Upanyasa - VNU990

ಭರತರ ಹಿಂದೆ ಹೊರಟ ಸಮಗ್ರ ಜನತೆ

ಶ್ರೀಮದ್ ರಾಮಾಯಣಮ್ — 103

ಸಮಗ್ರ ಯೋಧರು, ಯೋಧಪತ್ನಿಯರು, ಆನೆ, ಕುದುರೆ, ಒಂಟೆ, ಗೋವು ಮುಂತಾದ ಸಮಸ್ತ ಪ್ರಾಣಿಗಳು, ಕೌಸಲ್ಯಾ, ಸುಮಿತ್ರಾ, ಕೈಕಯೀ ಮುಂತಾದ ಸಮಗ್ರ ರಾಜಪರಿವಾರ, ಬಾಲರು, ಬಾಲಿಕೆಯರು, ಯುವಕರು, ಯುವತಿಯರು, ವೃದ್ಧರು ವೃದ್ಧೆಯರು ಮೊದಲಾಗಿ ಇಡಿಯ ಅಯೋಧ್ಯೆಯ ಜನತೆ ಹೊರಟು ನಿಲ್ಲುವ ಭಕ್ತಿಸಂಭ್ರಮಯುಕ್ತವಾದ ಭಾಗವಿದು. 

ಅಯೋಧ್ಯೆಗೆ ಅಯೋಧ್ಯೆ ನಿರ್ಮಾನುಷವಾಗಿ ಬಿಡುತ್ತದೆ. ಊರ ಬಾಗಿಲು ಕಾಯಲಿಕ್ಕೆ ಸಹ, ದೇವಸ್ಥಾನಗಳಲ್ಲಿ ಪೂಜೆ ಮಾಡುವದಕ್ಕೆ ಸಹ, ಅರಮನೆಯನ್ನು ಸಂಪತ್ತನ್ನು ಕಾಯಲಿಕ್ಕೆ ಸಹ ಒಬ್ಬರೂ ಇರುವದಿಲ್ಲ. ರಾಮನಿಲ್ಲದ ಊರು ಬೇಡ, ರಾಮನ ಕಾಲಿಗೆ ಬಿದ್ದು ರಾಮನನ್ನು ಕರೆತರಲೇಬೇಕು ಎಂಬ ನಿಶ್ಚಯದಿಂದ ಹೊರಡುವ ಭಕ್ತಿಯ ಪರಾಕಾಷ್ಠೆಯ ಚಿತ್ರಣವಿದು. 

Play Time: 30:46

Size: 3.84 MB


Download Upanyasa Share to facebook View Comments
6396 Views

Comments

(You can only view comments here. If you want to write a comment please download the app.)
 • Kosigi shroff malathi,Hyderabad

  10:27 AM, 24/07/2022

  🙏🙏
 • Sowmya,Bangalore

  1:42 PM , 08/06/2022

  🙏🙏🙏
 • K.N.Venkatesha murthy,Tumkur

  2:24 PM , 21/05/2022

  ಸುದೀರ್ಘ ವಿವರಣೆಕೊಟ್ಟಿದಕ್ಕೆ ವಂದನೆಗಳು
 • K.N.Venkatesha murthy,Tumkur

  10:12 PM, 20/05/2022

  Venkatesha Murthy.
  ಇಲ್ಲಿ ರಾಮಾವತರದ ಮಹತ್ವ ಗೊತ್ತಿರದ ಹಲವರು ವಸಿಷ್ಠರ 
  ಇಟ್ಟುಕೊಟ್ಟ ಮುಹೂರ್ತವನ್ನು ಪ್ರಶ್ನೆ ಮಾಡಬಹುದೇ

  Vishnudasa Nagendracharya

  ಶ್ರೀ ವಸಿಷ್ಠರು ಇಟ್ಟ ಮುಹೂರ್ತದ ಬಗ್ಗೆ ತಿಳಿಯಬೇಕಾದ ಮಹತ್ತ್ವದ ಅಂಶಗಳಿವೆ. 
  
  ಮೊದಲನೆಯದು —
  
  ಮುಹೂರ್ತವನ್ನು ನಿಗದಿ ಮಾಡುವದು ಎಂದರೆ, ಇಂತಹ ಕಾರ್ಯವನ್ನು ಇಂತಹ ಸಂದರ್ಭದಲ್ಲಿ ಮಾಡಿದರೆ, ಆ ಕಾರ್ಯ ಪರಿಪೂರ್ಣ ಫಲವನ್ನು ನೀಡುತ್ತದೆ ಎಂದು. ಹೊರತು, ಈ ಸಮಯಕ್ಕೆ ಈ ಕಾರ್ಯ ನಡೆಯುತ್ತದೆ ಎಂಬ ಭವಿಷ್ಯವಾಣಿಯಲ್ಲ ಅದು. ಆ ಸಂದರ್ಭದಲ್ಲಿ ಆ ಕಾರ್ಯ ಜರುಗಿಸಬೇಕಾದದ್ದು ಯಜಮಾನನ ಕರ್ತವ್ಯ. 
  
