Upanyasa - VNU992

ಭರದ್ವಾಜರ ವೈಭವದ ಆತಿಥ್ಯ

ಶ್ರೀಮದ್ ರಾಮಾಯಣಮ್ — 105

ಆಶ್ರಮಕ್ಕೆ ತೊಂದರೆಯಾಗಬಾರದು ಎಂದು ಭರತರು ಜನತೆಯನ್ನು ಆಶ್ರಮದ ಬಳಿಗೆ ಕರೆತರುವದಿಲ್ಲ. ಆದರೆ ಭರದ್ವಾಜರೇ ಎಲ್ಲರನ್ನೂ ಕರೆಸು ಆದೇಶಿಸಿ ಅಗ್ನಿಯ ಮುಖಾಂತರ ಜಗದೊಡೆಯನಾದ ಶ್ರೀಮನ್ನಾರಾಯಣ ಹಾಗೂ ವಿಶ್ವಕರ್ಮ, ತ್ವಷ್ಟೃ ಮುಂತಾದ ದೇವತೆಗಳನ್ನು ಪ್ರಾರ್ಥಿಸಿ ಆ ಲಕ್ಷಾವಧಿ ಜನರಿಗೆ ಅವರವರಿಗೆ ಬೇಕಾದ ವಸತಿ ಮತ್ತು ಪ್ರತಿಯೊಬ್ಬರಿಗೂ ಯಾವ ರುಚಿಯ ಅಡಿಗೆ ಬೇಕೋ ಆ ರುಚಿಯ ಅಡಿಗೆಯ ನಿರ್ಮಾಣ ಮಾಡಿಸುತ್ತಾರೆ. 

ಬ್ರಾಹ್ಮಣರು ಯಾವಯಾವ ತರಕಾರಿ ಧಾನ್ಯವನ್ನು ತಿನ್ನಬೇಕು ಎಂದು ಅಪೇಕ್ಷೆ ಪಟ್ಟರೋ ಅವರಿಗೆ ಆ ಅಡಿಗೆ ಸಿದ್ಧವಾಗುತ್ತದೆ. 

ಸೈನಿಕರು ಪ್ರತಿನಿತ್ಯ ಮಾಂಸಾಹಾರವನ್ನು ಸ್ವೀಕರಿಸಬೇಕು. ಅವರಿಗೆ ಅಪೇಕ್ಷಿತವಾದ ಮಾಂಸಾದಿಗಳನ್ನು ನಿರ್ಮಾಣ ಮಾಡಿಸುತ್ತಾರೆ. 

ಯಾವ ಯಾವ ವ್ಯಕ್ತಿಗೆ ಯಾವಯಾವ ಬಟ್ಟೆಯನ್ನು ತೊಡಬೇಕು ಎಂದು ಅಪೇಕ್ಷೆ ಇತ್ತೋ ಆ ಸಕಲ ವಸ್ತ್ರಗಳನ್ನೂ ಲೋಕಪಾಲಕರಿಂದ ನೀಡಿಸುತ್ತಾರೆ. 

ಸಕಲ ಅಪ್ಸರೆ ಗಂಧರ್ವರನ್ನು ಕರೆಯಿಸಿ ರಾಮಕಥೆಯ ನಟನ ನಾಟ್ಯಗಳನ್ನು ಏರ್ಪಡಿಸುತ್ತಾರೆ, 

ಯಾವ ಯಾವ ವ್ಯಕ್ತಿಗೆ ಭರತಭೂಮಿಯ ಯಾವ ತೀರ್ಥದಲ್ಲಿ ಸ್ನಾನ ಮಾಡಬೇಕು ಎಂದು ಅಪೇಕ್ಷೆ ಇತ್ತೋ , ಆಯಾಯ ತೀರ್ಥಗಳನ್ನು ತಮ್ಮ ಆಶ್ರಮದಲ್ಲಿಯೇ ನಿರ್ಮಾಣ ಮಾಡಿಸುತ್ತಾರೆ. 

ಆನೆ, ಕುದುರೆ, ಗೋವು, ಕ್ಷತ್ರಿಯರ ನಾಯಿಗಳು ಮುಂತಾದ ಸಮಸ್ತ ಪ್ರಾಣಿಸಮೂಹಕ್ಕೆ ಯಾವಯಾವ ಆಹಾರಬೇಕೋ ಯಾವಯಾವ ವಸತಿ ಬೇಕೋ ಅದನ್ನು ನಿರ್ಮಾಣ ಮಾಡುತ್ತಾರೆ. 

