Upanyasa - VNU965

ಗುಹನ ಭಕ್ತಿ ಲಕ್ಷ್ಮಣನ ಅಂತರಾಳ

ಶ್ರೀಮದ್ ರಾಮಾಯಣಮ್ — 83

ಗಂಗಾನದಿಯ ತೀರದ ಶೃಂಗವೇರಪುರವನ್ನು ರಾಮ ಸೀತಾ ಲಕ್ಷ್ಮಣ ಸುಮಂತ್ರರು ತುಲುಪಿದಾಗ ನಿಷಾದರಾಜ ಗುಹ ಬಂದು ಭಕ್ತಿಯಿಂದ ಭೋಜನ ಶಯನಗಳನ್ನು ಸಮರ್ಪಿಸಿದ್ದು, ಕುದುರೆಗಳಿಗೆ ಮಾತ್ರ ಆಹಾರ ಸ್ವೀಕರಿಸಿ ಉಳಿದದ್ದನ್ನು ರಾಮ ಪ್ರೀತಿಯಿಂದಲೇ ನಿರಾಕರಿಸಿದ್ದು, ರಾತ್ರಿ ತನ್ನ ಎಡಗೈ ಮೇಲೆ ಸೀತೆಯನ್ನು ಮಲಗಿಸಿಕೊಂಡು ಮಲಗಿದ ರಾಮಚಂದ್ರನ ಬಳಿಯಲ್ಲಿ ನಿಂತ ಲಕ್ಷ್ಮಣರು ಗೆಳೆಯ ಗುಹನ ಮುಂದೆ ತಮ್ಮ ಅಂತರಂಗದ ನುಡಿಗಳನ್ನಾಡಿದ್ದು, ಈ ಎಲ್ಲವನ್ನೂ ಇಲ್ಲಿ ಕೇಳುತ್ತೇವೆ. 

ಶೂದ್ರರಿಗೆ ಉತ್ತಮವರ್ಣದವರು ಗೌರವ ಕೊಡುತ್ತಿರಲಿಲ್ಲ, ಹೀನವರ್ಣದವರನ್ನು ತುಳಿಯಲಾಗಿತ್ತು ಎನ್ನುವದು ಆಧುನಿಕರ ವಾದ. ಬೇಡರ ಜಾತಿಯ ಗುಹರು ರಾಮನನ್ನು ಕಾಣಲು ಬಂದಾಗ ಸ್ವಯಂ ರಾಮಚಂದ್ರ ಕುಳಿತಲ್ಲಿಂದ ಎದ್ದು ಬಂದು ಸ್ವಾಗತಿಸುವ, ಅಪ್ಪಿಕೊಳ್ಳುವ ಘಟನೆಯನ್ನು ರಾಮಾಯಣ ದಾಖಲಿಸುತ್ತದೆ. 

ಮಹಾಸದ್ಗುಣಶಾಲಿಯಾದ ವಿಷ್ಣುಭಕ್ತನಾದ ಶೂದ್ರ, ಅಥವಾ ಚಂಡಾಲನಿಗೆ ನಮಸ್ಕಾರ ಹೊರತು ಪಡಿಸಿ ಉಳಿದೆಲ್ಲ ರೀತಿಯ ಗೌರವ ಸಲ್ಲಿಸಬೇಕು, ಅಷ್ಟೇ ಅಲ್ಲ ಅಂತಹ ವಿಷ್ಣುಭಕ್ತ ಶೂದ್ರ, ಚಂಡಾಲರು ಗುಣವಿಲ್ಲದ ಭಕ್ತಿಯಿಲ್ಲದ ಬ್ರಾಹ್ಮಣನಿಗಿಂತ ಶ್ರೇಷ್ಠ ಎಂಬ ತತ್ವವನ್ನು ಆಚಾರ್ಯರ ಮತ್ತು ಭಾಗವತದ ವಚನಗಳಿಂದ ಇಲ್ಲಿ ಪ್ರತಿಪಾದಿಸಲಾಗಿದೆ. Play Time: 47:45

Size: 1.37 MB


Download Upanyasa Share to facebook View Comments
4324 Views

Comments

(You can only view comments here. If you want to write a comment please download the app.)
 • Sowmya,Bangalore

  5:19 PM , 27/05/2021

  🙏🙏🙏
 • Jyothi Gayathri,Harihar

  5:59 AM , 14/05/2021

  🙏🙏🙏🙏🙏
 • Roopa,Bengaluru

  9:37 PM , 09/07/2020

  ಕ್ಷಮಿಸಿ, ಮೂರು ಬಾರಿ ಪ್ರಶ್ನೆ submit ಆಗಿಬಿಟ್ಟಿದೆ.
 • Roopa,Bengaluru

  9:36 PM , 09/07/2020

  ಶ್ರೀ ಗುರುಭ್ಯೋ ನಮಃ 
  ಗುರುಗಳೇ, ಕೆಲವು ಪ್ರಶ್ನೆಗಳು : 
  1. ಬೇಡರು ಯಾವ ವರ್ಣಕ್ಕೆ ಸೇರಿದವರು ? 
  2. ಅವರು ಏನು ಕೆಲಸ ಮಾಡುತ್ತಾರೆ ಮತ್ತು ಅವರ ಸಾಧನೆ ಹೇಗೆ ? 
  3. ಗುಹ ಕಾಡಿನಲ್ಲಿ ಯಾರಿಗೆ ರಾಜನಾಗಿದ್ದ ?
 • Roopa,Bengaluru

  9:36 PM , 09/07/2020

  ಶ್ರೀ ಗುರುಭ್ಯೋ ನಮಃ 
  ಗುರುಗಳೇ, ಕೆಲವು ಪ್ರಶ್ನೆಗಳು : 
  1. ಬೇಡರು ಯಾವ ವರ್ಣಕ್ಕೆ ಸೇರಿದವರು ? 
  2. ಅವರು ಏನು ಕೆಲಸ ಮಾಡುತ್ತಾರೆ ಮತ್ತು ಅವರ ಸಾಧನೆ ಹೇಗೆ ? 
  3. ಗುಹ ಕಾಡಿನಲ್ಲಿ ಯಾರಿಗೆ ರಾಜನಾಗಿದ್ದ ?
 • Roopa,Bengaluru

  9:36 PM , 09/07/2020

  ಶ್ರೀ ಗುರುಭ್ಯೋ ನಮಃ 
  ಗುರುಗಳೇ, ಕೆಲವು ಪ್ರಶ್ನೆಗಳು : 
  1. ಬೇಡರು ಯಾವ ವರ್ಣಕ್ಕೆ ಸೇರಿದವರು ? 
  2. ಅವರು ಏನು ಕೆಲಸ ಮಾಡುತ್ತಾರೆ ಮತ್ತು ಅವರ ಸಾಧನೆ ಹೇಗೆ ? 
  3. ಗುಹ ಕಾಡಿನಲ್ಲಿ ಯಾರಿಗೆ ರಾಜನಾಗಿದ್ದ ?
 • DESHPANDE P N,BANGALORE

  2:27 PM , 06/07/2020

  S.Namaskargalu. Anugrahvirali
 • deashmukhseshagirirao,Banglore

  4:02 AM , 06/07/2020

  🙏🏻🙏🏻🙏🏻🙏🏻🙏🏻🙏🏻