Upanyasa - VNU981

ಶ್ರವಣಕುಮಾರರ ಹತ್ಯೆ

ಶ್ರೀಮದ್ ರಾಮಾಯಣಮ್ — 93

ಶಬ್ದವೇಧಿ ವಿದ್ಯೆಯನ್ನು ಅವಿವೇಕದಿಂದ ಬಳಸಿದ ಕಾರಣಕ್ಕೆ, ಕೊಡದಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಯಜ್ಞದತ್ತ ಎಂಬ ಹೆಸರಿನ ಮುನಿಕುಮಾರರೊಬ್ಬರನ್ನು ಆನೆ ಎಂದು ತಿಳಿದು ದಶರಥರು ಕೊಂದು ಹಾಕಿದ ಘಟನೆಯ ವಿವರ. 

ಸಾಯುವ ಕ್ಷಣದಲ್ಲಿಯೂ ಆ ಮುನಿಕುಮಾರರ ಧರ್ಮಾಚರಣೆ ಅವರ ಬಗ್ಗೆ ನಮ್ಮ ಗೌರವವನ್ನು ನೂರ್ಮಡಿ ಮಾಡುತ್ತದೆ. ಧರ್ಮಾಚರಣೆಯ ಬಗ್ಗೆ ಜಾಗೃತಿ ಮೂಡಿಸುವ ಭಾಗ. 

ವೃದ್ಧರಾದ, ಕುರುಡರಾದ ಅವರ ತಂದೆತಾಯಿಗಳ ಕುರಿತು ಅವರಿಗಿದ್ದ ಭಕ್ತಿ ಪ್ರೇಮಗಳು ನಮ್ಮ ಹೃದಯವನ್ನು ಆರ್ದ್ರಗೊಳಿಸಿಬಿಡುತ್ತವೆ. 

Play Time: 28:40

Size: 3.84 MB


Download Upanyasa Share to facebook View Comments
6400 Views

Comments

(You can only view comments here. If you want to write a comment please download the app.)
 • Venkatesan,Chennai

  8:19 PM , 01/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. 
   
  ದೀರ್ಘ ಮತ್ತು ಆಳವಾದ ಉತ್ತರಗಳಿಗಾಗಿ ಮತ್ತೆ ಮತ್ತೆ ನಮಸ್ಕಾರಗಳು.
  ನಮ್ಮ ಪೂರ್ವಜರ ಪ್ರಾಮಾಣಿಕತೆಯನ್ನು ಸ್ಮರಿಸಿದರೆ ಮೈಯಲ್ಲ ರೋಮಾಂಚನವಾಗುತ್ತದೆ.
 • Venkatesan,Chennai

  6:06 PM , 31/05/2022

  Sri Gurubhyo Namaha. Gurugalige Sastanga Namaskaragalu.
  
  ಶ್ರವಣ ಕುಮಾರರು, “ತಮ್ಮ ತಂದೆ ತಾಯಿಗಳು ವೃದ್ಧರು, ಕುರುಡರು. ದಶರಥ ಮಹಾರಾಜ ನೀನಾಗಿ ಹೋಗಿ ಈ ಘಟನೆಯನ್ನು ಹೇಳದೆ ಹೋದರೆ. ಈ ವಿಷಯ ಅವರಿಗೆ ತಿಳಿದಾಗ ಅವರು ನಿಮಗೆ, ನಿಮ್ಮ ಕುಲಕ್ಕೆ ಶಾಪ ಕೊಡುತ್ತಾರೆ.”
  
  ಹೇಗೇ ಒಂದು ಕುಲವನ್ನ ನಾಶ ಮಾಡುವಷ್ಟು ಶಕ್ತಿ ಇರುವ ಆ ಋಷಿಗಳು, 
  
  i. ತನ್ನ ಮಗನನ್ನು ಸಾವಿನಿಂದ ಏಕೆ ಬದುಕಿಸಲಿಲ್ಲ? ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರು ಸತ್ತವರನ್ನು ಬದುಕಿಸಿದ್ದನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ಹಾಗೆ ಈ ಋಷಿಗಳು ಯಾಕೆ ತನ್ನ ಮಗನನ್ನು ಬದುಕಿಸಲಿಲ್ಲಾ?
  