ಭರತರಿಗಾಗಿ ಮಂತ್ರಿಗಳಿಗಾಗಿ ಅರಮನೆಯ ನಿರ್ಮಾಣವಾಗುತ್ತದೆ. 

ಗಂಧರ್ವ ಅಪ್ಸರೆಯರು ಸಮಗ್ರ ಸೈನ್ಯಸಾಗರದ ಮೇಲೆ ಪುಷ್ಪವರ್ಷಣವನ್ನು ಮಾಡಿ ಸ್ವಾಗತಿಸಿ, ನರ್ತನ, ಗಾಯನಗಳಿಂದ ಆನಂದವನ್ನು ನೀಡಿ, ಸ್ನರ್ಗಲೋಕದ ವೈಭವದ ಆತಿಥ್ಯವನ್ನು ಅವರೆಲ್ಲರಿಗೂ ಅನುಗ್ರಹಿಸುತ್ತಾರೆ. 

ಭರದ್ವಾಜರು ವಸಿಷ್ಠರಿಗೆ ನೀಡುವ ಭಕ್ತಿಯುಕ್ತ ಗೌರವದ ಚಿತ್ರಣ ಇಲ್ಲಿದೆ.

ಈ ಆತಿಥ್ಯದ ಹಿಂದಿನ ಆಧ್ಯಾತ್ಮಿಕ ಕಾರಣ ಮತ್ತು ಆತಿಥ್ಯವನ್ನು ಅನುಭವಿಸಿದ ಜನತೆಯ ಮನಃಸ್ಥಿತಿಯ ಅನಾವರಣ ಇಲ್ಲಿದೆ. 

Play Time: 55:31

Size: 3.84 MB


Download Upanyasa Share to facebook View Comments
6766 Views

Comments

(You can only view comments here. If you want to write a comment please download the app.)
 • Kosigi shroff malathi,Hyderabad

  11:07 AM, 31/07/2022

  🙏🙏
 • P NAGARAJA RAO,Bangalore

  10:03 PM, 14/06/2022

  TV
 • Srikar K,Bengaluru

  7:52 PM , 10/06/2022

  Gurugale, namaskaragalu. Bharadwaja ru madida aatithya atyadbhuta. Ide reeti ya atithi satkaravannu Jamadagni galu Karthaviryarjuna rige, Vasista ru, Vishwamitra rige madiddare. Adare illi athithi satkara vadaddu Kamadhenuvina moolka. Jamadagni & Vasista ru Saha bharadwaja rante devategala nnu prarthisi atithi satkaravannu madalu samartha ru. Adaru, Jamadagni & Vasista ru Kamadhenuvannu ittukolluva agatya itte ?
 • Venkatesh. Rajendra . Chikkodikar.,Mudhol

  4:32 PM , 05/06/2022

  Jai Shrirama 🙏🙏🙏
 • Prashanth,Bangalore

  7:47 PM , 03/06/2022

  ಜನರಿಗೆ ಹೇಗೆ ಅವರು ಬಯಸಿದ ಸರೋವರ ಅಂತ ತಿಳಿಯುತ್ತದೆ ಗುರುಗಳೇ. ಹಲವಾರು ಸರೋವರ ತಯಾರಾದಗ ಇದು ಮಾನಸ ಸರೋವರ, ಕಾವೇರಿ ಅಲಕನಂದಾ ಭಾಗೀರಥಿ ಎಂದು ಹೇಗೆ ತಿಳಿಯಿತು ಅವರಿಗೆ. ದಯಮಾಡಿ ತಿಳಿಸಿ, ನಮಸ್ಕಾರ
 • Prashanth,Bangalore

  7:46 PM , 03/06/2022

  ಜನರಿಗೆ ಹೇಗೆ ಅವರು ಬಯಸಿದ ಸರೋವರ ಅಂತ ತಿಳಿಯುತ್ತದೆ ಗುರುಗಳೇ. ಹಲವಾರು ಸರೋವರ ತಯಾರಾದಗ ಇದು ಮಾನಸ ಸರೋವರ, ಕಾವೇರಿ ಅಲಕನಂದಾ ಭಾಗೀರಥಿ ಎಂದು ಹೇಗೆ ತಿಳಿಯಿತು ಅವರಿಗೆ. ದಯಮಾಡಿ ತಿಳಿಸಿ, ನಮಸ್ಕಾರ
 • Jayashree karunakar,Bangalore

  9:08 PM , 02/06/2022

  ಗುರುಗಳೇ 
  
  ಮಧ್ವವಿಜಯದಲ್ಲಿ ವಿವರಣೆಗೊಂಡ ವೈಕುಂಠದ ವರ್ಣನೆ ಕೇಳಿದಂತಿತ್ತು.... 
  
