24/05/2020
ಶ್ರೀಮದ್ ರಾಮಾಯಣಮ್ — 78 ಶ್ರೀರಾಮಚಂದ್ರ ವನವಾಸದ ನಿರ್ಣಯ ಮಾಡಿದ ತಕ್ಷಣ ಸಮಗ್ರ ಬ್ರಾಹ್ಮಣರು ಆತುರಾತುರವಾಗಿ ತಮ್ಮತಮ್ಮ ಮನೆಗಳಿಗೆ ಹೋಗಿ ಬಲಭುಜದ ಮೇಲೆ ಅಗ್ನಿಹೋತ್ರವನ್ನು, ಎಡಗೈಯಲ್ಲಿ ಅಗ್ನಿಹೋತ್ರಕ್ಕೆ ಬೇಕಾದ ಪದಾರ್ಥಗಳನ್ನು, ತಮ್ಮ ಮಕ್ಕಳ ತಲೆಯ ಮೇಲೆ ರಾಮನಿಗೆ ನೀಡಬೇಕು ಎಂದು ವಾಜಪೇಯದ ಶ್ವೇತಚ್ಛತ್ರವನ್ನು ಹೊತ್ತು ಬರುತ್ತಾರೆ. ಈ ಬ್ರಾಹ್ಮಣರು ಮನೆಗೆ ಹೋಗಿ ಬರುವಷ್ಟರಲ್ಲಿ ಶ್ರೀರಾಮ ಸಾಕಷ್ಟು ದೂರ ರಥದಲ್ಲಿ ಕ್ರಮಿಸಿರುತ್ತಾನೆ. ಏದುಸಿರು ಬಿಡುತ್ತ ಓಡಿ ಬರುತ್ತಿರುವ ಬ್ರಾಹ್ಮಣರನ್ನು ಕಂಡು ಸ್ವಾಮಿ ರಥದಿಂದ ಕೆಳಗಿಳಿಯುತ್ತಾನೆ. ನಾವೇನೋ ವನವಾಸದ ನಿರ್ಣಯ ಮಾಡಿದ್ದೇವೆ, ಆದರೆ ಈ ಸಸ್ಯ-ವೃಕ್ಷಗಳ ನೋವನ್ನು ಕಂಡು ಹಿಂತಿರುಗಿ ಬಾ ಎಂದು ಆ ರಸ್ತೆಯಲ್ಲಿಯೇ ಶ್ರೀರಾಮನಿಗೆ ನಮಸ್ಕಾರ ಮಾಡಿ ಪ್ರಾರ್ಥಿಸುತ್ತಾರೆ. ಬ್ರಾಹ್ಮಣರು ಕ್ಷತ್ರಿಯರಿಗೆ ನಮಸ್ಕಾರ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲಿದೆ. ಅಗ್ನಿಹೋತ್ರದ ಕುರಿತ ವಿವರದೊಂದಿಗೆ. ಮನೆಯಲ್ಲಿರುವ ತಮ್ಮ ಪತ್ನಿಯರನ್ನು ಅವರ ಪಾತಿವ್ರತ್ಯವೇ ರಕ್ಷಣೆ ಮಾಡುತ್ತದೆ ಎಂಬ ಆ ಬ್ರಾಹ್ಮಣರ ಮಾತು ಅಂದಿನ ಜನರ ಎತ್ತರವನ್ನು ನಮಗೆ ಪರಿಚಯಿಸುತ್ತದೆ.
Play Time: 37:31
Size: 1.37 MB