Upanyasa - VNU959

ಸುಮಿತ್ರಾದೇವಿಯ ಹಿತೋಪದೇಶ

ಶ್ರೀಮದ್ ರಾಮಾಯಣಮ್ — 77

ದುಃಖದಿಂದ ಮನುಷ್ಯ ಕುಗ್ಗಿಹೋಗಬಾರದು, ದುಃಖ ಪಡಬಾರದ ವಿಷಯಕ್ಕೆ ದುಃಖ ಪಡಬಾರದು ಎಂಬ ಸನಾತನ ಗೀತಾತತ್ವವನ್ನು ಸುಮಿತ್ರಾದೇವಿಯರು ಸ್ವಯಂ ಆಚರಿಸಿ ಉಪದೇಶಿಸುವ ಅದ್ಭುತ ಭಾಗವಿದು. 

ರಾಮ ವನಕ್ಕೆ ಹೋದ ಎಂದು ದುಃಖ ಪಡಬಾರದು, 
ರಾಮ ವನಕ್ಕೆ ಹೋದ ಎಂದು ಹೆಮ್ಮೆ ಪಡಬೇಕು. ಕಾರಣ, 
ಯಾರಿಗೂ ತೊರೆಯಲಿಕ್ಕಾದ ರಾಜ್ಯದ ಲೋಭಕ್ಕೊಳಗಾಗದೆ 
ತಂದೆಯ ಮಾತನ್ನು ಉಳಿಸಲು ಹೊರಟಿದ್ದಾನೆ. 

ರಾಕ್ಷಸರಿರುವ ಕಾಡಿಗೆ ರಾಮ ಹೋದ ಎಂದು ಭಯ ಬೀಳಬೇಡ, 
ಕಾಡಿಗೆ ರಾಮ ಹೊರಟದ್ದಕ್ಕೆ ರಾಕ್ಷಸರಿಗೆ ಭಯವುಂಟಾಗಬೇಕು. 

ರಾಮನ ಜೊತೆ ಲಕ್ಷ್ಮಣ ಇದ್ದಾನೆ, 
ರಾಮ ಸೀತೆಯರಿಗೆ ವನದ ಕಷ್ಟ ಉಂಟಾಗದಂತೆ 
ಸೇವೆ ಮಾಡುತ್ತಾನೆ

ರಾಮ ಎಲ್ಲರಂತೆ ಪ್ರಾಕೃತ ಪುರುಷನಲ್ಲ, 
ಪರಮಪುರುಷ ಶ್ರೀಮನ್ನಾರಾಯಣ
ಅದನ್ನು ಮರೆಯಬೇಡ. 

ಸಕಲ ಸೌಭಾಗ್ಯದೇವತೆಯಾದ ಲಕ್ಷ್ಮೀದೇವಿಯೇ
ಸೀತೆಯಾಗ ಯಾರ ಸೇವೆಗೆ ಜೊತೆ ಹೊರಟಿದ್ದಾರೆಯೋ
ಆ ರಾಮನಿಗೆ ದುಃಖವಿಲ್ಲ

ಯಾವ ಸ್ವಾಮಿ ಸಕಲ ಪದಾರ್ಥಗಳ ಒಳಗಿದ್ದಾನೆಯೋ
ಆ ರಾಮನಿಗೆ ಕಾಡಿನ ವಾಸದಿಂದ ದುಃಖವಿಲ್ಲ

ಕೌಸಲ್ಯಾ-ಸುಮಿತ್ರಾ ಎಂಬ ಶಬ್ದಗಳ ಅರ್ಥಾನುಸಂಧಾನದೊಂದಿಗೆ ಆ ತಾಯಂದಿರ ಗುಣಗಳ ಚಿಂತನೆ ಇಲ್ಲಿದೆ. 

“ನಿರೂಪ್ಯಾಪಿ ಕ್ಲೇಶಂ ಯಃ ಪರಿರಕ್ಷತಿ ಸ ಮಿತ್ರಮ್” ಯಾವುದು ಕ್ಲೇಶ, ಯಾವುದು ಕ್ಲೇಶವಲ್ಲ ಎಂದು ತಿಳಿಸಿ ಕ್ಲೇಶದ ಕಾಲದಲ್ಲಿ ಜೊತೆಯಲ್ಲಿದ್ದು ಕಾಪಾಡುವವನು ಮಿತ್ರ ಎಂದು ಆಚಾರ್ಯರು ತಿಳಿಸಿರುವ ಮಿತ್ರಶಬ್ದದ ಅರ್ಥಚಿಂತನೆ ಇಲ್ಲಿದೆ. Play Time: 59:03

