Upanyasa - VNU974

ಭರದ್ವಾಜರ ಆತಿಥ್ಯ

ಶ್ರೀಮದ್ ರಾಮಾಯಣಮ್ — 87

ಗಂಗಾಯಮುನಾ ಸಂಗಮದ ಬಳಿಯಿರುವ ಭರದ್ವಾಜರ ಆಶ್ರಮಕ್ಕೆ ರಾಮಸೀತಾಲಕ್ಷ್ಮಣರು ಬಂದು ಆ ರಾತ್ರಿ ತಂಗಿ, ಚಿತ್ರಕೂಟದ ಕುರಿತು ತಿಳಿದುಕೊಂಡು ಮಾರನೆಯ ದಿವಸ ಆ ಎಲ್ಲ ಋಷಿಗಳ ಪ್ರೇಮ ಅಕ್ಕರೆಗಳನ್ನು ಸ್ವೀಕರಿಸಿ ಹೊರಡುವ ಪ್ರಸಂಗದ ವಿವರಣೆ ಇಲ್ಲಿದೆ. 

ದಕ್ಷಿಣಕ್ಕೆ ಹೊರಟ ಶ್ರೀರಾಮದೇವರು, ಗಂಗೆಯನ್ನು ದಾಟಿದ ಬಳಿಕ ಪೂರ್ವಕ್ಕೆ ಹೊರಟು ಭರದ್ವಾಜರ ಆಶ್ರಮಕ್ಕೆ ತೆರಳಿ ಆ ನಂತರ ದಕ್ಷಿಣಕ್ಕೆ ಹೊರಡುತ್ತಾನೆ. ಇದರ ಹಿಂದಿನ ಕಾರಣದ ವಿವರ ಇಲ್ಲಿದೆ. 

ರಾಮದೇವರು ಪತ್ನಿ ಸೀತಾದೇವಿಯನ್ನು ಭರದ್ವಾಜರಿಗೆ ಪರಿಚಯಿಸುವ ರೀತಿ ಹಾಗೂ ಆಕೆಗೆ ಗೌರವ ನೀಡುತ್ತಿದ್ದ ಕ್ರಮವನ್ನಿಲ್ಲಿ ಕೇಳುತ್ತೇವೆ. 

ಮತ್ತೊಬ್ಬರನ್ನು ಅವಹೇಳನ ಮಾಡಬಾರದು ಎಂಬ ಪಾಠವನ್ನು ಸ್ವಾಮಿ ಅದ್ಭುತವಾದ ರೀತಿಯಲ್ಲಿ ಕಲಿಸುತ್ತಾನೆ. 

Play Time: 36:29

Size: 3.84 MB


Download Upanyasa Share to facebook View Comments
6456 Views

Comments

(You can only view comments here. If you want to write a comment please download the app.)
 • JOTHIPRAKASH L,DHARMAPURI

  11:05 AM, 06/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು

  Vishnudasa Nagendracharya

  ಶುಭವಾಗಲಿ. 
 • Sree Hari,Mandya

  7:31 AM , 05/04/2022

  Namaskara gurugale, now I am listening

  Vishnudasa Nagendracharya

  ನೀವೂ ಕೇಳಿ. ನಿಮ್ಮ ಪರಿಚಯದ ಸುತ್ತಮುತ್ತಲಿನ ಎಲ್ಲ ವರ್ಗದ ಜನರಿಗೂ ಶ್ರೀಮದ್ ರಾಮಾಯಣವನ್ನು ತಲುಪಿಸಿ. 
 • SHRIPAD,KUSHTAGI

  5:05 PM , 03/04/2022

  ರಾಮನವಮಿ ಪರ್ವ ಕಾಲದಲ್ಲಿ ಪುನಃ ರಾಮಾಯಣದ ಪ್ರವಚನ ಪ್ರಾರಂಭವಾಗಿದ್ದು ತುಂಬಾ ಸಂತೋಷ 🙏🏾🙏🏾🙏🏾🙏🏾🙏🏾🙏🏾🙏🏾

