Upanyasa - VNU983

ಮುನಿಹತ್ಯೆಯ ಕುರಿತ ಚರ್ಚೆ

ಶ್ರೀಮದ್ ರಾಮಾಯಣಮ್ — 95

ಆ ಮುನಿಕುಮಾರನ ಹೆಸರು ಶ್ರವಣಕುಮಾರ ಎಂದೋ ಅಥವಾ ಯಜ್ಞದತ್ತ ಎಂದೋ?

ಈ ಮುನಿಕುಮಾರ, ಅವರ ತಂದೆ ತಾಯಿಯರು ಬ್ರಾಹ್ಮಣರೋ, ಅಥವಾ ವೈಶ್ಯ-ಶೂದ್ರರೋ?

ಅಸ್ಪೃಶ್ಯರು ಎಂದರೆ ಯಾರು?

ವೈಶ್ಯ-ಕ್ಷತ್ರಿಯ-ಬ್ರಾಹ್ಮಣರಿಗೆ ಶೂದ್ರರೊಂದಿಗೆ ವಿವಾಹಸಂಬಂಧವಿರುತ್ತಿತ್ತೆ?

ಮುಂತಾದ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಆಚಾರ್ಯರ ನಿರ್ಣಯ, ವಾಲ್ಮೀಕಿರಾಮಾಯಣ, ಸಂಗ್ರಹರಾಮಾಯಣ, ಬ್ರಹ್ಮವೈವರ್ತಪುರಾಣ, ರಾಮಾಯಣಮಂಜರಿ ಮುಂತಾದ ಗ್ರಂಥಗಳ ವಾಕ್ಯಗಳ ಅರ್ಥಾನುಸಂಧಾನದೊಂದಿಗೆ. 

Play Time: 47:48

Size: 3.84 MB


Download Upanyasa Share to facebook View Comments
8263 Views

Comments

(You can only view comments here. If you want to write a comment please download the app.)
 • Venkatesan,Chennai

  3:02 PM , 22/06/2022

  ಶ್ರೀ ಗುರುಭ್ಯೋ ನಮಃ🙏, ಗುರುಗಳಿಗೆ, ಸಾಷ್ಟಾಂಗ ನಮಸ್ಕಾರಗಳು. ತುಂಬಾ ಸಂತೋಷ ಗುರುಗಳೇ, ಧನ್ಯವಾದಗಳು.
 • Venkatesan,Chennai

  8:38 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  1. ಶ್ರವಣ ಕುಮಾರರು ತಪಸ್ಸು ಮಾಡುತ್ತಿದ್ದರು, ತಂದೆತಾಯಿಗಳಿಗೆ ಸೇವೆ ಸಲ್ಲಿಸಿದರು. ತಂದೆತಾಯಿಗಳ ಸೇವೆಯಿಂದ ಅವರ ಎಲ್ಲಾ ಪಾಪಗಳು ನಾಶವಾಯ್ತು ಎಂದು ಅವರ ತಂದೆ ಹೇಳುತಾರೆ
  
  
  i. ಇಷ್ಟು ಸಾಧನೆ, ತಪಸ್ಸು ಮಾಡಿದರೂ ಶ್ರವಣ ಕುಮಾರನ ಆಯುಷ್ಯ ಏಕೆ ಹೆಚ್ಚಾಗಲಿಲ್ಲ ?
  
  
  ii. ಅವರ ಯಾವ ಕರ್ಮ ಈ ರೀತಿಯ ಸಾವಿಗೆ ಕಾರಣವಾಯಿತು ? ಅಕಾಲ ಮರಣಕ್ಕೆ ಕಾರಣವಾದ ಯಾವದೋ ಒಂದು ಕರ್ಮ ಇಷ್ಟು ಸಾಧನೆ ಮಾಡಿದ ಬಳಿಕವೂ ಹೋಗಲಿಲ್ಲವೇ? ಕೆಲವು ಕರ್ಮ ಫಲಗಳು ಎಷ್ಟು ಸಾಧನೆ ಮಾಡಿದರೂ ಸರಿಪಡಿಸಿಕೊಳ್ಳಲಿಕ್ಕಾಗುವದಿಲ್ಲ, ಅನುಭವಿಸಲೇ ಬೇಕು, ಬೇರ ಧಾರಿ ಯಿಲ್ಲ ಎನ್ನುವದನ್ನ ಈ ಘಟನೆ ಸ್ಥಾಪಿಸುತದಾ?

