24/05/2020
ಕೌಸಲ್ಯಾ ಸುಮಿತ್ರೆಯರ ಉಪದೇಶ ಶ್ರೀಮದ್ ರಾಮಾಯಣಮ್ — 74 ದುಷ್ಟಸ್ತ್ರೀ ಸಜ್ಜನಸ್ತ್ರೀಯರ ಸ್ವಭಾವಗಳನ್ನು ತಿಳಿಸುತ್ತ ಕೌಸಲ್ಯಾದೇವಿ ಸೀತಾದೇವಿಗೆ ಮಾಡಿದ ಉಪದೇಶ, ರಾಮ-ಸೀತೆಯರ ಸೇವೆಯನ್ನು ಮಾಡಲು ಹೊರಟ ಲಕ್ಷ್ಮಣನನ್ನು ತುಂಬು ಹೃದಯದಿಂದ ಹರಸುವ ಸುಮಿತ್ರೆಯ ಅದ್ಭುತ ಮಾತುಗಳನ್ನಿಲ್ಲಿ ಕೇಳುತ್ತೇವೆ. ದಶರಥ ಮಹಾರಾಜರು ಆಭರಣಗಳನ್ನು ತರಿಸಿ ಸೀತೆಗೆ ಧರಿಸಲು ಹೇಳುತ್ತಾರೆ. ಸೀತಾದೇವಿಯರು ಧರಿಸಿ ಶೋಭಾಯಮಾನವಾಗಿ ಕಂಡರು ಎಂದು ವಾಲ್ಮೀಕಿ ಋಷಿಗಳು ತಿಳಿಸುತ್ತಾರೆ. ಏನಿದು ವಿಚಿತ್ರ, ಈ ಸಂಕಟದ ಪರಿಸ್ಥಿತಿಯಲ್ಲಿ ಈ ವರ್ಣನೆ ಆವಶ್ಯಕವೇ ಎಂಬ ಪ್ರಶ್ನೆಗೆ ಇಲ್ಲಿ ಅದ್ಭುತ ಉತ್ತರವಿದೆ. मितं ददाति हि पिता मितं माता मितं सुतः | अमितस्य हि दातारं भर्तारं का न पूजयेत् || २६|| ಎಂಬ ಸೀತಾದೇವಿ ತಿಳಿಸಿದ ಅದ್ಭುತ ಧರ್ಮದ ವಿವರಣೆ ಇಲ್ಲಿದೆ.
Play Time: 38:54
Size: 1.37 MB