Upanyasa - VNU982

ದಶರಥರಿಗೆ ಶಾಪ

ಶ್ರೀಮದ್ ರಾಮಾಯಣಮ್ — 94

ರಘುವಂಶದ ಬಗ್ಗೆ ಆ ವೃದ್ಧರಿಗಿದ್ದ ಗೌರವ, ಮಗನನ್ನು ಕಳೆದುಕೊಂಡ ದುಃಖದಲ್ಲಿಯೂ ಧರ್ಮವನ್ನು ಬಿಡದ ಅವರ ಶ್ರದ್ಧೆಯ ಚಿತ್ರಣದೊಂದಿಗೆ ಮನಕಲಕುವ ಅವರ ಪುತ್ರಶೋಕದ ಕುರಿತು ನಾವಿಲ್ಲಿ ಕೇಳುತ್ತೇವೆ. 

ಯಜ್ಞದತ್ತರು ಸ್ವರ್ಗವನ್ನು ಪಡೆದದ್ದು ತಿಳಿದರೂ ಅವರ ತಂದೆ ತಾಯಿಯರಿಗೆ ದುಃಖ ಕಡಿಮೆಯಾಗುವದಿಲ್ಲ. ಅದಕ್ಕೆ ಕಾರಣದ ನಿರೂಪಣೆ ಇಲ್ಲಿದೆ. 

Play Time: 37:31

Size: 3.84 MB


Download Upanyasa Share to facebook View Comments
6208 Views

Comments

(You can only view comments here. If you want to write a comment please download the app.)
 • Venkatesan,Chennai

  9:44 PM , 01/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. 
  
   ಶ್ರವಣ ಋಷಿ  ಮತ್ತು ಅವರ ಹೆಂಡತಿ ಇಬ್ಬರು ತುಂಬಾ ವಯಸ್ಸಾದವರು. दुर्बलावन्धौ वृद्धावपरिणायकौ 
  
  i. ಅವರು ತಮನ್ನ ನೋಡಿಕೊಳ್ಳಲು ಒಬ್ಬ ಸಹಾಯಕರನ್ನು ನೇಮಿಸುವಂತೆ ದಶರಥ ಮಹಾರಾಜರನ್ನು ಕೇಳಬಹುದಿತ್ತು. ಅಥವಾ ದಶರಥ ಮಹಾರಾಜ ಅವರನ್ನು ನೋಡಿಕೊಳ್ಳಬಹುದು. ಈಗಿನ ಕಾಲದಲ್ಲಿಯೂ ಮಗನನ್ನ ಕಳಕೊಂಡ ಅನೇಕ ತಂದೆ ತಾಯಿಗಳು ಬದುಕುವದನ್ನ ನಾವು ಕಾಣುತ್ತೆವೆ. ಅವರು ಬದುಕಲು ಸಾಧ್ಯವಾದರೆ
  
  ಇವರಿಗೆ ಯಾಕೆ ಸಾಧ್ಯವಿಲ್ಲಾ? ನನ್ನ ಸಂದೇಹವೇನೆಂದರೆ ಲೌಕಿಕ ಜನರು ಕೂಡ ತಮ್ಮ ಮಗನಿಲ್ಲದೆ ಬದುಕಬಲ್ಲರು. ಹಾಗಾದರೆ ಒಬ್ಬ ಅಧ್ಯಮ ಜೀವನವನ್ನ ಮಾಡುವ ಋಷಿಗೆ ಹೇಗೆ ಸಾಧ್ಯವಿಲ್ಲ ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು?
  
  “ನನ್ನ ಮಗನನ್ನ ಕಳಕೊಂಡ ಅಘಡವತ ದುಃಖ ನನಗಾಗಿದೆ. ಹೀಗೇ ನಿನಗೂ ಇದೆ ರೀತಿಯಾಗಿ ಪುತ್ರ ಶೋಕದಿಂದ ಸಾವುಂಟಾಗಲಿ.” ಎಂದು ಸಾಪ ಕೊಟ್ಟರು.
  
