02/04/2022
ಶ್ರೀಮದ್ ರಾಮಾಯಣಮ್ — 90 ದಶರಥ ಮಹಾರಾಜರು ಅನುಭವಿಸಿದ ನೋವು ಎಂತಹುದು ಎನ್ನುವದು ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. “ಮತ್ತೊಬ್ಬರನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತೇವೆ” ಎನ್ನುವ ಮಾತು ಅನೇಕ ಬಾರಿ ಅರ್ಥ ಕಳೆದುಕೊಂಡು ಬಿಟ್ಟಿರುತ್ತದೆ. ಹಾಗೆ ಹತ್ತಾರು ಬಾರಿ ಹೇಳಿಯೂ ನಮ್ಮವರನ್ನು ಕಳೆದುಕೊಂಡು ನಾವು ಆರಾಮವಾಗಿಯೇ ಬದುಕುತ್ತಿರುತ್ತೇವೆ. ತಲೆಯನ್ನೋ ಎದೆಯನ್ನೋ ಯಾವುದೋ ಶಸ್ತ್ರದಿಂದ ಆಳವಾಗಿ ಘಾಸಿ ಮಾಡಿದಾಗ ಆ ನೋವು ತಡೆಯಲಾರದೆ ಮನುಷ್ಯ ಸತ್ತು ಹೋಗುತ್ತಾನೆ, ಆದರೆ ಮಗ ಕಾಡಿಗೆ ಹೋದ ಎಂಬ ನೋವಿನಿಂದ ಪ್ರಾಣ ಬಿಟ್ಟವರು ದಶರಥರು. ಅಂದರೆ ಆ ನೋವು ಪ್ರಾಣ ತೆಗೆಯುವಷ್ಟು ತೀವ್ರವಾಗಿತ್ತು ಮತ್ತು ದಶರಥರು ಮಕ್ಕಳನ್ನು ಅಕ್ಷರಶಃ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದರು. ಅವರ ಆ ನೋವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೂ ನಿಷ್ಕಲ್ಮಶವಾದ ಆ ಸಾಗರದಂತಹ ಪ್ರೇಮವನ್ನು ಕಿಂಚಿತ್ತಾದರೂ ಅರ್ಥ ಮಾಡಿಕೊಳ್ಳುವ ಪ್ರಯತ್ನವಿದು.
Play Time: 45:12
Size: 3.84 MB