24/05/2020
ಶ್ರೀಮದ್ ರಾಮಾಯಣಮ್ — 81 ಕಚ್ಚೆ ಸೀರೆ ಪಂಚೆ ಉಟ್ಟರೇ ದೇವರು ಒಲಿಯುತ್ತಾನಾ, ಕೃಷ್ಣ ಅರ್ಜುನರೇನು ಮಡಿ ಉಟ್ಟಿಕೊಂಡು ಭಗವದ್ಗಿತೆಯನ್ನು ನೀಡಿದರೇ ಎನ್ನುವ ಆಧುನಿಕರಿಗೆ ನಮ್ಮ ಸ್ವಾಮಿ ಶ್ರೀರಾಮ ತನ್ನ ಚರ್ಯೆಯಿಂದಲೇ ನೀಡಿರುವ ಉತ್ತರದ ವಿವರಣೆಯೊಂದಿಗೆ ಪ್ರಾಚೀನಕಾಲದಲ್ಲಿದ್ದ ದೇಶಗಳ ವಿಭಾಗ, ದೇಶ ಎಂಬ ಶಬ್ದದ ಅರ್ಥ. ಗಂಗೆಯ ತೀರದ ಪಾವಿತ್ರ್ಯದ ಮಾಹಾತ್ಮ್ಯದ ವೈಭವದ ಚಿಂತನೆ. ವಾಲ್ಮೀಕಿ ಋಷಿಗಳು ಕೇವಲ ಆಲಂಕಾರಿಕವಾಗಿ ವರ್ಣನೆ ಮಾಡುವರಲ್ಲ, ದೃಷ್ಟಾಂತ ವರ್ಣನಗೆಳ ಮುಖಾಂತರವೇ ಮಹತ್ತ್ವದ ತತ್ವಗಳನ್ನು ತಿಳಿಸುತ್ತಾರೆ ಎಂಬ ಪ್ರತಿಪಾದನೆ ಇಲ್ಲಿದೆ. ಗಂಗೆಯ ತೀರದಲ್ಲಿ ಒಂದು ಇಂಗುದೀಮರದ ಕೆಳಗೆ ಶ್ರೀರಾಮದೇವರು ಆ ರಾತ್ರಿಯನ್ನು ಕಳೆಯುತ್ತಾರೆ. ಏನದು ಇಂಗುದೀವೃಕ್ಷ, ದೇವರೇಕೆ ಈ ವೃಕ್ಷವನ್ನು ಆರಿಸಿಕೊಂಡ ಎಂಬ ಪ್ರಶ್ನೆಗೆ ಉತ್ತರವಿದೆ.
Play Time: 32:01
Size: 1.37 MB