  ii. ಅವರು ವೃದ್ಧಾಪ್ಯದಲ್ಲಿದ್ದಾರೆ. दुर्बलावन्धौ वृद्धावपरिणायकौ, जानन्नपि च किं कुर्यादशक्तिरपरिक्रमः ಅವರು ಸ್ವರ್ಗದಲ್ಲಿ ಹೊಸ ದೇಹವನ್ನು ಪಡೆಯಲಿದ್ದಾರೆ ಮತ್ತು ತಮ್ಮ ಪ್ರೀತಿಯ ಮಗನೊಂದಿಗೆ ವಾಸಿಸಲು ಹೋಗುತ್ತಿದ್ದಾರೆ. ಸ್ವರ್ಕ ದೇಹ ಮತ್ತು ಜೀವನವು ಈ ಪ್ರಪಂಚಕ್ಕಿಂತ ಹೆಚ್ಚಿನದು. ಅವರ ಮಗ ಸ್ವರ್ಕದಳ್ಳಿ ಮಹತ್ತರವಾದ ಸ್ಥಾನ ಪಡೆದ. ಆಗಲೂ ಯಾಕೆ एवं त्वं पुत्रशोकेन राजन्कालं करिष्यसि ಎಂದು ಶಾಪ ಕೊಟ್ಟರು?
 • Sowmya,Bangalore

  7:58 PM , 03/05/2022

  🙏🙏🙏
 • Sanjeeva Kumar,Bangalore

  9:14 AM , 29/04/2022

  ಅನಂತ ಪ್ರಣಾಮಗಳು ಗುರುಗಳೆ ಧನ್ಯೋಸ್ಮಿ🙏
 • Dayananda Patil,Bangalore

  8:43 AM , 18/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  ಗುರುಗಳೇ ಹರಿ ಭಕ್ತರಿಗೆ ಅಪಮೃತ್ಯು ಇರುವುದಿಲ್ಲ. ಆದರೂ ಶ್ರವಣ ಕುಮಾರರಿಗೆ ಏಕೆ ಹೀಗಾಯಿತು.

  Vishnudasa Nagendracharya

  ಹರಿಭಕ್ತರಿಗೆ ಅಪಮೃತ್ಯು ಉಂಟಾಗುವದಿಲ್ಲ ಎಂದಲ್ಲ. ಉಂಟಾಗುವ ಅಪಮೃತ್ಯುವಿನಿಂದ ಪಿಶಾಚಾದಿ ಜನ್ಮಗಳು ಬರುವದಿಲ್ಲ ಎಂದರ್ಥ. 
  
  ಶ್ರವಣಕುಮಾರರಂತೂ ನೇರವಾಗಿ ಸ್ವರ್ಗಕ್ಕೆ ಹೋದರು ಎನ್ನುವ ಮಾತು ಶ್ರೀಮದ್ ರಾಮಾಯಣದಲ್ಲಿಯೇ ಬಂದಿದೆ. 
 • Nalini Premkumar,Mysore

  10:37 PM, 17/04/2022

  ಹರೆ ಶ್ರೀನಿವಾಸ ಗುರುಗಳೇ ಅದ್ಬುತ ವಾದ ಪ್ರಸಂಗ ಕೇಳುವಾಗ ಮನ ತುಂಬಿ ಬರುತ್ತದೆ ನಮ್ಮ ಕಣ್ಣ ಮುಂದೆ ನಡೆದಂತೆ ಭಾಸವಾಗುತ್ತದೆ ಕೇಳುತ್ತಿರುವ ನಾವೆ ಪುಣ್ಯವಂತರು ಗುರುಗಳೇ ನಿಮಗೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Jayashree karunakar,Bangalore

  3:30 PM , 17/04/2022

  ಕಲಿಯುಗದಲ್ಲಿರುವ ಮಂದಮತಿಗಳಾದ ನಾವು ಏಕಾಂತದಲ್ಲಿರುವಾಗ ಮನಸ್ಸು ತನ್ನ ತನವನ್ನು ಬಿಟ್ಟು, ಏನುಬೇಕಾದರೂ ಹೇಗೆಬೇಕಾದರೂ ಯೋಚನೆ ಮಾಡುತ್ತದೆ... 
  
  ಇದು ಧರ್ಮವಾದರೂ ಮಾಡಲು ಕಷ್ಟ ಪಡಬೇಕಲ್ಲ... ಈಗ ಬೇಡ 
  ಮುಂದೆ ನೋಡೋಣ... ಮತ್ತೆ ನೋಡೋಣ ಅಂತೆಲ್ಲ..ಯೋಚನೆ ಮಾಡಿಬಿಡುತ್ತದೆ ನಮ್ಮ ಮನಸ್ಸು... . 
  
