09/06/2022
ಶ್ರೀಮದ್ ರಾಮಾಯಣಮ್ — 110 ತಮ್ಮಂದಿರನ್ನು ಕಂಡು ಸಂತೋಷಿಸುವ ರಾಮದೇವರು, ಅವರನ್ನು ಕೂಡಿಸಿಕೊಂಡು ಸಮಗ್ರ ರಾಜಧರ್ಮವನ್ನು ಉಪದೇಶಿಸುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಮನೆಯಲ್ಲಿ ರಾಜನೇ. ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಲು ಬೇಕಾದ ಎಲ್ಲ ಪಾಠಗಳೂ ಅಡಕವಾಗಿರುವ ರಾಮಗೀತೆಯಿದು. ಅಧ್ಯಾತ್ಮವಿದ್ಯೆಯನ್ನು ಕೃಷ್ಣದೇವರು ಅರ್ಜುನರಿಗೆ ಉಪದೇಶಿಸಿದರೆ ಲೌಕಿಕ ಬದುಕನ್ನು ನಿಭಾಯಿಸುವ ಕ್ರಮವನ್ನು ರಾಮದೇವರು ಭರತರಿಗೆ ಉಪದೇಶಿಸುತ್ತಾರೆ. ತಮ್ಮಂದಿರು ಬಂದ ತಕ್ಷಣ ತಂದೆಯ ಸಾವಿನ ಸುದ್ದಿಯನ್ನು ತಿಳಿಸದೇ ಇಷ್ಟು ವಿಸ್ತಾರವಾದ ಮಾತಿಗೇಕೆ ಅನುವು ಮಾಡಿಕೊಟ್ಟರು? ಸ್ವಯಂ ತಾನೇ ಎಲ್ಲವನ್ನೂ ತಿಳಿದಿರುವ ನಮ್ಮ ಸ್ವಾಮಿ ಈಗ ಈ ಉಪದೇಶ ಮಾಡಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ರಾಮಾಯಣ ಅದ್ಭುತ🙏
Play Time: 61:10
Size: 3.84 MB