Upanyasa - VNU998

ದಶರಥರ ಶ್ರಾದ್ಧ

ಶ್ರೀಮದ್ ರಾಮಾಯಣಮ್ — 111

ತಂದೆ ತಾಯಿಯರ ಮರಣದ ಸುದ್ದಿ ಯಾವಾಗ ತಿಳಿದರೂ ಹತ್ತು ದಿವಸ ಅಶೌಚ ಆಚರಿಸಬೇಕು ಎಂದು ವಿಧಿ. ರಾಮದೇವರೇಕೆ ಇದನ್ನು ಅನುಸರಿಸಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

ದಶರಥರ ಮರಣದ ಸುದ್ದಿಯನ್ನು ಕೇಳಿ ರಾಮದೇವರು ಮೂರ್ಛಿತರಾಗಿಬಿಡುತ್ತಾರೆ. (ಸ್ವಾಮಿಯ ವಿಡಂಬನೆ ಎಂಬ ಎಚ್ಚರವಿರಲಿ) “ತಾನ್ ತಿತಿಕ್ಷಸ್ವ” ಎಂಬ ಗೀತೆಯ ಉಪದೇಶಕ್ಕೆ ಇದು ವಿರುದ್ಧವಲ್ಲವೇ ಎಂಬ ಪ್ರಶ್ನೆಗೆ ಇಲ್ಲಿ ವಿಸ್ತೃತ ಉತ್ತರವಿದೆ. ಗೀತೆಯ ಅಂತರಾರ್ಥದ ಅನಾವರಣದೊಂದಿಗೆ. 

ತಂದೆ, ತಾಯಿ, ಗುರುಗಳು ಮೂರೂ ಜನ ಒಟ್ಟಿಗೇ ಎದುರಿಗೆ ಬಂದಾಗ ತಾಯಿಗೇ ಮೊದಲು ನಮಸ್ಕಾರ ಮಾಡಬೇಕು ಎಂಬ ಧರ್ಮಸೂಕ್ಷ್ಮದ ವಿವರಣೆ ಇಲ್ಲಿದೆ. 

Play Time: 55:17

Size: 3.84 MB


Download Upanyasa Share to facebook View Comments
6119 Views

Comments

(You can only view comments here. If you want to write a comment please download the app.)
 • Sowmya,Bangalore

  1:29 PM , 04/07/2022

  🙏🙏🙏
 • Venkatesh. Rajendra . Chikkodikar.,Mudhol

  12:39 PM, 28/06/2022

  Jai Shrirama 🙏🙏🙏
 • Anu,Bangalore

  10:36 AM, 20/06/2022

  ಆಚಾರ್ಯರೇ..ರಾಮನನ್ನು ನೋಡಲು ಅಯೋಧ್ಯೆಯ ಸಕಲರೂ ಬಂದಿದ್ದಾರೆ.. ಲಕ್ಮಣ,ಭರತ,ಶತೃಘ್ನರ ಪತ್ನಿಯರ ಬಗ್ಗೆ ವಿವರ? ತಿಳಿಸಿ ಕೊಡಿ...

  Vishnudasa Nagendracharya

  ಅವರೂ ಬಂದಿದ್ದರು. ವಿಶೇಷ ವಿವರ ಶ್ರೀ ವಾಲ್ಮೀಕಿ ರಾಮಾಯಣದಲ್ಲಿಲ್ಲ. 
 • Nalini Premkumar,Mysore

