Upanyasa - VNU995

ಲಕ್ಷ್ಮಣನನ್ನು ತಿದ್ದಿದ ಶ್ರೀರಾಮ

ಶ್ರೀಮದ್ ರಾಮಾಯಣಮ್ — 108

ಸಮಗ್ರ ಸೈನ್ಯಸಮೇತರಾಗಿ ಭರತರು ಬರುತ್ತಿರುವದನ್ನು ಕಂಡು ಸಿಟ್ಟಿಗೆ ಬರುವ ಲಕ್ಷ್ಮಣರು ಇಂದು ಭರತನನ್ನು ಕೊಂದೇ ಕೊಲ್ಲುತ್ತೇನೆ ಎಂದಾಗ, ಭರತರ ಸ್ವಭಾವವನ್ನು ತಿಳಿಸಿ ಇದು ಯುದ್ಧದ ಸಮಯವಲ್ಲ ಎಂದು ರಾಮದೇವರು ಲಕ್ಷ್ಮಣರನ್ನು ತಿದ್ದುವ ಘಟನೆಯ ಚಿತ್ರಣ ಇಲ್ಲಿದೆ. 

ಇಡಿಯ ಜಗತ್ತು ನಮ್ಮನ್ನು ಸಂಶಯಿಸಿದರೂ ದೇವರು ನಮ್ಮನ್ನು ಸಂಶಯಿಸುವದಿಲ್ಲ ಎಂಬ ಸ್ವಾಮಿಯ ಕಾರುಣ್ಯವನ್ನು ಪರಿಚಯಿಸುವ ಅದ್ಭುತ ಭಾಗವಿದು. 

Play Time: 33:27

Size: 3.84 MB


Download Upanyasa Share to facebook View Comments
5563 Views

Comments

(You can only view comments here. If you want to write a comment please download the app.)
 • Kosigi shroff malathi,Hyderabad

  11:04 AM, 14/08/2022

  🙏🙏
 • Sowmya,Bangalore

  3:01 PM , 29/06/2022

  🙏🙏🙏
 • Sanjeeva Kumar,Bangalore

  1:51 PM , 24/06/2022

  ಅನಂತ ಪ್ರಣಾಮಗಳು ಗುರುಗಳೆ 🙏
 • Vikram Shenoy,Doha

  10:14 PM, 10/06/2022

  ಬಹು ಚೆನ್ನಾಗಿ ಬಂದಿದೆ ಆಚಾರ್ಯರೇ. ಕೋಟಿ ವಂದನೆಗಳು ನಿಮ್ಮ ಪಾದಾರವಿಂದಗಳಿಗೆ. ಹೃದಯದಲ್ಲಿ ಶ್ರೀ ರಾಮ ದೇವರ ದರ್ಶನ ಆದಂತಾಯಿತು..
 • Vikram Shenoy,Doha

  10:14 PM, 10/06/2022

  ಬಹು ಚೆನ್ನಾಗಿ ಬಂದಿದೆ ಆಚಾರ್ಯರೇ. ಕೋಟಿ ವಂದನೆಗಳು ನಿಮ್ಮ ಪಾದಾರವಿಂದಗಳಿಗೆ. ಹೃದಯದಲ್ಲಿ ಶ್ರೀ ರಾಮ ದೇವರ ದರ್ಶನ ಆದಂತಾಯಿತು..
 • Srikar K,Bengaluru

  7:38 PM , 10/06/2022

  Gurugale, namaskaragalu. Adbhuta vivarane tamminda. Request further clarification on one of the statement by Srirama. Rajya bandhavari gagi, nima gagi aluve. Mahabharata dalli Arjuna na prashne Srikrishna nige , bandhavarannu kondu padeyuva rajya nanage beda endu. Ofcourse, Mahabharata dalli bandhavaru adharma, anyaya madidavaru. Valmiki galu rushi aguvadikke munche Naradarige heliddu idanne, hendati mattu makkalannu sakuvudakke nanu a anyaya da margadalli iddene. Vivarisuttira gurugale ?

  Vishnudasa Nagendracharya

  ಸಜ್ಜನರಾದ ಬಾಂಧವರನ್ನು ಸನ್ಮಾರ್ಗದಲ್ಲಿ ಪಾಲಿಸುವದು ಪರಮಧರ್ಮ. 
  
  ಅರ್ಜುನರ ವಿಷಯದಲ್ಲಿ ದುರ್ಯೋಧನಾದಿ ಬಾಂಧವರು ಅಧಾರ್ಮಿಕರು, ಅವರನ್ನು ಕೊಂದು ರಾಜ್ಯದಲ್ಲಿನ ಪ್ರಜೆಗಳಿಂದ ಧರ್ಮಾಚರಣೆಯನ್ನು ಮಾಡಿಸಬೇಕು. 
  