  Vishnudasa Nagendracharya

  ಈ ಪ್ರಶ್ನೆಗೆ ಅದ್ಭುತವಾದ ಉತ್ತರವಿದೆ. 
  
  ನೋಡಿ, ಸಾವಿಗೆ, ಕಷ್ಟಕ್ಕೆ ಅಂಜುವವರು ರಾಜಸರು, ತಾಮಸರು. ಸಾತ್ವಿಕ ಚೇತನರಿಗೆ ಸಾವು ಸಮಸ್ಯೆಯೇ ಅಲ್ಲ. 
  
  ಹಾಕಿಕೊಂಡ ಬಟ್ಟೆಯನ್ನು ಬಿಚ್ಚಿ, ಮತ್ತೊಂದು ಬಟ್ಟೆಯನ್ನು ಹಾಕಿಕೊಳ್ಳುವದು ಎಷ್ಟು ನಮಗೆ ಸಹಜವೋ ಅಷ್ಟೇ ಸಹಜವಾಗಿ ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸ್ವೀಕರಿಸಲು ಮುಂದಾಗುತ್ತಾರೆ, ಸಾತ್ವಿಕರು. 
  
  ದೀರ್ಘಾಯುಷ್ಯ ಬೇಕು, ಸಾವಿರಬಾರದು ಎಂದು ತಪಸ್ಸು ಮಾಡುವವರು, ರಾಜಸರು ಮತ್ತು ತಾಮಸರು. 
  
  ಶ್ರೀಮಾರ್ಕಂಡೇಯ ಮಹರ್ಷಿಗಳ ಹಾಗೆ ಶ್ರೇಷ್ಠ ಸಾತ್ವಿಕರೂ ಸಹ ತಮ್ಮ ಆಯುಷ್ಯದ ಅಭಿವೃದ್ಧಿಗಾಗಿ ರುದ್ರದೇವರನ್ನು, ಭಗವಂತನನ್ನು ಪ್ರಾರ್ಥಿಸಿದ್ದುಂಟು. ಆದರೆ, ಅದಕ್ಕೆ ವಿಶೇಷವಾದ ಮತ್ತು ಅದ್ಭುತವಾದ ಕಾರಣವಿದೆ. ಮುಂದೆ ಮಾರ್ಕಂಡೇಯರ ಚರಿತ್ರೆಯನ್ನು ವಿವರಿಸುವಾದ ಅದರ ಕುರಿತು ಕೇಳುತ್ತೇವೆ. ಸಾವಿತ್ರೀದೇವಿಯರು ಸತ್ಯವಾನರನ್ನು ಮರಳಿ ಪಡೆದದ್ದು, ವೈಧವ್ಯದ ದೌರ್ಭಾಗ್ಯ ಬೇಡ, ಗಂಡನೊಡನೆ ಸಾಧನೆ ಮಾಡಬೇಕೆಂದು. ಪಾತಿವ್ರತ್ಯದ ಮಹಿಮೆಯನ್ನು ತೋರಿಸಲು. 
  
  ಆದರೆ, ಸಾತ್ವಿಕರಲ್ಲಿ ಸಹಜವಾದ ನಿಯಮ, ಅವರು ಸಾವಿಗಂಜುವದಿಲ್ಲ, ಕಷ್ಟಕಂಜುವದಿಲ್ಲ. "ಬಗೆವರೋ ಬಡತನ ಭಾಗ್ಯ ಭಾಗ್ಯವಂತರು" "ನಿನ್ನ ಅನುಗ್ರಹ ದೊರೆಯುವ ಕಷ್ಟ ಕೊಡು ಸ್ವಾಮಿ, ವಿಪದಃ ಸಂತು ನಃ ಶಶ್ವತ್" 
  
  ಸಾತ್ವಿಕರು ಮುಕ್ತಿಯಲ್ಲಿ ಆನಂದದ ಅಭಿವೃದ್ಧಿಗಾಗಿ, ದೇವರ ಜ್ಞಾನ ಭಕ್ತಿಗಳ ಅಭಿವೃದ್ಧಿಗಾಗಿ ಮಹಾಪ್ರಯತ್ನ ಪಡುತ್ತಾರೆಯೇ ಹೊರತು, ತಮ್ಮ ಸಾಧನೆಯನ್ನು ಕೇವಲ ಆಯುಷ್ಯ, ಸಂಪತ್ತು, ಆರೋಗ್ಯಗಳಿಗಾಗಿ ವಿನಿಯೋಗಿಸುವದಿಲ್ಲ. ಎಲ್ಲಿ ವಿನಿಯೋಗಿಸಿದ್ದು ಕಂಡಿದೆ, ಅದನ್ನು ಅಪೇಕ್ಷೆ ಪಡುವ ಸಾಮಾನ್ಯ ಹಂತದ ಸಜ್ಜನರಿಗೆ, ಪ್ರಾರ್ಥನೆಯಿಂದ ದೇವರ ಸೇವೆಯಿಂದ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ತೋರಿಸಲು. 
  
