Upanyasa - VNU985

ಕೈಕಯಿಯನ್ನು ತಿರಸ್ಕರಿಸಿದ ಭರತರು

ಶ್ರೀಮದ್ ರಾಮಾಯಣಮ್ — 97

ಭರತರು ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಆಗಿರುವ ಅನರ್ಥದ ಸೂಚನೆ ದೊರೆಯಲಾರಂಭಿಸುತ್ತದೆ. ವಸಿಷ್ಠರ ದೂರದರ್ಶಿತ್ವದ ಕಾರಣದಿಂದ ಯಾವ ರಾಜಪ್ರಮುಖರೂ ಭರತರನ್ನು ಅರಂಭದಲ್ಲಿ ಭೇಟಿಯಾಗುವದಿಲ್ಲ ಮತ್ತು ನಡೆದ ವಿವರಗಳನ್ನು ತಿಳಿಯಗೊಡುವದಿಲ್ಲ. 

ಕೈಕಯಿಯ ಮುಖದಿಂದಲೇ ಸುದ್ದಿಯನ್ನೆಲ್ಲ ತಿಳಿದ ಭರತರು, ಕೈಕಯಿಯನ್ನು ಅಪಾರವಾಗಿ ನಿಂದಿಸುವ ಭಾಗವನ್ನಿಲ್ಲಿ ಕೇಳುತ್ತೇವೆ. ತಾಯಿಯನ್ನು ನಿಂದಿಸಿದ್ದು ಸರಿಯೇ, ತಪ್ಪೇ ಎಂಬ ಚರ್ಚೆಯೊಂದಿಗೆ. 

ಪರಿಶುದ್ಧ ಕಾಮ ಮತ್ತು ದುಷ್ಟಕಾಮಗಳ ಕುರಿತ ಅಪೂರ್ವ ವಿಷಯಗಳಿಲ್ಲಿವೆ. 

ಯಾವ ತಪ್ಪು ಮಾಡಿದಾಗ ಬಂಧುಗಳನ್ನು ಕ್ಷಮಿಸಬೇಕು, ಯಾವ ತಪ್ಪು ಮಾಡಿದಾಗ ಅವರಿಂದ ದೂರವಿರಬೇಕು ಎಂಬ ಪಾಠವನ್ನಿಲ್ಲಿ ಕಲಿಯುತ್ತೇವೆ, ಆಚಾರ್ಯರ ನಿರ್ಣಯಗಳೊಂದಿಗೆ. 

Play Time: 49:51

Size: 3.84 MB


Download Upanyasa Share to facebook View Comments
6529 Views

Comments

(You can only view comments here. If you want to write a comment please download the app.)
 • H.Suvarna kulkarni,Bangalore

  10:54 AM, 06/06/2022

  ಗುರುಗಳಿಗೆ ಅನಂತ ಪ್ರಣಾಮಗಳು..ಕಲಿಯಬೇಕಾದ ಪಾಠಗಳು ತುಂಬಾ ಇವೆ..ಒಳ್ಳೆಯ ದನ್ನು ಮೈಗೂಡಿಸಿಕೊಳ್ಳ ಬೇಕಾದರೆ ನಿತ್ಯ ಹರಿಕಥೆ ಕೇಳಬೇಕು ..ಕೇಳಿದ್ದನ್ನ ಮನನ ಮಾಡಬೇಕು..ನಂತರ ಅನುಷ್ಠಾನ ಕ್ಕೆ ತರಲೇಬೇಕು..
 • Nalini Premkumar,Mysore

  10:33 PM, 25/04/2022

  ಅಧ್ಭುತ ಗುರುಗಳೇ ಧನ್ಯವಾದಗಳು ಗುರುಗಳೇ 🙏🙏🙏
 • Vijay Kulkarni,Bengaluru

  8:00 PM , 23/04/2022

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ದಯವಿಟ್ಟು ನನ್ನ ಈ ಒಂದು ಸಂದೇಹ ಪರಿಹರಿಸಿ.
  ಭರತರು ತಮ್ಮ ತಾಯಿ ಕೈಕೇಯಿ ಬಯ್ದಿದ್ದು ನನಗೆ ಸರಿಯಾಗಿ ಅರ್ಥವಾಗಲಿಲ್ಲ .
  ಕೈಕೇಯಿ ವೈಷ್ಣವ ಧರ್ಮ ಕ್ಕೆ ವಿರುದ್ಧ ವಾಗಿದ್ದರೆ ಶ್ರೀ ರಾಮ ದೇವರು ಏಕೆ ಸುಮ್ಮನೆ ಸಂತೋಷ ದಿಂದ ವನವಾಸಕ್ಕೆ ಹೋದರು ?
   ಶ್ರೀ ರಾಮದೇವರ ಮತ್ತು ಭರತರ ನಡೆತೆ ಯಲ್ಲಿ ಯಾಕೆ ವ್ಯತ್ಯಾಸ ?

