ಸೀತೆಗೆ ಪಟ್ಟಾಭಿಷೇಕ ಮಾಡುತ್ತೇವೆ ಎನ್ನುತ್ತಾರೆ ವಸಿಷ್ಠರು. ಆ ಮಾತಿಗೆ, ಮಾತನಾಡದೇ ಸೀತಾದೇವಿ ಉತ್ತರ ನೀಡುವ ಕ್ರಮವೇ ಅದ್ಭುತ. 

ಶ್ರೀರಾಮಚಂದ್ರ ವನಕ್ಕೆ ಹೊರಟರೆ ಸಮಗ್ರ ಪಶು ಪಕ್ಷಿ ಪ್ರಾಣಿಗಳೂ ಸಹ ಅವನನ್ನು ಹಿಂಬಾಲಿಸುತ್ತವೆ ಎಂದು ವಸಿಷ್ಠರು ತಿಳಿಸುವ ಅಪೂರ್ವ ಪ್ರಮೇಯವನ್ನಿಲ್ಲಿ ಕೇಳುತ್ತೇವೆ. 

ತಂದೆಯ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿ ಶ್ರೀರಾಮಚಂದ್ರ ತಾಯಿ ಕೌಸಲ್ಯೆಗಾಗಿ ಪ್ರಾರ್ಥನೆ ಮಾಡುವ ಮನಕಲಕುವ ಘಟನೆಯನ್ನಿಲ್ಲಿ ಕೇಳುತ್ತೇವೆ. 

Play Time: 38:12

Size: 6.85 MB


Download Upanyasa Share to facebook View Comments
5314 Views

Comments

(You can only view comments here. If you want to write a comment please download the app.)
 • Sowmya,Bangalore

  5:01 PM , 17/04/2021

  🙏🙏🙏
 • Vishwnath MJoshi,Bengaluru

  3:59 AM , 23/06/2020

  ಗುರುಗಳ ಪಾದಗಳಿಗೆ ನಮಸ್ಕಾರ
  ಹಾರಿತ ಮುನಿಗಳ ಬಗ್ಗೆ ತಿಳಿಸಿ ಕೊಡಿ ಎಂದು ನನ್ನ ಮನವಿ .ಇವರ ಉಲ್ಲೆಖ ನರಸಿಂಹ ಪುರಾಣದಲ್ಲಿಯೂ ಇದೆ
  ಧನ್ಯವಾದಗಳು ಗುರುಗಳಿಗೆ
 • Gururaja.S,Bhadravati

  3:25 PM , 22/06/2020

  ಸಂಮಾನ್ಯ ಆಚಾರ್ಯರಿಗೆ ವಂದನೆಗಳು
  ಶ್ರೀಮದ್ರಾಮಯಣ ಉಪನ್ಯಾಸದ ಮೂಲಕ ಎಲ್ಲಾ ಭಗವದ್ಭಕ್ತರಿಗೆ, ಸಜ್ಜನರಿಗೆ , ಭಕ್ತಿಯ ರಸವನ್ನು ಉಣಿಸಿ, ಸರಿಯಾದ ಶಾಸ್ತ್ರದ ಪಥದಲ್ಲಿ ನೆಡೆಸುತ್ತಿದ್ದೀರಿ, ಇಂದಿನ ಕಥಾಮಾಲಿಕೆಯಲ್ಲಿ, ಶೀಲದ ಬಗ್ಗೆ ಪರಿಸ್ಪಷ್ಟವಾಗಿ, ವಿಸ್ತಾರವಾಗಿ ಹೇಳಿದ್ದೀರಿ, ನಾನು ಯಕ್ಷಗಾನ ತಾಳಮದ್ದಳೆಯ, ಜಾಬಾಲಿ-ನಂದಿನಿ ಸಂವಾದದಲ್ಲಿ, ಶ್ರೀ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಹಾಗೂ ಶ್ರೀ ವಾಸುದೇವ ರಂಗ ಭಟ್ಟರು, ಇಂದ್ರನು ಪ್ರಹ್ಲಾದನ ಶೀಲವನ್ನು ಕೇಳುವ ಮಾತನ್ನು ಪ್ರಸ್ತಾಪಿಸಿದ್ದನ್ನು ಕೇಳಿದ್ದೆ, ಆಗ ನನಗೆ ಅರ್ಥವಾಗಿರಲಿಲ್ಲ, ತಮ್ಮ ವಿವರಣೆ ಕೇಳಿ ಅರ್ಥ ಮಾಡಿಕೊಂಡೆ, ಅದಕ್ಕಾಗಿ ತಮಗೆ ಅನಂತ ನಮನಗಳು.
  ಮತ್ತು ಒಂದು, ನಮ್ಮ ಭಾಗ್ಯ ಏನೆಂದರೆ, ನಮ್ಮೆಲ್ಲರಿಗೆ ಉಪನ್ಯಾಸ ಕೇಳುವ ಸಂದರ್ಭದಲ್ಲಿ ನಮಗೇನಾದರೂ ಪ್ರಶ್ನೆ ಉದ್ಭವಿಸಿದರೆ, ಅದಕ್ಕೆ ತಮ್ಮ ಮುಂದಿನ ವಾಕ್ಯಗಳಲ್ಲಿ ಉತ್ತರ ಸಿದ್ಧವಾಗಿರುತ್ತದೆ, ಜನರ ಮನಸ್ಸನ್ನು ಅರ್ಥ ಮಾಡಿಕೊಂಡು,ನೀವೇ ಪ್ರಶ್ನೆ ಮುಂದಿಟ್ಟುಕೊಂಡು ಉತ್ತರ ಸಿದ್ಧಪಡಿಸುತ್ತಿದ್ದೀರಿ, ಇಂತಹ ಭಾಗ್ಯ, ನಮ್ಮೆಲ್ಲರ ಮೇಲೆ ತಮ್ಮ ಕರುಣೆ ಸದಾ ಇರಲಿ, ತಮ್ಮಿಂದ ಶಾಸ್ತ್ರಗಳನ್ನು ಕೇಳುವ ಭಾಗ್ಯ ಯಾವತ್ತೂ ಹೀಗೆ ದೊರಕಲಿ ಎಂದು ಹರಿವಾಯುಗುರುಗಳಲ್ಲಿ ಪ್ರಾರ್ಥಿಸುತ್ತೇನೆ
 • deashmukhseshagirirao,Banglore

  5:51 AM , 22/06/2020

  🙏🏻🙏🏻🙏🏻🙏🏻🙏🏻🙏🏻