Upanyasa - VNU976

ಅಯೋಧ್ಯೆಯ ಜನರ ಎತ್ತರ

ಶ್ರೀಮದ್ ರಾಮಾಯಣಮ್ — 89

ಮೊದಲಿಗೆ ರಾಮ ವನಕ್ಕೆ ಹೋದ ದುಃಖ, ಆ ದುಃಖದಿಂದ ಸಕಲದರಲ್ಲಿಯೂ ವೈರಾಗ್ಯ, ಆ ನಂತರ ಮೂಡಿದ ವಿವೇಕದಿಂದ ಆ ಅಯೋಧ್ಯೆಯ ಜನ “ರಾಮ” ಎಂಬ ಹೆಸರನ್ನು ಮಾತ್ರ ಬಳಸಿ, ಬೇರೆಯ ಶಬ್ದಗಳನ್ನು ಬಳಸದೇ ಜೀವಿಸಲು ಆರಂಭಿಸಿದ ಅದ್ಭುತ ವಿಷಯವನ್ನಿಲ್ಲಿ ಕೇಳುತ್ತೇವೆ. 

“ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್” ದೇವರ ಭಕ್ತರಿಗೆ ಎಂದಿಗೂ ಅಶುಭವಾಗುವದಿಲ್ಲ ಎಂದು ಮಹಾಭಾರತ ಪ್ರತಿಪಾದಿಸುತ್ತದೆ. “ನ ಮೇ ಭಕ್ತಃ ಪ್ರಣಶ್ಯತಿ” ಎಂದು ಸ್ವಯಂ ಶ್ರೀಕೃಷ್ಣ ತಿಳಿಸುತ್ತಾನೆ. ಆದರೆ ರಾಮನ ಭಕ್ತರು ಈ ಪರಿ ದುಃಖಕ್ಕೊಳಗಾದರಲ್ಲ, ಈ ಮಾತನ್ನು ಅರ್ಥ ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರಿವಿದೆ. Play Time: 35:56

Size: 3.84 MB


Download Upanyasa Share to facebook View Comments
7499 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  2:12 PM , 24/06/2022

  ಆಚಾರ್ಯರೇ
  ಈ ಭಾಗದ ಒಂದು ಪ್ರಸಂಗದಲ್ಲಿ ,
  ಶ್ರೀವಿಜಯರಾಯರ ಕವಚದ ಉಲ್ಲೇಖ ಮಾಡುತ್ತಾ..."ದುಃಖವಿಲ್ಲದೇ ಲೇಶ ಭಕುತಿ ದೂರೆಯದು" ಅಂತ ಹೇಳಿದ್ದೀರಿ.
  ಆ ಸಾಲು "ದುಃಖ ವಲ್ಲದೇ ಲೇಶ ಭಕುತಿ ದೂರೆಯದು"...ಅಲ್ಲವಾ....
  ದಯಮಾಡಿ ಗಮನಿಸಬೇಕು/ವಿವರಿಸಬೇಕು🙏🙏
 • Raghothaman,Chennai

  11:49 AM, 25/04/2022

  So beautiful explains... Raghothaman
 • Sowmya,Bangalore

  10:22 PM, 12/04/2022

  🙏🙏🙏ಶ್ರೀರಾಮಚಂದ್ರ 🙏🙏🙏
 • Niranjan Kamath,Koteshwar

  7:36 AM , 07/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ನೀವು ಮಾಡುವ ಉಪನ್ಯಾಸ ಕೇಳುವಾಗ ಅದೇ ಲೋಕಕ್ಕೆ ಹೋಗಿ ಅದೇ ಸಮಯ ಅನುಭವಿಸುತ್ತಿದೆವೆ ಎಂಬಂತಾಗುತ್ತದೆ. ಮತ್ತು ಕೊನೆಯಲ್ಲಿ ಮುಂದಿನ ಭಾಗದಲ್ಲಿ ಕೇಳೋಣ ಅನ್ನುವಾಗಲೇ ನಾವು ಇಲ್ಲಿ ಇದ್ದ ಭಾಸವಾಗುತ್ತದೆ. ಆ ನಾಳೆ ಕೇಳುವ ಕಾಯುವಿಕೆಯ ಕಾತರವೇ ಒಂದು ವಿಚಿತ್ರ ಅನುಭವ. ಧನ್ಯೋಸ್ಮಿ.

