Upanyasa - VNU989

ರಸ್ತೆಯ ನಿರ್ಮಾಣ

ಶ್ರೀಮದ್ ರಾಮಾಯಣಮ್ — 101

ಹತ್ತುಸಾವಿರ ಆನೆಗಳು, ಒಂದು ಲಕ್ಷ ಕುದುರೆಗಳು, ಎಂಟು ಸಾವಿರ ರಥಗಳು, ಲೆಕ್ಕವಿಲ್ಲದಷ್ಟು ಪದಾತಿಗಳುಸ, ಇವರೆಲ್ಲರಿಂದ ಕೂಡಿದ ಸಮಗ್ರ ಸೈನ್ಯ ಬಾಲ ವೃದ್ಧರಿಂದಾರಂಭಿಸಿ ಎಲ್ಲ ನಾಗರೀಕರು ತಮ್ಮೊಡೆಯ ಶ್ರೀರಾಮದೇವರನ್ನು ಕರೆತರಲು ಹೊರಡುತ್ತಾರೆ. 

ಆದರೆ ಈ ದಾರಿಯಲ್ಲಿ ವಿಶಾಲವಾದ ರಸ್ತೆ ಇರುವದಿಲ್ಲ. ಅಯೋಧ್ಯೆಯಿಂದ ಶೃಂಗವೇರಪುರದವರಗೆ (ಇವತ್ತಿನ ಲೆಕ್ಕದಲ್ಲಿ 170 ಕಿಲೋಮೀಟರ್) ಎರಡೇ ದಿವಸಗಳಲ್ಲಿ ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಿದ ಆ ನಮ್ಮ ಪ್ರಾಚೀನರ ವಿದ್ಯೆ ಕೌಶಲ ಬದುಕು ಅದೆಷ್ಟು ಅದ್ಭುತವಾಗಿತ್ತು ಎಂದು ಪರಿಚಯಿಸುವ ಭಾಗ. 

ಸೈನ್ಯಸಾಗರ, ಜನಸಾಗರ ಹಿಂದೆ ಹಿಂದೆ ನಡೆದು ಬರುತ್ತಿದೆ, ಕಾರ್ಮಿಕಸಮೂಹ ಮುಂದೆ ಮುಂದೆ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡುತ್ತ ಸಾಗುತ್ತದೆ. ನಡೆದು ಬರುವವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನೂ ಮಂತ್ರಿಗಳು ಮಾಡಿಸುವ ನಮ್ಮ ಊಹೆಗೂ ಮೀರಿದ ಕೌಶಲದ ಘಟನೆಯ ಚಿತ್ರಣ ಇಲ್ಲಿದೆ. 

Play Time: 33:40

Size: 3.84 MB


Download Upanyasa Share to facebook View Comments
7772 Views

Comments

(You can only view comments here. If you want to write a comment please download the app.)
 • Sowmya,Bangalore

  1:25 PM , 07/06/2022

  🙏🙏🙏
 • Jayashree karunakar,Bangalore

  9:10 PM , 01/05/2022

  ಯಾಂತ್ರಿಕ ಜೀವನದಿಂದ ಬೇಸತ್ತು... 
  
  ಮತ್ತೆ ಮನಸ್ಸು ಧಾವಿಸಿದೆ ಚಿತ್ರಕೋಟದತ್ತ....ರಾಮ ರಾಮ... 
  
   ಆ ರಾಮಚಂದ್ರನ ಕಾಣಲು ಸಂಭ್ರಮದಲಿ... 
  
  ಸಿದ್ಧವಾಗುತ್ತಿರುವ ರಸ್ತೆಯ ಮೂಲಕ ಸಾಗಿ.. ... . ಗಂಗಾ ನದಿ ದಾಟಿಕೊಂಕೊಂಡು... ಆ ಭಾಗ್ಯವಂತರಾದ ಜನರ ಗುಂಪಿನೊಳಗೊಂದಾಗಿ....  ಹೆಣ್ಣುಮಕ್ಕಳ ಜೊತೆ ಜೊತೆಯಲ್ಲಿ....ಇಲ್ಲಿಯ ಕಾಂಕ್ರಿಟ್ ನಗರವನ್ನು ಬಿಟ್ಟು, ಕಾನನದ ದಾರಿಯಲಿ 
  ಹೆಜ್ಜೆ ಹಾಕಿದೆ ಕಾತರದಲಿ.... ರಾಮ ರಾಮ...
   
  
  ಪ್ರವಚನ ಮುಗಿಯಿತು ಆದರೆ ನಾವಿದ್ದಲ್ಲಿಯೇ ಇದ್ದೇವೆ ರಾಮ ರಾಮ... 
  
  ನಮಗೆಲ್ಲಿಯ ಆ ಭಾಗ್ಯ ರಾಮ ರಾಮ.. 
  
  ಆದರೆ ವಿಶ್ವನಂದಿನಿಯ ತುಂಬೆಲ್ಲ ಭಗವಂತನಿದ್ದಾನೆ ರಾಮ ರಾಮ... 
  
  ಆ ರಾಮನ ದಯದಿಂದ ವಿಶ್ವನಂದಿನಿಯ ಸೇರಿಕೊಂಡೆ ರಾಮ ರಾಮ...
 • Venkatesh. Rajendra . Chikkodikar.,Mudhol

  8:21 PM , 01/05/2022

  🙏🙏🙏
 • Nalini Premkumar,Mysore

  5:12 PM , 01/05/2022

  ಹರೆ ಶ್ರೀನಿವಾಸ ಗುರುಗಳೇ ಅದ್ಬುತ ವಾದ ಪ್ರವಚನ ಹಿಂದಿನ ಕಾಲದ ಜನರ ಕೌಶಲ ಮತ್ತು ಈಗಿನ ಕಾಲದ ಜನರ ಅಭಿವೃದ್ಧಿ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದಿರಿ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ 🙏🙏🙏
 • Srikar K,Bengaluru

  1:28 PM , 01/05/2022

  Gurugale, namaskaragalu. Ramayana captures extremely minute details and same are explained very well by your good self. Feel sorry to know what we lost - without realising it, we have illusion that current generation is in much advanced stage now !!!

  Vishnudasa Nagendracharya

  ಇಂದಿನ ಥಳುಕು ಬಳುಕು ಹಿಂದಿನ ವಾಸ್ತವ ವೈಭವವನ್ನು ಮರೆಮಾಚಿಸಿದೆ. 
 • Srikar K,Bengaluru

  1:38 PM , 01/05/2022

  Gurugale, namaskaragalu. Sri Rama nannu kare taruva Bharatha ra nirdhara dinda Kaikeyi mele aada parinama yenu, avala mana sthithi hegittu, pashttapa pattale, Kousalle & Sumitre yaru Kaikeyi yannu yaava reethi kandaru, Manthare ge munde yenayitu, Bharatha ru Kaikeyi ya jotege hege nadedukondaru, etc. ivugala bagge munde vivarane baruvudideye ?

  Vishnudasa Nagendracharya

  ಎಲ್ಲ ವಿಷಯಗಳೂ ಸ್ಪಷ್ಟವಾಗುತ್ತವೆ. "ಬದಲಾದ ಕೈಕೇಯಿ" ಎಂದು ಒಂದು ಉಪನ್ಯಾಸವೇ ಬರಲಿದೆ.