  ವಾಲ್ಮೀಕಿಗಳ ವಿಷಯದಲ್ಲಿ ಅವರು, ಮೊದಲು ಬ್ರಾಹ್ಮಣರಾಗಿದ್ದು, ಬೇಡ ಹೆಣ್ಣಿನಲ್ಲಿ ಆಸಕ್ತಿ ಹೊಂದಿ ದರೋಡಕೋರರಾದರು. ಧರ್ಮದಿಂದ ಮದುವೆಯಾದ ಪತ್ನಿಯಲ್ಲ ಮತ್ತು ಆ ಹೆಣ್ಣಿಗೂ ವಾಲ್ಮೀಕಿಗಳಿಂದ ಅಪೇಕ್ಷೆ ಇದ್ದದ್ದು ಹಣ ಮಾತ್ರ. ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಸಂದರ್ಭದಿಂದ ಸಂದರ್ಭಕ್ಕೆ ಧರ್ಮವನ್ನು ನಾವು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. 
  
  ಶ್ರೀರಾಮರ ವಿಷಯದಲ್ಲಿ ಅಸಜ್ಜನ ಬಾಂಧವರು, ಅಸಜ್ಜನ ಪ್ರಜೆಗಳು ಯಾರೂ ಇಲ್ಲ. ಇದ್ದ ಕೈಕೇಯಿಯೂ ಬದಲಾಗಿದ್ದಾರೆ. 
 • Nalini Premkumar,Mysore

  1:13 PM , 10/06/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ಗುರುಗಳೇ ಧನ್ಯೋಸ್ಮಿ🙏🙏🙏
 • Nalini Premkumar,Mysore

  1:13 PM , 10/06/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ಗುರುಗಳೇ ಧನ್ಯೋಸ್ಮಿ🙏🙏🙏
 • H.Suvarna kulkarni,Bangalore

  12:23 PM, 10/06/2022

  ಗುರುಗಳಿಗೆ ಅನಂತ ಪ್ರಣಾಮಗಳು
  ರಾಮಾಯಣ ಕೇಳುತ್ತಾ,ಕೇಳುತ್ತಾ ನಮಗರಿವಿಲ್ಲದಂತೆ ಕಣ್ಣೀರು ಬಂದು ಬಿಡುತ್ತದೆ. ಅಣ್ಣ ತಮ್ಮಂದಿರ ಬಾಂಧವ್ಯ,.. ಅವಿಸ್ಮರಣೀಯ.. ಅದಕ್ಕೆ ..ಈ ಕಲಿಯುಗದಲ್ಲೂ..ಯಾವುದಾದರೂ ಕುಟುಂಬದಲ್ಲಿ ಅಣ್ಣತಮ್ಮಂದಿರು ಅನ್ಯೋನ್ಯ ವಾಗಿರುವುದನ್ನು ಕಂಡಾಗ ಅವರನ್ನು ರಾಮ ಲಕ್ಷ್ಮಣ ರಿದ್ದಂತೆ ಎಂದು ಕರೆಯುವ ವಾಡಿಕೆ ಇದೆ.. ಈಗಲೂ ಅಂಥವರನ್ನ ಕಂಡಾಗ ಮನಸ್ಸಿಗೆ ಖುಷಿಯಾಗುತ್ತದೆ..ನಿಮ್ಮಿಂದ ರಾಮಾಯಣ ಕೇಳಿ ಸವಿಯುತ್ತಿರುವ ವಿಶ್ವ ನಂದಿನಿ ಬಾಂಧವರು ಧನ್ಯರು
 • Niranjan Kamath,Koteshwar

  9:07 AM , 10/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. 
  
  ಬರೆಯಲು ಅಕ್ಷರ ಸಿಗುತ್ತಿಲ್ಲ, ಯೋಚಿಸಲು ಮನಸ್ಸೇ ಸ್ಥಬ್ದ ವಾದಂತೆ, ಇಂತಹ ಆಳವಾದ ಪ್ರೇಮಭರಿತ ವಿಚಾರ ಕೇಳುವಾಗ ಎಲ್ಲವೂ ಅಲ್ಲೇ ನಿಂತತೆ ಭಾಸವಾಗುತ್ತಿದೆ. ಉಪನ್ಯಾಸ ಕೇಳುತ್ತಲೇ ಇರುವಾಗ , ಹೀಗೆ ಕೇಳುತ್ತಲೇ ಇರಲಿ ಎನ್ನುವಷ್ಟರಲ್ಲಿ , ಒಮ್ಮೆಲೇ ಮುಂದಿನ ಭಾಗದಲ್ಲಿ ಕೇಳೋಣ ಅನ್ನುವ ಮಾತು, ಎಲ್ಲೋ ಮೇಲಿನಿಂದ ಕೆಳಗೆ ಬಿದ್ದ ಹಾಗೆ ಅಂಜಿಸುತ್ತದೆ. 
  
  ಇನ್ನು ಮುಂದಿನ ಉಪನ್ಯಾಸದ ತನಕ ಶ್ರೀ ಭರತರು ಶ್ರೀರಾಮನ ಭೇಟಿಗೆ ತವಕಿಸಿದಂತೆ , ನಿಮ್ಮ ಉಪನ್ಯಾಸಕ್ಕಾಗಿ ತವಕಿಸುತ್ತಿದ್ದೇವೆ. ಧನ್ಯೋಸ್ಮಿ ಧನ್ಯೋಸ್ಮಿ.

  Vishnudasa Nagendracharya

  ರಾಮಕಥೆಯ ಸೊಬಗೇ ಹಾಗೆ. 
  
  ಅಯಸ್ಕಾಂತದಂತೆ ಸೆಳೆದು ಬಿಡುತ್ತದೆ.