  Vishnudasa Nagendracharya

  ಶ್ರೀರಾಮದೇವರ ಅನುಗ್ರಹ. 
 • Sowmya,Bangalore

  4:47 PM , 03/04/2022

  ಎಂಥಾ ಪುಣ್ಯ ನಮ್ಮದು ವಿಶ್ವನಂದಿನಿಯಿಂದ ಭಗವಂತನ ದರ್ಶನ ಮಾಡಿಸುತ್ತಿರಿ🙏🙏🙏

  Vishnudasa Nagendracharya

  ಶ್ರೀಹರಿಗುರುಗಳು ನಿಂತು ಮಾಡಿಸುತ್ತಿರುವ ಕಾರ್ಯ. 🙏
 • Niranjan Kamath,Koteshwar

  4:28 PM , 03/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಬಹಳ ದಿನಗಳಿಂದ ನಿರೀಕ್ಷಿತ ಶ್ರೀಮದ್ ರಾಮಾಯಣ ಕೇಳಿ ಬಹಳ ಬಹಳ ಆನಂದವಾಯಿತು. ನಿಮ್ಮ ಧ್ವನಿ ಕೇಳುವುದೇ ಒಂದು ಭಾಗ್ಯ. ಶ್ರೀ ರಾಮಚಂದ್ರ ದೇವರಲ್ಲಿ ನಿಮ್ಮ ಬಗ್ಗೆ ಕಳಕಳಿಯಿಂದ ಪ್ರಾರ್ಥಿಸಿ , ನಿಮ್ಮಿಂದ ಇಂತಹ ಸಂತ್ಸಂಗ ಎಲ್ಲರಿಗೂ ಆಗಿ ಭಗವತ್ ಸ್ಮರಣೆ , ಶ್ರವಣ ನಿರಂತರ ಆಗಲಿ ಎಂದು ಪ್ರಾರ್ಥಿಸುತ್ತೇನೆ. ಧನ್ಯೋಸ್ಮಿ.

  Vishnudasa Nagendracharya

  ಖಂಡಿತ. ಶ್ರೀರಾಮದೇವರ ಕಥಾಮೃತವನ್ನು ನೀವೂ ಪಾನ ಮಾಡಿ. ನಿಮ್ಮವರಿಗೂ ತಲುಪಿಸಿ. 
 • Archana,Bangalore

  3:51 PM , 03/04/2022

  ಗುರುಗಳಿಗೆ ಅನಂತಾನಂತ ನಮಸ್ಕಾರಗಳು..🙏 ಧನ್ಯೋಸ್ಮಿ

  Vishnudasa Nagendracharya

  ಶುಭವಾಗಲಿ. 
 • Vasudha Wuntakal,Kurnool

  3:07 PM , 03/04/2022

  Vasudha Kurnool 
  
  : ಆಚಾರ್ಯರಿಗೆ ಅನಂತಾನಂತ ನಮಸ್ಕಾರ ಗಳು.
  ರಾಮಾಯಣ ಪ್ರವಚನ ಗಳು ಕೇಳುತ್ತಾಇದ್ದರೆ ಮನಸ್ಸಿಗೆ ಬಹಳ ಸಂತೋಷವಾಗಿದೆ. ಕೇಳಿದ್ದನ್ನು ಹಾಗೂ ಪ್ರಶ್ನೆಗಳಿಗೆ ನೀವು ಉತ್ತರಿಸಿದ ವಿಷಯವನ್ನು ಬರೆದುಕೊಳ್ಳುತ್ತಾಇದ್ದೀನಿ

  Vishnudasa Nagendracharya

  ತುಂಬ ಸಂತೋಷ. 
  
  ಕೇಳಿದ್ದನ್ನು ಬರೆದಿಟ್ಟುಕೊಂಡರೇ ನೆನಪಿನಲ್ಲುಳಿಯುವದು. 
  
  ದೇವರು ಗುರುಗಳು ಪೂರ್ಣಾನುಗ್ರಹ ಮಾಡಲಿ. ಟ
  
 • N.H. Kulkarni,Bangalore

  2:50 PM , 03/04/2022

  ಶ್ರೀ ವಿಷ್ಣುದಾಸ ನಾಗೇಂದ್ರ ಆಚಾರ್ಯರಿಗೆ ನಮಸ್ಕಾರಗಳು.
  