  ಮತ್ತು, ಕರ್ಮಸಿದ್ಧಾಂತವೂ ಇಲ್ಲಿ ಕೆಲಸ ಮಾಡುತ್ತದೆ. ಶ್ರವಣಕುಮಾರರಿಗೆ ಆಯುಷ್ಯವಿದ್ದದ್ದೇ ಅಷ್ಟು. ಅದನ್ನು ಮೀರಿ ಅವರು ಮತ್ತೆ ಆಯುಷ್ಯ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಪ್ರಯತ್ನ ಮಾಡುವ ಬುದ್ಧಿಯನ್ನೇ ಭಗವಂತ ನೀಡುವದಿಲ್ಲ. ಶ್ರೀ ಮಾರ್ಕಂಡೇಯ ಮಹರ್ಷಿಗಳು, ಸತ್ಯವಾನರು ಮುಂತಾದವರಲ್ಲಿ ಅಪಮೃತ್ಯು ದಾಟಿ ಸಾಧನೆ ಮಾಡುವ ಕರ್ಮವಿತ್ತು. ಅದಕ್ಕಾಗಿ ಅವರ ಜೀವನದಲ್ಲಿ. ಹಾಗೆ. 
  
  
 • Sanjeeva Kumar,Bangalore

  1:17 PM , 07/06/2022

  ತುಂಬಾ ಸುಂದರವಾದ ವಿವರಣೆ, ಅನಂತ ಪ್ರಣಾಮಗಳು ಗುರುಗಳೆ, ಧನ್ಯೋಸ್ಮಿ
 • Sanjeeva Kumar,Bangalore

  1:17 PM , 07/06/2022

  ತುಂಬಾ ಸುಂದರವಾದ ವಿವರಣೆ, ಅನಂತ ಪ್ರಣಾಮಗಳು ಗುರುಗಳೆ, ಧನ್ಯೋಸ್ಮಿ
 • Kosigi shroff malathi,Hyderabad

  11:08 AM, 29/04/2022

  🙏🙏🙏
 • Jayashree karunakar,Bangalore

  9:39 PM , 19/04/2022

  ಗುರುಗಳೇ 
  ಮಹಾಭಾರತದಲ್ಲಿ ತಾನು ಉಪಪಾಂಡವರನ್ನು ಕಳೆದುಕೊಂಡ ದುಃಖದಂತೆ, ಅಶ್ವಥಮಚಾರ್ಯರ ತಾಯಿಗೆ ಮಗನನ್ನು ಕಳೆದುಕೊಂಡ ದುಃಖ ವಾಗಬಾರದೆಂಬ ಕಾರಣಕ್ಕಾಗಿ, ಅರ್ಜುನನಿಗೆ draupadiyu ಅಶ್ವಥಮಾಚಾರ್ಯರನ್ನು ಕೊಲ್ಲದಂತೆ ಆಜ್ಞೆ ಮಾಡಿದ ಹಾಗೇ... ಇಲ್ಲಿ ಯಾಕೆ ಆಗಲಿಲ್ಲ..? 
  
  ಮಹಾ ಧರ್ಮಾಚರಣೆ ಮಾಡುತ್ತಿರುವ ದಂಪತಿಗಳು ... ತೀರ್ಥಯಾತ್ರೆಯಂತಹ ಮಹಾ ಸಾಧನೆ ಮಾಡುವಸಂಧರ್ಭದಲ್ಲಿ... ಅದೂ ಕೂಡಾ ತ್ರೇತಾಯುಗದಂಹ ಕಾಲದಲ್ಲಿ.... ತಾವು ಪಟ್ಟಂತಹ ದುಃಖ ಅವರಿಗೂ ಬರಲಿ ಅನ್ನುವ ಬುದ್ಧಿ ಹೇಗೆ ಬರಲು ಸಾಧ್ಯ ಗುರುಗಳೇ...?

