Upanyasa - VNU980

ಕ್ಷಮೆ ಯಾಚಿಸಿದ ದಶರಥರು

ಶ್ರೀಮದ್ ರಾಮಾಯಣಮ್ — 92

ನಮ್ಮ ದುಃಖದ ಅಭಿವ್ಯಕ್ತಿಗೆ ಒಂದು ಘಟನೆ ಕಾರಣವಾಗಿರಬಹುದು, ಆದರೆ ದುಃಖಕ್ಕೆ ಕಾರಣ ಬೇರೆಯೇ ಇರುವ ಸಾಧ್ಯತೆ ಇರುತ್ತದೆ. ಮಗ ವನವಾಸಕ್ಕೆ ಹೋದದ್ದು ಕೌಸಲ್ಯೆಯ ದುಃಖದ ಅಭಿವ್ಯಕ್ತಿಗೆ ಕಾರಣ, ಆದರೆ ದುಃಖ ಪಡುವ ಆವಶ್ಯಕತೆಯಿಲ್ಲ ಎನ್ನುವದನ್ನು ಸುಮಂತ್ರ ಸುಮಿತ್ರೆ ಎಲ್ಲರೂ ಪ್ರತಿಪಾದಿಸಿದರೂ ಕೌಸಲ್ಯಾದೇವಿಯ ದುಃಖ ಶಮನವಾಗುವದಿಲ್ಲ. ಏಕೆಂದರೆ, ಅವರ ದುಃಖಕ್ಕೆ ಕಾರಣ ದಶರಥರ ವರ್ತನೆ. ವನವಾಸ ಆ ದುಃಖವನ್ನು ಅಭಿವ್ಯಕ್ತಿಗೊಳಿಸಿತಷ್ಟೆ. 

ಶ್ರಾದ್ಧದಲ್ಲಿ ಎಂತಹ ಬ್ರಾಹ್ಮಣರನ್ನು ಭೋಜನಕ್ಕೆ ಕರೆಯಬೇಕು, ಕರೆಯಬಾರದು ಎನ್ನುವದರ ಕುರಿತ ಅಪೂರ್ವವಿಷಯದ ನಿರೂಪಣೆ ಇಲ್ಲಿದೆ.  

ದೇವರನ್ನೇ ಮಗನನ್ನಾಗಿ ಪಡೆದರೂ, ಮಗನ ವನವಾಸದಿಂದ ಕೌಸಲ್ಯೆ ದುಃಖ ಅನುಭವಿಸಬೇಕಾಯಿತಲ್ಲ, ದೇವರೇಕೆ ಆ ದುಃಖದಿಂದ ಪಾರು ಮಾಡಲಿಲ್ಲ ಎಂಬ ಪ್ರಶ್ನೆಗೆ ಅದ್ಭುತವಾದ ಉತ್ತರವಿಲ್ಲಿದೆ. 

ಪ್ರಾಣಪ್ರಿಯರಾದ ಇಬ್ಬರು ಜಗಳವಾಡುವಾಗ ಮತ್ತೊಬ್ಬ ಮಿತ್ರನ ಕರ್ತವ್ಯವೇನು ಎನ್ನುವದನ್ನು ಸುಮಿತ್ರಾದೇವಿಯರು ಕಲಿಸುತ್ತಾರೆ. 

ಕೌಸಲ್ಯಾ-ದಶರಥರ ಮಧ್ಯದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣವನ್ನು ತಮ್ಮ ದಿವ್ಯವಾದ ಮಾತುಗಳಿಂದ ತಿಳಿಗೊಳಿಸುವ ಸುಮಿತ್ರಾದೇವಿಯರ ಅದ್ಭುತ ವ್ಯಕ್ತಿತ್ವದ ಚಿಂತನೆ ಇಲ್ಲಿದೆ. 

