Upanyasa - VNU991

ಗಂಗೆಯನ್ನು ಹೇಗೆ ದಾಟಿದರು

ಶ್ರೀಮದ್ ರಾಮಾಯಣಮ್ — 104

ಶೃಂಗವೇರಪುರಕ್ಕೆ ಸಮಗ್ರ ಸೈನ್ಯದೊಡನೆ ಭರತರು ಆಗಮಿಸಿದಾಗ ಮೊದಲಿಗೆ ಗುಹ ಸಂದೇಹ ಪಡುತ್ತಾನೆ. ರಾಮನನ್ನು ಕೊಲ್ಲ ಹೊರಟಿರಬಹುದು ಎಂದು ಅವರನ್ನು ಎದುರಿಸಲು, ತನ್ನ ಬಳಿ ಅತ್ಯಲ್ಪ ಸೈನ್ಯವಿದ್ದರೂ ಸಿದ್ಧನಾಗುತ್ತಾನೆ. 

ಆದರೆ ಭರತರ ಬಳಿಗೆ ಬಂದು ಭರತರನ್ನು ಪರೀಕ್ಷಿಸಿ ಭರತರ ಅಂತರಾಳವನ್ನು ತಿಳಿದು ಅವರೆಲ್ಲರಿಗೆ ರಾಮ-ಲಕ್ಷ್ಮಣರ ವೃತ್ತಾಂತವನ್ನು ತಿಳಿಸಿ, ಸೈನ್ಯ ದಾಟಲು ಯಾವ ರೀತಿ ಸಹಾಯ ಮಾಡುತ್ತಾನೆ ಎನ್ನುವದರ ವಿವರ ಇಲ್ಲಿದೆ. 


Play Time: 41:36

Size: 3.84 MB


Download Upanyasa Share to facebook View Comments
6180 Views

Comments

(You can only view comments here. If you want to write a comment please download the app.)
 • Kosigi shroff malathi,Hyderabad

  11:10 AM, 24/07/2022

  🙏🙏🙏
 • Sowmya,Bangalore

  10:36 PM, 09/06/2022

  🙏🙏🙏
 • Niranjan Kamath,Koteshwar

  8:12 AM , 01/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಪರಮ ಪಾವನವಾಯಿತು ಗುರುಗಳೇ, ಏನೊಂದು ಕಾರುಣ್ಯ ಭರಿತ ಉಪನ್ಯಾಸ. ನಿಮ್ಮ ಉಪನ್ಯಾಸ ನಮ್ಮನ್ನು ಅದೇ ಸಮಯದಲ್ಲಿ ಅಲ್ಲೇ ಇದ್ದು ಇದನ್ನೆಲ್ಲ ನೋಡಿ ಕೇಳಿದ ಹಾಗೇನೇ ಭಾಸವಾಗುತ್ತದೆ. 
  
  ಭರತ ರಾಜರ ವಿಚಾರ , ಗುಹ ಹೇಳಿದ ಹಾಗೆ ಕಷ್ಟ ದಲ್ಲಿ ಇದ್ದ ಶ್ರೀರಾಮರ ವಿಷಯ ಎಂದಾಗ ಭರತರ ಅವಸ್ಥೆ, ಇಂಗುದಿ ವೃಕ್ಷದ ಕೆಳಗೆ ಮಲಗಿದ್ದು, ಇತರ ವಿಷಯಗಳ ಬಗ್ಗೆ ಭರತರ ಭಾವನೆ, ಎಲ್ಲವೂ ಪರಮ ಪರಮ ಪಾವನ. 
  
  ಧನ್ಯೋಸ್ಮಿ ಧನ್ಯೋಸ್ಮಿ..ಧನ್ಯೋಸ್ಮಿ. ಮುಂದಿನ ಉಪನ್ಯಾಸ ಯಾವಾಗ ಕೇಳುವುದೋ ತವಕದಲ್ಲಿ ಇದ್ದೇವೆ. 🙏
 • Jayashree karunakar,Bangalore

  9:47 PM , 31/05/2022

  ಅನಿವಾರ್ಯತೆಯ ಅವಕಾಶವಿದ್ದಾಗಲೂ, ಅನ್ಯಾಯದಿಂದ ಬಂದಿರುವ ರಾಜ್ಯದ ರಾಜನಾಗುವ ಅವಕಾಶವನ್ನು ತ್ಯಾಗಮಾಡಿದ ಗುಣವನ್ನು, ಆಗಿನ ಕಾಲದ ಒಬ್ಬ ಬೆಸ್ತನಾದರೂ ಗುರುತಿಸುವ ಅವನ ಗುಣ ಅಬ್ಬಾ... ರಾಮಾಯಣವೇ ಅದ್ಭುತ... 
  
