Upanyasa - VNU984

ದಶರಥರ ಅಂತಿಮಸ್ಮರಣೆ

ಶ್ರೀಮದ್ ರಾಮಾಯಣಮ್ — 96

ಸಿಂಹಾಸನದಲ್ಲಿ ಕುಳಿತ ರಾಮನನ್ನು ಕಾಣಬೇಕೆನ್ನುವದು ದಶರಥರ ಹೆಬ್ಬಯಕೆಯಾಗಿತ್ತು. ಸಾಧ್ಯವಾಗಿರಲಿಲ್ಲ. ವನವಾಸದಿಂದ ಹಿಂತಿರುಗಿದಾಗ ನಡೆಯಲಿರುವ ಘಟನೆಗಳನ್ನೇ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತ ದಶರಥರು ಪ್ರಾಣತ್ಯಾಗ ಮಾಡುತ್ತಾರೆ. 

ದಶರಥರ ಮರಣ ಶ್ರವಣಋಷಿ ದಂಪತಿಗಳಿಗೆ ನೀಡಿದ ದುಃಖದ ಫಲ ಸರಿ, ಆದರೆ, ಭಗವಂತನನ್ನೇ ಮಗನನ್ನಾಗಿ ಪಡೆದರೂ ಈ ಪಾಪ ಹೋಗಲಿಲ್ಲವೇಕೆ?

ಶ್ರೀರಾಮನ ಒಂದು ನಾಮಸ್ಮರಣೆ ಸಕಲ ಪಾಪಗಳನ್ನೂ ದುಃಖಗಳನ್ನೂ ಕಳೆಯುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ, ರಾಮಸ್ಮರಣೆಯಲ್ಲಿಯೇ ಜೀವವನ್ನು ತೇದ ದಶರಥರ ಆ ಪಾಪ ದುಃಖಗಳೇಕೆ ಪರಿಹಾರವಾಗಲಿಲ್ಲ. 

“ರೋಗಾನುಭವವೆಲ್ಲ ಉಗ್ರತಪವು” "ಕಷ್ಟದ ಅನುಭವಗಳೆಲ್ಲ ತಪಸ್ಸಾಗುತ್ತದೆ" ಎಂದು ದಾಸಸಾಹಿತ್ಯ ತಿಳಿಸುತ್ತದೆ. ಅದಕ್ಕಿಲ್ಲಿ ಜ್ವಲಂತ ದೃಷ್ಟಾಂತವನ್ನು ಕಾಣುತ್ತೇವೆ. 

Play Time: 36:42

Size: 3.84 MB


Download Upanyasa Share to facebook View Comments
6284 Views

Comments

(You can only view comments here. If you want to write a comment please download the app.)
 • Venkatesan,Chennai

  3:02 PM , 22/06/2022

  ಶ್ರೀ ಗುರುಭ್ಯೋ ನಮಃ🙏, ಗುರುಗಳಿಗೆ, ಸಾಷ್ಟಾಂಗ ನಮಸ್ಕಾರಗಳು. ತುಂಬಾ ಸಂತೋಷ ಗುರುಗಳೇ, ಧನ್ಯವಾದಗಳು.
 • Venkatesan,Chennai

  9:36 PM , 08/06/2022

  ದಶರಥ ಮಹಾರಾಜರು ತಿಳಿಯದೆ ಯಜ್ಞದತ್ತರ ಮೇಲೆ ಬಾಣ ಪ್ರಯೋಗ ಮಡಿದ ಕಾರಣ ಯಜ್ಞದತ್ತರು ಸತ್ತರು. ತಿಳಿಯದೆ ಮಾಡಿದ ದಶರಥ ಮಹಾರಾಜನ್ನು ಯಜ್ಞದತ್ತ ಕ್ಷಮಿಸಿದರು. ಯಜ್ಞದತ್ತ ಮತ್ತು ಅವರ ತಂದೆ ತಾಯಿ ಸ್ವರ್ಗಕ್ಕೆ ಹೋದರು. ಅಂತಿಮ ಫಲಿತಾಂಶ ಉತ್ತಮವಾಗಿತ್ತು. ಅದೆಲ್ಲದೇ ಈ ಕಾರ್ಯಕ್ಕಾಗಿ ದಶರಥ ಮಹಾರಾಜರು ಅಶ್ವಮೇಧ ಯಾಗವನ್ನೂ ಮಾಡಿದರು. ಇಷ್ಟೆಲ್ಲಾ ಮಾಡಿದಾರೆ. ಈ ಘಟನೆ ನಡೆದು 10,000 ವರ್ಷಗಳಾಗಿವೆ, ಈಗ ಕೊಂದಿದ್ದೇನೆ ಅನ್ನುವ ಹಾಗೆ ದುಃಖಪಡುತಿದ್ದಾರೆ ಮಹಾರಾಜರು ಆ ನೋವೇ ಅವರಿಂದ ಹೋಗಿಲ್ಲ. ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು?

