27/11/2017
ಮಹಾಭಾರತ ಪುರಾಣಗಳ ವಚನಗಳಿಂದಲೇ ಭೇದವೇ ಅವುಗಳ ಸಿದ್ಧಾಂತ ಎನ್ನುವದನ್ನು ಸಮರ್ಥಿಸಿ ಸಮಸ್ತ ಶಾಸ್ತ್ರಾರ್ಥನಿರ್ಣಾಯಕವಾದ ಬ್ರಹ್ಮಸೂತ್ರಗಳಲ್ಲಿಯೂ ಶ್ರೀ ವೇದವ್ಯಾಸದೇವರು ಜೀವಬ್ರಹ್ಮಭೇದವನ್ನೇ ಸಮರ್ಥಿಸಿದ್ದಾರೆ ಎಂದು ಆಚಾರ್ಯರು ತೋರಿಸಿಕೊಡುತ್ತಾರೆ. ಜೀವಬ್ರಹ್ಮಭೇದವೇ ಶಾಸ್ತ್ರಗಳ ಸಿದ್ಧಾಂತವಾಗಿದ್ದರೆ, ಅಲ್ಲಲ್ಲಿ, ಅಭೇದ ತೋರುವಂತಹ ವಾಕ್ಯಗಳು ಯಾಕಾಗಿ ಇವೆ ಎಂಬ ಪ್ರಶ್ನೆಗೆ ಶಾಸ್ತ್ರವೇ ನೀಡಿರುವ ಉತ್ತರದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ। ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾऽತ್ಮನೀಶ್ವರೇ ।। ಭಾಗವತತಾತ್ಪರ್ಯದ ವಚನಗಳು — “ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು। ನೈತದಿಚ್ಛಂತಿ ಪುರುಷಮೇಕಂ ಕುರುಕುಲೋದ್ವಹ” ಇತ್ಯಾದಿ ಮೋಕ್ಷಧರ್ಮೇ। “ಭೇದದೃಷ್ಟ್ಯಾಽಭಿಮಾನೇನ ಪಶ್ಯಂತೋ ಯಾಂತಿ ತತ್ ಪದಮ್” ಇತಿ ವಾಯುಪ್ರೋಕ್ತೇ। “ಅನುಪಪತ್ತೇಸ್ತು ನ ಶಾರೀರಃ” “ಭೇದವ್ಯಪದೇಶಾಚ್ಚ” “ಶಾರೀರಶ್ಚೋಭಯೇಽಪಿ ಹಿ ಭೇದೇನೈನಮಧೀಯತೇ” “ಪೃಥಗುಪದೇಶಾತ್” ಇತ್ಯಾದಿ ಚ ಸತ್ಯತ್ವಂ ಚ ಭೇದಸ್ಯೋಕ್ತಂ ಭಾಲ್ಲವೇಯಶ್ರುತೌ — “ಸ್ಥಾಣುರ್ಹೋಚ್ಚಕ್ರಾಮ ಸ ಪ್ರಜಾಪತಿಮುವಾಚ ಕೋಽಸಿ ಕೇ ಸ್ಮ ಕಃ ಸ ಇತಿ। ಸ ಹೋವಾಚ। ಯೋಽಸ್ಮಿ ಯೇ ಸ್ಥ ಯಃ ಸ ಇತಿ। ಅಥ ಹೈನಮುಪಾಕ್ರೋಶತ್। ಸತ್ಯಂ ಭಿದಾ ಸತ್ಯಂ ಭಿದಾ ಸತ್ಯಂಭಿದೇತಿ। ಮೈವಾರುವಣ್ಯೋ ಮೈವಾರುವಣ್ಯೋ ಮೈವಾರುವಣ್ಯ ಇತಿ” ಇತಿ। “ಸತ್ಯಮೇನಮ್” “ಸತ್ಯಃ ಸೋ ಅಸ್ಯ” ಇತಿ ಚೋಕ್ತಮ್। ಮಹಾಸಂಹಿತಾಯಾಂ ಚ — “ತ್ರಿವಿಧಂ ಜೀವಸಙ್ಘಂ ಚ ಪರಮಾತ್ಮಾನಮವ್ಯಯಮ್। ತೇಷಾಂ ಭೇದಂ ಚ ಯೇ ಸಾಮ್ಯಂ ವಿದುರ್ಮೋಹವಿವರ್ಜಿತಾಃ। ತೇ ಯಾಂತಿ ಪರಮಂ ಸ್ಥಾನಂ ವಿಷ್ಣೋರೇವಾಚಲಂ ಧ್ರುವಮ್। ಜೀವೇಶ್ವರಭಿದಾಂ ಭ್ರಾನ್ತಿಂ ಕೇಚಿದಾಹುರಪಂಡಿತಾಃ। ಅನಾರತಂ ತಮೋ ಯಾಂತಿ ಪರಮಾತ್ಮವಿನಿಂದನಾತ್। ಪರಾಧೀನಶ್ಚ ಬದ್ಧಶ್ಚ ಸ್ವಲ್ಪಜ್ಞಾನಸುಖೇಹಿತಃ। ಅಲ್ಪಶಕ್ತಿಃ ಸದೋಷಶ್ಚ ಜೀವಾತ್ಮಾಽನೀದೃಶಃ ಪರಃ। ವದತಾ ತು ತಯೋರೈಕ್ಯಂ ಕಿಂ ತೇನಾದುಷ್ಕೃತಂ ಕೃತಮ್। ಅನ್ತರ್ಯಾಮ್ಯೈಕ್ಯವಾಚೀನಿ ವಚನಾನೀಹ ಯಾನಿ ತು। ತಾನಿ ದೃಷ್ಟ್ವಾ ಭ್ರಮನ್ತೀಹ ದುರಾತ್ಮಾನೋಽಲ್ಪಚೇಸಃ। ಅಸ್ಯಸ್ಮಿ ತ್ವಮಹಂ ಸ್ವಾತ್ಮೇತ್ಯಭಿಧಾಗೋಚರೋ ಯತಃ। ಸರ್ವಾಂತರತ್ವಾತ್ ಪುರುಷಸ್ತ್ವಂತರ್ಯಾಮೀ ನಿಯಾಮಯನ್। ಅತೋ ಭ್ರಮಂತಿ ವಚನೈರಾಸುರಾ ಮೋಹತತ್ಪರೈಃ। ತನ್ಮೋಹನೇ ಪರಾ ಪ್ರೀತಿರ್ದೇವಾನಾಂ ಪರಮಸ್ಯ ಚ। ಅತೋ ಮಹಾಂಧಕಾರೇಷು ಪತಂತ್ಯಜ್ಞಾನಮೋಹಿತಾಃ” ಇತ್ಯಾದಿ ॥ ----------------------------- ಈ ಪ್ರವಚನಕ್ಕೆ ಪ್ರಥಮಸ್ಕಂಧದ ಎರಡು ಅಧ್ಯಾಯಗಳು ಮುಗಿಯುತ್ತವೆ. ಮುಂದಿನ ಉಪನ್ಯಾಸದಿಂದ ಮೂರನೆಯ ಅಧ್ಯಾಯ ಆರಂಭ. ಸಮರ್ಪಣೆ ಕಲಿಯುಗದ ಈ ಘೋರ ಪರಿಸ್ಥಿತಿಯಲ್ಲಿಯೂ ಶ್ರೀಮದ್ ಭಾಗವತದ ತತ್ವಗಳನ್ನು ಅನುಷ್ಠಾನ ಮಾಡಿ ಉದ್ಧಾರವಾಗಲು ಪೂರ್ಣ ಸಾಧ್ಯವಿದೆ ಎಂದು ಜಗತ್ತಿಗೆ ತಮ್ಮ ಜೀವನದ ಮುಖಾಂತರವೇ ತೋರಿ ಕೊಟ್ಟ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಗುರುಗಳಾದ ಯಾರ ಅನುಗ್ರಹದಿಂದ, ಯಾರ ನಾಮಸ್ಮರಣೆಯ ಬಲದಿಂದ ಯಾರ ಹಸ್ತೋದಕ ಪಾದೋದಕಗಳ ಸಾಮರ್ಥ್ಯದಿಂದ ಈ ಭಾಗವತದ ಮಹಾ ಜ್ಞಾನ ಕಾರ್ಯ ನಡೆಯುತ್ತಿದೆಯೋ ಅಂತಹ ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರಾದ ಪದ-ವಾಕ್ಯ-ಪ್ರಮಾಣಜ್ಞರಾದ ಸರ್ವತಂತ್ರಸ್ವತಂತ್ರರಾದ ಶ್ರೀರಂಗಕ್ಷೇತ್ರನಿವಾಸಿಗಳಾದ ಶ್ರೀಮದ್ ವಿದ್ಯಾವಾರಿಧಿತೀರ್ಥ ಗುರುಸಾರ್ವಭೌಮರಿಗೆ ಗೀತಾಜಯಂತಿಯ ಈ ಪವಿತ್ರ ಸಂದರ್ಭದಲ್ಲಿ ಇಲ್ಲಿಯವರೆಗೆ ನಡೆದ ಸಮಸ್ತ ಜ್ಞಾನಕಾರ್ಯವನ್ನೂ ಸಮರ್ಪಿಸುತ್ತೇನೆ. ಶ್ರೀ ವಿದ್ಯಾವಾರಿಧಿತೀರ್ಥಗುರುಭ್ಯೋ ನಮಃ
Play Time: 55:12
Size: 7.60 MB