Play Time: 61:11

Size: 3.84 MB


Download Upanyasa Share to facebook View Comments
7167 Views

Comments

(You can only view comments here. If you want to write a comment please download the app.)
 • Sowmya,Bangalore

  7:57 PM , 30/04/2022

  🙏🙏🙏
 • Kosigi shroff malathi,Hyderabad

  9:16 AM , 16/04/2022

  🙏🙏🙏
 • Jayashree karunakar,Bangalore

  10:28 PM, 14/04/2022

  50.17ರಿಂದ ತುಂಬಾ ತುಂಬಾ ಅರ್ಥವತ್ತಾದ ಅಂತ್ಯ... 
  
  ತಿಳಿದುಕೊಳ್ಳಲೇಬೇಕಾದ ಅಂಶಗಳು... 
  
  "ಸುಮಿತ್ರಾದೇವಿಯ ಪ್ರೀತಿಯ ಸ್ಪರ್ಶ.." ತುಂಬಾ ತುಂಬಾ ಇಷ್ಟವಾದ ಭಾಗ... ನಮಗೂ ಧಶರಥ ಮಹಾರಾಜರ ಅಂತಃ ಪುರದ ದರ್ಶನ ಮಾಡಿಸಿಬಿಟ್ಟಿರಿ ಗುರುಗಳೇ... 
  
  " ಯಾವ ಸಂಧರ್ಭದಲ್ಲಿ ಕೇವಲ ಒಂದು ನೋಟ, ಒಂದು ಸ್ಪರ್ಶ, ಮೌನ, ತೂಕದ ಮಾತು, ಒಂದು ಸಣ್ಣ ನಗು .. ಬೇಕು ಅನ್ನುವದು ನಿರ್ಧಾರ ಮಾಡಬೇಕು... " ಚೆನ್ನಾಗಿದೆ...
  
   ಇಲ್ಲದಿದ್ದರೆ ಬದುಕೇ ಅರ್ಥಹೀನ ಅನ್ನುವದನ್ನು ಚೆನ್ನಾಗಿ ತಿಳಿಸಿದ್ದೀರಿ ಗುರುಗಳೇ. 
  
  ಸಾಧಾರಣವಾಗಿ ರಾಮಾಯಣ ವನ್ನು ಎಲ್ಲರೂ ಕೇಳಿರುತ್ತಾರೆ... ಆದರೆ ನಾವೀಗ ಕೇಳಲು ಹೊರಟಿವದು ರಾಮಾಯಣದ ಕಥೆಯ ಜೊತೆಗೆ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳು, ತಿಳಿಬೇಕಾದ ತತ್ವಗಳು, ಎಳೆ ಎಳೆಯಾಗಿ ಒಂದೊಂದು ಸಂಧರ್ಭದಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವನ್ನು ತೋರಿಸಿಕೊಡುವ ಘಟನೆಗಳು... ಅಬ್ಬಾ ! ಹೇಳಲು ಪದಗಳೇ ಇಲ್ಲ... 
  
  ಆದರೆ ಸಾಮಾನ್ಯರಾದ ನಾವು ಅಷ್ಟು ಎತ್ತರವನ್ನು ಜೀವನದಲ್ಲಿ ಮುಟ್ಟಲು ಸಾಧ್ಯವಾ ಗುರುಗಳೇ? 
  ನಮಗೆ ಆ ಯೋಗ್ಯತೆ ಇದೆಯಾ ಗುರುಗಳೇ?

  Vishnudasa Nagendracharya

  ಶ್ರೀಮದ್ ರಾಮಾಯಣದ ಒಂದೊಂದು ಮಾತು, ಒಂದೊಂದು ನಡೆ ನಮಗರ್ಥವಾಗಬೇಕು, ನಮ್ಮ ಜೀವನದಲ್ಲಿ ಅವು ಅನುಷ್ಠಾನಕ್ಕೆ ಬರಬೇಕು, ಆಗ ನಮ್ಮ ಬದುಕು ಬಂಗಾರವಾಗುತ್ತದೆ. 
 • Sanjeeva Kumar,Bangalore