  1:53 PM , 17/06/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ವಾದ ಪ್ರವಚನ ಹೇಳಲು ಪದಗಳಿಲ್ಲ ಶ್ರೀ ರಾಮ ದೇವರ ಕಣ್ಣೀರು ಸೀತಾ ದೇವಿಯರ ದುಃಖ..... ಭರತರ ಮಾತುಗಳು.... ದಶರಥರ ಶ್ರಾದ್ಧ .....ಗೀತೆಯ ಮಾತುಗಳು ಭಗವಂತನ ವಿಡಂಬನೆ.... ಸುಖ ದುಃಖ ಬಂದಾಗ ಯಾವ ರೀತಿ ನಡೆದು ಕೊಳ್ಳ ಬೇಕು... ತಾಯಿಗೆ ಮೊದಲು ನಮಸ್ಕಾರ...ಎಷ್ಟು ವಿಷಯಗಳನ್ನು ತಿಳಿದು ಕೊಂಡೆವು ಗುರುಗಳೇ ನೀವು ಭಕ್ತಿಯಿಂದ ಹೇಳುವ ಮಾತು ಗಳು ಮನಸ್ಸಿಗೆ ಮುಟ್ಟುತ್ತದೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ರಾಮಾಯಣ ಕೇಳುತ್ತಿರುವ ನಾವೆ ಪುಣ್ಯವಂತರು ನಿಮಗೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು ಭಕ್ತಿ ಪೂರ್ವಕ ಪ್ರಣಾಮಗಳು ಗುರುಗಳೇ 🙏🙏🙏
 • Niranjan Kamath,Koteshwar

  9:42 PM , 16/06/2022

  ಇನ್ನೊಂದು ವಿಚಾರ ಎಂದರೆ., ಕೈಕೇಯಿ ದೇವಿಯರ ಭಾಗ್ಯದ ವಿಷಯ. ಒಬ್ಬ ಸಿನೆಮಾ ನಿರ್ದೇಶಕ ತನ್ನ ಚಿತ್ರಕ್ಕೆ ಶ್ರೇಷ್ಠ ನಟರನ್ನ ಆರಿಸುವಂತೆ, ಆ ಶ್ರೀಮನ್ ನಾರಯಣ ಕೈಕೇಯಿ ದೇವಿಯರನ್ನು ತನ್ನ ಅವತಾರದ ಮೂಲ ಉದ್ದೇಶಕ್ಕೆ ಬಳಸಿದ್ದಾರೆ ಎಂದಲ್ಲಿ , ಆ ದೇವಿಯ ಭಾಗ್ಯ ಇಂತಹ ಎತ್ತರದ್ದು. ನಾವು ಅವಳ ಬುದ್ಧಿಯನ್ನು , ನಡೆಯುವ ರೀತಿಯನ್ನು ಗಮನಿಸಿದರೆ ಸಿಟ್ಟಾಗಬಹುದು, ಆದರೆ ಮೂಲದಲ್ಲಿ ರಾವಣನ ಹತ್ಯೆಗೆ ಅವಳ ಹಠವೇ ಕಾರಣ. ಅದಕ್ಕೆ ಶ್ರೀ ಭರದ್ವಾಜರು ಭರತನಿಗೆ ತಾಯಿಯರ ಪರಿಚಯ ಕೇಳಿದ್ದು. ಶ್ರೀ ರಾಮಚಂದ್ರ ದೇವರೂ ಕೂಡ ಅವಳಿಗೆ ನಮಸ್ಕರಿಸಿದರು. ಆ ದೇವರ ಕಾರುಣ್ಯವೇ ಕಾರುಣ್ಯ. ಯಾರಿಗೆ ಹೇಗೆ ಒಲಿದು ಮುಕ್ತಿ ನೀಡುತ್ತಾನೆಯೋ ಅವರೇ ಧನ್ಯರು. ಧನ್ಯೋಸ್ಮಿ ಗುರುಗಳೇ. ನಿಮ್ಮಿಂದ ಈ ವಿಶ್ವನಂದಿನಿ ಮೂಲಕ ಎಲ್ಲರ ಉದ್ದಾರ ಆಗುವಂತೆ ಆಗಲಿ..
 • Suraj Sudheendra,Bengaluru

  1:25 PM , 16/06/2022

  Bahala adbhutha vaagi Ramayana Shloka gala anuvaada Gurugale. Raama devaru vyaktha padisida dukha vannu neevu namagr tilisikoduvaaga namagu kanni nallineeru baruvudu . Hageye Ashouchada bagge ondu prashne athawa akshepakke samaadana kodabekagi prarthane. 
  