  ii. ತಮ್ಮ ವೃದ್ಧ ದೇಹವನ್ನ ಯೌವನವನ್ನಾಗಿ ಮಾಡಿ ಕೊಲ್ಲ ಬಹುದಲ್ಲ?ತಮ್ಮ ಕಣ್ಣು ಕಿವಿಗಲ್ಲನ್ನು ಸಹ ಸರಿಪಡಿಕೊಳ್ಳ ಬಹುದಾಗಿದ್ದಲ್ಲಾ ಯಾಕೆ ಮಾಡಲಿಲ್ಲ?
  
  iii ದಶರಥ ಮಹಾಜರಾಜರು ಸಾಮಾನ್ಯ ರಾಜರಲ್ಲ . ಒಮ್ಮೆ ಅವರು ದೇವತೆಗಳ ಜೊತೆ ಸೇರಿಕೊಂಡು ಅಸುರರ ಬಳಿ ಯುದ್ಧ ಮಾಡಿದರು. ಅವರು ಸಹ ದೇವತೆಗಳಲ್ಲಿ ಪ್ರಾರ್ಥನೆ ಮಾಡಿ ಶ್ರವಣ ಕುಮಾರರನ್ನ ಬದುಕಿಸ ಬಗುದಾಗಿತ್ತಲ್ಲಾ?

  Vishnudasa Nagendracharya

  ಮೊದಲನೇ ಪ್ರಶ್ನೆಗೆ ಉತ್ತರಗಳು — 
  
  ಮೊದಲಿಗೆ ಈ ರೀತಿಯ ಪವಾಡದಂತಹ ಘಟನೆಗಳು ಎಲ್ಲ ಕಾಲಕ್ಕೂ ನಡೆಯುವದಿಲ್ಲ. ನಡೆಯಬೇಕಾದರೆ ಅದಕ್ಕೆ ಮಹತ್ತ್ವದ ಕಾರಣವಿರಬೇಕು. 
  
  
  1. ಸತ್ತವರು ಮತ್ತೆ ಬದುಕಬೇಕಾದರೆ, ಸತ್ತು ಬದುಕುವ ಕರ್ಮ ಆ ವ್ಯಕ್ತಿಗಿರಬೇಕು. ಸತ್ಯವಾನರಿಗೆ ಇದ್ದಂತೆ. ಆಗ ಮಾತ್ರ ಅವರನ್ನು ಬದುಕಿಸಲು ಸಾಧ್ಯ. 
  
  2. ಸತ್ತವರನ್ನು ಬದುಕಿಸಲು ನಾವು ಊಹಿಸಲಾಗದಷ್ಟು ಮಹತ್ತರ ಪುಣ್ಯವನ್ನು ಧಾರೆಯೆರೆಯಬೇಕು. ಈ ಋಷಿ ಮುನಿಗಳು ಆ ಪುಣ್ಯವನ್ನು ಸಾಧನೆಗೆ ಉಪಯೋಗಿಸಿಕೊಳ್ಳಲು ಬಯಸುತ್ತಾರೆ. ಅತ್ಯಂತ ಅನಿವಾರ್ಯವಾದ ಮತ್ತು ಮಹತ್ತರ ಸಂದರ್ಭದ ಘಟನೆಗಳಲ್ಲಿ ಮಾತ್ರ ಪುಣ್ಯವನ್ನು ವ್ಯಯ ಮಾಡಿ ಸತ್ತವರನ್ನು ಬದುಕಿಸುತ್ತಾರೆ. 
  
  3. ಸಾವು ಈ ಲೋಕದ ಸಹಜ ಧರ್ಮ. ಭಗವಂತನೇ ಮಾಡಿರುವ ಈ ಸಾವಿನ ನಿಯಮವನ್ನು ಸುಲಭವಾಗಿ ದಾಟಲು ಸಾಧ್ಯವಿಲ್ಲ. ದಾಟಬೇಕಾದರೆ ಮಹತ್ತರ ಕಾರಣವಿರಬೇಕು. 
  