  ಶ್ರೀ ರಾಮನ ಕಥೆಯ ಶ್ರವಣ, ಅದೊಂದು ಹಿರಿದಾದ ಹಾಗೂ ನಿಜವಾದ ಹಬ್ಬ. 
  
  ಸಜ್ಜನರಿಗೆಲ್ಲ, ವಿಶ್ವನಂದಿನಿಯ ಮೂಲಕ, ಆ ಹಬ್ಬವನ್ನು ಆಚರಿಸುವಂತೆ ಮಾಡುತ್ತಿರುವ ತಮಗೆ ಅಭಿವಂದನೆಗಳು. 
  
  ಶ್ರೀಮದ್ಭಾಗವತ, ಶ್ರೀಮದ್ರಾಮಾಯಣ, ಶ್ರೀ ಮಧ್ವವಿಜಯ ಇತ್ಯಾದಿ ಅನೇಕ ಗ್ರಂಥಗಳ, ಧರ್ಮ ಶಾಸ್ತ್ರದ ವಿಷಯಗಳ, ಹಬ್ಬ ಹರಿದಿನಗಳ ಬಗ್ಗೆ ಆಡಿಯೋ, ವೀಡಿಯೊ ಹಾಗೂ ಲೇಖನಗಳ ಮೂಲಕ ತಾವು ಸಹಸ್ರಾರು ಸಜ್ಜನರಿಗೆ ಮಾರ್ಗದರ್ಶಕರಾಗಿದ್ದೀರಿ. 
  
  ತಮ್ಮ ಈ ಜ್ಞಾನ ಪ್ರಸಾರದ ಮುಖ ಸಮಾಜಕ್ಕೆ ಇನ್ನೂ ಹೆಚ್ಚು ಗೊತ್ತಾಗುವಂತಾಗಲಿ , ಅದರಿಂದ ಸಮಾಜಕ್ಕೆ ಇನ್ನೂ ಹೆಚ್ಚು ಉಪಯೋಗವಾಗುವಂತಾಗಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. 
  
  ವಿಶ್ವನಂದಿನಿಯಲ್ಲಿ ಯಲ್ಲವೂ ಉಚಿತವಾಗಿ ಲಭ್ಯ ಆದರೂ ವಿಶ್ವನಂದಿನಿಯಿಂದ ಉಪಕೃತರಾದವರೆಲ್ಲ ಅದರ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ , ಕಾಣಿಕೆಯನ್ನು ಸಲ್ಲಿಸುವುದರ ಮೂಲಕ ತಮ್ಮ ಜವಾಬುದಾರಿಯನ್ನು ಸೇವಾ ರೂಪವಾಗಿ ನಿಭಾಯಿಸುತ್ತಿದ್ದಾರೆ, ಆ ಮಹಾನುಭಾವರಿಗೆಲ್ಲ ನನ್ನ ನಮನಗಳು. 
  
  ನಾನು ಇಂದಿನ ವರೆಗೆ ವಿಶ್ವನಂದಿನಿಗೆ ಯಾವ ರೀತಿಯ ಸಹಕಾರವನ್ನು ಕೊಟ್ಟಿಲ್ಲ, ಯಲ್ಲವನ್ನು ಉಚಿತವಾಗಿ ಪಡೆಯುತ್ತಿದ್ದೇನೆ. ಯುಗಾದಿಯ ಸಂದರ್ಭದಲ್ಲಿ, At least, ವಿಶ್ವನಂದಿನಿಯ ಮೂಲಕ ನಮಗೆ ಉಪಕರಿಸುತ್ತಿರುವ ತಮಗೊಂದು ನಮಸ್ಕಾರ ಸಲ್ಲಿಸೋಣ, ವಿಶ್ವನಂದಿನಿಗೆ ಸಹಕಾರ ಕೊಡುತ್ತಿರುವ ಮಹಾನುಭಾವರನ್ನು ಅಭಿನಂದಿಸೋಣ , ಅಂತ ಈ ಸಾಲುಗಳನ್ನು ಬರೆದೆ. 
  