  1:34 PM , 14/04/2022

  ಎಷ್ಟು ಸುಂದರವಾದ ವಿವರಣೆಯೊಂದಿಗೆ ರಾಮಯಣವನ್ನು ನಮಗೆ ತಲುಪಿಸು ತಿದ್ದೀರಿ ಗುರುಗಳೆ ಧನ್ಯೋಸ್ಮಿ 🙏

  Vishnudasa Nagendracharya

  ಗುರ್ವನುಗ್ರಹ.
 • Niranjan Kamath,Koteshwar

  6:58 PM , 13/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಶ್ರೀ ದಶರಥ ಮಹಾರಾಜರ ಹಾಗೂ ಕೌಸಲ್ಯಾ ದೇವಿಯರ ಮಾತುಗಳ ಅದ್ಭುತ ವರ್ಣನೆ ಮನ ಕಲುಕುವಂತಿತ್ತು. ಧನ್ಯೋಸ್ಮಿ.

  Vishnudasa Nagendracharya

  ರಾಮಾಯಣದ ಈ ಭಾಗಗಳು ಮನಸ್ಸನ್ನು ಆದ್ರಗೊಳಿಸಿಬಿಡುತ್ತದೆ. 
 • Bindumadhav,Bangalore

  11:10 AM, 14/04/2022

  ತುಂಬಾ ಚೆನ್ನಾಗಿ ಮೂಡಿಬಂದಿದೆ....
 • JOTHIPRAKASH L,DHARMAPURI

  4:11 PM , 13/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ‌‌ . ನಿಮ್ಮ ಪ್ರವಚನಗಳು ಬಹಳ ಚೆನ್ನಾಗಿ ಮೂಡಿ ಬರುಬರುತ್ತಿದ. ಬಹಳಷ್ಟು ವಿಷಯಗಳು ನಿಮ್ಮಿಂದ ನಮಗೆ ತಿಳಿಯುತ್ತಿದೆ‌. ನಮಸ್ಕಾರಗಳು.

  Vishnudasa Nagendracharya

  ಬಹಳ ಸಂತೋಷ. 
  
  ಶ್ರೀಮದ್ ರಾಮಾಯಣದ ಪ್ರವಚನಗಳನ್ನು ಜಾತಿ ಮತ ಭೇದವಿಲ್ಲದೇ ನಿಮ್ಮ ಪರಿಚಯದ ಪ್ರತಿಯೊಬ್ಬರಿಗೂ ತಲುಪಿಸಿ. 
  
  ಎಲ್ಲರ  ಮನೆಯ ಸಮಸ್ಯೆಗಳನ್ನು ಪರಿಹಾರ ಮಾಡಿ ಮನಸ್ಸಿಗೆ ನೆಮ್ಮದಿ ನೀಡುವ ಗ್ರಂಥ ಶ್ರೀಮದ್ ರಾಮಾಯಣ. 
 • Laxmi Padaki,Pune

  2:10 PM , 13/04/2022

  ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು. ನಿಮ್ಮಿಂದ ಕೇಳಲ್ಪಡುವ ಯಾವುದೇ ಉಪನ್ಯಾಸಗಳು ಬಹಳ ಅದ್ಭುತವಾಗಿ ಮೂಡಿಬರುತ್ತವೆ.ಹೃದಯ ತುಂಬಿ ಕಣ್ಣೀರು ಸಂದರ್ಭಕ್ಕೆ ಸರಿಯಾಗಿ ದಳ ದಳ ಬಂದುಬಿಡುತ್ತವೆ.ಧನ್ಯೊಸ್ಮಿ.🙇🙇

  Vishnudasa Nagendracharya

  ಶ್ರೀಹರಿ ವಾಯು ದೇವತಾ ಗುರುಗಳು ಮಾಡಿಸುತ್ತಿರುವ ಜ್ಞಾನಕಾರ್ಯ, ನುಡಿಸುತ್ತಿರುವ ನುಡಿಗಳು. ನಾನು ತಂತಿಯಷ್ಟೆ. ವೀಣೆಯನ್ನು ನುಡಿಸಿ ಆನಂದವನ್ನು ನೀಡುತ್ತಿರುವವರು ಶ್ರೀಹರಿವಾಯುದೇವತಾಗುರುಗಳು. 
 • Srikar K,Bengaluru

  9:36 AM , 13/04/2022

  Gurugale, as usual, tumba sundarada vivarane. But the problem is how to understand whether it is Moha or is it Preeti ? How to distinguish between these two? Dhanyawadagalu

  Vishnudasa Nagendracharya

  ಉತ್ತರ ತುಂಬ ಸರಳ. 
  