  ಎರಡನೇ ಪ್ರಶ್ನೆಗೆ ಉತ್ತರಗಳು —
  
  1. ಕಣ್ಣು ಕಿವಿಗಳನ್ನು ಸರಿ ಮಾಡಿಕೊಳ್ಳಲೂ ಸಹ ಪುಣ್ಯದ ವ್ಯಯ ಮಾಡಬೇಕು. ಪುಣ್ಯವನ್ನು ಸಾಧನೆಗೆ ಉಪಯೋಗಿಸಿಕೊಳ್ಳಬೇಕೇ ಹೊರತು ತಮ್ಮ ವೈಯಕ್ತಿಕ ಕಷ್ಟದ ನಿವಾರಣೆಗಲ್ಲ ಎಂದು ಮಹಾನುಭಾವರು ಭಾವಿಸುತ್ತಾರೆ. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ತಮ್ಮ ದಾರಿದ್ರ್ಯವನ್ನು ಕಳೆದುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆದರೆ, ತಮ್ಮ ಸ್ಮರಣೆ ಮಾಡುವ ಭಕ್ತರ ಸಕಲ ಕಷ್ಟಗಳನ್ನೂ ಪರಿಹರಿಸುತ್ತಾರೆ. 
  
  2. ದೇಹದ ಯಾವುದೇ ಅನಾರೋಗ್ಯ, ಯಾವುದೇ ಕಷ್ಟ, ನಮ್ಮ ಪಾಪದ ಪ್ರತಿಫಲವಾಗಿ ಬಂದಿರುತ್ತದೆ. ಹೀಗಾಗಿ ಅದನ್ನು ಅನುಭವಿಸಿ ಆ ಕರ್ಮವನ್ನು ಸವೆಸಬೇಕೆಂದು ದೊಡ್ಡವರು ಯೋಚಿಸುತ್ತಾರೆಯೇ ಹೊರತು, ಅದನ್ನು ಕಳೆದುಕೊಳ್ಳಲು ಪುಣ್ಯದ ವ್ಯಯ ಮಾಡಲು ಇಚ್ಛಿಸುವದಿಲ್ಲ. 
  
  3. ಆರೋಗ್ಯ, ಸಂಪತ್ತು ಮುಂತಾದ ಎಲ್ಲವೂ ಇದ್ದಾಗ ಮಾಡುವ ಸಾಧನೆಯಿಂದ ದೊರೆಯುವ ಪುಣ್ಯಕ್ಕಿಂತ, ಕಷ್ಟದಲ್ಲಿದ್ದಾಗ ಮಾಡುವ ಸಾಧನೆಗೆ ಫಲ ಹೆಚ್ಚು. ಆಚಾರ್ಯರು ಹೇಳುವಂತೆ ಧನವಂತ ನೀಡುವ ದಾನಕ್ಕಿಂತ ಬಡವ ನೀಡುವ ದಾನಕ್ಕೆ ಫಲ ಹೆಚ್ಚು. ಹೀಗಾಗಿ, ಮಹಾನುಭಾವರು ಸಾಧನೆ ಮಾಡುವಾಗ ಕಷ್ಟ ಬಂದಾಗ ಸಂತೋಷ ಪಡುತ್ತಾರೆ. “ಬಗೆವರೋ ಬಡತನ ಭಾಗ್ಯ ಭಾಗ್ಯವಂತರು” ಬಡತನವನ್ನು ಕಷ್ಟವನ್ನು ಭಾಗ್ಯ ಎಂದು ಭಾವಿಸುವ ಈ ಜನ ಆ ಭಾಗ್ಯಗಳನ್ನು ಕಳೆದುಕೊಳ್ಳುತ್ತಾರೆಯೇ?
  