  Vishnudasa Nagendracharya

  ದಶರಥ ಮಹಾರಾಜರಲ್ಲಿರುವ ಸಜ್ಜನಿಕೆಯದು. 
  
  ತಾವು ಮಾಡಿದ್ದು ಮಹತ್ತರ ಅಪರಾಧ ಎಂಬ ಎಚ್ಚರ ಅವರಿಗಿದ್ದೇ ಇದೆ. ಹೀಗಾಗಿ ಆ ದುಃಖ ಕಾಡುತ್ತಲೇ ಇತ್ತು. 
  
  ಮತ್ತು, ಆ ಕರ್ಮ ಫಲವನ್ನು ನೀಡಿಯೇ ನೀಡುತ್ತಿದೆ. ಆ ಕರ್ಮದ ಫಲವಾಗಿಯೇ ದುಃಖ ಇದೆ. 
  
  ಅಶ್ವಮೇಧಾದಿಗಳು ಉಂಟಾಗಲಿರುವ ಬಾಧೆಯನ್ನು ಕಡಿಮೆ ಮಾಡಿದವೇ ಹೊರತು (ಇನ್ನೂ ಅಧಿಕ ದುಷ್ಫಲವಾಗಬೇಕಾಗಿತ್ತು) ಪೂರ್ಣ ಪರಿಹಾರ ಮಾಡಲಿಲ್ಲ. ಇದಕ್ಕೆ ಕಾರಣವನ್ನು ಉಪನ್ಯಾಸದಲ್ಲಿ ಈಗಾಗಲೇ ತಿಳಿಸಿಯಾಗಿದೆ. 
  
 • Venkatesan,Chennai

  9:34 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  ಶ್ರವಣನ ಋಷಿಯ ಮಗ ಸತ್ತು ಹೋದ, ಮತ್ತೆ ತಿರುಗಿ ಬರಲು ಸಾಧ್ಯವಿಲ್ಲ. ಹಿಗಾಗಿ ಋಷಿ ಪುತ್ರ ವ್ಯಾಮೋಹವನ್ನು ತಡಿಯಲಿಕ್ಕಾಗದೆ ದೇಹ ತ್ಯಾಗ ಮಾಡಿದರು. ಇಲ್ಲಿ ಭಗವಾನ್ ಶ್ರೀ ರಾಮಚಂದ್ರ ದೇವರು 14 ವರ್ಷಗಳ ಕಾಲ ಕಾಡಿಗೆ ಹೋದರು. ಮತ್ತೆ ತಿರುಗಿ ಬರುತ್ತಾರೆ. ಈ ಎರಡು ಘಟನೆಗಳಿಗೆ ವ್ಯತ್ಯಾಸವಿದೆ. ಹೇಗೆ ಅರ್ಥಮಾಡಿಕೊಳ್ಳುವುದು?
  
  
   ಪುತ್ರ ಶೋಕದಿಂದ ದಶರಥ ಮಹಾರಾಜರು ನಿಧನರಾದರು. ಮರಣದ ನಂತರ ಅವರು ಶ್ರೀರಾಮನ ಜೊತೆ ಇರಲಿಕ್ಕಾಗಲ್ಲ. ಅವರು ಅದನ್ನು ಹೇಗೆ ಸಹಿಸಿಕೊಳ್ಳುತ್ತಾರೆ?

  Vishnudasa Nagendracharya

  ಈಗಾಗಲೇ ಉತ್ತರಿಸಿದ್ದೇನೆ. ದಶರಥರ ಘಟನೆ ಶ್ರವಣಕುಮಾರರ ಘಟನೆಯ ಪ್ರತಿಫಲನವಲ್ಲ. ಎಲ್ಲವೂ ಅಲ್ಲಿಯ ರೀತಿಯಂತೆಯೇ ಇರಬೇಕಿಲ್ಲ. 
  