  Vishnudasa Nagendracharya

  ಆಚಮನ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೇ ಕುಳಿತು ಮಾಡಬೇಕು, ಪಶ್ಟಿಮ, ದಕ್ಷಿಣಗಳಿಗೆ ಮುಖ ಮಾಡಿ ಆಚಮನ ಮಾಡಬಾರದು ಎಂಬ ನಿಯಮದಂತೆ ಅಲ್ಲ ಇದು. ಇದು ಭಾವನೆಗಳ ಮೇಲೆ ಆಧಾರಗೊಂಡ ಪ್ರತಿಕ್ರಿಯೆ. 
  
  ಭಾವನೆಗಳ ವಿಷಯದಲ್ಲಿ ಎಲ್ಲರೂ ಒಂದೇ ರೀತಿ ಪ್ರತಿಕ್ರಿಯಿಸಬೇಕು ಎಂದಿಲ್ಲ.
  
  ದ್ರೌಪದಿದೇವಿಯರದು ಅತಿ ಎತ್ತರದ ವ್ಯಕ್ತಿತ್ವ. ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿಯೂ ಮನಸ್ಸನ್ನು ಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿದ್ದವರು. ಹೀಗಾಗಿ ಹಾಗೆ ಪ್ರತಿಕ್ರಿಯಿಸಿದರು.
   ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳನ್ನು ಯುದ್ಧಭೂಮಿಗೆ ಕಳುಹಿಸಿದ್ದ ಅವರಿಗೆ, ಯುದ್ಧರಂಗದಲ್ಲಿ ಮಕ್ಕಳಿಗೆ ಸಾವುಂಟಾಗುವ ಸಾಧ್ಯತೆಯೂ ಇದೆ ಎಂದು ಸ್ಪಷ್ಟವಾಗಿ ತಿಳಿದಿತ್ತು. 
  
  ಶ್ರವಣ ದಂಪತಿಗಳ ವಿಷಯದಲ್ಲಿ ಅವರಿಗಾದ ನೋವು ಅತ್ಯಧಿಕ. ಅದು ಇದ್ದಕ್ಕಿದ್ದ ಹಾಗೆ ಎರಗಿ ಬಂದ ಆಘಾತ. ಕಾರಣ, ನೀರು ತರಲು ಹೋದ ಮಗ ಸತ್ತುಹೋಗಬಹುದು ಎಂಬ ಪರಿಕಲ್ಪನೆಯೂ ಅವರಿಗಿಲ್ಲ. ಹೀಗಾಗಿ ಅವರಿಗಾಗಿದ್ದ ಆಘಾತ, ಮಗನ ಅಕಾಲಿಕ ಸಾವು ಅವರನ್ನು ಕಂಗೆಡಿಸಿದೆ. 
  
  ಎಲ್ಲದಕ್ಕಿಂತ ಮುಖ್ಯವಾಗಿ, ಮುಂದಿನ ಘಟನೆಗಳು ನಡೆಯಲೇಬೇಕಾಗಿದೆ. 
  
  ಕೈಕಯಿ ಶ್ರೀರಾಮರನ್ನು ಕಾಡಿಗೆ ಕಳುಹಿಸಿಲೇ ಬೇಕು. ದಶರಥರಿಗೆ ಅದು ಇಷ್ಟವಿಲ್ಲ. ಆದರೂ ಧರ್ಮಬಂಧಕ್ಕೊಳಗಾಗಿ ಅವರು ನಡೆಯಲೇಬೇಕು. ಮಗನನ್ನು ಕಾಡಿಗಟ್ಟಿದ ದುಃಖದಿಂದ ಮರಣ ಒದಗಲೇ ಬೇಕು. ಆ ದುಃಖ ಆ ನೋವಿಗೆ ಕಾರಣವಾದ ಪಾಪವೊಂದು ಇರಲೇಬೇಕು. ಆ ಪಾಪ ದಶರಥರಿಂದ ಘಟಿಸಿದೆ. ಅದು ಶಾಪವೇ ಆದರೂ, ನೀಡಿದವರು ಉತ್ತಮರಾದ್ದರಿಂದ ಆ ಶಾಪವೂ ದಶರಥರಿಗೆ ಮತ್ತೊಂದು ರೀತಿಯಲ್ಲಿ ಒಳ್ಳೆಯದನ್ನೇ ಮಾಡಿತು. ಮಗನ ದುಃಖ ಕೇವಲ ದುಃಖವಾಗಲಿಲ್ಲ. ದೇವರೇ ಮಗನಾದ್ದರಿಂದ, ದೇವರು ತಮ್ಮ ಮಗ ಎಂಬ ಎಚ್ಚರ ಅವರಿಗೆ ಬಂದದ್ದರಿಂದ, ರಾಮಸ್ಮರಣೆಯಿಂದ ಕೂಡಿದ ದುಃಖ ತಪಸ್ಸಾಯಿತು. ಆ ತಪಸ್ಸಿನಿಂದ ಸಕಲಪಾಪಗಳನ್ನು ಕಳೆದುಕೊಂಡು ದಶರಥರು ಉತ್ತಮಗತಿಯನ್ನೇ ಪಡೆದರು. 
  