  Vishnudasa Nagendracharya

  ಆ ತನ್ಮಯತೆಯನ್ನು ಏರುವದೂ ಒಂದು ದೊಡ್ಡ ಸಾಧನೆ. ಶ್ರೀಹರಿಯ ಕಾರುಣ್ಯ ನಿಮ್ಮ ಮೇಲಿರಲಿ. 
 • Kosigi shroff malathi,Hyderabad

  10:02 AM, 10/04/2022

  🙏🙏🙏
 • Anand K Havanur,Dharwad

  9:10 PM , 09/04/2022

  🙏🙏🙏
 • Srikar K,Bengaluru

  6:32 PM , 08/04/2022

  Gurugale, Shree Lakshminarayana, Bengaluru ivarige needida nimma uttara dinda ondu prashne - swaroopa dalli prani, pakshi, mara, etc. iddaru aparoksha gnana agalikke & utkrantha agalikke manushya janma barabeku, allave ? Dayavittu tilisi, Dhanyawadagalu

  Vishnudasa Nagendracharya

  ಅಪರೋಕ್ಷಜ್ಞಾನ ಮನುಷ್ಯರೂಪದಲ್ಲಿಯೂ ಆಗಬಹುದು, ಮರ ಗಿಡ ಪಶು ಪಕ್ಷಿ ಮುಂತಾದ ಆಯಾ ಜೀವದ ಸ್ವರೂಪದೇಹದಂತೇ ಇರುವ ಭೌತಿಕ ದೇಹದಲ್ಲಿಯೂ ಆಗಬಹುದು. 
  
  ಆದರೆ, ಉತ್ಕ್ರಾಂತಿ ಮಾತ್ರ, ಅದರ ಸ್ವರೂಪ ಎಂತಹುದೋ ಅದೇ ತರಹದ ರೂಪದಲ್ಲಿರುವ ದೇಹದಲ್ಲಿಯೇ ಆಗುತ್ತದೆ. ಅಂದರೆ ಸ್ವರೂಪದಲ್ಲಿ ಅದು ಮಲ್ಲಿಗೆ ಹೂವಿನ ಗಿಡವಾಗಿದ್ದರೆ, ಮಲ್ಲಿಗೆಯ ಗಿಡವಾಗಿಯೇ ಉತ್ಕ್ರಾಂತವಾಗುತ್ತದೆ. ಸಂಪಿಗೆಯ ಗಿಡವಾಗಿದ್ದರೆ ಸಂಪಿಗೆಯ ಗಿಡವಾಗಿಯೇ ಉತ್ಕ್ರಾಂತವಾಗುತ್ತದೆ. ಗರಿಕೆಯಾಗಿದ್ದರೆ ಗರಿಕೆಯಾಗಿಯೇ ಉತ್ಕ್ರಾಂತವಾಗುತ್ತದೆ. ಚಿಟ್ಟೆಯಾಗಿದ್ದರೆ ಚಿಟ್ಟೆಯಾಗಿಯೇ. 
 • SUDHEENDRA H,Bengalore

  5:30 PM , 08/04/2022

  🙏
 • K.N.Venkatesha murthy,Tumkur

  2:46 PM , 08/04/2022

  🙏🙏
 • Roopavasanth,Banglore

  2:24 PM , 08/04/2022

  .ದೇವರ kaarunya ದೇವರು ಅವ್ರ ಭಕ್ತರ ಮೇಲೆ ತೋರಿಸುವ..ಪ್ರೀತಿ..ನಿಜಕ್ಕೂ.ಊಹೆಗು ನಿಲುಕದು....🙏
 • Roopavasanth,Banglore