  Brahmanarige tamma tande taayiyaru teeri hoda vishaya tumba varshagalaada mele tilidare aavatininda 10 dina gala ashoucha yenmbudu shaastra yeke vidaana maaduttade. Janma kottavara smarane yannu maadalikkagiye hechhina avakaashakkagi bere yella sankuchitha yendaadare Vastu galannu muttidaaga mailige ityaadi yaatakkagi. Kela vomme idu yaake Sari annisuvudilla vendare naavu idita jeevana maathanaadisada raktha sambadi galu teeri hoda vishaya vilamba vaagi tilidaagaladaru sari athawa muncheye tilidagaladaru sari shaastra da vaakhya hege logical aaguvudu. Avaru namage tilide iruvudilla satta mele maatra 10 dinada mailige. Inthaha Akshepakke samaadhana kodabekaagi savinaya praarthane. Tappagi kelidalli kshame Koruttene.

  Vishnudasa Nagendracharya

  ನಮ್ಮ ತಪ್ಪನ್ನು ಶಾಸ್ತ್ರದ ಮೇಲೆ ಹಾಕಿದಂತಾಯಿತು ಇದು. 
  
  ಬಾಂಧವರು ಎಂದು ಕರೆಯುವದೇ ಬಂಧನ ಇದೆ, ಬಾಂಧವ್ಯ ಇದೆ ಎನ್ನುವ ಕಾರಣಕ್ಕೆ. ಈ ಕಲಿಯುಗದಲ್ಲಿ ಯಾರ ಮಧ್ಯದಲ್ಲಿಯೂ ಬಾಂಧವ್ಯವಿಲ್ಲದೇ ಹೋದದ್ದು ಶಾಸ್ತ್ರದ ತಪ್ಪೇ. ಯಾವುದೋ ನಟ, ನಟಿ, ರಾಜಕಾರಿಣಿ, ಆಟ ಆಡುವವ ಇವರೆಲ್ಲರ ಹುಟ್ಟಿದ ಹಬ್ಬದಿಂದ ಹಿಡಿದು ಪ್ರತಿಯೊಂದು ವಿಷಯ ತಿಳಿಯುವ ಇವತ್ತಿನ ಜನ, ತಮ್ಮ ಚಿಕ್ಕಪ್ಪ ದೊಡ್ಡಪ್ಪ ಸೋದರಮಾವ ಅವರ ಮಕ್ಕಳು ಇವರ ಬಗ್ಗೆ ತಲೆಯೇ ಕೆಡಿಸಿಕೊಳ್ಳುವದಿಲ್ಲ. 
  
  ನಾವು ಹುಟ್ಟಿದಾಗ ಅವರು ಬರುವದಿಲ್ಲ, ಅವರು ಸತ್ತಾಗ ನಾವು ಹೋಗುವದಿಲ್ಲ, ಇಬ್ಬರೂ ಬದುಕಿದ್ದಾಗ ಒಬ್ಬರೊಬ್ಬರ ಮುಖ ನೋಡುವದಿಲ್ಲ, ಇದು ನಮ್ಮ ತಪ್ಪು ತಾನೇ.
  
  ಶ್ರೀಮದ್ ರಾಮಾಯಣವನ್ನೇ ತೆಗೆದುಕೊಳ್ಳಿ. ಅಣ್ಣಂದಿರು ವನವಾಸಕ್ಕೆ ಹೋದರು ಎಂದು ತಮ್ಮಂದಿರು ನಂದಿಗ್ರಾಮದಲ್ಲಿ ವನವಾಸ ಮಾಡುತ್ತಾರೆ. ಮಹಾರಾಜರಾಗಬೇಕಿದ್ದ ರಾಮದೇವರು ಕಾಡಿಗೆ ಹೋದರು ಎಂದು ಇಡಿಯ ಅಯೋಧ್ಯೆಯ ನಗರವಾಸಿಗಳು ತಪಸ್ವಿಗಳಂತೆ ಬದುಕುತ್ತಾರೆ. ಇವರ್ಯಾರೂ ಕೇವಲ ಮನಸ್ಸಿನಲ್ಲಿ ಮತ್ತೊಬ್ಬರ ಬಗ್ಗೆ ಭಾವನೆ ಹೊಂದಿದ್ದಲ್ಲ, ಕಾರ್ಯರೂಪಕ್ಕೆ ತಂದವರು. 
  