  ಎರಡನೆಯದು, ಶ್ರವಣಋಷಿಗಳಿಗೆ ಇದ್ದದ್ದು ವ್ಯಾಮೋಹವಲ್ಲ, ನಿಷ್ಕಲಂಕ ಪ್ರೀತಿ. 
 • Venkatesan,Chennai

  8:50 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  ಪುತ್ರ ಶೋಕದಿಂದ ದಶರಥ ಮಹಾರಾಜರು ನಿಧನರಾದರು. ಮರಣದ ನಂತರ ಅವರು ಶ್ರೀರಾಮನ ಜೊತೆ ಇರಲಿಕ್ಕಾಗಲ್ಲ. ಅವರು ಅದನ್ನು ಹೇಗೆ ಸಹಿಸಿಕೊಳ್ಳುತ್ತಾರೆ?

  Vishnudasa Nagendracharya

  ದೇಹ ಇರುವವರೆಗೆ ಅಷ್ಟೆ ಆ ರೀತಿಯ ಅಭಿಮಾನ. ದೇಹ ತೊರೆದ ನಂತರ, ಆ ದುಃಖ ನೋವು ಇರುವದಿಲ್ಲ. 
  
  ದಶರಥ ಮಹಾರಾಜರು ಸ್ವರ್ಗದಲ್ಲಿದ್ದು ಶ್ರೀರಾಮದೇವರ ರಾಜ್ಯಭಾರವನ್ನು ಕಾಣುತ್ತ ಸುಖಿಸಿದರು. 
  
  ನಾವು ಸುಖವಾಗಿದ್ದಾಗ ನಮ್ಮ ಮೃತ ಪಿತೃಗಳು ಬೇರೆಯ ಲೋಕದಲ್ಲಿದ್ದು ಸಂತೋಷ ಪಡುತ್ತಾರಲ್ಲ, ಹಾಗೆ. 
 • Venkatesan,Chennai

  8:48 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  ಶ್ರವಣನ ಋಷಿಯ ಮಗ ಸತ್ತು ಹೋದ, ಮತ್ತೆ ತಿರುಗಿ ಬರಲು ಸಾಧ್ಯವಿಲ್ಲ. ಹಿಗಾಗಿ ಋಷಿ ಪುತ್ರ ವ್ಯಾಮೋಹವನ್ನು ತಡಿಯಲಿಕ್ಕಾಗದೆ ದೇಹ ತ್ಯಾಗ ಮಾಡಿದರು. ಇಲ್ಲಿ ಭಗವಾನ್ ಶ್ರೀ ರಾಮಚಂದ್ರ ದೇವರು 14 ವರ್ಷಗಳ ಕಾಲ ಕಾಡಿಗೆ ಹೋದರು. ಮತ್ತೆ ತಿರುಗಿ ಬರುತ್ತಾರೆ. ಈ ಎರಡು ಘಟನೆಗಳಿಗೆ ವ್ಯತ್ಯಾಸವಿದೆ. ಹೇಗೆ ಅರ್ಥಮಾಡಿಕೊಳ್ಳುವುದು?

  Vishnudasa Nagendracharya

  ಅಲ್ಲಿ ನಡೆದ ಹಾಗೆಯೇ ಇಲ್ಲಿ ನಡೆಯಬೇಕು ಅಂತ ಏನು ನಿಯಮವಿದೆ ? 
  
  ರಾಮದೇವರ ಕಥೆ ಶ್ರವಣಕುಮಾರರ ಕಥೆಯ ಪ್ರತಿಬಿಂಬವೇನು?
  
  ದಶರಥರ ಮರಣಕ್ಕೆ, ಪುತ್ರವಿಯೋಗಕ್ಕೆ ಶ್ರವಣಕುಮಾರರ ಹತ್ಯೆ ಸಂಬಂಧಪಟ್ಟಿದೆ, ಅಷ್ಟೆ. 
  
  ಅಲ್ಲಿ ನಡೆದ ಹಾಗೆಯೇ ಇಲ್ಲಿ ನಡೆಯಬೇಕು ಎಂದು ಖಂಡಿತ ಇಲ್ಲ 
 • Venkatesan,Chennai

  8:43 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  1) i. ಶ್ರವಣ ಋಷಿ ಮತ್ತು ಅವರಪತ್ನಿಗೆ ತಮ್ಮ ಮಗನ ಮರಣದ ದುಃಖ ಒಂದು ದಿನಕ್ಕೆ ಮಾತ್ರ (ನಾನು ಸರಿಯಾಗಿದ್ದರೆ) ಇದ್ದು. ಆ ಬಳಿಕ ಅವರು ಸಹ ದೇಹತ್ಯಾಗ ಮಾಡಿ ಮಗನ ಜೊತೆ ಸ್ವರ್ಗ ಸೇರಿದರು. ಆದರೆ ದಶರಥ ಮಹಾರಾಜರು ಆರು ದಿನಗಳ ಕಾಲ ಈ ನೋವನ್ನು ಏಕೆ ಅನುಭವಿಸಿದರು?
  
  
  ii. ಶ್ರವಣ ಋಷಿ ತಮ್ಮಾ ಮರಣದ ನಂದರ ಮಗನ ಜೊತೆ ಸೇರಿದಂತೆ ದಶರಥ ಮಹಾರಾಜರು ಯಾಕೆ ತಮ್ಮ ಮಗನ ಸಂಗವನ್ನ ಪಡೆಯಲಿಲ್ಲ?