  2:11 PM , 08/04/2022

  Ayodya nagarada jana estu punyavantaru sajjanaru .. Innu .ramananu nenedare endigu shubha ve..punya prada..
  Enukarunanidhiyo hari mathene bhakthadheenano ! Innenu ethana leele iccha maatradali !! Jagava tane srujisuva palisuva nirvaana modalaada akhila loka sthanadali mattavarnittaananda padisuva ..!! Antha namma jagganathadasaru helida reethiyalli rama nannu kondadabeku stutisabeku...neevu pravchandali gida , mara pakshi galannu allidda pratiyobba janarannu namma swami mokashakke karedukondu hogutthare endu keli navu illvalla annuva dukha kannu tumbi banthu adre pravachana keluttideve rama namma jothele iddane ennuva bhavanyu saha ide ide devara maye leele ..navu saha ayodhye janara hage devara smarane madbeku ennuvudu tilisi kottiri ..nimghe dhnyavadagalu....innu.jada vasthugallalli bhaghvantanannu 2008 rooagalinda pujisuthve ..navu ene karma madidru sree hari preethi endu madidre bhagvanthangi prrethiyagutte antha hindina pravachana malikeyalli kelutha ade rethi nevu tilisida hage madutha baruthiddeve 🙏 devara karunnyada bagge heluvudadre karanagalinda aacharisuva vishya sbhoghagalu sree hariye samerpane ..madbeku idarinda devara saamepya ; devara darushana madisuvudu 
  Saalokya ;devara darushana madisuvudu.. Nimma pravchanda jothe prathintyavu prathima kshnavu irtvi andre adu namm ella soubhagya ...intha gurugalu padeda nave dhanyaru...vishwanandini..hege..innu hecchina gnyana saadhaneyannu madisali endu rama devara lli. Vinamravaagi prathane maduthene 🙏.
 • Roopavasanth,Banglore

  1:57 PM , 08/04/2022

  Sree raam jay raam 🙏 
  .modalige namma annanada gurugalige uttamavaada rethiyalli makkligu saha tiluva reethiyalli uanyaasa heluttiruva avrige devaru sakala soubhagyavannu kodali endu ramadevaralli prathane ..🙏
 • M V Lakshminarayana,Bengaluru

  1:19 PM , 07/04/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಶ್ರೀ ರಾಮಚಂದ್ರನ ವಿರಹದ ಶ್ಲೋಕಗಳು ಯಾವ ಕೃತಿಯದು? 

  Vishnudasa Nagendracharya

  ಶ್ರೀ ನಾರಾಯಣಪಂಡಿತಾಚಾರ್ಯರು ರಚನೆ ಮಾಡಿರುವ ಸಂಗ್ರಹರಾಮಾಯಣದ್ದು. 
  
  ಈ ಪ್ರವಚನ ಮಾಲಿಕೆಯಲ್ಲಿ ವಾಲ್ಮೀಕಿ ರಾಮಾಯಣದ ವಿಸ್ತುೃತ ನಿರೂಪಣೆ, ಶ್ರೀಮದಾಚಾರ್ಯರ ಮಹಾಭಾರತತಾತ್ಪರ್ಯನಿರ್ಣಯದ ನಿರ್ಣಯಗಳು, ಶ್ರೀ ಸಂಗ್ರಹ ರಾಮಾಯಣದ ಸಂಗ್ರಹ ಮೂರೂ ಸಹ ವಿವರವಾಗಿ ದೊರೆಯುತ್ತಿವೆ. 
 • M V Lakshminarayana,Bengaluru

  9:19 AM , 08/04/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.‌
  ಮೋಕ್ಷದ ಪರಿಕಲ್ಪನೆಯೇ ಇಲ್ಲದ ಗಿಡಮರ ಪ್ರಾಣಿ ಪಕ್ಷಿಗಳು, ಮೋಕ್ಷದ ಎತ್ತರ ಮುಟ್ಟಲು ಹೇಗೆ ಸಾಧ್ಯ? ಕೃಮಿಕೀಟಗಳಿಗೆ ಮೋಕ್ಷ ಸಿಕ್ಕಾಗ, ಅಲ್ಲಿ ಯಾವ ಶರೀರ ಪ್ರಾಪ್ತಿಯಾಗುತ್ತದೆ?
  ಇಂತಿ ನಮಸ್ಕಾರಗಳು

  Vishnudasa Nagendracharya

  ಇಲ್ಲಿ ತಿಳಿಯಬೇಕಾದ ಅನೇಕ ಅಂಶಗಳಿವೆ. 
  