  ನಮ್ಮ ಹಿಂದಿನ ಎರಡು ತಲೆಮಾರುಗಳ ಜನರನ್ನು ನೋಡಿ, ಬಂಧುಗಳಷ್ಟೇ ಅಲ್ಲ, ಇಡಿಯ ಊರಿಗೆ ಊರಿನ ಜನ ಒಬ್ಬರಿಗೊಬ್ಬರು ಹಿತಕರರಾಗಿ ಬಾಳುತ್ತಿದ್ದರು. ಅದು ನಿಜವಾದ ಬಾಳ್ವೆ. 
  
  ಇವತ್ತು ಎಲ್ಲವೂ ಹಣದ ಕುಣಿತ. ಹಣದಿಂದ ಏನನ್ನು ಬೇಕಾದರೂ ಕೊಂಡುಕೊಳ್ಳಬಲ್ಲೆ ಎಂಬ ದುರಹಂಕಾರ. ಮನೆಯಲ್ಲಿ ಮಗು ಹುಟ್ಟಿದರೆ ಅಜ್ಜಂದಿರು, ತಾಯಂದಿರು ನೀರೆರದು ತುತ್ತಿಕ್ಕಿ ಸಾಕಿ ಬೆಳೆಸುತ್ತಿದ್ದರು. ಇವತ್ತು ದುಡ್ಡು ಕೊಟ್ಟು ಕೆಲಸದವರನ್ನಿಟ್ಟು ಆ ಕೆಲಸ ಮಾಡುತ್ತಾರೆ. ಅಜ್ಜಿ, ತಾಯಿ ಪ್ರೀತಿಯಿಂದ ಹಾಕುವ ನೀರು, ನೀಡುವ ತುತ್ತಿನಲ್ಲಿರುವ ಶಕ್ತಿ ಕೆಲಸದವರು ಮಾಡಿದಾಗ ಬಂದೀತೇ?
  
  ಶಾಸ್ತ್ರ ಸಂಬಂಧಗಳಿಗೆ ಬೆಲೆ ನೀಡಿ ಬದುಕಬೇಕು ಎನ್ನುತ್ತದೆ. ಆ ಸಂಬಂಧಗಳಿಗೆ ಬೆಲೆ ಇದ್ದಾಗ ಅಶೌಚದ ಆಚರಣೆ ಎಷ್ಟು ಮಹತ್ತ್ವ ಎಂದು ಮನಗಾಣಲು ಸಾಧ್ಯ. 
  
  ತಂದೆ ದಶರಥ ಮಹಾರಾಜರು ಸತ್ತ ಸುದ್ದಿ ಕೇಳಿ ಅವರ ಮಕ್ಕಳು ಅಕ್ಷರಶಃ ಮೂರ್ಛಿತರಾಗುತ್ತಾರೆ. ಮಗ ವನ ಸೇರಿದ ಎಂಬ ಸುದ್ಧಿ ಕೇಳಿ ದಶರಥರಿಗೆ ಬದುಕಲೇ ಸಾಧ್ಯವಾಗುವದಿಲ್ಲ. ಪ್ರಾಣ ಹೋಗಿಬಿಡುತ್ತದೆ. ಬಾಂಧವ್ಯ ಇಷ್ಟು ಗಟ್ಟಿ ಇದ್ದಾಗ, ನೋವು ಆವರಿಸಿ ನಿಲ್ಲುತ್ತದೆ. ಅಷ್ಟು ನೋವಿದ್ದಾಗ, ಧರ್ಮದ ಆಚರಣೆ ಸಾಧ್ಯವಿಲ್ಲ. ಹೀಗಾಗಿ ಅಶೌಚದ ಮುಖಾಂತರ ಧರ್ಮದ ಆಚರಣೆಯನ್ನು ಕಡಿಮೆ ಮಾಡುತ್ತದೆ ಶಾಸ್ತ್ರ. ಆ ರೀತಿಯ ಬಾಂಧವ್ಯವನ್ನು ಅನುಭವಿಸಿದಾಗ ಮಾತ್ರ ಅಶೌಚದ ಮಹತ್ತ್ವ ಅರಿವಾಗಲು ಸಾಧ್ಯ. 
 • Niranjan Kamath,Koteshwar