  ನಮಸ್ಕಾರ 🙏🏼
  N. H. Kulkarni

  Vishnudasa Nagendracharya

  ಪ್ರತಿಯೊಬ್ಬ ಸಜ್ಜನರಿಗೂ ಈ ರಾಮಾಯಣದ ಪ್ರವಚನಗಳನ್ನು ತಲುಪಿಸಿರಿ. ನಿಮ್ಮ ಮನೆಗಳಲ್ಲಿ ಕೆಲಸ ಮಾಡುವ ಜನರಿಂದ ಹಿಡಿದು, ನಿಮ್ಮ ಪರಿಚಯದ ಎಲ್ಲ ಜನರವರೆಗೆ, ಹಳ್ಳಿಗಳಲ್ಲಿರುವ ಸಜ್ಜನರಿಗೆ ಇದನ್ನು ತಲುಪಿಸಿ. 
 • Anil Kumar B R Rao,Bangalore

  2:26 PM , 03/04/2022

  ಆಚಾರ್ಯರಿಗೆ namo namaha, ಹೊಸ ವರ್ಷದ ಎರಡನೆಯ ದಿನವೇ ತಮ್ಮ ಈ ಪ್ರವಚನಗಳು ಆರಂಭ ಆಗಿರುವುದು ಬಹಳ ಸಂತೋಷ ತಂದಿದೆ..ಪ್ರವಚನಗಳು ಹೀಗೆ ಮುಂದುವರೆಯಲಿ ಅಂತ ತಮ್ಮಲ್ಲಿ ಮತ್ತು ಆ ಭಗವಂತ ನಲ್ಲಿ ಪ್ರಾರ್ಥನೆ ಮಾಡುತ್ತೇನೆ, ರಾಮಯ namaha

  Vishnudasa Nagendracharya

  ಖಂಡಿತ. ಶ್ರೀಹರಿಗುರುಗಳು ಶ್ರೀಗಣಪತಿದೇವರು ನಿರ್ವಿಘ್ನತೆಯನ್ನು ಕರುಣಿಸಬೇಕು. 
  
 • Vivekanand Kamath,Dombivili

  9:41 AM , 03/04/2022

  ಶ್ರೀ ಹರಿವಾಯು ಗುರುಭ್ಯೋ ನಮಃ. ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಶ್ರೀ ಸೀತಾಪತಿ ರಾಮಚಂದ್ರಾಭಿನ್ನ ಉಡುಪಿ ಶ್ರೀ ಕೃಷ್ಣ ದೇವರು ನಿಮ್ಮಿಂದ ನಡೆಸುತ್ತಿರುವ ಈ ಜ್ಞಾನ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸಲಿ ಹಾಗೂ ಜ್ಞಾನಗಂಗೆಯ ಹರಿವು ಎಲ್ಲ ಸಜ್ಜನರ ಹೃದಯದಲ್ಲಿರುವ ಭಕ್ತಿ ಬೀಜದ ಮೊಳಕೆಯನ್ನು ಹೆಮ್ಮರವಾಗಿ ಬೆಳೆಸಲಿ ಎಂದು ಪ್ರಾರ್ಥಿಸುತ್ತೇನೆ.

  Vishnudasa Nagendracharya

  ಖಂಡಿತ. ಹರಿ ಗುರು ಭಕ್ತಿಯೊಂದೇ ನಮ್ಮನ್ನು ಸಂಸಾರಸಾಗರದಿಂದ ಉದ್ಧರಿಸುವ ನೌಕೆ. ಶ್ರೀಹರಿ ಕರುಣಿಸಬೇಕು. 
  
 • Sandeep katti,Yalahanka, bengalooru

  9:27 AM , 03/04/2022

  🙏🙏 ಅನಂತ ವಂದನೆಗಳು ಪೂಜ್ಯ ಗುರುಗಳೇ.. 1 ವರ್ಷ ಮೇಲಾಯಿತು ತಮ್ಮ ಪ್ರವಚನಗಳ ಪ್ರತೀಕ್ಷೆ ಮಾಡಿ.. ಇನ್ನು ಮೇಲೆ ಈ ಜ್ಞಾನ ಗಂಗೆ ಅನಂತ ಕಾಲದವರೆಗೆ ಹರಿಯುತಿರಲಿ....
  ಹರಿ ಸರ್ವೋತ್ತಮ ವಾಯು ಜೀವೋತ್ತಮ

  Vishnudasa Nagendracharya

  ದೇವರು ಗುರುಗಳು ನಿಂತು ಮಾಡಿಸಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ. 
  