  ಭರತರ ವಿನಯ ತುಂಬಿದ ಧ್ವನಿಯನ್ನು ವಾಲ್ಮೀಕಿ ಋಷಿಗಳು ತಮ್ಮ ವಾಕ್ಯಗಳಲ್ಲಿಯೇ ಸೆರೆಹಿಡಿದಿಟ್ಟಿರುವದನ್ನು, ತಾವು ನಮಗೆ ತಿಳಿಸುವ ರೀತಿ... ಹೀಗೆ... ಎಲ್ಲವನ್ನೂ ಎಷ್ಟೊಂದು ಸೂಕ್ಷ್ಮವಾದ ವಿಷಯವನ್ನೂ ರಸವತ್ತಾಗಿ ಶ್ರವಣ ಮಾಡುತ್ತಿದ್ದೇವೆ... 
  
  ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನ್ನುವಷ್ಟು ಮನಸ್ಸು ತಲ್ಲೀನವಾಗುತ್ತದೆ... 
  ಇದಕ್ಕಾಗಿಯೇ ಈ ಕಾರಣಕ್ಕಾಗಿಯೇ ದಿನ ದಿನವೂ ಎಲ್ಲಿಲ್ಲದ ಉತ್ಸಾಹದಿಂದ ರಾಮಾಯಣಕ್ಕಾಗಿ ಕಾಯುವಂತಾಗಿದೆ ಗುರುಗಳೇ... 
  
  ಭಗವಂತನು ನಾವು ಮಾಡುವ ಕಥಾಶ್ರವಣದ ಮೂಲಕ ನಮ್ಮ ಶ್ರವಣೇಂದ್ರಿಯದ ಮೂಲಕ ನಮ್ಮೊಳಗೆ ಪ್ರವೇಶ ಮಾಡುತ್ತಾನೆ ಅಂತ... ಭಾಗವತದ ಉಪನ್ಯಾಸದಲ್ಲಿ ಹೇಳಿದ್ದೀರಿ... 
  ಅಬ್ಬಾ !!ಅದೆಂತಹ ಮಾತು... ಮೈ ಮನಸ್ಸುಗಳಿಗೆ ಭಗವದಾನಂದ ನೀಡುವ ಇಂತಹ ವಿಷಯಗಳನ್ನು ಕೇಳುತಿದ್ದೇವೆ... ನಮ್ಮೊಳಗೆ ಭಗವಂತನ ಪ್ರವೇಶ ಆಹಾ.. ಆಹಾ... ಅದೆಂತಹ ಪುಣ್ಯ ಮಾಡಿ ವಿಶ್ವನಂದಿನಿಯ ಸಂಪರ್ಕ ಪಡೆದಿದ್ದೇವೆಯೋ ತಿಳಿಯದು.... ನಿಮಗೆ ಮನಪೂರ್ವಕವಾದ ಭಕ್ತಿಯ ನಮಸ್ಕಾರಗಳು ಗುರುಗಳೇ.
 • Suraj Sudheendra,Bengaluru

  4:23 PM , 31/05/2022

  Ee upanyaasa kelida mele heegu tiliyabohudeno. Aakramigala virudda horata yuddagalalli yestella aayamagalinda namma hindina kaalada rajarugalu yochane maadutiddarendu halavede kelibaruvadu. Example Shivaji Maharaj, Krishnadevaraya etc. Idakke kaarana aagina kaaladalli Ramayana-Mahabhaarataadi shastra jnaana da shiksheye aa kshatriyarige spoorthi yagiruttittu annuvudannu swalpa vaadaru tiliyabohudu. Aadare Britishara, Mughalara aakramanakke ee jnaana balakeyaagillde hoyiteno yemba dukha. Intaha adbhuta Upanyaasakkagi gurugalige anatha Namaskaragalu.
 • Nalini Premkumar,Mysore

  1:29 PM , 31/05/2022

  ಹರೆ ಶ್ರೀನಿವಾಸ ಗುರುಗಳೇ ರಾಮಾಯಣವೆ ಪರಮ ಅಧ್ಬುತ ನಿಮ್ಮಿಂದ ಕೇಳುವುದು ಅಧ್ಭುತ ಗುರುಗಳೇ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ ವಿಶ್ವ ನಂದಿನಿ ಯಲ್ಲಿ ನಿರಂತರ ವಾಗಿ ಯಾವುದೆ ತೊಂದರೆ ಇಲ್ಲದೆ ರಾಮಾಯಣ ಬರಲಿ ಎಂದು ಶ್ರೀ ರಾಮ ನಲ್ಲಿ ಪ್ರಾರ್ಥಿಸುತ್ತೇನೆ🙏🙏🙏
 • Srinivasa Deshpande,Chennai

  1:15 PM , 31/05/2022

  What a presentation!
  
  Your Upanyasas make us feel like we ourselves witnessing the incidents.
  
  Saraswati devi tamma naligeyalli nelesibittiddare. 
  
  Bhakti namaskaragalu.
 • Anu,Bangalore

  1:05 PM , 31/05/2022

  ಅತ್ಯಂತ ಮನ ಮುಟ್ಟುವ ರೀತಿಯ ಓಘ.. ಅನಂತ ನಮನಗಳು
 • Badari Narasimha M P,Bengaluru

  9:24 AM , 31/05/2022

  ಶ್ರೀ ಗುರುಭ್ಯೋ ನಮಃ
  ಶ್ರೀ ರಾಮಾಯ ನಮಃ