  ಮರ, ಗಿಡ, ಹುಲ್ಲು ಮುಂತಾದವುಗಳೂ ಸಹ ಮನುಷ್ಯಶರೀರದ ಹಾಗೆಯೇ. ಜಡವಾದ ಶರೀರದಲ್ಲಿ ಚೇತನರಾದ ನಾವಿರುವಂತೆಯೇ ಆ ಶರೀರಗಳಲ್ಲಿ ಚೇತನಗಳಿವೆ. 
  
  ಮನುಷ್ಯಶರೀರದಲ್ಲಿ "ಬೌದ್ಧಿಕ ಸಾಮರ್ಥ್ಯ" ಉನ್ನತಮಟ್ಟದಲ್ಲಿದೆ, ಪ್ರಾಣಿ, ಪಕ್ಷಿ, ವೃಕ್ಷಗಳ ಶರೀರದಲ್ಲಿ "ದೈಹಿಕ ಸಾಮರ್ಥ್ಯ" ಉನ್ನತ ಮಟ್ಟದಲ್ಲಿದೆ. 
  
  ಮರ ಗಿಡಗಳಾಗಿ ಹುಟ್ಟುವ ಜೀವರು ಎರಡು ವಿಧ. ತಮ್ಮ ಕರ್ಮಾನುಸಾರವಾಗಿ ಮರ ಗಿಡಗಳಾಗಿ ಹುಟ್ಟುವವರು. ಜನನಾಂಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳದೇ, ಬತ್ತಲೆಯಾಗಿ ಸ್ನಾನ ಮಾಡಿದರೆ ವೃಕ್ಷಜನ್ಮ ಬರುತ್ತದೆ. ಹಣ್ಣು ಹಂಪಲು, ಆಹಾರ, ವಿದ್ಯೆಗಳನ್ನು ಹಂಚಿಕೊಳ್ಳದೇ ಒಬ್ಬರೆ ಇಟ್ಟುಕೊಂಡು ಬದುಕಿದರೆ ಕಾಡಿನಲ್ಲಿ ವೃಕ್ಷ ಜನ್ಮ ಬರುತ್ತದೆ. ಹೀಗೆ ಸಾವಿರಾರು ಕಾರಣಗಳಿಂದ ವೃಕ್ಷ ಜನ್ಮ ಪಡೆಯುವವರು. ಈ ರೀತಿಯಾಗಿ ಜನ್ಮ ಪಡೆದಾಗ ಸಾಧನೆ ಆಗುವದಿಲ್ಲ. ಕೇವಲ ಮಾಡಿದ ಕರ್ಮ ಸವೆಯಲಿಕ್ಕಾಗಿ ಆ ಜನ್ಮ. 
  
  ಇನ್ನು ಎರಡನೆಯ ವಿಧವಿದೆ - ಸ್ವರೂಪದಲ್ಲಿಯೂ ಮರ ಗಿಡ ಸಸಿ ಹುಲ್ಲುಗಳಾಗಿಯೇ ಇರುವವರು. ಉದಾಹರಣೆಗೆ ಕಲ್ಪವೃಕ್ಷ ಮುಂತಾದವು. 
  