  Vishnudasa Nagendracharya

  ಮೊದಲಿಗೆ ಕೈಕಯಿ ಮಾಡಿದ್ದು ವೈಷ್ಣವಧರ್ಮವಲ್ಲ. 
  
  ಗಂಡನಿಗೆ ಸಂತೋಷವನ್ನುಂಟು ಮಾಡುವದು ವೈಷ್ಣವಧರ್ಮ. ತನ್ನ ಬಳಿ ಇದ್ದ ವರಗಳನ್ನು ದುರುಪಯೋಗ ಪಡಿಸಿಕೊಂಡು ಗಂಡನ ಮನಸ್ಸಿಗೆ ಭರಿಸಲಾಗದ, ಸಾವನ್ನೇ ನೀಡುವಂತಹ ನೋವನ್ನು ನೀಡುವದು ಎಲ್ಲಿಯ ವೈಷ್ಣವಧರ್ಮ?
  
  ಶ್ರೀರಾಮದೇವರು ವನವಾಸಕ್ಕೆ ಹೋದದ್ದು ಕೈಕಯಿ ವೈಷ್ಣವಧರ್ಮದ ಆಚರಣೆ ಮಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಅಲ್ಲ, ತಮ್ಮ ತಂದೆಯವರು ಧರ್ಮಬಂಧಕ್ಕೆ ಬದ್ಧರಾಗಿದ್ದಾರೆ, ಕೊಟ್ಟ ಮಾತನ್ನು ನಡೆಸಲೇಬೇಕು ಎನ್ನುವ ಕಾರಣಕ್ಕೆ. ತಮ್ಮ ತಂದೆಯವರನ್ನು ಸತ್ಯಸಂಧರನ್ನಾಗಿ ಮಾಡಲು. 
  
  ಅವರು ಕೈಕಯಿಯ ದುರ್ವರ್ತನೆಯ ಬಗ್ಗೆ ಚಿಂತನೆ ಮಾಡಲೇ ಇಲ್ಲ. ಅದರ ಕುರಿತು ಮಾತನಾಡುವ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿರುವದು ಭರತರಿಗೆ. ಹೀಗಾಗಿ, ಅವರು ವೈಷ್ಣವಧರ್ಮದಿಂದ ಚ್ಯುತಳಾಗಿ, ತನ್ನ ಗಂಡನಿಗೆ ದ್ರೋಹ ಮಾಡಿದ ತಮ್ಮ ತಾಯಿಯನ್ನು ಸರ್ವಾತ್ಮನಾ ತೊರೆದುಬಿಟ್ಟರು. 
  
  ಶ್ರೀರಾಮರು ತಂದೆಯನ್ನು ಸತ್ಯಸಂಧರನ್ನಾಗಿ ಮಾಡಿದರು. 
  
  ಭರತರು ತಾಯಿಯ ಮಾಡಿದ ತಪ್ಪನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದರು. 
 • Vishwnath MJoshi,Bengaluru

  8:25 PM , 23/04/2022

  गुरुगलीगे नमस्कार:
  ಧೂತರು ಭರತನಿಗೆ ಹೊಗಿ ವಿಶಯ ತಿಳಿಸಿ ಮತ್ತು ಭರತರು ಅಯೋಧ್ಯೆಕ್ಕೆ ಬರಲು ಸುಮಾರು 14 ದಿನಗಳು ಆಗುತ್ತದೆ. ಅಲ್ಲಿಯ ವರೆಗೆ ದಶರಥರ ದೆಹ ಸಂಸ್ಕಾರ ಆಗಿರುವುದಿಲ್ಲವಾ?
  ಇದು ಶಾಸ್ತ್ರದ ವಿರುದ್ದವಾಇತು . ಕ್ಷತ್ರಿಯರು ದಶರಥರು. ಕ್ಷತ್ರಿಯರಿಗೆ ಮರಣ ನಂತರ ಕಾರ್ಯಗಳ್ಳಲ್ಲಿ ಶಾಸ್ತ್ರದಲ್ಲಿ 
  ಬೆರೆ ನಿಯಮವಿದಿಯಾ?
  ಆಥವಾ ಯುಗ,ಯುಗಗಳ್ಳಲ್ಲಿ ನಿಯಮ ಬೆರೆಇದಿಯಾ?