  ಕೇವಲ ಒಂದೇ ವಾಕ್ಯವಾದರೂ ಬಹಳ ಬಹಳ ಮನಸ್ಸಿಗೆ ನಾಟುತ್ತದೆ.... ಯಜ್ಞ ದತ್ತರ ದೇಹವನ್ನು ಪಕ್ಕದಲ್ಲಿ ಮಲಗಿಸಿ, ನೀರನ್ನು ತೆಗೆದುಕೊಂಡು ಹೋಗುವಾಗ ದಶರಥ ಮಹಾರಾಜರ ಮನಸಿನಲ್ಲಿ ಬರುವ ರಾಮಾಯಣದ ಈ ಘಟನೆ.... 
  
  ದಶರಥಮಹಾರಾಜರು ನಡೆದುಕೊಂಡು ಬರುವಾಗ ಕಾಲಿನ ಸಪ್ಪಳವನ್ನು ಕೇಳಿದ ವೃದ್ಧ ದಂಪತಿಗಳು..... !!!
  
  Oh...!! Very clear sensational explanation of the each minutes situations.... !!!!
  
  ಎಂದೋ..... ಆಗಿಹೋದ ಘಟನೆಯನ್ನು ಈಗ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನ್ನುವಂತಿದೆ ನಿಮ್ಮ ಉಪನ್ಯಾಸದ ಶೈಲಿ... 
  
  ಕೇವಲ ಶಬ್ದಗಳಿಂದಲೇ ಘಟನೆಗಳನ್ನು ಮನಸಿನೊಳಗೆ ತುಂಬಿಸಿ ಅದನ್ನು ಕಾಣುತ್ತಾ ಆಸ್ವಾದನೆ ಮಾಡುವಂತೆ ಮಾಡಿದೆ ನಿಮ್ಮ ಉಪನ್ಯಾಸ.... 
  
  ಕಾಡಿನಲ್ಲಿ ಅಕಸ್ಮಾತ್ತಾಗಿ ನಡೆದ ಘಟನೆಯನ್ನು ಕಂಡು.. .. ಪುನಃ ದಶರಥಮಹಾರಾಜರ ಅಂತಃಪುರಕ್ಕೆ ಬಂದದ್ದೇ ತಿಳಿಯಲಿಲ್ಲ... 
  
  ನಾವೆಲ್ಲಿದ್ದೇವೆ ಅನ್ನುವದೆ ಮರೆತುಬಿಟ್ಟಿತ್ತು ಗುರುಗಳೇ...
 • Vishwnath MJoshi,Bengaluru

  1:17 PM , 17/04/2022

  ಗುರುಗಳಿಗೆ ನಮಸ್ಕಾರ ,ಶ್ರವಣ ಕುಮಾರನ ತಂದೆ ತಾಯಿಯ 
  ಶಾಪದಿಂದ ದಶರಥ ಮಹಾರಾಜರಿಗೆ ತಮ್ಮ ಕೊನೆಯ ಕ್ಷಣದಲ್ಲಿ ಪುತ್ರ ವಿಯೋಗವಾಯಿತು. ಹಾಗೆಯೆ ಶ್ರವಣ ಕುಮಾರನ ಯಾವ ಕರ್ಮ ದಿಂದ ಅಥವಾ ಶ್ರವಣ ಕುಮಾರನ ತಂದೆ ತಾಯಿಯ ಯಾವ ಕರ್ಮದಿಂದ ಅವರಿಗೆ ತಮ್ಮ ಅಂತ್ಯ ಕಾಲದಲ್ಲಿ ಪುತ್ರ ವಿಯೋಗ ವಾಯಿತು

  Vishnudasa Nagendracharya

  ಅದರ ಉಲ್ಲೇಖ ದೊರೆತಿಲ್ಲ. 
 • Niranjan Kamath,Koteshwar

  8:57 AM , 17/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಎಷ್ಟೊಂದು ಕರುಣಾಜನಕ ಪ್ರಸಂಗ. ಆ ದೇವರ ಪ್ರಸಂಗಕ್ಕೆ ಬೇಕಾದ ಪೂರ್ವ ತಯಾರಿಯ ವಿಷಯಗಳ ಬಗ್ಗೆ ಎಷ್ಟು ತಿಳಿದರು ಅಷ್ಟು ಕಡಿಮೆ. ಧನ್ಯೋಸ್ಮಿ.