  
 • Sughosh S Nigale,Bengaluru

  2:36 PM , 20/04/2022

  ನಮಸ್ಕಾರ ಗುರುಗಳೆ, ಜಾತಿ ಮತ್ತು ವರ್ಣ ಕ್ಕೆ ಇರುವ ವ್ಯತ್ಯಾಸವೇನು ಎಂದು ತಿಳಿಸಬಹುದೆ?

  Vishnudasa Nagendracharya

  ಜಾತಿ ಬೇರೆ ವರ್ಣ ಬೇರೆ ಎನ್ನುವದು ಆಧುನಿಕರ ವಾದ, ನಮ್ಮಲ್ಲಿ (ಮಾಧ್ವರಲ್ಲಿ) ಬನ್ನಂಜೆಯೂ ಅದೇ ವಾದದವರು. ಆದರೆ ಜಾತಿ ವರ್ಣ ಎರಡೂ ಒಂದೇ. 
  
  ಬನ್ನಂಜೆಯವರು, ಹುಟ್ಟಿನಿಂದ ಅರ್ಥಾತ್, ತಂದೆ ತಾಯಿಗಳಿಂದ ಬರುವದು ಜಾತಿ, ಆತ್ಮದ್ದು ವರ್ಣ ಎನ್ನುತ್ತಾರೆ. ಶಾಸ್ತ್ರದಲ್ಲಿ ಎಲ್ಲಿಯೂ ಹಾಗಿಲ್ಲ. ಸ್ವಯಂ ಶ್ರೀಕೃಷ್ಣದೇವರ ಭಗವದ್ಗೀತೆಯ ಮಾತನ್ನು ಗಮನಿಸಿ. "ಚಾತುರ್ವರ್ಣ್ಯಂ ಮಯಾ ಸೃಷ್ಟಮ್" ಎನ್ನುತ್ತಾರೆ. ವರ್ಣ ಆತ್ಮದ ಸ್ವರೂಪವೇ ಆದರೆ ಅದನ್ನು ದೇವರು ಸೃಷ್ಟಿಸಲು ಹೇಗೆ ಸಾಧ್ಯ? ಶ್ರೀಕೃಷ್ಣದೇವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ, ಚಾತುರ್ವಣ್ಯವನ್ನು ನಾನು ಸೃಷ್ಟಿಸಿದ್ದು ಎಂದು. 
  
  ದೇಹಕ್ಕೂ ಜಾತಿಯಿದೆ. ಆತ್ಮಕ್ಕೂ ಜಾತಿಯಿದೆ. 
  
  ಪ್ರಪಂಚದಲ್ಲಿನ ಎಲ್ಲ ವ್ಯವಹಾರಗಳಿಗೂ ದೇಹದ ಜಾತಿಯೇ, ಅರ್ಥಾತ್, ತಂದೆ ತಾಯಿಗಳಿಂದ ಬರುವ ಜಾತಿಯೇ ಆಧಾರ. 
  
  ಆತ್ಮದ ಜಾತಿ ಮುಕ್ತಿಯಲ್ಲಿ ಮಾತ್ರ ಅಭಿವ್ಯಕ್ತವಾಗುತ್ತದೆ. ಇಲ್ಲಿ ಅದರ ಕಾರ್ಯ ಬಹಳ ಕಡಿಮೆ. 
  
  
   
 • Vishwnath MJoshi,Bengaluru

  12:26 PM, 19/04/2022

  ಶ್ರೀ ಶ್ರಾವಣ ಕುಮಾರನ ವಿಷಯವನ್ನೇ ತೆಗೆದು ಕೊಂಡು ಜಾತಿ ಪದ್ದತಿ ಬಗ್ಗೆ ಒಂದು ಪ್ರಶ್ನೆ. ತಂದೆ ತಾಯಿ ಇಬ್ಬರು ಬ್ರಾಹ್ಮಣ ರು ಒಂದು ಅನಾಥ 2-3 ತಿಂಗಳಿನ ತಂದೆ ತಾಯಿ ಯಾರು ಎಂದು ಗೊತ್ತೀಲ್ಲದ ಮಗುವನ್ನು ತಂದು ತಮ್ಮ ಮಗನೆಂದು ಬೆಳೆಸಿದಾಗ ಆ ಮಗುವಿನದು ಯಾವ ಜಾತಿ

  Vishnudasa Nagendracharya

  ಯಾರ ಮಗು ಎಂದು ತಿಳಿಯದೇ ದತ್ತು ಪಡೆದ ಮಾತ್ರಕ್ಕೆ, ಆ ಮಗುವಿಗೆ ತಂದೆ ತಾಯಿಗಳ ಜಾತಿ ಉಂಟಾಗುವದಿಲ್ಲ. 
  