  4:43 PM , 16/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಇವತ್ತಿನ ಉಪನ್ಯಾಸದ ಬಗ್ಗೆ ನಿಮ್ಮ ಇಡಿಯ ಉಪನ್ಯಾಸವನ್ನೇ ಬರೆಯಬೇಕಾಗುತ್ತದೆ. ಯಾವ ಶಬ್ದ ಬಿಡಲಿ ಗುರುಗಳೇ ?. ಶ್ರೀ ರಾಮಚಂದ್ರ ಮಾತನಾಡುವಾಗ ಭರತರು ಎಷ್ಟು ನೋಡಿದರೂ ತೃಪ್ತಿ ಇಲ್ಲ , ನೋಡುತ್ತಲೇ ಮತ್ತೆ ಮತ್ತೆ ಯಾರಿಗೆ ತಾನೇ ಸಾಕು ಅನ್ನಿಸುತ್ತದೆ ಅನ್ನುವಾಗ ಆ ಭರತರು ಎಷ್ಟು ಭಾಗ್ಯವಂತರು, ಅಲ್ಲಿ ನೆರೆದಿದ್ದ ಎಲ್ಲರೂ ಎಷ್ಟು ಪುಣ್ಯವಂತರೋ ಅಷ್ಟೇ ಪುಣ್ಯವನ್ನು ಆ ದೇವರು ನಿಮಗೆ ಕೊಟ್ಟು , ಆ ಭರತರು ಶ್ರೀ ರಾಮನ ನೋಡುತ್ತಲೇ ಅವರ ಮಾತು ಕೇಳುವ ಹಾಗೇ , ನಾವೂ ಆ ನಿಮ್ಮ ಮಧುರ ಕಂಠ ದಿಂದ , ಶ್ರೀ ವಾಲ್ಮೀಕಿ ಋಷಿಗಳ ಶಬ್ದ ಶಬ್ದಗಳನ್ನು ಹೇಳಿಸಿಕೊಳ್ಳುವ ಹಾಗೂ ನಿಮ್ಮಿಂದ ನಮಗೆ ಕೇಳಿಸಿಕೊಳ್ಳುವ ಭಾಗ್ಯ ನೀಡಿದ್ದಕ್ಕೆ ಆ ಶ್ರೀಮನ್ನಾರಾಯಣ ಅಖಿಲ ಗುರು ಭಗವಂತನಿಗೆ ಭಕ್ತಿ ಪೂರ್ವಕ ಉದ್ದಂಡ ನಮಸ್ಕಾರಗಳು. 
  
  ಇಷ್ಟು ವರ್ಷದಿಂದ ನಿಮ್ಮ ಎಲ್ಲಾ ಉಪನ್ಯಾಸಗಳನ್ನು ಕೇಳುತ್ತಿದ್ದೇವೆ, ಒಮ್ಮೆಯಾಗಲಿ, ಒಂದೇ ಒಂದು ಅಪಶಬ್ದ, ತಡಬಡಿಸುವಿಕೆ ಇಲ್ಲದ ಸೌಮ್ಯ ಮಾತು, ಪ್ರತೀ ವಿಚಾರದಲ್ಲಿ ಉದಾಹರಣೆ ಸಮೇತ ದೇವರ ವಿಡಂಬನೆ ಎನ್ನುವ ಎಚ್ಚರಿಕೆ, ಲೀಲೆ, ಶ್ರೀಮದ್ ಭಾಗವತದ ಉಲ್ಲೇಖ, ಶ್ರೀಮದಾನಂದ ತೀರ್ಥರಿಂದ ಎಲ್ಲ ಯತಿವರೇಣ್ಯರ ಭಾವ, ಎಲ್ಲವೂ ಅಸಾಮಾನ್ಯ, ವರ್ಣನಾತೀತ, ಹೋಲಿಸಲಾಗದ ನಿಮ್ಮ ಉಪನ್ಯಾಸ ಶೈಲಿ. ಇಡಿಯ ಉಪನ್ಯಾಸವನ್ನು ಕಣ್ಣೀರು ಸುರಿಸುತ್ತಲೇ ಕೇಳಿದೆವು. ಆದ್ದರಿಂದ ಈ ಭಾವವನ್ನು ಬರೆಯಲು ಇಷ್ಟು ಹೊತ್ತಾಯಿತು. ಕುಳಿತಲ್ಲಿಂದ ಏಳಲು ಸಾಧ್ಯವಾಗಲಿಲ್ಲ. 
  