  ಆ ಜೀವರು ಮೊದಲಿಗೆ ಮನುಷ್ಯರಲ್ಲಿ, ಬ್ರಾಹ್ಮಣಾದಿಗಳಾಗಿ ಹುಟ್ಟಿ ಜ್ಞಾನ ಸಂಪಾದನೆ ಮಾಡಿಕೊಂಡು ಮತ್ತೆ ಉತ್ತಮರ ಸೇವೆ ಮಾಡುವದಕ್ಕಾಗಿಯೇ ಮರಗಿಡಗಳಾಗಿ ಹುಟ್ಟುತ್ತವೆ. ಉದಾಹರಣೆಗೆ ಲಂಕೆಯಲ್ಲಿ ಸೀತಾದೇವಿಗೆ ಆಶ್ರಯ ನೀಡಿದ ಶಿಂಶುಪಾವೃಕ್ಷ. ಪಾಂಡವರ ಆಯುಧಗಳಿಗೆ ಆಶ್ರಯವಾದ ಶಮೀವೃಕ್ಷ. ಶ್ರೀಕೃಷ್ಣನ ಪರಂಧಾಮ ಪ್ರವೇಶದ ಸಮಯಕ್ಕೆ ಸೇವೆ ಮಾಡಿದ ವೃಕ್ಷ. ಶ್ರೀ ಜಿತಾಮಿತ್ರತೀರ್ಥಶ್ರೀಪಾದರ ಸಾಧನೆಗೆ ಸೇವೆ ಸಲ್ಲಿಸಿದ ವೃಕ್ಷ. ಶ್ರೀ ಭಾಷ್ಯದೀಪಿಕಾಚಾರ್ಯರ ಸಾಧನೆಗೆ ಸೇವೆ ಮಾಡಿದ ಹುಣಿಸೇಮರ. ಹಾಗೆಯೇ ಮಹಾನುಭಾವರ ಮನೆಯಲ್ಲಿ ಹೂ ತುಳಸಿಗಳ ಗಿಡಗಳು. ಈ ರೀತಿಯಾಗಿ ಹುಟ್ಟಿ ಬರಬೇಕು ಎಂದು ತಪಸ್ಸು ಮಾಡಿ, ಆ ರೀತಿಯಾಗಿ ಹುಟ್ಟಿ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ, ಆ ಜೀವಗಳು. 
  
  ಆ ಸಂದರ್ಭಗಳಲ್ಲಿ ಆ ಮರ ಗಿಡ ಸಸಿಗಳಲ್ಲಿರುವ ಜೀವಗಳಿಗೆ, ತಾವು ಇಂತಹವರ ಸೇವೆಗೆ ಬಂದಿದ್ದೇವೆ ಎಂಬ ಪೂರ್ಣ ಎಚ್ಚರವಿರುತ್ತದೆ. ತಮ್ಮ ನೆರಳು, ಹೂ, ಫಲ ಮುಂತಾದವೆಲ್ಲ ದೇವರ ಸೇವೆಗಾಗಿ ಎಂದು ಸಂಕಲ್ಪ ಮಾಡಿ ಅವು ಸಮರ್ಪಿಸುತ್ತವೆ. ಹೀಗಾಗಿ ಆ ಜೀವರಿಗೆ ಅದು ಮಹತ್ತರ ಸಾಧನೆಯಾಗುತ್ತದೆ. 
  
  ಹೀಗೆ ಸ್ವರೂಪದಲ್ಲಿಯೂ ಮರಗಿಡಗಳಾಗಿರುವ ಜೀವಗಳು ಮನುಷ್ಯರಾ ಹುಟ್ಟಿ ಜ್ಞಾನವನ್ನು ಪಡೆದು, ಸಾಧನೆ ಮಾಡಿ, ಮತ್ತೆ ಅಪರೋಕ್ಷಜ್ಞಾನವನ್ನು ಪಡೆದು, ಮತ್ತೆ ಮರ ಗಿಡಗಳ ರೂಪದಿಂದಲೇ ಶ್ರೀಹರಿ ವಾಯು ದೇವತಾ ಗುರುಗಳ ಸೇವೆಯನ್ನು ಮಾಡಿ ಆ ರೂಪಗಳಿಂದಲೇ ಮುಕ್ತಿಯನ್ನು ಪಡೆಯತ್ತವೆ. ಮುಕ್ತಿಯಲ್ಲಿಯೂ ಮರ-ಗಿಡ-ಸಸಿಗಳಾಗಿದ್ದು ಪರಮಾನಂದದಿಂದ ಬದುಕುತ್ತವೆ. 
  