  ಮೂರನೆಯ ಪ್ರಶ್ನೆಗೆ ಉತ್ತರ —
  
  1. ಅಭಿಮನ್ಯುವಿನ ತಂದೆ ಸಮಗ್ರ ಸುರಪ್ರಪಂಚದ ಒಡೆಯ ಇಂದ್ರದೇವರ ಅವತಾರ ಅರ್ಜುನರು. ಆಯುಷ್ಯವನ್ನು ಹರಣ ಮಾಡುವ ದೇವತೆ ಯಮಧರ್ಮ ದೊಡ್ಡ ದೊಡ್ಡಪ್ಪ. ಪ್ರಾಣವನ್ನು ನೀಡುವ ಮುಖ್ಯಪ್ರಾಣ ಎರಡನೆಯ ದೊಡ್ಡಪ್ಪ. ಆರೋಗ್ಯ ಆಯುಷ್ಯಗಳ ದೇವತೆಗಳು ಚಿಕ್ಕಪ್ಪಂದಿರು. ಸ್ವಯಂ ಸರ್ವೇಶ್ವರನಾದ ಶ್ರೀಹರಿ ಸೋದರಮಾವ. ಇಷ್ಟಿದ್ದೂ ಅಭಿಮನ್ಯುವನ್ನು ಇವರ್ಯಾರೂ ಉಳಿಸಿಕೊಳ್ಳಲಿಲ್ಲ. ಕಾರಣ, ಅಭಿಮನ್ಯುವಿನ ಕರ್ಮವಿದ್ದದ್ದು ಅಷ್ಟೆ. ಇಲ್ಲಿಯೂ ಅದೇ ಉತ್ತರ, ಶ್ರವಣಕುಮಾರರಿಗೆ ಸತ್ತು ಮತ್ತೆ ಜೀವ ಪಡೆಯುವ ಕರ್ಮ ಇಲ್ಲವಾದ್ದರಿಂದ ಆ ರೀತಿಯಾಗಿ ಘಟನೆ ನಡೆಯುವದೇ ಇಲ್ಲ. 
  
  ಕರ್ಮವಿತ್ತೋ ಇಲ್ಲವೋ ಎಂದು ನಾವು ಹೇಗೆ ನಿರ್ಣಯಿಸುವದು? ಅತ್ಯಂತ ಸುಲಭ. ಶ್ರೀಮದಾಚಾರ್ಯರು ತಿಳಿಸುತ್ತಾರೆ — “ಕಾರ್ಯಾನುಮೇಯಂ ಕಾರಣಮ್” ಇತಿಹಾಸದಲ್ಲಿ ಈ ಘಟನೆ ನಡೆದಿದೆ. ಸತ್ತವರನ್ನು ಮತ್ತೆ ಬದುಕಿಸಿಲ್ಲ. ಅದರಿಂದಲೇ ನಿರ್ಣಯವಾಗುತ್ತದೆ, ಆ ಸತ್ತು ಮತ್ತೆ ಜೀವ ಪಡೆಯುವ ಕರ್ಮ ಶ್ರವಣಕುಮಾರರಲ್ಲಿ ಇಲ್ಲ ಎಂದು. 
  
  2. ದೇವತೆಗಳ ಪರಿಚಯ ಸಖ್ಯ ದಶರಥರಿಗಿದ್ದ ಮಾತ್ರಕ್ಕೆ ಎಲ್ಲದಕ್ಕೂ ದೇವತೆಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಗೆಳೆಯರಾದ ಆ ದೇವೆತಗಳಿಗೆ ಹವಿಸ್ಸು ನೀಡಬೇಕಾದರೂ, ದಶರಥರೂ ಯಜ್ಞದ ಕ್ರಮವನ್ನು ಅನುಸರಿಸಲೇ ಬೇಕು. ಮಕ್ಕಳನ್ನು ಪಡೆಯಬೇಕಾದರೂ ಯಜ್ಞ ಮಾಡಿಯೇ ದೇವತೆಗಳನ್ನು ತೃಪ್ತಿ ಪಡಿಸಬೇಕು. ಶಾಸ್ತ್ರದ ಮಾರ್ಗವನ್ನು ಬಿಟ್ಟು ಸಖ್ಯವನ್ನು ದುರುಪಯೋಗ ಪಡಿಸಿಕೊಳ್ಳುವಂತಿಲ್ಲ. ಅಧಿಕಾರ, ಸ್ನೇಹ ಇತ್ಯಾದಿಗಳನ್ನು ದುರುಪಯೋಗ ಪಡಿಸಿಕೊಂಡರೆ ದ್ಯು ಎಂಬ ವಸುವಿಗಾದಂತೆ ಶಾಪಗಳು ದೊರೆಯುತ್ತವೆ. 
  