  ದಶರಥರು ಬಿಟ್ಟು ಹೋದರು ಎನ್ನುವಾಗ ಶ್ರೀರಾಮ ದೇವರ ವಿಡಂಬನೆ , ಕುಸಿದು ಬೀಳುವ ಪರಿ, ಎಷ್ಟೊಂದು ಆಘಾತ ವಾಗಿರಬಹುದು. ಕೇಳಿದ ನಮಗೇ ಇಷ್ಟು ಕಷ್ಟ, ಅಲ್ಲಿದ್ದವರಿಗೆ ಹೇಗಾಗಿರಬೇಡ. ಮಾನವ ಜನ್ಮದ ಕಷ್ಟ ಸುಖಗಳನ್ನು ದೇವರೂ ಅಭಿನಯಿಸಿ ತೋರಿಸುವ ರೀತಿ ನೋಡಿ. ಭಗವಂತ ಆದರೂ ಭರತ ಶತ್ರುಘ್ನ ರಿಗೆ ಸಿಕ್ಕ ತಂದೆಯ ಅಂತಿಮ ಕ್ಷಣದ ದರ್ಶನ , ಕ್ರಿಯ ಮಾಡುವ ಕರ್ತವ್ಯವೂ ಇಲ್ಲದಾಯಿತೆ. ಆ ದಶರಥರು ಶ್ರೀ ರಾಮ ಸ್ಮರಣೆ ಮೂಲಕ ದೇಹ ಬಿಡುವ ಭಾಗ್ಯವನ್ನು ಸಿಕ್ಕರೂ ಮಗನಾಗಿ ಪಡೆದೂ, ಅಂತಿಮ ಸಮಯದಲ್ಲಿ ನೋಡದಂತಾಯಿತೆ.! 
  
  ಪಿಂಡ ಪ್ರದಾನ ಮಾಡುವ ವಿಷಯ , ತಾಯಿಯರನ್ನು ನೋಡುವ ಸಮಯ, ಕೌಸಲ್ಯಾ, ಸೀತಾ ಭೇಟಿ,ಒಬ್ಬರೊಬ್ಬರ ದುಃಖದ ಭಾವ, ಅವರವರಿಗೆ ಅನುಭವಿಸುವಾಗಲೇ ಗೊತ್ತಾಗುತ್ತದೆ. ಪಿತೃ ಕಾರ್ಯದಲ್ಲಿ ಬಳಸುವ ಆಹಾರದ ಪರಿ, ಗಣಪತಿ ಪೂಜೆಯ ವಿಷಯ , ಶ್ರೀ ವಶಿಷ್ಠರ ಯೋಗ್ಯತೆ, ಆದರೆ ಮಾತೃ ದೇವೋ ಭವ ವಿಚಾರ, ಎಲ್ಲವೂ ಪರಮ ಪರಮ ಪಾವನ. ಬಣ್ಣಿಸಲು ಶಬ್ದವೇ ಸಿಗುವುದಿಲ್ಲ.
 • Niranjan Kamath,Koteshwar

  4:49 PM , 16/06/2022

  ಧ್ಯನ್ಯೋಸ್ಮಿ. ನಾಳೆಯ ಉಪನ್ಯಾಸಕ್ಕೆ ಅತೀ ಆತುರದಿಂದ ನಿರೀಕ್ಷಿಸುತ್ತಿದ್ದೇವೆ. ಅನಂತಾನಂತ ಧನ್ಯವಾದಗಳು , ವಂದನೆಗಳು, ಪ್ರಣಾಮಗಳು.