  ಅದರ ಜಾತಿ, ಅದನ್ನು ಹಡೆದ ತಂದೆ ತಾಯಿಗಳದೇ ಆಗಿರುತ್ತದೆ. 
 • Sandeep katti,Yalahanka, bengalooru

  10:27 AM, 19/04/2022

  ಪೂಜ್ಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು. ಕಲಿಯುಗದಲ್ಲಿ ಜಾತಿ ನಿರ್ಣಯ ಹೇಗೆ? ಜಾತಿ ತಾಯಿಂದ ಮಗನಿಗೆ ಮಾತ್ರವೂ ಅಥವಾ ಮಗಳಿಗೂ ಅನ್ವಯವಾಗುವುದು?
  ಉದಾಹರಣೆಗೆ ಮಾಧ್ವ ಪತಿ ಸ್ಮಾರ್ತ ಪತ್ನಿ ಮಕ್ಕಳು ಮಾಧ್ವರೋ ಅಥವಾ ಸ್ಮಾರ್ಥರೂ?

  Vishnudasa Nagendracharya

  ಮೊದಲಿಗೆ ಮಾಧ್ವ, ಸ್ಮಾರ್ತ ಎನ್ನುವದು ಜಾತಿಗಳಲ್ಲ. 
  
  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವದು ಜಾತಿಗಳು. ಮಾಧ್ವ, ಸ್ಮಾರ್ತ ಇತ್ಯಾದಿಗಳು ನಾವು ನಂಬಿರುವ ಪಂಥಗಳಷ್ಟೆ. 
  
  ಕಲಿಯುಗದ ಅತ್ಯಂತ ಸರಳ ನಿಯಮ. 
  
  ತಂದೆ ತಾಯಿಗಳಿಬ್ಬರೂ ಒಂದೇ ಜಾತಿಯವರಾಗಿದ್ದರೆ, ಮಕ್ಕಳಿಗೆ ಅದೇ ಜಾತಿ. 
  
  ತಂದೆಯ ಜಾತಿ ಬೇರೆ, ತಾಯಿಯ ಜಾತಿ ಬೇರೆ ಎಂದರೆ ಮಕ್ಕಳು ಜಾತಿಹೀನರು. ಸಕಲ ಕರ್ಮಗಳಿಂದ ಅವರು ಬಹಿಷ್ಕೃತರು. 
  
  ಬೇರೆ ಜಾತಿಯವರನ್ನು ಮದುವೆಯಾಗುವದು ಕಲಿಯುಗದ ಧರ್ಮವಲ್ಲ. 
  
 • Laxmi Padaki,Pune

  10:02 AM, 19/04/2022

  ಶ್ರೀ ಆಚಾರ್ಯರಿಗೆ ದಂಡವತ ಪ್ರಣಾಮಗಳು.ಅದ್ಭುತ ಅಧ್ಯಯನ ನಿಮ್ಮದು.ತುಂಬಾ ಆಳವಾಗಿ ತಿಳಿಸಿದಿರಿ.ನಮೋ ನಮಃ.🙇🙇

  Vishnudasa Nagendracharya

  ಗುರ್ವನುಗ್ರಹ. 
 • Niranjan Kamath,Koteshwar

  9:25 AM , 19/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಎಷ್ಟೊಂದು ಸೂಕ್ಷ್ಮ ಸೂಕ್ಷ್ಮ ವಿಷಯಗಳು, ಧರ್ಮವನ್ನು ತಿಳಿಯುವ ಪರಿಯನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಿರಿ. 
  
  ಪಾಪ ಬರುವ ವಿಷಯದ ಪರಿ., ಯಜ್ಞದತ್ತರ ಹೆಸರಿನ ವಿಚಾರಗಳು, ದಶರಥ ಮಹಾರಾಜರ ವಿಷಯ, ಬ್ರಹ್ಮ ಹತ್ಯೆ ಯ ವಿಚಾರಗಳ ಬಗ್ಗೆ ಅಂತೂ ಅತೀ ಮನಮೋಹಕ, ಸ್ಪಷ್ಟ ಮಾಹಿತಿ ನೀಡಿದ್ದೀರಿ. 
  