  Vishnudasa Nagendracharya

  ಎಲ್ಲದರ ವಿವರವೂ ಮುಂದಿನ ಉಪನ್ಯಾಸಗಳಲ್ಲಿಯೇ ಬರುತ್ತದೆ. 
 • JOTHIPRAKASH L,DHARMAPURI

  4:58 PM , 23/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಪ್ರವಚನ ಬಹಳ ಅದ್ಭುತವಾಗಿ ಮೂಡಿಬಂದಿದೆ ‌‌. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
 • Laxmi Padaki,Pune

  10:19 AM, 23/04/2022

  ಶ್ರೀ ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.ಈಗಿನ ಕಾಲದಲ್ಲಿ ಶ್ರೀ ಭರತಮಹಾರಾಜರ ಗುಣ ಸಹೋದರರಲ್ಲಿ ಮತ್ತು ಮಕ್ಕಳಲ್ಲಿ ಬಂದರೆ ಮತ್ತೆ ಶ್ರೀ ರಾಮರಾಜ್ಯ ಬರಬಹುದು.ನಮೋ ನಮಃ.

  Vishnudasa Nagendracharya

  ಸಂಶಯವೇ ಇಲ್ಲ. ನಾವೆಲ್ಲರೂ ಆ ಮಹಾಗುಣಗಳನ್ನು ಮೈಗೂಡಿಸಿಕೊಳ್ಳಬೇಕು. 
  
  ಧರ್ಮದ ದೃಷ್ಟಿಯಲ್ಲಿ ಯಾವುದು ನಮ್ಮದೋ ಅದರ ಮೇಲೆ ಮಾತ್ರ ನಮ್ಮ ಅಧಿಕಾರ. 
  
  ಧರ್ಮದ ದೃಷ್ಟಿಯಲ್ಲಿ ಯಾವುದು ನಮ್ಮದಲ್ಲವೋ ಅದನ್ನು ಕನಸುಮನಸಿನಲ್ಲಿಯೂ ಬಯಸತಕ್ಕದ್ದಲ್ಲ. 
  
  ಈ ಗುಣಗಳು ನಮ್ಮಲ್ಲಿ ನಮ್ಮ ಮನೆಯಲ್ಲಿ ಮೈಗೂಡಿಬಿಟ್ಟರೆ ಅದೇ ಕೃತಯುಗ. 
 • Niranjan Kamath,Koteshwar

  9:03 AM , 23/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಶ್ರೀ ಭರತರ ತತ್ವಾದರ್ಶಗಳು ಪರಮ ಅನುಕರಣೀಯ. ಅದೆಂತಹ ಪ್ರಸಂಗಕ್ಕೆ ಒಳಗಾದರು. ಆದರೂ ಧರ್ಮ ಮಾರ್ಗಕ್ಕೆ ಚುತಿಯಾಗದೆ ನಡೆದು ತೋರಿಸಿದ ಸಾಕಾರ ಮೂರುತಿ. ಧನ್ಯೋಸ್ಮಿ.

  Vishnudasa Nagendracharya

  ಪರಮಸತ್ಯ. 
  
  ಧರ್ಮದ ದೃಷ್ಟಿಯಿಂದ ನಮ್ಮದಲ್ಲದ ವಸ್ತು ವ್ಯಕ್ತಿಗಳನ್ನು ಕನಸು ಮನಸ್ಸಿನಲ್ಲಿಯೂ ಅಪೇಕ್ಷಿಸಬಾರದು, ನಮ್ಮಲ್ಲಿರುವ ಕಾಮ ಶುದ್ಧ ಕಾಮವಾಗಿರಬೇಕು ಎಂಬ ಅದ್ಭುತ ಪಾಠವನ್ನು ತಮ್ಮ ಚರ್ಯೆಯಿಂದಲೇ ಕಲಿಸುವ ಮಹಾನುಭಾವರು, ಭರತರು.