  ಭರತರು ಮತ್ತು ಅಯೋಧ್ಯೆಯ ಜನರು ಬಂದ ಭಾರದ್ವಾಜ ಋಷಿಗಳು ಮಾಡಿಸಿದ ಪರಿಕರ... ಅದೆಂತಹ ತಪಸ್ಸಿನ ಶಕ್ತಿ!!!
  
  ಕಾಡಿನಲ್ಲಿ ಇಷ್ಟೆಲ್ಲ ಸಾಧ್ಯವೇ ಅನಿಸಿತ್ತದೆ... ಭಗವಂತನ ಹಿಂದೆ ಹೋದರೆ ಎಲ್ಲವೂ ಲಭ್ಯ... ನಮ್ಮಂತೆ ಲೌಕಿಖ ಸುಖದ ಹಿಂದೆ ಅವರು ಹೋಗಿಲ್ಲ... ಹಾಗಾಗಿ ಸಾಧ್ಯವೇ..
  
  ಅಬ್ಬಾ !! ಅದೇನು ವೈಭವ.... ನೀವು ಯಾವುದೇ ವಿಷಯವನ್ನು ಹೇಳಿದರೂ ಕಣ್ಣಿಗೆ ಕಟ್ಟುವಂತ ವಿವರಣೆ... 
  
  ಆ ಆತಿಥ್ಯದ ವೈಭವ... ನಮಗೂ ಅಲ್ಲಿರಬೇಕೆಂಬ ಬಯಕೆ ಮೂಡಿಸಿದೆ 
  
  ಮನಸಸರೋವರದಲ್ಲಿನ ಸ್ನಾನ... ಆಹಾ ಅದೆಂತಹ ಕ್ಷಣ... 
  
  ಇನ್ನು ಹೆಜ್ಜೆ ಹೆಜ್ಜೆಗೊ ಭರತರು ಶ್ರೀ ರಾಮನಿಗೆ ಸಲ್ಲಿಸುವ ಗೌರವವಂತೂ ಅವರ್ಣನೀಯ...
  
  ಕಡೇಯಲ್ಲಿ ಹೇಳಿದ ಆಧ್ಯಾತ್ಮಿಕ ಅರ್ಥ ವಂತೂ ತುಂಬಾ ತುಂಬಾ ಚೆನ್ನಾಗಿತ್ತು. ... 
  
  "ಸಾಧನೆಯ ಹಾದಿಯಲ್ಲಿ ಪಡೆದ ಸಂತಾಪವನ್ನು,  ಕಳೆಯಲು ಮಹಾರಾದಿ ಲೋಕಗಳಲ್ಲಿಟ್ಟು ಶ್ರಮ ಕಳೆಯುತ್ತಾನೆ ಸ್ವಾಮಿ " ಅದನ್ನು ಇಲ್ಲಿ ಸಮೀಕರಿಸಿದ ರೀತಿ ತುಂಬಾ ಇಷ್ಟ ವಾಯಿತು... 
  ಭಾಗವತದಲ್ಲಿ ಹೇಳಿದ ಮಾತು... ಅದರ ವಿವರಯನ್ನು ಇಲ್ಲಿ ಉದಾಹರಣೆ ಸಹಿತ ತಿಳಿಸಿದಿರಿ. ತುಂಬಾ ಚೆನ್ನಾಗಿತ್ತು ಉಪನ್ಯಾಸದ ವಿವರಣೆ...
  
  ಗುರುಗಳೇ ನನಗೂ ಅನಿಸಿತ್ತು... 
  ಭರತರ ಈಗಿನ ಪರಿಸ್ಥಿತಿಯಲ್ಲಿ ಇಷ್ಟೆಲ್ಲ ಆಥಿತ್ಯದ ಅಗತ್ಯವಿತ್ತೇ ಅಂತ... 
  