  ಕೊನೆಯಲ್ಲಿ ಒಂದು ವಿಚಾರದ ಪ್ರಕಾರ, ಅಶರೀರ ವಾಣಿ ಪ್ರಕಾರ ದಶರಥ ಮಾಹಾರಾಜರ ಮೊದಲ ಮಗ ಶಾಪ ಮುಕ್ತ ಮಾಡುತ್ತಾನೆ ಹೇಳಿದ ವಿಚಾರ ಪ್ರಕಾರ , ದಶರಥರಿಗೆ ಗಂಡು ಮಗು ಆಗುತ್ತದೆ ಎನ್ನುವ ವಿಷಯ ತಿಳಿದಿಯೇ ಇತ್ತು ಎನ್ನುವುದು ಕೂಡ ಸ್ಪಷ್ಟವಾಗಿ ತಿಳಿಯಬಹುದು . ಅಲ್ಲವೇ ಗುರುಗಳೇ. ? 
  
  ನಿಮ್ಮ ಸಂಘದ ಮೂಲಕ, ಈ ವಿಶ್ವನಂದಿನಿ ಯ ಮೂಲಕ ಅತ್ಯಂತ ಅತ್ಯಂತ ಮೂಲ ಧರ್ಮದ ವಿಷಯಗಳು ಅರಿಯುವಂತಾಯಿತು. ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ. ಇಷ್ಟೆಲ್ಲ ಅಧ್ಯಯನ ಮಾಡಿ ನಮ್ಮಂತಹ ಪಾಮರರಿಗೆ ಧರ್ಮ ಮಾರ್ಗ ತೋರಿದ ನಿಮಗೂ, ನಿಮ್ಮ ಸಂಸಾರದವರಿಗೂ, ನಿಮ್ಮ ಹೆತ್ತವರಿಗೂ, ನಿಮ್ಮ ಗುರುಗಳಿಗೂ, ನಿಮ್ಮೊಂದಿಗೆ ಈ ಎಲ್ಲ ವಿಷಯಗಳನ್ನು ನಮಗೆ ತಲುಪುವಂತೆ ಮಾಡುವ ಎಲ್ಲ ವಿಶ್ವನಂದಿನಿಯಲ್ಲಿ ಕೆಲಸ ಮಾಡುವ , ಸೇವೆ ಮಾಡುವ ಎಲ್ಲ ಪುಣ್ಯಾತ್ಮ ರಿಗೂ ಭಕ್ತಿಪೂರ್ವಕ ನಮಸ್ಕಾರಗಳು, ಧನ್ಯವಾದಗಳು. ಧನ್ಯೋಸ್ಮಿ.

  Vishnudasa Nagendracharya

  ಶ್ರೀ ಹರಿವಾಯುದೇವತಾಗುರುಗಳು ಕಾರುಣ್ಯದಿಂದ ನನ್ನಲ್ಲಿ ನಿಂತು ಮಾಡಿಸುತ್ತಿರುವ ಕಾರ್ಯ. 
  
  ಹೌದು, ಈ ಘಟನೆಯಿಂದ, ದಶರಥರು ತಮಗೆ ಈ ಕಾರಣಕ್ಕಾದರೂ ಮಕ್ಕಳು ಹುಟ್ಟುತ್ತಾರ ಎಂದು ಸಂತೋಷವನ್ನೇ ಪಡುತ್ತಾರೆ. 
  
  ರಾಮಾಯಣ ತತ್ವಸಾಗರ, ಬದುಕಿನ ದಾರಿದೀಪ, ಪಾಪನಾಶಕ ಶಾಸ್ತ್ರ, ಮುಕ್ತಿಗೆ ಕರೆದೊಯ್ಯುವ ಬಂಧು. 
  
  ಈ ರಾಮಾಯಣವನ್ನು ಜಾತಿ ಮತ ಬೇಧವಿಲ್ಲದೇ ಪ್ರತಿಯೊಬ್ಬ ಸಜ್ಜನನಿಗೂ ಎಲ್ಲರೂ ತಲುಪಿಸಿ. 
  