  ನಾನು ವಾಸ ಮಾಡುತ್ತಿರುವ ಊರಿನಲ್ಲಿ, ನನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ, ಕಾವೇರಿಯ ತೀರದಲ್ಲಿಯೇ ಒಂದು ಆಲದ ಮರ ಮತ್ತು ಎರಡು ಬಿದಿರನ ಮರಗಳಿವೆ. ಇಡಿಯ ಊರು ಆ ಮರಗಳಿಗೆ ಗೌರವದಿಂದ ನಡೆದುಕೊಳ್ಳತ್ತಾರೆ. ಆ ಮರಗಳನ್ನು ಕಡಿಯಲಿಕ್ಕೆ ಹೋದವರಿಗೆ ಅಪಾರ ಅನರ್ಥವುಂಟಾಗಿದೆ. ಆ ಮರವಿರುವ ಸ್ಥಾನದ ಮಾಲಿಕ, ಒಮ್ಮ ಆ ಮರಕ್ಕೆ ನಾಯಿಯೊಂದನ್ನು ಕಟ್ಟಿ ಹಾಕಿದಾಗ ಎರಡೇ ದಿವಸಗಳಲ್ಲಿ ಜೇನುಗಳು ಬಂದು ಆ ನಾಯಿಯನ್ನು ಸಾಯಿಸಿಬಿಟ್ಟಿವೆ. ಅಲ್ಲಿ ಹೇಸಿಗೆ ಮಾಡುವಂತಿಲ್ಲ. ಅಲ್ಲಿ ಕೆಟ್ಟ ಭಾಷೆಯಲ್ಲಿ ಮಾತನಾಡುವದಿಲ್ಲ. ಮಾತನಾಡಿದರೆ ಅನರ್ಥವುಂಟಾಗುತ್ತದೆ. 
  
  ಶ್ರೇಷ್ಠ ಜೀವವೊಂದು ಆ ರೂಪದಲ್ಲಿದ್ದು ವಿಶೇಷ ಸಾಧನೆಯನ್ನು ಮಾಡಿಕೊಳ್ಳುತ್ತಿದೆ. ಹೇಗೆ ಸಾಧಕರು ತಪಸ್ವಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧವಾಗಿಟ್ಟುಕೊಳ್ಳುತ್ತಾರೆಯೋ ಹಾಗೆ ಆ ವಟವೃಕ್ಷ, ವಂಶವೃಕ್ಷ(ಬಿದಿರಿನ ಮರ)ಗಳು ಸಾಧನೆ ಮಾಡುತ್ತಿವೆ. 
  
  ಹೀಗೆ ಕಲಿಯುಗದಲ್ಲಿಯೂ ಸಹ ಈ ರೀತಿಯ ಸಾವಿರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ. 
 • Jayashree karunakar,Bangalore

  8:53 PM , 07/04/2022

  ನಾವು ರಾಮಾಯಣವನ್ನು ಕೇವಲ ಶ್ರವಣ ಮಾಡುತ್ತಿಲ್ಲ ಗುರುಗಳೇ.. ಮನಸ್ಸಿನೊಳಗೆ ರಾಮಾಯಣವನ್ನು ನೋಡುತ್ತಲೂ ಇದ್ದೇವೆ.. 
  
  ಎಂತಹ ಸುಖವೋ ....
  
   ಮಾಡಿದ ಪಾಪರಾಶಿಗಳು ಅದೆಷ್ಟು ಭಸ್ಮವಾಗುತ್ತಿದೆಯೋ ತಿಳಿಯದು...
  
  ಅಯೋದ್ಯೆಯ ಜನರು ತಮ್ಮನ್ನು ಬಿಟ್ಟು ಹೋದ ರಾಮನನ್ನು ನೆನೆದು ದುಃಖಿಸಿದರೆ... 
  