  ನಾವು ಕೇಳುವ ಮೊದಲೇ ಉತ್ತರಿಸಿದ್ದೀರಿ... 
  ನಮ್ಮ ದಡ್ಡತನದ ಅರಿವಿದ್ದೇ ಉತ್ತರವನ್ನು ನೀವು ಮೊದಲೇ ನೀಡಿಬಿಟ್ಟಿದ್ದೀರಿ ☺️
  
 • N.H. Kulkarni,Bangalore

  7:18 PM , 02/06/2022

  ದೊಡ್ಡವರು ಅಂದು ಕೊಂಡರೆ ಏನನ್ನಾದರೂ ಮಾಡಬಲ್ಲರು ಅನ್ನುವುದನ್ನು ಸ್ಪಷ್ಟ ವಾಗಿ ತಿಳಿಸುವ ಭಾಗ. 
  
  ಅತಿಥಿಗಳ ಸೇವೆ, ಅದೊಂದು ಪರಮ ಸಂಭ್ರಮದಿಂದ ಮಾಡಬೇಕಾದ ಕಾರ್ಯ, ಅಂತ ತಿಳಿಸುವ ಭಾಗ. 
  
  ದೊಡ್ಡವರ ವೈರಾಗ್ಯ, ಅದು ಏನೂ ಇಲ್ಲದವರ ಅಭಾವ ವೈರಾಗ್ಯವಲ್ಲ, ಕಿಂತು ಯಲ್ಲ ಸುಖಗಳನ್ನು ಅನುಭವಿಸುವ ಯೋಗ ಹಾಗೂ ಯೋಗ್ಯತೆ ಇದ್ದರೂ ದೇವರಿಗಾಗಿ ಅದನ್ನೆಲ್ಲ ಬಿಡುವ ದೊಡ್ಡ ತಪಸ್ಸು ಅನ್ನುವುದನ್ನು ತಿಳಿಸುವ ಭಾಗ.
 • JOTHIPRAKASH L,DHARMAPURI

  5:47 PM , 02/06/2022

  ಆಚಾರ್ಯರಿಗೆ ಅನಂತ ನಮಸ್ಕಾರಗಳು.
 • Nalini Premkumar,Mysore

  1:58 PM , 02/06/2022

  ಹರೆ ಶ್ರೀನಿವಾಸ ಗುರುಗಳೇ ವೈಭವ ದ ಆತಿಥ್ಯ ಕಲ್ಪನಾತೀತ ಯಾಕೆ ಇಂತಹ ವೈಭವದ ಆತಿಥ್ಯ ಎಲ್ಲ ವು ತಿಳಿದು ಕೊಂಡೆವು ಪರಮ ಅಧ್ಬುತ ಅನಂತ ಧನ್ಯವಾದಗಳು ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ 🙏🙏🙏
 • Niranjan Kamath,Koteshwar

  9:27 AM , 02/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. 
  
  ಪರಮ ಪಾವನ ಭರತರಿಗೆ ಎಷ್ಟೊಂದು ಪರೀಕ್ಷೆಗಳು !! ಭಾರಧ್ವಾಜರ ಪ್ರಶ್ನೆ ಎಷ್ಟೊಂದು ಆಘಾತ ತಂದಿರಬಹುದು.!! ಆದರೆ ಭರತರ ಘನತೆ ಹಾಗೂ ಶ್ರೀ ರಾಮ ಭಕ್ತಿ ತೋರಿಸಿ ಕೊಡುವ ಈ ಪ್ರಸಂಗ ಪರಮ ಪಾವನ. 
  