 • G S KRISHNA,Bellary

  10:43 PM, 06/04/2022

  🙏🙏🙏
 • Jyothi. D,Hubli

  1:20 PM , 04/04/2022

  Pravachana keli tumba santosh vayitu Gurugalige Dhanyavadagalu 🙏🙏
 • SUDHEENDRA H,Bengalore

  12:48 PM, 04/04/2022

  🙏 ಶ್ರೀಮದ್ರಾಮಾಯಣ ಪುನರಾರಂಭ ಆಗಿದ್ದಕ್ಕೆ ಸಾಷ್ಟಾoಗ ನಮಸ್ಕಾರಗಳು
 • Srinivas Devraj,Bangalore

  8:49 AM , 04/04/2022

  ,🙏🙏
 • K Naresh nayak,Mangalore

  9:12 PM , 03/04/2022

  🙏🙏🙏
 • Rayabhagi Anand,Chennai

  8:36 PM , 03/04/2022

  🙏🙏🙏
 • Rishikesh madhav,Bengaluru

  3:32 PM , 03/04/2022

  🙏
 • Roopavasanth,Banglore

  2:03 PM , 03/04/2022

  ಶ್ರೀ ಹರಿಯೇ ನಮ್ಹಹ...
  ಮತ್ತೆ ಪ್ರವಚನ ಕೇಳಿ...ಧನ್ಯವಾಯಿತು.ಧನ್ಯೋಸ್ಮಿ..🙏🙏
 • Roopavasanth,Banglore

  2:03 PM , 03/04/2022

  ಶ್ರೀ ಹರಿಯೇ ನಮ್ಹಹ...
  ಮತ್ತೆ ಪ್ರವಚನ ಕೇಳಿ...ಧನ್ಯವಾಯಿತು.ಧನ್ಯೋಸ್ಮಿ..🙏🙏
 • Narayanaswamy,Mysore

  1:46 PM , 03/04/2022

  🙏🙏🙏
 • Narayanaswamy,Mysore

  1:45 PM , 03/04/2022

  🙏🙏🙏
 • Narayanaswamy,Mysore

  1:45 PM , 03/04/2022

  🙏🙏🙏
 • Srikar K,Bengaluru

  12:14 PM, 03/04/2022

  Gurugale, Thank you very much for re-starting Ramayana pravachana. Similarly, can we also expect to hear continued parts of Bhagawatha ?

  Vishnudasa Nagendracharya

  ಶ್ರೀಮದ್ ರಾಮಾಯಣ ಪ್ರವಚನಗಳು ಮುಗಿಯುತ್ತಿದ್ದಂತೆ ಶ್ರೀಮದ್ ಭಾಗವತದ ಪ್ರವಚನಗಳು ಆರಟಭವಾಗುತ್ತವೆ.
 • M V Lakshminarayana,Bengaluru

  1:12 PM , 03/04/2022

  🙏🙏
 • Geetha Rao,Bangalore

  12:51 PM, 03/04/2022

  ಹರೇ ಶ್ರೀನಿವಾಸ.
 • Laxmi Padaki,Pune

  12:44 PM, 03/04/2022

  ಧನ್ಯವಾದಗಳು ಶ್ರೀ ಆಚಾರ್ಯರಿಗೆ.🙏🙏
 • Jagannath Kulkarni,Bengaluru

  12:29 PM, 03/04/2022

  🙏
 • Madhukar V,Chintamani

  12:07 PM, 03/04/2022

  🙏🙏🙏🙏
 • Jayashree karunakar,Bangalore

  9:00 AM , 03/04/2022

  ಗುರುಗಳೇ 
  ಸಿದ್ಧ ಪುರುಷರು, ಮಹರ್ಷಿಗಳು, ಋಷಿಗಳು, ಅವಧೂತರು, ಸನ್ಯಾಸಿಗಳು, ತಪಸ್ವಿಗಳು, ಮುನಿಗಳು, ಯೋಗಿಗಳು, ಸಂತರು, ಆಚಾರ್ಯರು, ಗುರುಗಳು, ಸಾಧಕರು. 
  ಇವರುಗಳಲ್ಲಿರುವ ವೆತ್ಯಾಸವನ್ನು ತಾರತಮ್ಯ ಕ್ರಮದಲ್ಲಿ ದಯವಿಟ್ಟು ತಿಳಿಸಿಕೊಡಿ

  Vishnudasa Nagendracharya

  ಸಾಧಕ 
  ಸಾಧನೆ ಮಾಡುವ ವ್ಯಕ್ತಿ. 
  