  ನಾವು ಅಂತಹ ರಾಮನನ್ನು ನೋಡಿಯೇ ಇಲ್ಲವಲ್ಲ ಅನ್ನುವ ದುಃಖ ಕಾಡುತ್ತಿದೆ...ನಮಗೆಲ್ಲಿಯ ಆ ಭಾಗ್ಯ...? 
  
  ಆದರೂ ಭಾಗ್ಯವಂತರು ನಾವು...
  
   ಪ್ರವಚನದ ಮೂಲಕವಾದರೂ ನೋಡಿದ ಭಾವ ಮನಸ್ಸಿಗಾಗುತ್ತಿದೆ.. ಕಣ್ಣಿಂದ ಭಕ್ತಿಯ ಆನಂದಭಾಷ್ಪವಾಗುತ್ತಿದೆ... 
  
  ಇದರ ಹಿಂದೆ ನಿಮ್ಮ ಶ್ರಮ ಅದೆಷ್ಟು ಇದೆಯೋ ತಿಳಿಯದು ಗುರುಗಳೇ. ನಿಮ್ಮ ಚರಣಕ್ಕೆ ಶರಣು. 
  
  "ಸಕಲ ಶಬ್ದವನ್ನೂ ರಾಮ ಶಬ್ದದಿಂದಲೇ ಕರೆದರು ತ್ರೇತಾಯುಗದ ಜನ " ಆಚರಿಸಿ ತೋರಿಸಿದ ರೀತಿ ಕೇಳಿ ಹೃದಯ ತುಂಬಿ ಬಂತು 🙏
  ಶಬ್ಧಸ್ಯ ಹಿ ಬ್ರಹ್ಮಣ ಏವಪಂಥಾಹ ಅನ್ನುವದರ ವಿವರಣೆ, ಅರ್ಥ ಮಾಡಿಸಿದ ರೀತಿ !! ಅಬ್ಬಾ !!ಏನು ಹೇಳೋದು? 🙏ಇದು ಬಿಟ್ಟು ಬೇರೇನೂ ಶಬ್ದ ತೋಚುತ್ತಿಲ್ಲ. 
  
  ಮುಂದೇನಾಯಿತು ಬೇಗ ಹೇಳಿ ಗುರುಗಳೇ...
   
  ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..... 🙏🙏
 • JOTHIPRAKASH L,DHARMAPURI

  2:32 PM , 07/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು
 • K.S.SURESH,BANGALORE

  1:43 PM , 07/04/2022

  Excellent upanyaasa. I pray Lord Rama to again take birth as Sreeem and protect this earth from the present miseries
 • Sanjeeva Kumar,Bangalore

  1:27 PM , 07/04/2022

  ಶ್ರೀ ರಾಮಚಂದ್ರನ ವಿಯೋಗ, ತಾವು ಕೊಟ್ಟ ವಿವರಣೆ ಕಣ್ಣಲ್ಲಿ ನೀರು ತುಂಬಿ ಬಂತು, ತಮ್ಮ ಪಾದಾರವಿಂದಗಳಿಗೆ ಹಣೆ ಘಟ್ಟಿಸಿ ನಮಸ್ಕರಸುತ್ತೇನೆ 🙏
 • Laxmi Padaki,Pune

  1:19 PM , 07/04/2022

  ಆಚಾರ್ಯರಿಗೆ ನಮೋ ನಮಃ. ನಿಮ್ಮ ಉಪನ್ಯಾಸ ಗಳು ಕಣ್ಮುಂದೆ ಚಿತ್ರ ಚಿತ್ರವನ್ನು ನೀಡಿ ನಾವು ಆ ಸಂಧರ್ಭದಲ್ಲಿ ಭಾಗಿಯಾದ ಆನಂದ ಕೊಡುತ್ತವೆ.🙏🙏
 • Srinivasa Deshpande,Chennai

  9:04 AM , 07/04/2022

  I agree with Shree Niranjan kamath. Vishnudasacharyaru mesmerizes and takes us to the times of Srimad Ramayan.
  
  Before listening to the pravachan i thought the answer would be bhoobhara harana. But he gave totally a different aspect to the subject.
  
  Feeling blessed to hear this Upanyasa