  ಪ್ರತಿಯೊಬ್ಬ ತಂದೆ ತಾಯಿಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. 
  
  ಮಕ್ಕಳು ಅಧರ್ಮ, ಅನ್ಯಾಯ ಮಾಡಿದಾಗ ಅವರನ್ನು ತಿದ್ದಿ ಸರಿದಾರಿಗೆ ತಂದರೆ ಅದು ಪ್ರೀತಿ. ಸರ್ವಥಾ ಮೋಹವಲ್ಲ. 
  
  ಮಕ್ಕಳು ಅಧರ್ಮ ಅನ್ಯಾಯ ಮಾಡಿದಾಗ ಅವರನ್ನು ತಿದ್ದದೇ, ಅವರನ್ನು ಸಮರ್ಥಿಸಿಕೊಂಡರೆ ಅದು ಮೋಹ. ಸರ್ವಥಾ ಪ್ರೀತಿಯಲ್ಲ. 
  
  ಮತ್ತೊಬ್ಬರು ಮಾಡುವ ಅಧರ್ಮ ಅನ್ಯಾಯಗಳನ್ನ ಕಂಡೂ ಅದನ್ನು ಸಮರ್ಥಿಸಿದರೆ ಅದು ಮೋಹ. 
  
  ಮತ್ತೊಬ್ಬರು ತಪ್ಪು ಮಾಡಿದರೂ, ಅವರಿಗೆ ತಿದ್ದಿಕೊಳ್ಳುವಂತೆ ತಿಳಿಸಿ, ತಿದ್ದಿ ನಮ್ಮವರನ್ನಾಗಿಯೇ ಉಳಿಸಿಕೊಳ್ಳುವದು ಪ್ರೀತಿ. 
  
  ಲಕ್ಷ್ಮಣರು ದಶರಥರನ್ನು ಕೊಂದೇ ಬಿಡುತ್ತೇನೆ ಎಂದು ಹೊರಡುತ್ತಾರೆ. ರಾಮದೇವರು ಅವರನ್ನು ತಿದ್ದಿದರು, ಬುದ್ಧಿ ಹೇಳಿದರು. ರಾಮದೇವರು ಲಕ್ಷ್ಮಣರ ಮೇಲೆ ಮಾಡುತ್ತಿದ್ದ ಪ್ರೀತಿ ಮುಂದುವರೆಯಿತು. 
  
  ದುರ್ಯೋಧನ ತಪ್ಪು ಮಾಡಿದ. ಧೃತರಾಷ್ಟ್ರರು ತಿದ್ದಲಿಲ್ಲ, ಬದಲಾಗಿ ಸಮರ್ಥಿಸಿಕೊಂಡರು. ಇದೇ ಮೋಹ. 
  
  ಕೇವಲ ಪ್ರೀತಿ ಇದ್ದಾಗ ಮನುಷ್ಯ ಕುರುಡಾಗುವದಿಲ್ಲ. ತಪ್ಪನ್ನು ತಪ್ಪು ಎಂದು ಸಾರುತ್ತಾನೆ. ತಿದ್ದುಕೊಳ್ಳಲು ಪ್ರೇರಿಸುತ್ತಾನೆ. 
  
  ಮೋಹ ಇದ್ದಾಹ ಮನುಷ್ಯ ಕುರುಡಾಗುತ್ತಾನೆ. ಅವರು ಮಾಡುವ ಅಧರ್ಮವನ್ನು ವಿರೋಧಿಸುವದಿಲ್ಲ, ಪ್ರೋತ್ಸಾಹಿಸುತ್ತಾನೆ.