02/04/2022
ಶ್ರೀಮದ್ ರಾಮಾಯಣಮ್ — 106 ಕೈಕಯಿಯಿಂದ ತಪ್ಪು ನಡೆದಿರುವದು ನಿಶ್ಚಿತ. ಆದರೆ ಆ ತಪ್ಪನ್ನು ಅವಳು ಸ್ವಭಾವದ ಬುದ್ಧಿಯಿಂದ ಮಾಡಿದ್ದಲ್ಲ. ನಿಕೃತಿ-ಮಂಥರೆಯರ ವಶಕ್ಕೊಳಗಾಗಿ ಮಾಡಿದ್ದು. ಹೀಗಾಗಿ ಈ ಪಾಪಕಾರ್ಯದಿಂದ ಆ ಮೂವರಿಗೆ ಯಾವಯಾವ ರೀತಿಯ ಶಿಕ್ಷೆಗಳುಂಟಾದವು ಎಂಬ ವಿವರಣೆ ಇಲ್ಲಿದೆ. ದೇವರ ಇಚ್ಛೆಯಿದ್ದ ಮಾತ್ರಕ್ಕೆ ಒಂದು ಕಾರ್ಯ ಒಳ್ಳೆಯ ಕಾರ್ಯವಾಗಿಬಿಡುವದಿಲ್ಲ. ಸಕಲ ಕಾರ್ಯಗಳೂ ದೇವರ ಇಚ್ಛೆಯಿಂದಲೇ ನಡೆಯುವದು. ದೇವರಿಗೆ ಪ್ರಿಯವಾದ ಕಾರ್ಯ ಮಾತ್ರ ಒಳ್ಳೆಯ ಕಾರ್ಯ, ದೇವರಿಗೆ ಅಪ್ರಿಯವಾದ ಕಾರ್ಯ ಕೆಟ್ಟ ಕಾರ್ಯ ಎನ್ನುವ ತತ್ವದ ವಿವರಣೆ ಇಲ್ಲಿದೆ. ದೊಡ್ಡವರನ್ನು, ದೇವರ ಸನ್ನಿಧಾನಯುಕ್ತ ಪದಾರ್ಥಗಳನ್ನು ಬೆರಳು ತೋರಿಸಿ ಪರಿಚಯಿಸಬಾರದು, ಪೂರ್ಣ ಅಂಗೈಯನ್ನು ಚಾಚಿ ಪರಿಚಯಿಸಬೇಕು ಎಂಬ ಧರ್ಮದ ನಿರೂಪಣೆ ಇಲ್ಲಿದೆ. ಶ್ರೀಮದುಡುಪಿ ಮಠಗಳಲ್ಲಿರುವ ಪರಿ ಶುದ್ಧ ಸಂಪ್ರದಾಯದ ದೃಷ್ಟಾಂತದೊಂದಿಗೆ. ತೀರ್ಥಯಾತ್ರೆ ಮಾಡುವದರಿಂದ ಉಂಟಾಗುವ ಮಹತ್ತರ ಪರಿಣಾಮವೇನು ಎಂಬ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡುವ ಉತ್ತರದ ವಿವರಣೆ ಇಲ್ಲಿದೆ. ಕೈಕಯಿಯ ಉದ್ಧಾರದ ಮೂಲದ ಚಿಂತನೆಯೊಂದಿಗೆ.
Play Time: 55:55
Size: 3.84 MB