  ಸಂತರು (ಕನ್ನಡ ಶಬ್ದ) 
  ಸಜ್ಜನೋತ್ತಮರು. ಸಾಧುಸ್ವಭಾವದವರು. 
  
  ಆಚಾರ್ಯರು 
  ಶಾಸ್ತ್ರದ ಅರ್ಥವನ್ನು ತಿಳಿದು ಅನುಷ್ಠಾನ ಮಾಡುತ್ತಿರುವವರು. 
  
  ಗುರುಗಳು 
  ಶಾಸ್ತ್ರದ ಅರ್ಥವನ್ನು ಶಿಷ್ಯರಿಗೆ ಉಪದೇಶ ಮಾಡುವವರು
  
  ಯೋಗಿಗಳು
  ಆಸನ-ಪ್ರಾಣಾಯಾಮ-ಪ್ರತ್ಯಾಹಾರ ಮುಂತಾದ ಯೋಗದ ಅನುಷ್ಠಾನ ಮಾಡುತ್ತ ಸಿದ್ಧಿಯನ್ನು ಗಳಿಸಿದವರು
  
  ಮುನಿಗಳು
  ಶಾಸ್ತ್ರದ ಅರ್ಥವನ್ನು ಮನನ ಮಾಡುತ್ತಿರುವವರು. 
  
  ತಪಸ್ವಿಗಳು
  ಶ್ರೇಷ್ಠವಾದ ತಪಸ್ಸಿನ ಆಚರಣೆಯನ್ನು ಮಾಡುತ್ತಿರುವವರು.
  
  ಸಂನ್ಯಾಸಿಗಳು
  ಯೋಗಿ, ಮುನಿ, ಋಷಿಗಳು ಗೃಹಸ್ಥರೂ ಆಗಿರಬಹುದು. ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಸಾಧಕರು ಸಂನ್ಯಾಸಿಗಳು, ಯತಿಗಳು. 
  
  ಅವಧೂತರು
  ಮೈಮೇಲೆ ಬಟ್ಟೆಯನ್ನೂ ತೊರೆದ, ಹಸಿವೆ ನೀರಡಿಕೆಗಳಿಗೂ ಬಗ್ಗದ, ದೇಹದ ಮೇಲೆ ಪೂರ್ಣ ಅಭಿಮಾನ ತೊರೆದ ಮಹಾನುಭಾವರು. 
  
  ಋಷಿಗಳು
  ದೇವರನ್ನು ಕಾಣುತ್ತ, ತಾವು ಕಲಿಯದೇ ಇರುವ ವೇದಗಳನ್ನೂ ತಮ್ಮ ಜ್ಞಾನದಿಂದ ತಿಳಿಯಬಲ್ಲ ಮಹಾನುಭಾವರು.
  
  ಮಹರ್ಷಿಗಳು
  
  ಮಹಾ ಋಷಿಗಳು ಮಹರ್ಷಿಗಳು. ಋಷಿಗಳಿಗಿಂತ ಮಿಗಿಲಾಗಿ ಜ್ಞಾನ ಭಕ್ತಿಗಳನ್ನು ಪಡೆದು, ವೇದಾರ್ಥವನ್ನು ಇದಮಿತ್ಥಂ ಎಂದು ನಿರ್ಣಯಿಸಿ ಧರ್ಮಮಾರ್ಗವನ್ನು ಸಮಗ್ರ ಸಜ್ಜನಸಮುದಾಯಕ್ಕೆ ತೋರಬಲ್ಲ ಮಹಾನುಭಾವರು. 
  