  Vishnudasa Nagendracharya

  ಕರ್ಮದ ಫಲ ಯಾವಾಗಲೂ ತೀವ್ರವಾಗಿರುತ್ತದೆ. ಸತ್ಕರ್ಮವಾಗಿರಲಿ, ದುಷ್ಕರ್ಮವಾಗಿರಲಿ. 
  
  ಒಂದು ತುಳಸಿದಳ, ಒಂದು ಬಿಂದು ಗಂಗೋದಕದಿಂದ ಸ್ವಾಮಿ ಪ್ರೀತನಾಗಿ ಜ್ಞಾನ ಭಕ್ತಿ ಮುಕ್ತಿಗಳನ್ನು ಅನುಗ್ರಹಿಸುತ್ತಾನೆ. ಒಂದು ತುಳಸಿಯ ಎಲೆ ನೀಡಿದ ಎಂದು ದೇವರು ನಮಗೂ ಒಂದು ಎಲೆ ನೀಡಿ ಸುಮ್ಮನಾಗುತ್ತಾನೇನು?
  
  ಹಾಗೆಯಾ ಪಾಪಕರ್ಮಗಳು. ಕರ್ಮ ನೋಡಲು ಸಣ್ಣದಿರುತ್ತದೆ. ಆದರೆ, ಅದರ ಫಲ ತೀವ್ರವಾಗಿರುತ್ತದೆ. ಒಂದು ಸಣ್ಣ ತಪ್ಪು ಲಕ್ಷ ಲಕ್ಷವರ್ಷಗಳ ನರಕ, ಭೂಮಿಯಲ್ಲಿ ದುಃಖವನ್ನು ನೀಡುತ್ತದೆ. ಉದಾಹರಣೆಗೆ ಒಂದು ಸಣ್ಣ ಕಡ್ಡಿಯಿಂದ ಗೋವಿಗೆ ಹೊಡೆದರು ಲಕ್ಷಾಂತರ ವರ್ಷಗಳ ನರಕವಿದೆ. 
  
  ii. ಯಜ್ಞದತ್ತರ, ಅವರ ತಂದೆತಾಯಿಗಳ ಜೀವನದಲ್ಲಿ ನಡೆದದ್ದೇ ದಶರಥರ ಜೀವನದಲ್ಲಿ ನಡೆಯಬೇಕೆಂದಿಲ್ಲ. ನಮಗೆ ಗೊತ್ತಿರುವದು ಶ್ರವಣಕುಮಾರರ ಒಂದು ಕಥೆ. ದಶರಥರ ಆ ಮರಣಕ್ಕೆ, ಆ ದುಃಖಕ್ಕೆ ಅದೆಷ್ಟು ಕರ್ಮಗಳ ಬಂಧವಿದೆಯೋ ಅದನ್ನು ತಿಳಿಯಲು ಸಾಮಾನ್ಯ ದೇವತೆಗಳಿಗೂ ಸಾಧ್ಯವಿಲ್ಲ. ಕರ್ಮದ ಆಟವನ್ನು ಅರ್ಥ ಮಾಡಿಕೊಳ್ಳಲು ಆಗುವದಿಲ್ಲ. 
  
 • Venkatesan,Chennai

  9:35 PM , 08/06/2022

  ಶ್ರೀಮದ್ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗಳು
 • Venkatesan,Chennai

  9:32 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
 • Venkatesan,Chennai

  8:50 PM , 08/06/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
  
  ಪುತ್ರ ಶೋಕದಿಂದ ದಶರಥ ಮಹಾರಾಜರು ನಿಧನರಾದರು. ಮರಣದ ನಂತರ ಅವರು ಶ್ರೀರಾಮನ ಜೊತೆ ಇರಲಿಕ್ಕಾಗಲ್ಲ. ಅವರು ಅದನ್ನು ಹೇಗೆ ಸಹಿಸಿಕೊಳ್ಳುತ್ತಾರೆ?
 • Sanjeeva Kumar,Bangalore