  ಶ್ರೀ ಭಾರಧ್ವಾಜರ ವ್ಯವಸ್ಥೆಯ ವಿಷಯಗಳು ಪರಮಾಶ್ಚರ್ಯ, ವೈಭವಯುಕ್ತ. ಗುರುಗಳೇ, ನಿಮ್ಮ ಉಪನ್ಯಾಸ ಕೇಳುವಾಗ, ನಾವು ಯಾರು ?, ನಾವೆಲ್ಲಿದ್ದೇವೆ ? ಭೂಮಿಯಲ್ಲೋ, ? ಮನೆಯಲ್ಲೋ ? ಎಲ್ಲವೂ ಮರೆತು ಪ್ರಸಂಗದ ಸ್ಥಳದಲ್ಲೇ ಇದ್ದ ಹಾಗೆ ಆ ಪ್ರಸಂಗದ ವಿಷಯದ ಪಾತ್ರಧಾರಿಗಳ ಹಾಗೇ ಅನುಭವಿಸುತ್ತೇವೆ. ಭರತರ ವಿಷಯ ಬಂದಾಗ ಭರತರ ಹಾಗೆಯೇ, ಸೇನೆಯ ಜೊತೆ ಒಬ್ಬ ಸೈನಿಕರೊ !, ಆನೆಯೊ ? ಕುದುರೆಯೋ ? ಒಂದೊಂದು ಪಾತ್ರದ ವಿಶ್ಲೇಷಣೆ ನೀಡುವ ಪಾತ್ರಧಾರಿಯಂತೆಯೇ ಅನುಭವ ಸಿಗುತ್ತದೆ. ಕೊನೆಯಲ್ಲಿ ಮುಂದಿನ ಭಾಗದಲ್ಲಿ ಕೇಳುವ ಎನ್ನುವಾಗಲೇ , ಪುನಃ ವಿಮಾನದಿಂದ ಕೆಳಗೆ ಇಳಿದ ಹಾಗೆ ನಾವ್ಯಾರು ಎಂದು ಭಾಸವಾಗುವಂತಿದೆ. 
  
  ಪರಮಾದ್ಭುತ ಪರಮಾದ್ಭುತ, ಧನ್ಯೋಸ್ಮಿ. ಆ ಪರಮ ಅಖಿಲ ಗುರು ಭಗವಂತ , ಶ್ರೀ ನಾರಾಯಣ ಪಾದಕಮಲಕ್ಕೆ , ನಿಮ್ಮ ಈ ವಿಶ್ವನಂದಿನಿಯ ಮೂಲಕ ಉಪನ್ಯಾಸ ಕೇಳುವ ಭಾಗ್ಯ ನೀಡಿದ್ದಕ್ಕೆ ಅನಂತಾನಂತ ವಂದನೆಗಳು.
 • Kiran M,Bengaluru

  8:45 AM , 02/06/2022

  Gurugale nimma upanyasa kelutta iddare naavu tretatayuga dalliye , Shri Ramachandra na kaala dalliye iddeve annisutte...
  
  Ee reethi adhbutha vaagi namage ramayana vannu helutta iruvudakke nimage ಅನಂತಾನಂತ vandanegalu....🙏🙏🙏
  
  🙏ಜೈ ಶ್ರೀರಾಮ🙏
 • Anu,Bangalore

  8:41 AM , 02/06/2022

  ಆಚಾರ್ಯರೇ....ಇನ್ನು ಮುಂದೆ ನಾವೂ ನಮ್ಮ ಮನೆಗೆ ಬಂದ ಅತಿಥಿ, ಅಭ್ಯಾಗತರ, ಸ್ವೋತ್ತಮರ ..... ಆತಿಥ್ಯ ಮಾಡುವ ಮುನ್ನ ಈ ಉಪನ್ಯಾಸ ಕೇಳುತ್ತೇವೆ...ಅನಂತ ಅನಂತ ಧನ್ಯವಾದಗಳು.. ಪ್ರತಿದಿನ ಕೇಳುತ್ತೇವೆ..ಆನಂದವಾಯಿತು... ಹೆಣ್ಣು ಮಕ್ಕಳು ಇಂದಿನ ಕಾಲದಲ್ಲಿ ಗಂಡ , ಮಕ್ಕಳನ್ನೇ ತಾವು ಮಾಡಿದ ಅಡಿಗೆ, ಉಪಹಾರಗಳಿಂದ ತೃಪ್ತಿ ಪಡಿಸಲಾಗುತ್ತಿಲ್ಲ...ಹೀಗಿರುವಾಗ ಅತಿಥಿಗಳ ಮನಃ ಸಂತೋಷ ಹೇಗೆ ಮಾಡಲಾದೀತು!!!! ನಮಗೆ ವರ ನೀಡಿದಂತೆ ಇದೆ ... ನಿಮ್ಮ ಈ ಉಪನ್ಯಾಸ...ಅನಂತ ವಂದನೆಗಳು....