  ಉದಾಹರಣೆಗೆ ಶ್ರೇಷ್ಠ ಜ್ಯೋತಿಷಿಗಳೊಬ್ಬರು ಮದುವೆಗೆ ಎಂದು ಉತ್ತಮ ಮುಹೂರ್ತವನ್ನು ನೀಡಿದರು. ಅದರರ್ಥ ಈ ಮುಹೂರ್ತದಲ್ಲಿ ಈ ಕಾರ್ಯ ನಡೆದೇ ನಡೆಯುತ್ತದೆ ಎಂದಲ್ಲ, ಈ ಮುಹೂರ್ತದಲ್ಲಿ ಮದುವೆ ಜರುಗುತ್ತದೆ ಎಂದು ಭವಿಷ್ಯ ನುಡಿದದ್ದಲ್ಲ ಅದು, ಹೊರತು ಈ ಮುಹೂರ್ತದಲ್ಲಿ ಮದುವೆ ನಡೆದರೆ ಅವರ ದಾಂಪತ್ಯ ಚನ್ನಾಗಿರುತ್ತದೆ ಎಂದು. ಆ ಮುಹೂರ್ತದಲ್ಲಿ ಮದುವೆ ನೆರವೇರಿಸುವದು ತಂದೆ ತಾಯಿಗಳ ಕರ್ತವ್ಯ. ಮತ್ತು 
  
  ಎರಡನೆಯದು —
  
  ಯಾವುದೇ ಮುಹೂರ್ತವಾದರೂ ಅದಕ್ಕೆ ವಿಘ್ನಗಳು ಇದ್ದೇ ಇರುತ್ತವೆ. ಆ ವಿಘ್ನಗಳನ್ನು ದಾಟಿ ಮುಹೂರ್ತವನ್ನು ನಿಗದಿ ಮಾಡಬೇಕು. "ಛಿದ್ರಾಣಿ ಮೃಗ್ಯಂತೇ ಬ್ರಹ್ಮರಾಕ್ಷಸಾಃ" ಸಾತ್ವಿಕ ಕಾರ್ಯಗಳನ್ನು ನಿಲ್ಲಿಸಲು ರಾಕ್ಷಸರು ಮಹಾಪ್ರಯತ್ನ ಪಡುತ್ತಿರುತ್ತಾರೆ. ಯಜಮಾನ ಶ್ರೀಹರಿ ಗುರುಗಳ ಪ್ರಾರ್ಥನೆಯನ್ನು ಮಾಡಿ, ತಕ್ಕ ಶಾಂತಿಗಳನ್ನು ಮಾಡಿಸಿ, ಮಹಾಪ್ರಯತ್ನ ಪಟ್ಟು ಆ ಕಾರ್ಯವನ್ನು ಆ ಮುಹೂರ್ತದಲ್ಲಿ ಸಾಧಿಸಲೇಬೇಕು. 
  
  ಮೂರನೆಯದು —
  
  ಶ್ರೀ ವಸಿಷ್ಠರಿಷ್ಟ ಮುಹೂರ್ತ ವ್ಯರ್ಥವಾಗಲೇ ಇಲ್ಲ. ಶ್ರೀರಾಮದೇವರು ಪಟ್ಟಾಭಿಷಿಕ್ತರಾಗಿ ರಾಜ್ಯವನ್ನು ನಡೆಸಲಿ ಎಂಬ ಸಂಕಲ್ಪದೊಂದಿಗೆ ಮುಹೂರ್ತವನ್ನಿಟ್ಟರು. ಅ ಮುಹೂರ್ತದ ಮಹಿಮೆ ಎಷ್ಟೆಂದರೆ 
  
  1. ತಾನಾಗಿ ಯಾವ ಪ್ರಯತ್ನವಿಲ್ಲದೇ ರಾಜ್ಯ ಬಂದರೂ ಭರತರು ಸ್ವೀಕರಿಸಲಿಲ್ಲ. 
  
  2. ಅಯೋಧ್ಯೆಯ ಜನರು, ಕೋಟೆ ಬಾಗಿಲು ದೂರ ಉಳಿಯಿತು, ಮನೆ ಬಾಗಿಲುಗಳನ್ನೂ ಹಾಕದೇ ಶ್ರೀರಾಮರನ್ನು ಹಿಂದಕ್ಕೆ ಕರೆತರಲು ಚಿತ್ರಕೂಟಕ್ಕೆ ತೆರಳುತ್ತಾರೆ. ಒಬ್ಬ ರಾಜನೂ ಆಕ್ರಮಿಸುವ ಯೋಚನೆ ಸಹಿತ ಮಾಡಲಿಲ್ಲ. 
  
  3. ಶ್ರೀರಾಮರು ಆಳಬೇಕಾಗಿದ್ದ ರಾಜ್ಯವನ್ನು ಶ್ರೀರಾಮರ ಪಾದುಕೆಗಳೇ ಆಳಿದವು. 
  
