Upanyasa - VNU962

ಅಯೋಧ್ಯೆಗೆ ಗೌರವ

ಶ್ರೀಮದ್ ರಾಮಾಯಣಮ್ — 80

ನಾವು ವಾಸ ಮಾಡುವ ಭೂಮಿಗೆ, ಮನೆಗೆ ಏಕೆ ಗೌರವ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ, ಶ್ರೀಮನ್ ಮಧ್ವಾನುಜಾಚಾರ್ಯರ ದೃಷ್ಟಾಂತದ ವಿವರಣೆಯೊಂದಿಗೆ. 

ಕೋಸಲ, ಅಯೋಧ್ಯಾ ಸರಯೂ ನದಿಗಳ ಕುರಿತು ಶ್ರೀರಾಮನಿಗಿದ್ದ ಪ್ರೇಮವನ್ನು ವ್ಯಕ್ತಪಡಿಸುತ್ತ ಸುಮಂತ್ರನೊಂದಿಗೆ ಮಾತನಾಡುವ ಕ್ರಮದ ವಿವರಣೆ ಇಲ್ಲಿದೆ. 

ಸತ್ಯಪರಿಪಾಲನೆಗಾಗಿ ವನಕ್ಕೆ ಹೊರಟರೂ, ಶ್ರೀರಾಮನಿಗೂ ಅಯೋಧ್ಯೆಯ ಕುರಿತ ಸೆಳೆತವಿದೆ. ತನ್ನ ಆ ಮನಸ್ಸಿನ ಭಾವವನ್ನು ಸುಮಂತ್ರನ ಮುಂದೆ ತೆರೆದಿಡುವ ಭಾಗವನ್ನಿಲ್ಲಿ ಕೇಳುತ್ತೇವೆ. ಯಾವಾಗ ಅಯೋಧ್ಯೆಗೆ ಹಿಂತಿರುಗುತ್ತೇನೆ ಎಂಬ ರಾಮನ ಅಯೋಧ್ಯಾಪ್ರೇಮದ ಕುರಿತು ನಾವಿಲ್ಲಿ ಕೇಳುತ್ತೇವೆ. 

ಶ್ರೀರಾಮ ಅಯೋಧ್ಯೆಯನ್ನು ತೊರೆದು ಹೊರಟದ್ದಿಕ್ಕೆ ಎಲ್ಲರಿಗೂ ದುಃಖವಾಗಿದೆ ಸತ್ಯ, ಆದರೆ ರಾಮನಿಗೆ ದುಃಖವಾಗಲಿಲ್ಲವೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ನಮ್ಮ ಸುಖ ದುಃಖಗಳನ್ನು ಹೇಗೆ ಅಭಿವ್ಯಕ್ತಗೊಳಿಸಬೇಕೆಂಬ ಪಾಠದೊಂದಿಗೆ. 

ಎಲ್ಲ ಸಂದರ್ಭದಲ್ಲಿಯೂ ನಮ್ಮ ಪ್ರತಿಕ್ರಿಯೆ ಆವಶ್ಯಕವಿರುವದಿಲ್ಲ. ಕೇವಲ ಮತ್ತೊಬ್ಬರ ಮಾತನ್ನು ಕೇಳುವದೇ ಸರಿಯಾಗಿರುತ್ತದೆ ಎನ್ನುವದನ್ನು ಸುಮಂತ್ರರು ಕಲಿಸುತ್ತಾರೆ. 

Play Time: 33:03

Size: 1.37 MB


Download Upanyasa Share to facebook View Comments
4636 Views

Comments

(You can only view comments here. If you want to write a comment please download the app.)
 • Sowmya,Bangalore

  7:09 PM , 22/05/2021

  🙏🙏🙏
 • Jyothi Gayathri,Harihar

  9:40 AM , 29/10/2020

  🙏🙏🙏🙏🙏
 • Santosh Patil,Gulbarga

  8:31 PM , 01/07/2020

  Thanks gurugale......
 • deashmukhseshagirirao,Banglore

  4:35 AM , 01/07/2020

  🙏🏻🙏🏻🙏🏻🙏🏻🙏🏻🙏🏻🙏🏻