  
 • Madusudhana R,Bengaluru

  12:01 PM, 03/04/2022

  ಜೈ ಶ್ರೀರಾಮ್ 🙏 🙏 🙏
 • Kosigi shroff malathi,Hyderabad

  11:03 AM, 03/04/2022

  Hare Sreenivaasa Acharyare 🙏🙏,Bharadwajara aashrama,illi ganga yamuna,prantha dalli anth banthu,Srinivasa kalyana dalli tirupathi prantha dalli barthudalla,idu hege arthamaadiko beku?Yoga bere anthana,

  Vishnudasa Nagendracharya

  ಉತ್ತಮ ಪ್ರಶ್ನೆ. 
  
  ಪ್ರವಚನಗಳನ್ನು ಕೇಳಿ ಹೀಗೆ ಮೂಡಿಬರುವ ಪ್ರಶ್ನೆಗಳನ್ನು ಕೇಳಿದಾಗ ನನಗೆ ಅತ್ಯಂತ ಸಂತೋಷವಾಗುತ್ತದೆ. 
  
  ನಿಮ್ಮ ಪ್ರಶ್ನೆಗೆ ಉತ್ತರ ಹೀಗಿದೆ — 
  
  ಋಷಿಗಳ ಆಶ್ರಮ ಒಂದೇ ಕಡೆಯಲ್ಲಿ ಇರುವದಿಲ್ಲ. ಋಷಿಗಳು ಒಂದೇ ಕಡೆ ಮಾತ್ರ ಇದ್ದು ತಪಸ್ಸು ಮಾಡುವದಿಲ್ಲ. ಭರತ ಭೂಮಂಡಲದಲ್ಲಿ ತಮಗೆ ಪ್ರಿಯವಾದ ಅನೇಕ ಸ್ಥಳಗಳಲ್ಲಿದ್ದು ತಪಸ್ಸಿನ ಆಚರಣೆ ಮಾಡಿ ಆ ಪ್ರದೇಶಗಳನ್ನು ಕ್ಷೇತ್ರಗಳನ್ನಾಗಿ ಮಾಡುವ ಮಹಾನುಭಾವರು ಋಷಿಗಳು.
  
  ಹೀಗಾಗಿ ತ್ರೇತಾಯುಗದಲ್ಲಿ ನಡೆದ ರಾಮಾಯಣ ಕಾಲದಲ್ಲಿ ಶ್ರೀ ಭಾರದ್ವಾಜ ಮುನಿಗಳ ಆಶ್ರಮ ಗಂಗಾ-ಯಮುನಾ ಸಂಗಮದಲಿತ್ತು. ಪ್ರಯಾಗದಲ್ಲಿ ಇವತ್ತಿಗೂ ಆ ಪ್ರದೇಶವನ್ನು ತೋರಿಸುತ್ತಾರೆ. ಅಲ್ಲಿಗೆ ಹೋದಾಗ ದರ್ಶನ ಮಾಡಿ ಬನ್ನಿ. 
  
  ದ್ವಾಪರಯುಗದಲ್ಲಿ ಹಸ್ತಿನಾವತಿಯ ಸಮೀಪದಲ್ಲಿ ಅವರ ಆಶ್ರಮವಿತ್ತು. 
  
  ಕಲಿಯುಗದಲ್ಲಿ ನಡೆದ ಶ್ರೀ ಶ್ರೀನಿವಾಸಕಲ್ಯಾಣದ ಕಾಲದಲ್ಲಿ ಶ್ರೀ ಭರದ್ವಾಜರ ಆಶ್ರಮದ ತಿರುಪತಿಯ ಪ್ರಾಂತದಲ್ಲಿತ್ತು. 
  
