24/05/2020
ಶ್ರೀಮದ್ ರಾಮಾಯಣಮ್ — 86 ಏಕಾದಶಿಯ ಉಪವಾಸ ಮಾಡಬೇಕು ಎಂದಾಗ, ಮಗನನ್ನು ಶಾಸ್ತ್ರಾಧ್ಯಯನಕ್ಕೆ ತೊಡಗಿಸಬೇಕು ಎಂದಾಗ ಮನುಷ್ಯನ ಮನಸ್ಸು ಹತ್ತಾರು ಕಳ್ಳದಾರಿಗಳನ್ನು ಹುಡುಕಿ ಏನೇನೋ ಕಾರಣ ನೀಡುತ್ತಿರುತ್ತದೆ. ಅವನ್ನು ಹೇಗೆ ಎದುರಿಸಬೇಕು ಎಂಬ ರಹಸ್ಯ ಈ ರಾಮಲಕ್ಷ್ಮಣ ಸಂವಾದದಲ್ಲಿ ಅಡಗಿದೆ. ಭಕ್ತಿ ಹೇಗಿರಬೇಕು ಎಂಬ ಪ್ರಶ್ನೆಗೆ ಟೀಕಾಕೃತ್ಪಾದರು “ಅಂತರಾಯಸಹಸ್ರೇಣಾಪಿ ಅಪ್ರತಿಬದ್ಧಃ” ಎಂದು ಉತ್ತರ ನೀಡುತ್ತಾರೆ. ಯಾವುದೋ ಒಂದು ವಿಘ್ನ ಬಂದಾಕ್ಷಣ ಕಳೆದು ಹೋಗುವ ಭಕ್ತಿ ಭಕ್ತಿಯೇ ಅಲ್ಲ. ಸಾವಿರಾರು ವಿಘ್ನಗಳಿದ್ದರೂ ದೇವರಲ್ಲಿ ಭಕ್ತಿ ದೃಢವಾಗಿದ್ದರೆ ಮಾತ್ರ ಅದು ಜ್ಞಾನ ಮೋಕ್ಷಗಳಿಗೆ ಕಾರಣವಾಗುತ್ತದೆ. ಹೀಗಾಗಿ ನಮ್ಮ ಭಕ್ತಿ ದೃಢವೋ ಟೊಳ್ಳೊ ಎಂದು ಭಗವಂತ ವಿಘ್ನಗಳಿಂದ ಪರೀಕ್ಷೆ ಮಾಡುತ್ತಾನೆ. ದಶರಥ ಮಹಾರಾಜರು ಎಡವಿದ್ದೆಲ್ಲಿ? ರಾಮನನ್ನು ಕಳಿಸಿದ್ದು ಅಧರ್ಮವೇ? ಕೈಕಯಿಗೆ ಕೊಟ್ಟ ಮಾತನ್ನು ಪಾಲಿಸಿದ್ದು ಅಧರ್ಮವಲ್ಲ. ಆದರೆ, ಅವಳ ಸ್ವಭಾವವನ್ನು ಅರಿತೂ, ಮೋಹಕ್ಕೊಳಗಾಗಿ, ನೀಡಬಾರದ ವರವನ್ನು ನೀಡಿದ್ದು ದಶರಥ ಮಹಾರಾಜರು ಮಾಡಿದ ತಪ್ಪು ಎಂಬ ಅಂಶವನ್ನಿಲ್ಲಿ ತಿಳಿಯುತ್ತೇವೆ. ಲಕ್ಷ್ಣಣನ ಅದ್ಭುತ ಭಕ್ತಿಯ ಕುರಿತು ದಿವ್ಯಚಿತ್ರಣವಿಲ್ಲಿದೆ.
Play Time: 34:12
Size: 1.37 MB