  3. ಇನ್ನು ಸ್ವಯಂ ದಶರಥ ಮಹಾರಾಜರಿಗೇ ಈ ಹತ್ಯೆಯ ಫಲವಾಗಿ ಶೋಕಯುಕ್ತ ಮರಣವನ್ನು ಪಡೆಯುವ ಕರ್ಮವಿದೆ. ಶ್ರವಣಕುಮಾರರನ್ನು ಬದುಕಿಸಿದರೆ ಆ ಕರ್ಮ ಕೆಲಸ ಮಾಡುವದಿಲ್ಲ. ಆ ಕರ್ಮ ಪ್ರಬಲವಿರುವದರಿಂದ, ಅವರಿಗೆ ಬದುಕಿಸುವ ಆಲೋಚನೆ ಸಹಿತ ಬರಲಿಲ್ಲ.
  
  
  ಎಲ್ಲ ಪ್ರಶ್ನೆಗಳಿಗೂ ಉತ್ತರ — 
  
  ಪವಾಡದಂತಹ ಅತಿಮಾನುಷ ಘಟನೆಗಳು ನಡೆಯಬೇಕಾದರೆ ಅದಕ್ಕೆ ಕಾರಣಗಳೂ ಮಹತ್ತ್ವದ್ದಾದಿರಬೇಕಾಗುತ್ತದೆ. ಎಲ್ಲ ಸಂದರ್ಭದಲ್ಲಿಯೂ ಅವು ನಡೆದರೆ ಅದು ಪವಾಡ, ಮಹಾಸಾಮರ್ಥ್ಯ ಹೇಗಾಗುತ್ತದೆ? 
 • Kosigi shroff malathi,Hyderabad

  8:03 AM , 25/04/2022

  🙏🙏
 • Nalini Premkumar,Mysore

  7:14 AM , 17/04/2022

  🙏🙏🙏
 • Vishwnath MJoshi,Bengaluru

  4:55 PM , 15/04/2022

  ಶ್ರವಣ ಕುಮಾರರು ಸ್ವರೂಪತಃ ಯಾರು?

  Vishnudasa Nagendracharya

  ಶ್ರೀಮದ್ ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಅವತಾರಪುರುಷರೇ ಆಗಬೇಕೆಂದಿಲ್ಲ.  
  ಶ್ರವಣಕುಮಾರರು ಮನುಷ್ಯೋತ್ತಮಜೀವರು. ಯಾರ ಅವತಾರವೂ ಅಲ್ಲ. 
   
 • Vishwnath MJoshi,Bengaluru

  4:53 PM , 15/04/2022

  ಶ್ರವಣಕುಮಾರನಂಥ ಮಗ ಎಂದಿಗು ಬರುವುದಿಲ್ಲ
 • JOTHIPRAKASH L,DHARMAPURI

  12:48 PM, 15/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಈ ಪ್ರಸಂಗ ನಮ್ಮ ಕರ್ತವ್ಯ ನನ್ನು ಜಾಗ್
 • V.Meena Kumari,Mysoe

  12:31 PM, 15/04/2022

  ಶ್ರವಣ ಕುಮಾರರ ಕರ್ತವ್ಯ ಪ್ರಜ್ಞೆಯನ್ನು ಕೆeಳುತಿದಂತೆ
  ನಮ್ಮ ಕರ್ತವ್ಯ ಜಾ ಗೃ ತ 🙏ಗೊಳಿಸುತ್ತದೆ . ಧನ್ಯವಾದಗಳು
  ಆಚಾರ್ಯರಿಗೆ . 🙏🙏🙏🙏🙏
 • Laxmi Padaki,Pune

  10:18 AM, 15/04/2022

  ಶ್ರೀ ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.ಅದ್ಬುತ ನಿಮ್ಮ ಪ್ರತಿಯೊಂದು ಉಪನ್ಯಾಸವೂ.ಧನ್ಯೊಸ್ಮಿ🙇🙇