Size: 1.37 MB


Download Upanyasa Share to facebook View Comments
4382 Views

Comments

(You can only view comments here. If you want to write a comment please download the app.)
 • Sowmya,Bangalore

  12:28 PM, 14/05/2021

  🙏🙏🙏
 • Manukumara A,Anthanahalli

  8:53 PM , 26/06/2020

  🙏 ಗುರುಗಳಿಗೆ ನಮಸ್ಕಾರಗಳು ಗುರುಗಳೇ ಸುಮಿತ್ರಾ ದೇವಿಯರು ಮಕ್ಕಳು ಆಸ್ತಿ ಗಾಗಿ ತಂದೆ ಯನ್ನೇ ಕೊಲ್ಲುತ್ತಾರೆ ಅಂತಹುದರಲ್ಲಿ ನಮ್ಮ ರಾಮಚಂದ್ರ ನು ತಂದೆಯ ಮಾತಿನಂತೆ ಈ ಅಯೋಧ್ಯೆ ಯನ್ನೆ ಬಿಟ್ಟು ಹೋಗಿದ್ದಾನೆ ನಾವು ಖುಷಿ ಪಡಬೇಕಾದ ವಿಷಯ ಅಕ್ಕ ಎಂದು
    ಕೌಶಲ್ಯ ದೇವೀಯರಿಗೆ ಹೇಳಿದರು ಗುರುಗಳೇ.
  ಸುಮಿತ್ರಾ ದೇವಿಯರು ಹೇಳಿದ ಮಾತು ಮುಂದೆ ಮಕ್ಕಳು ಆಸ್ತಿ ಗಾಗಿ ತಂದೆ ಯನ್ನೇ ಕೋಲ್ಲುತ್ತಾರೆ ಅಂತ ಹೇಳಿದ್ದೋ ಅಥವಾ ರಾಮಾಯಣ ಕಾಲದಲ್ಲಿ ಆಸ್ತಿ ಗಾಗಿ ಹೋಡೆದಾಡುತ್ತಿದ್ದಾರೇ ಅಂತ ಹೇಳಿದ್ದೋ ದಯವಿಟ್ಟು ತಿಳಿಸಿಕೊಡಿ ಗುರುಗಳೇ 🙏

  Vishnudasa Nagendracharya

  ನಾವು ಹೇಗೆ ಕಲಿಯುಗದಲ್ಲಿ ತ್ರೇತಾಯುಗದ ರಾಮಾಯಣದ ಕಥೆಯನ್ನು ಕೇಳುತ್ತೇವೆ, ಹಾಗೆ, ತ್ರೇತಾಯುಗದವರೂ ಹಿಂದಿನ ಕಲಿಯುಗದ ಜನ ಹೀಗಿದ್ದರು, ಮುಂದಿನ ಕಲಿಯುಗದ ಜನ ಹೀಗಿರುತ್ತಾರೆ ಎಂದು ಕೇಳುತ್ತಾರೆ. ಒಟ್ಟಾರೆ ಕಲಿಯ ಆವೇಶಕ್ಕೊಳಗಾದ ಜನರ ಪರಿಸ್ಥಿತಿಯನ್ನು ಸುಮಿತ್ರಾದೇವಿಯರು ಹೇಳುತ್ತಿರುವದು. 
  
  ತ್ರೇತಾಯುಗದಲ್ಲಿ ಅಂತಹ ಜನರಿರಲಿಲ್ಲ. 
 • DESHPANDE P N,BANGALORE

  2:42 PM , 26/06/2020

  S.Namaskargalu. Anugrahvirali.
 • Niranjan Kamath,Koteshwar

  1:53 PM , 26/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಪ್ರತೀ ಉಪನ್ಯಾಸ  ಕೇಳಿದ ನಂತರ ಸ್ವಲ್ಪ ಹೊತ್ತು ಮೂಕವಿಸ್ಮಿತರಾಗಿ ಇರುತ್ತೇವೆ.  ಸುಮಿತ್ರಾ ದೇವಿಯರ ವಿಚಾರಗಳು ಪರಮಾದ್ಭುತ. ಧನ್ಯೋಸ್ಮಿ.
 • deashmukhseshagirirao,Banglore

  4:32 AM , 26/06/2020

  🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