Upanyasa - VNU964

ಸುಮಂತ್ರರ ಭಕ್ತಿ

ಶ್ರೀಮದ್ ರಾಮಾಯಣಮ್ — 83

ನಾನು ಅಯೋಧ್ಯೆಗೆ ಹಿಂತಿರುಗುವದಿಲ್ಲ, ನನ್ನನ್ನೂ ಈ ಕುದುರೆಗಳನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹೋಗು ಎಂದು ಸುಮಂತ್ರರು ಪ್ರಾರ್ಥನೆ ಮಾಡಿದರೆ, ಅವರು ಹಿಂತಿರುಗಬೇಕಾದ ಅನಿವಾರ್ಯತೆಯನ್ನು ನಮ್ಮ ಸ್ವಾಮಿ ಮನಗಾಣಿಸುತ್ತಾನೆ. 

ಶ್ರೀರಾಮ ರಾಜನಲ್ಲ ಎಂದು ಸುಮಂತ್ರರು ಒಂದು ಕ್ಷಣಕ್ಕೂ ಆಲೋಚಿಸಿರುವದಿಲ್ಲ. ವನದ ಮಧ್ಯದಲ್ಲಿಯೂ ರಾಮನೇ ರಾಜ ಎಂಬ ಅವರ ಭಾವ ಅದ್ಭುತವಾದದ್ದು. 

ಶ್ರೀರಾಮ ದೇವರು ಎನ್ನುವ ಕಾರಣಕ್ಕೆ ಭಕ್ತಿಯನ್ನು, ರಾಜ ಎಂಬ ಕಾರಣಕ್ಕೆ ಗೌರವವನ್ನು, ತಾನು ಆಡಿಸಿ ಬೆಳೆಸಿದ ಮಗು ಎಂಬ ಕಾರಣಕ್ಕೆ ವಾತ್ಸಲ್ಯವನ್ನು ಸುಮಂತ್ರರು ತೋರುತ್ತಿದ್ದರು. 

 ಸುಮಂತ್ರರ ಭಕ್ತಿ, ರಾಮನ ಭಕ್ತವಾತ್ಸಲ್ಯಗಳನ್ನು ವಾಲ್ಮೀಕಿಮಹರ್ಷಿಗಳು ಚಿತ್ರಿಸುವ ಕ್ರಮ ನಮ್ಮ ಕಣ್ಣಾಲಿಗಳಲ್ಲಿ ಅಪ್ರಯತ್ನವಾಗಿ ನೀರನ್ನು ತರಿಸುತ್ತವೆ, ನಮ್ಮ ಮನಸ್ಸಿನ ಕಶ್ಮಲವನ್ನು ದೂರಮಾಡಿಬಿಡುತ್ತವೆ. 

ಆಲದ ಮರದ ಹಾಲಿನಿಂದ ತಮ್ಮ ಕೂದಲನ್ನು ಜಟೆ ಮಾಡಿ, ಕಟ್ಟಿಕೊಂಡು ನರನಾರಾಯಣರಂತೆ ರಾಮ ಲಕ್ಷ್ಮಣರು ಕಂಗೊಳಿಸುವ ವಿವರವನ್ನಿಲ್ಲಿ ಕೇಳುತ್ತೇವೆ. 

Play Time: 42:22

Size: 1.37 MB


Download Upanyasa Share to facebook View Comments
3992 Views

Comments

(You can only view comments here. If you want to write a comment please download the app.)
 • Sowmya,Bangalore

  6:51 PM , 24/05/2021

  🙏🙏🙏
 • Santosh Patil,Gulbarga

  11:15 PM, 04/07/2020

  Thanks Gurugale 💐🙏💐
 • Narahari Kambaluru,Bengaluru

  8:31 PM , 04/07/2020

  ಆಚಾರ್ಯಾಯ ನಮೋ ನಮಃ 🙏🙏
  ಋಷಿಗಳು ಜಟೆಯನ್ನೇಕೆ ಕಟ್ಟುತ್ತಾರೆ ಆಚಾರ್ಯರೆ? ಅದರಿಂದ ಅನಾನುಕೂಲವೇ ಹೆಚ್ಚು ಅಲ್ಲವೆ? ಸ್ನಾನ ಮಾಡುವಾಗ ಬೇಗ ತೊಯ್ಯುವದೂ ಇಲ್ಲ ಮತ್ತು ಬೇಗ ಒಣಗುವದೂ ಇಲ್ಲ.
  ಈ ಜಟೆಯನ್ನು ಕಟ್ಟುವದರಿಂದ ಕೂದಲು ಬೆಳಯುವದು ನಿಲ್ಲುತ್ತದೆಯೇ?
 • DESHPANDE P N,BANGALORE

  2:23 PM , 04/07/2020

  S.Namaskargalu. Anugrahvirali
 • Geetha,Bangalore

  2:13 PM , 03/07/2020

  ಗುರುಗಳಿಗೆ ನಮಸ್ಕಾರ
  
  ಇಂದಿನ ಉಪನ್ಯಾಸದಲ್ಲಿ ಗುಹನ್ ಬಗ್ಗೆ ವಿವರ ಇರುತ್ತದೆ ಅನಂತ ಅನಿಸಿತ್ತು. ಅಥವಾ ಇದು ಮುಂದೆ ಹೇಳುತ್ತೀರಾ?
 • Niranjan Kamath,Koteshwar

  8:45 AM , 03/07/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಪ್ರತಿಒಂದು ಉಪನ್ಯಾಸವೂ ಪರಮ ಪರಮ ಮಂಗಲ ವಾಗಿ ಮೂಡಿಬರುತ್ತಿದೆ.. ಯಾವ ರೀತಿಯಲ್ಲಿ ಅದರ ಬಗ್ಗೆ ನಮ್ಮ ಭಾವನೆ ವ್ಯಕ್ತ ಪಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಭಾವಪೂರ್ಣವಾಗಿ ಮನಸ್ಸು ತುಂಬಿ ಹೋಗಿರುವ ಕಾರಣ ಏನೂ ತೋಚದಂತಾಗಿದೆ. ಎಲ್ಲಾ ಪ್ರಸಂಗದ ಪ್ರಸ್ತಾವನೆ ಮಾಡುವಂತಾಗಿದೆ .ಧನ್ಯೋಸ್ಮಿ ಧನ್ಯೋಸ್ಮಿ. 🚩🙏
 • deashmukhseshagirirao,Banglore

  4:48 AM , 03/07/2020

  🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