Upanyasa - VNU986

ಭರತರ ಅಂತರಾಳ

ಶ್ರೀಮದ್ ರಾಮಾಯಣಮ್ — 98

ರಾಜಪೋಷಾಕನ್ನು ತೊಟ್ಟು ಬಂಗಾರಗಳನ್ನು ಹೇರಿಕೊಂಡು ಬಂದ ಮಂಥರೆಯನ್ನು ಶತ್ರುಘ್ನರು ಕೊಲ್ಲಲು ಹೊರಟಾಗ, ಭರತರು ತಡೆದು ನಾನೇ ಇವರಿಬ್ಬರನ್ನು ಕೊಲ್ಲುತ್ತಿದ್ದೆ. ಆದರೆ ರಾಮ ಮೆಚ್ಚುವದಿಲ್ಲ ಎನ್ನುವ ಕಾರಣಕ್ಕೆ ಬಿಟ್ಟಿದ್ದೇನೆ, ನೀನೂ ಕೊಲ್ಲಬೇಡ ಎನ್ನುತ್ತಾರೆ. ಇಬ್ಬರೂ ಕೈಕಯಿಯನ್ನು ತೊರೆದು ಕೌಸಲ್ಯೆಯ ಬಳಿಗೆ ಬರತ್ತಾರೆ. 

ನಿನ್ನಮ್ಮ ನನ್ನನ್ನು ವನಕ್ಕೆ ಕಳುಹಿಸುವ ಮೊದಲು ನೀನೇ ನನ್ನನ್ನು ರಾಮನ ಬಳಿ ಬಿಟ್ಟು ಬಂದುಬಿಡು ಎಂದು ಕೌಸಲ್ಯಾದೇವಿಯರು ಹೇಳಿದಾಗ ಭರತರು ಅಣ್ಣನ ವನವಾಸಕ್ಕೆ ನಾನು ಕಾರಣನಾಗಿದ್ದರೆ ನನಗೆ ಸಕಲವಿಧವಾದ ದುರ್ಗತಿಗಳುಂಟಾಗಲಿ ಎಂದು ನಿವೇದಿಸಿಕೊಳ್ಳುನ ಘಟನೆಯ ಚಿತ್ರಣ. 

Play Time: 37:10

Size: 3.84 MB


Download Upanyasa Share to facebook View Comments
6302 Views

Comments

(You can only view comments here. If you want to write a comment please download the app.)
 • Sanjeeva Kumar,Bangalore

  1:49 PM , 08/06/2022

  ಅನಂತ ಪ್ರಣಾಮಗಳು ಗುರುಗಳೆ, ಕಣ್ಣಲ್ಲಿ ನೀರು, ಎಂತಹ ವ್ಯಕ್ತಿತ್ವ ಭರತರದು. ಗುರುಗಳೆ ಜ್ಞಾನಕ್ಕೆ ಸಾಷ್ಟಾಂಗ ಪ್ರಣಾಮಗಳು,🙏
 • Sowmya,Bangalore

  3:46 PM , 28/05/2022

  🙏🙏🙏
 • Jyothi Gayathri,Harihar

  6:58 AM , 27/04/2022

  🙏🙏🙏🙏🙏
 • Nalini Premkumar,Mysore

  6:30 AM , 27/04/2022

  🙏🙏🙏
 • Niranjan Kamath,Koteshwar

  9:37 AM , 25/04/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಬಹಳ ಬಹಳ ಕರುಣಾಪೂರ್ಣ ಉಪನ್ಯಾಸ ಗುರುಗಳೇ. ಕಣ್ಣಲ್ಲಿ ನೀರು , ಪ್ರಸಂಗದ ವಿಷಯ ಕಣ್ಣ ಮುಂದೆಯೇ ನಡೆಯುತ್ತಿದ್ದಂತೆ ಭಾಸವಾಗುವಷ್ಟು ಸ್ಪಷ್ಟವಾಗಿ ಉಪನ್ಯಾಸ ನೀಡಿದ್ದೀರಿ. ಆ ಭರತ ಶತ್ರುಘ್ನರ ವಿಚಾರ ಕೌಸಲ್ಯಾ ಮಾತೆಯ ಮಮತೆ ಎಲ್ಲವೂ ಬಹಳ ಅರ್ಥಪೂರ್ಣ. ಧನ್ಯೋಸ್ಮಿ.

  Vishnudasa Nagendracharya

  ಶ್ರೀರಾಮಚರಿತ್ರೆಯ ಸೊಬಗೇ ಅದು. ಅದರಿಂದ ಹೊರಬರಲು ಸಾಧ್ಯವೇ ಇಲ್ಲ. ಆ ಆನಂದವೇ ದಿವ್ಯ ಅನುಭೂತಿ.