  11:19 PM, 07/06/2022

  ಅನಂತ ಪ್ರಣಾಮಗಳು ಗುರುಗಳೆ
 • Nalini Premkumar,Mysore

  11:35 PM, 22/04/2022

  ಹರೆ ಶ್ರೀನಿವಾಸ ಗುರುಗಳೇ ಈ ಭಾಗ ರಾಮಾಯಣ ಅತ್ಯದ್ಭುತ ವಾಗಿದೆ ನಮಗೆಲ್ಲ ಪಾಠ ಕಲಿಸುತ್ತದೆ ತಿಳಿಯದೆ ಮಾಡುವ ತಪ್ಪು ತಿಳಿದು ಮಾಡುವ ತಪ್ಪು ತಿಳಿಯದೆ ಮಾಡಿದ ತಪ್ಪಿಗೆ ಭಗವಂತನನ್ನ ಪ್ರಾರ್ಥನೆ ಮಾಡಿದರೆ ಕ್ಷಮೆ ಯುಂಟು ಎಂತಹ ಅದ್ಬುತ ವಿಷಯಗಳನ್ನು ತಿಳಿದುಕೊಂಡೆವು ಧನ್ಯವಾದಗಳು ಗುರುಗಳೇ ಕೋಟಿ ಕೋಟಿ ಪ್ರಣಾಮಗಳು 🙏🙏🙏
 • Nalini Premkumar,Mysore

  11:35 PM, 22/04/2022

  ಹರೆ ಶ್ರೀನಿವಾಸ ಗುರುಗಳೇ ಈ ಭಾಗ ರಾಮಾಯಣ ಅತ್ಯದ್ಭುತ ವಾಗಿದೆ ನಮಗೆಲ್ಲ ಪಾಠ ಕಲಿಸುತ್ತದೆ ತಿಳಿಯದೆ ಮಾಡುವ ತಪ್ಪು ತಿಳಿದು ಮಾಡುವ ತಪ್ಪು ತಿಳಿಯದೆ ಮಾಡಿದ ತಪ್ಪಿಗೆ ಭಗವಂತನನ್ನ ಪ್ರಾರ್ಥನೆ ಮಾಡಿದರೆ ಕ್ಷಮೆ ಯುಂಟು ಎಂತಹ ಅದ್ಬುತ ವಿಷಯಗಳನ್ನು ತಿಳಿದುಕೊಂಡೆವು ಧನ್ಯವಾದಗಳು ಗುರುಗಳೇ ಕೋಟಿ ಕೋಟಿ ಪ್ರಣಾಮಗಳು 🙏🙏🙏
 • Naveen ulli,Ilkal

  9:31 AM , 22/04/2022

  ನಾವು ಕೂಡಾ ಪ್ರವಚನ ಕೇಳುತ್ತಲೇ, ಶ್ರೀರಾಮನ ಆಗಮನವನ್ನ ಕಂಡೇವು. ಮತ್ತು ನಮ್ಮಲ್ಲಿ ಇದ್ದ ಪಾಪದ ಎಚ್ಚರ ಇನ್ನು ಗಟ್ಟಿಮಾಡಿತು ಈ ಪ್ರವಚನ. ಇದನ್ನು ನೀಡಿದ ಗುರುಗಳೇ 🙏.
 • Srikar K,Bengaluru

  9:10 PM , 21/04/2022

  Gurugale, ee janma dalli mahattara paapa madiddare adara phala ide janma dalli siguttade endu shastra da prakara. Dasharatha rige idannu anavayisidare avaru hindina janma dalli madida yavudadaru bala vada paapa vu karana vagira bahude ? Dhanyawadagalu

  Vishnudasa Nagendracharya

  ಕರ್ಮಗಳು ಯಾವಾಗಲೂ ಸಂಕೋಲೆಯಂತೆ. ಪ್ರತಿಯೊಂದು ಕರ್ಮಕ್ಕೂ ಪ್ರಾಚೀನ ಜನ್ಮಗಳ ಕರ್ಮದ ನಂಟು ಇದ್ದೇ ಇರುತ್ತದೆ. 
  
  ಇಷ್ಟೇ ನಮಗೆ ತಿಳಿಯಲು ಸಾಧ್ಯ. ಇಂತಹುದೇ ಕರ್ಮ ಎಂದು ನಿಖರವಾಗಿ ತಿಳಿಯಲು ಶಾಸ್ತ್ರದಲ್ಲಿ ಅದನ್ನು ಹೇಳಿರಬೇಕು.