  
 • N.H. Kulkarni,Bangalore

  11:02 AM, 19/04/2022

  1.ಶ್ರೀ ಶ್ರವಣ ಕುಮಾರರು ತಮ್ಮ ಪ್ರಾಣ ಬೇಗ ಹೋಗಲಿ, ವೇದನೆ ಅಂತ್ಯ ವಾಗಲಿ ಅನ್ನುವ ಉದ್ದೇಶದಿಂದ "ನಾನು ಬ್ರಾಹ್ಮಣನಲ್ಲ "ಅಂತ ಹೇಳಿದರು ಅದನ್ನು ಶ್ರೀ ವಾಲ್ಮೀಕಿಗಳು ಶ್ಲೋಕದಲ್ಲಿ ಸೆರೆ ಹಿಡಿದಿದ್ದಾರೆ ಅಂತ ಹೇಳಬಹುದೇ? 
  
  ಪ್ರಾಣ ಸಂಕಟ ಸಮಯದಲ್ಲಿ ಹೇಳಿದ ಸುಳ್ಳು ಸುಳ್ಳಲ್ಲ ಅಂತ ಹೇಳುತ್ತಾರೆ. 
  ಹಾಗಾಗಿ ಆ ಶ್ಲೋಕ ಪ್ರಕ್ಷಿಪ್ತ ಅಂತಲೇ ಯಾಕೆ ಹೇಳಬೇಕು. 
  
  2. ತೀರ್ಥ ಮಹಿಮೆಯನ್ನು ತಿಳಿಸುವ ಸಂದರ್ಭ ದಲ್ಲಿ ಸುಳ್ಳು ಕಥೆಯನ್ನು ಏಕೆ ಹೇಳಿದರು. ದಶರತರು ನರಕಕ್ಕೆ ಹೋಗಿಲ್ಲ ಆದ್ದರಿಂದ ತೀರ್ಥ ಮಹಿಮೆಯೂ ಸುಳ್ಳು ಅಂತ ಆಗುತ್ತದಲ್ಲವೇ? 
  ದಯಮಾಡಿ ತಿಳಿಸಿ.
 • Vishwnath MJoshi,Bengaluru

  9:10 AM , 19/04/2022

  गुरुगळिगे नमस्कार: ಅದ್ಭುತವಾದ ಪ್ರವಚನ ಬ್ರಹ್ಮಹತ್ಯಾ ದೋಷಗಳೆಗೆ ಯಾವ ತರಹದ ಪ್ರಾಯಶ್ಚಿತ್ತ ಎಂದು ದಯವಿಟ್ಟು ತಿಳಿಸಿಕೊಡಿ.

  Vishnudasa Nagendracharya

  ಮನುಷ್ಯ ಪರಿಹಾರ ಮಾಡಿಕೊಳ್ಳಬಹುದಾದ ಪಾಪಗಳಲ್ಲಿಯೇ ಅತಿ ದೊಡ್ಡ ಪಾಪ ಬ್ರಹ್ಮಹತ್ಯೆ. 
  
  ಅದರಿಂದ ಬರುವ ಪಾಪವೂ ಅಧಿಕ. ಅದರ ಪ್ರಾಯಶ್ಚಿತ್ತವೂ ಘೋರ. 
  
  12 ವರ್ಷಗಳ ವರೆಗಿನ ಕಠಿಣವ್ರತಗಳು, ಇಡಿಯ ಭರತಭೂಮಂಡಲವನ್ನು ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಬರುವದು ಮುಂತಾದ ಹತ್ತಾರು ರೀತಿಯ ಪ್ರಾಯಶ್ಚಿತ್ತಗಳನ್ನು ಶಾಸ್ತ್ರ ವಿಧಿಸುತ್ತದೆ. ಕೆಲವು ಕಡೆಯಂತೂ ಮರಣಾಂತ ಪ್ರಾಯಶ್ಚಿತ್ತವೇ ಇದೆ. 
  
  ವ್ಯಕ್ತಿ ಯಾವ ರೀತಿ, ಯಾವ ಸಂದರ್ಭದಲ್ಲಿ, ಯಾವ ಕಾರಣಕ್ಕಾಗಿ, ಯಾರನ್ನು ಹತ್ಯೆ ಮಾಡಿದ್ದಾನೆ ಎನ್ನುವದನ್ನು ನಿರ್ಣಯಿಸಿಕೊಂಡು ಗುರುಗಳು ಪ್ರಾಯಶ್ಚಿತ್ತ ವಿಧಿಸುತ್ತಾರೆ. 
  
 • Jyothi Gayathri,Harihar

  7:55 AM , 19/04/2022

  🙏🙏🙏🙏🙏