  4. ಅಂದರೆ, ಕಲಿಯ ಪತ್ನಿ ಮಂಥರೆ ಪಟ್ಟಾಭಿಷೇಕ ನಿಲ್ಲಿಸಲು ತನ್ನ ಇಡಿಯ ಜೀವಪ್ರಯತ್ನವನ್ನು ಹಾಕಿದರೂ, ಅದು ಸಾಧ್ಯವಾಗೇ ರಾಮರ ಪಾದುಕೆಗಳು ರಾಜ್ಯವನ್ನಾಳಿದವು. 
  
  5. ಹದಿನಾಲ್ಕು ವರ್ಷಗಳಲ್ಲಿ ದಂಡಕಾರಣ್ಯ ಲಂಕೆಯಲ್ಲಿದ್ದ "ಸಾವಿರಾರು ಕೋಟಿ ಸಂಖ್ಯೆಯ" ರಾಕ್ಷಸರನ್ನು, ಅವರೆಲ್ಲರ ಒಡೆಯ ರಾವಣನನ್ನು ಕೊಂದು ರಾಮದೇವರು ದಿಗ್ವಿಜಯಿಯಾಗಿ ಬಂದು ಪಟ್ಟಾಭಿಷಿಕ್ತರಾದರು.
  
  ಹೀಗೆ ಶ್ರೀವಸಿಷ್ಠರ ಮುಹೂರ್ತ ಮಹಾಫಲಗಳನ್ನೇ ನೀಡಿತು. ಲೋಕೋತ್ತರ ಫಲಗಳನ್ನೇ ನೀಡಿತು. 
  
  ನಾಲ್ಕನೆಯದು —
  
  ಜ್ಯೋತಿಷ್ಯದಿಂದ ಎರಡು ವಿಷಯಗಳು ತಿಳಿಯುತ್ತವೆ. ಪರಿಹಾರ ಮಾಡಿಕೊಳ್ಳಬಹುದಾದ ಸಮಸ್ಯೆಗಳು, ಪರಿಹಾರವಾಗಲಿಕ್ಕೆ ಸಾಧ್ಯವೇ ಇಲ್ಲದ ಮುಹೂರ್ತಗಳು. ಇದರಲ್ಲಿ ಪರಿಹಾರವಾಗಲಿಕ್ಕೆ ಸಾಧ್ಯವಾಗುವ ಸಮಸ್ಯೆಗಳನ್ನು ಮಾತ್ರ ಜ್ಯೋತಿಷಿಗಳು ತಿಳಿಸುತ್ತಾರೆ. ಪರಿಹಾರವಾಗದೇ ಇರುವದನ್ನು, ಅರ್ಥಾತ್ ನಡೆದೇ ನಡೆಯುವ ವಿಷಯಗಳನ್ನು ತಿಳಿಸಿಯೂ ಉಪಯೋಗವಿಲ್ಲ. ಮೊದಲೇ ತಿಳಿಸಿ ಮನಸ್ಸನ್ನೂ ಕದಡಬಾರದು.
  
  ಮುಹೂರ್ತದ ವಿಷಯದಲ್ಲಿಯೂ ಹೀಗೆಯೇ . 
  
  ಮುಹೂರ್ತವನ್ನು ನಿಗದಿಮಾಡಬೇಕಾದರೇ ಅತ್ಯುತ್ತಮ ಜ್ಯೋತಿಷಿಗಳಿಗೆ ಈ ಕಾರ್ಯ ಹೇಗೆ ನಡೆಯುತ್ತದೆ ಎನ್ನುವದು ತಿಳಿದುಬಿಡುತ್ತದೆ. ಎಷ್ಟೋ ಬಾರಿ ಮುಹೂರ್ತದ ಸಮಯದಲ್ಲಿ ಉಂಟಾಗುವ ಮರಣ-ಜನನಗಳ ಅಶೌಚವೂ ಸಹ ತಿಳಿದುಬಿಡುತ್ತದೆ. ಆದರೂ ಜ್ಯೋತಿಷಿಗಳು ಮುಹೂರ್ತವನ್ನು ಇಟ್ಟೇ ಇಡುತ್ತಾರೆ, ಕಾರಣ ನಡೆಯಲಿರುವ ಘಟನೆಯನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ. 
  
  ದಶರಥಮಹಾರಾಜರು ಪಟ್ಟಾಭಿಷೇಕದ ಸಂಕಲ್ಪ ಮಾಡಬೇಕು, ವಸಿಷ್ಠರು ಮುಹೂರ್ತ ಇಡಬೇಕು, ತಯಾರಿ ನಡೆಸಬೇಕು, ಪಟ್ಟಾಭಿಷೇಕದ ದಿವಸವೇ ಕೈಕಯಿ ಅದನ್ನು ತಪ್ಪಿಸಬೇಕು, ಇವೆಲ್ಲವೂ ನಡೆಯಲೇ ಬೇಕಾದ ಘಟನೆಗಳು. ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಭಗವಂತನೂ ತಪ್ಪಿಸುವದಿಲ್ಲ. 
  
  
 • Dilip acharya belagal,Bellary

  9:35 PM , 13/05/2022

  🙏🙏🙏
 • Mahesh,Bangalore

  8:45 PM , 13/05/2022

  🙏🏾🙏🏾🙏🏾
 • Nalini Premkumar,Mysore

  6:32 AM , 04/05/2022

  🙏🙏🙏