02/04/2022
ಶ್ರೀಮದ್ ರಾಮಾಯಣಮ್ — 88 ರಾಮಲಕ್ಷ್ಮಣರೇ ತೆಪ್ಪವೊಂದನ್ನು ನಿರ್ಮಾಣ ಮಾಡಿಕೊಂಡು, ತುಂಬ ಜಾಗ್ರತೆಯಿಂದ ಅದನ್ನು ನಡೆಸುತ್ತ ಯಮುನೆಯ ದಾಟಿದ ಪ್ರಸಂಗದ ವಿವರಣೆ ಇಲ್ಲಿದೆ. ಜೀವಕರ್ತೃತ್ವದ ಕುರಿತು ಇರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುವದರೊಂದಿಗೆ. ತೆಪ್ಪದಲ್ಲಿ ಸೀತಾದೇವಿಯ ಬಟ್ಟೆ ತೋಯದಂತೆ ಒಂದು ಪುಟ್ಟ ಆಸನವನ್ನು ನಿರ್ಮಾಣ ಮಾಡುವ, ಕಾಡಿನಲ್ಲಿ ನಡೆಯುವಾಗ ಅವರು ಅಪೇಕ್ಷೆ ಪಡುತ್ತಿದ್ದ ಹೂ, ಹಣ್ಣುಗಳನ್ನೆಲ್ಲ ನೀಡುತ್ತಿದ್ದ ರಾಮ ಲಕ್ಷ್ಮಣರು ಹೆಣ್ಣಿಗೆ ಯಾವ ರೀತಿ ಗೌರವ ನೀಡಬೇಕು ಎನ್ನುವದನ್ನು ತೋರಿಸಿಕೊಡುತ್ತಾರೆ. ನದಿ, ವನಸ್ಪತಿಗಳಲ್ಲಿ ಸೀತೆ ತೋರುತ್ತಿದ್ದ ಭಕ್ತಿಯ ಚಿತ್ರಣದೊಂದಿಗೆ. ಲಕ್ಷ್ಮಣನಿಗೆ ಶ್ರಮವಾದಾಗ ಶ್ರೀರಾಮ ತನ್ನ “ಶಂಕರ” ಕರಗಳಿಂದ ಅವನನ್ನು ನೇವರಿಸಿ ಶ್ರಮ ನಿದ್ರೆಗಳನ್ನು ಕಳೆದ ರಾಮನ ವಾತ್ಸಲ್ಯದ ಚಿತ್ರಣ ಇಲ್ಲಿದೆ. ಕಾಡಿನಲ್ಲಿ ನಡೆಯುವಾಗ ಅಲ್ಲಿನ ಮರ, ಗಿಡ, ಹಕ್ಕಿ, ಪ್ರಾಣಿಗಳನ್ನೆಲ್ಲ ರಾಮ ಸೀತೆಗೆ ಲಕ್ಷ್ಣಣನಿಗೆ ಪರಿಚಯಿಸಿಕೊಡುವ ಘಟನೆಯನ್ನಿಲ್ಲಿ ಕೇಳುತ್ತೇವೆ. ವಾಲ್ಮೀಕಿ ಋಷಿಗಳನ್ನು ಭೇಟಿಯಾದ್ದು, ದಿವ್ಯವಾದ ಕ್ರಮದಲ್ಲಿ ಲಕ್ಷ್ಮಣ ಪರ್ಣಶಾಲೆಯನ್ನು ಕಟ್ಟಿದ್ದು, ಸೀತಾದೇವಿಯರು ಅದನ್ನು ಕೆಮ್ಮಣ್ಣು ರಂಗೋಲಿಗಳಿಂದ ಅಲಂಕರಿಸಿದ್ದು, ನಮ್ಮ ಸ್ವಾಮಿ, ಆ ಕ್ಷತ್ರಿಯೋತ್ತಮ, ಜಿಂಕೆಯ ಮಾಂಸವನ್ನು ಹೋಮಿಸಿ ವಾಸ್ತುಶಾಂತಿಯನ್ನು ಮಾಡಿದ ವಿವರಗಳು ಇಲ್ಲಿವೆ.
Play Time: 50:33
Size: 3.84 MB