  ಹೀಗೆ ಒಂದೊಂದು ಸಂದರ್ಭದಲ್ಲಿ ಒಂದೊಂದು ಕಡೆಯಲ್ಲಿ ಆಶ್ರಮವಾದರೆ ಒಂದೇ ಸಂದರ್ಭದಲ್ಲಿ ಅನೇಕ ಕಡೆ ಆಶ್ರಮಗಳನ್ನು ಮಾಡಿಕೊಂಡ ಋಷಿಗಳ ಮಹಿಮೆಯೂ ಉಂಟು. ಇದೇ ಶ್ರೀಮದ್ ರಾಮಾಯಣದಲ್ಲಿ ಮಂದೆ ಅರಣ್ಯ-ಕಿಷ್ಕಿಂಧಾಕಾಂಡದಲ್ಲಿ ಅಗಸ್ತ್ಯರ ಮಹಿಮೆ ಕೇಳುವಾಗ ತಿಳಿಯುತ್ತೇವೆ. ಅಗಸ್ತ್ಯರು ದಂಡಕಾರಣ್ಯದಲ್ಲಿ ಹತ್ತಾರು ಕಡೆಗೆ ಆಶ್ರಮ ಮಾಡಿಕೊಂಡಿರುತ್ತಿದ್ದರು. ಪಂಚವಟಿಯ ಗೋದಾವರಿಯ ಬಳಿಯೂ ಅವರ ಆಶ್ರಮವಿರುತ್ತದೆ. ತುಂಗಭದ್ರೆಯ ತೀರದ ಕಿಷ್ಕಿಂಧೆಯ ಬಳಿಯೂ ಅವರ ಆಶ್ರಮವಿರುತ್ತದೆ. ಇವತ್ತಿನ ಕೇರಳಕ್ಕೆ ಸೇರಿದ ಮಲಯ ಪರ್ವತಗಳಲ್ಲಿ ಅವರ ಪ್ರಧಾನವಾದ ಆಶ್ರಮವಿರುತ್ತದೆ. ನಮ್ಮ ಕಾವೇರಿ ತೀರದಲ್ಲಂತೂ ನೂರಾರು ಕಡೆಯಲ್ಲಿ ಅವರ ಆಶ್ರಮವಿದ್ದದ್ದನ್ನು ಕೇಳುತ್ತೇವೆ. 
  
  
 • Badari Narasimha M P,Bengaluru

  10:17 AM, 03/04/2022

  ಅನಂತ ಪ್ರಣಾಮಗಳು🙏🏻🙏🏻🙏🏻🙏🏻🙏🏻🙏🏻🙏🏻
 • Radhakrishna,Bangalore

  9:53 AM , 03/04/2022

  🙏
 • Choodamani,Mysuri

  9:49 AM , 03/04/2022

  Jai Sriram🙏
 • Srinivasan,Chennai

  9:46 AM , 03/04/2022

  🙏🙏🙏🙏
 • Srinivasan,Chennai

  9:46 AM , 03/04/2022

  🙏🙏🙏🙏
 • Kosigi shroff malathi,Hyderabad

  9:43 AM , 03/04/2022

  🙏🙏🙏🙏
 • Anirudhha r,Bangalore

  9:36 AM , 03/04/2022

  🙏🙏🙏🙏🙏
 • Sampreeth S Bhat,Udupi

  9:34 AM , 03/04/2022

  🙏
 • S Vinutha Ganesh,Bangalore

  9:20 AM , 03/04/2022

  🙇🏻‍♀️🙇🏻‍♀️🙇🏻‍♀️...🙏🏻🙏🏻🙏🏻...
  🙇🏻‍♀️🙇🏻‍♀️🙇🏻‍♀️...🙏🏻🙏🏻🙏🏻...
  🙇🏻‍♀️🙇🏻‍♀️🙇🏻‍♀️...🙏🏻🙏🏻🙏🏻...
 • Roopa,Bengaluru

  9:18 AM , 03/04/2022

  🙏🙏🙏
 • Kiran M,Bengaluru

  9:05 AM , 03/04/2022

  ಜೈ ಶ್ರೀರಾಮ 🙏🙏
 • Mourya H,Tumkur

  9:03 AM , 03/04/2022

  ಧನ್ಯವಾದಗಳು 💐 🙏
 • Dilip acharya belagal,Bellary

  8:58 AM , 03/04/2022

  🙏🙏🙏🙏
 • Lakshmi,Bangalore

  8:38 AM , 03/04/2022

  🙏🙏🙏🙏🙏
 • Lakshmi,Bangalore

  8:38 AM , 03/04/2022

  🙏🙏🙏🙏🙏
 • Nagaraj,Coimbatore

  5:49 AM , 03/04/2022

  👃👃👃
 • Nagaraj,Coimbatore

  5:49 AM , 03/04/2022

  👃👃👃